ಮುಸ್ಲಿಮರು ಶಿಕ್ಷಣ ಪಡೆದರೆ ಸ್ವಾಭಿಮಾನದಿಂದ ಬದುಕಲು ಸಾಧ್ಯ: ಸಿಎಂ ಸಿದ್ದರಾಮಯ್ಯ

By Kannadaprabha NewsFirst Published Jan 29, 2024, 5:35 AM IST
Highlights

ಮುಸ್ಲಿಮರು ಶಿಕ್ಷಣ ಪಡೆದು ಶಿಕ್ಷಿತರಾಗಬೇಕಾದ ಅವಶ್ಯತೆಯಿದ್ದು, ಶಿಕ್ಷಣ ಪಡೆಯುವುದರಿಂದ ಸ್ವಾಭಿಮಾನದಿಂದ ಬದಲು ಸಾಧ್ಯವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ.

ಬೆಂಗಳೂರು (ಜ.29) : ಮುಸ್ಲಿಮರು ಶಿಕ್ಷಣ ಪಡೆದು ಶಿಕ್ಷಿತರಾಗಬೇಕಾದ ಅವಶ್ಯತೆಯಿದ್ದು, ಶಿಕ್ಷಣ ಪಡೆಯುವುದರಿಂದ ಸ್ವಾಭಿಮಾನದಿಂದ ಬದಲು ಸಾಧ್ಯವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ.

ನಗರದ ಅರಮನೆ ಮೈದಾನದಲ್ಲಿ ಭಾನುವಾರ ನಡೆದ ಶೈಕ್ಷಣಿಕ ಹಾಗೂ ಧಾರ್ಮಿಕ ಸೇವಾ ಸಂಸ್ಥೆಯಾದ ಕೇರಳ ರಾಜ್ಯದ ಜಂ ಇಯತುಲ್ ಉಲಮಾ ಸಂಸ್ಥೆಯ ಶತಮಾನೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

Latest Videos

ಕಾಂಗ್ರೆಸ್‌ನಿಂದಲೇ ರಾಜ್ಯದಲ್ಲಿ ಕೋಮುಗಲಭೆಗೆ ಯತ್ನ? ಬಿವೈ ವಿಜಯೇಂದ್ರ ಹೇಳಿದ್ದೇನು?

ಸಮಾಜದಲ್ಲಿನ ಪ್ರತಿಯೊಬ್ಬರೂ ಶಿಕ್ಷಣ ಪಡೆಯುವುದು ಅತ್ಯಂತ ಅವಶ್ಯಕ. ಶಿಕ್ಷಣದಿಂದ ಜ್ಞಾನವಂತರಾಗಲು ಹಾಗೂ ಜವಾಬ್ದಾರಿಯ ನಾಗರಿಕರಾಗಿ ಬದುಕಲು ಸಾಧ್ಯವಿದೆ. ಅದಕ್ಕಾಗಿಯೇ ಸಂವಿಧಾನದಲ್ಲಿ ಕಡ್ಡಾಯ ಹಾಗೂ ಉಚಿತ ಶಿಕ್ಷಣದ ಅವಕಾಶ ಕಲ್ಪಿಸಲಾಗಿದೆ. ಶತ ಶತಮಾನದಿಂದ ಶಿಕ್ಷಣದಿಂದ ವಂಚಿತರಾದವರು ನಮ್ಮ ಸಮಾಜದಲ್ಲಿ ಇದ್ದಾರೆ. ರಾಜ್ಯದಲ್ಲಿ ಶೇ.78ರಷ್ಟು ಸಾಕ್ಷರತೆ ಪ್ರಮಾಣವಿದೆ. ಉಳಿದ ಶೇ.22ರಷ್ಟು ಜನರು ಸಹ ಸುಶಕ್ಷಿತರಾಗಬೇಕಿದೆ ಎಂದು ತಿಳಿಸಿದರು.

ಅಲ್ಲದೆ, ಶಿಕ್ಷಣದಿಂದ ವಂಚಿತರಾದವರಲ್ಲಿ ಮುಸಲ್ಮಾನರು ಸಹ ಇದ್ದಾರೆ. ಎಲ್ಲಾ ಮುಸಲ್ಮಾನರು ಶಿಕ್ಷಣ ಪಡೆದುಕೊಂಡು ಶಿಕ್ಷಿತರಾದರೆ, ಸಮಾಜ ಏನು ಎಂಬುದನ್ನು ಅರ್ಥಮಾಡಿಕೊಳ್ಳುವ ಶಕ್ತಿ ಬರುತ್ತದೆ. ಸ್ವಾಭಿಮಾನದಿಂದ ಹಾಗೂ ತಮ್ಮ ಕಾಲು ಮೇಲೆ ನಿಂತು ಬದುಕು ಶಕ್ತಿ ಬರುತ್ತದೆ. ಅದಕ್ಕಾಗಿ ಶಿಕ್ಷಣ ಪಡೆಯಲೇಬೇಕು. ಜಂ ಇಯತುಲ್ ಉಲಮಾ ಸಂಸ್ಥೆಯ ಕಳೆದ ನೂರು ವರ್ಷಗಳಿಂದ ಸಮಾಜದ ಜನರಿಗೆ ಶಿಕ್ಷಣ ಕಲ್ಪಿಸಲು ಶ್ರಮಿಸುವುತ್ತಿರುವುದು ಶ್ಲಾಘನೀಯ ವಿಚಾರ ಎಂದರು.

ರಾಷ್ಟ್ರಪತಿಗಳನ್ನ ಏಕವಚನದಲ್ಲಿ ಸಂಬೋಧಿಸಿ ಅವಮಾನ; ಸಿಎಂ ಸ್ಥಾನದಿಂದ ಸಿದ್ದರಾಮಯ್ಯರ ವಜಾಕ್ಕೆ ಎಚ್‌ಡಿಕೆ ಒತ್ತಾಯ

ಇಸ್ಲಾಂ ಧರ್ಮ ಹಳೆಯದಾದ ಧರ್ಮ. ನಮ್ಮ ದೇಶದಲ್ಲಿ ಅನೇಕ ಧರ್ಮ, ಜಾತಿ ಹಾಗೂ ಭಾಷೆಗಳಿವೆ. ಎಲ್ಲಾ ಧರ್ಮಗಳನ್ನು ಸಮಾನ ಗೌರವದಿಂದ ಕಾಣಬೇಕು. ಯಾವ ಧರ್ಮವೂ ಮೇಲಲ್ಲ-ಕೀಳು ಅಲ್ಲ. ಎಲ್ಲಾ ಧರ್ಮಗಳು ಮಾನವೀಯತೆಯನ್ನು ಹೇಳುತ್ತವೆ. ನಾವೆಲ್ಲರೂ ಕೂಡ ಮನುಷ್ಯರಾಗಿ ಬದುಕುಬೇಕು. ಸೌಹಾರ್ದತೆಯಿಂದ ಜೀವನ ಮಾಡಬೇಕು. ಪರಸ್ಪರ ದ್ವೇಷ ಮಾಡುವುದನ್ನು ಬಿಡಬೇಕು. ಇಸ್ಲಾಂ ಧರ್ಮವು ಶಾಂತಿ-ಸಹನೆಯನ್ನು ಬೋಧಿಸುತ್ತದೆ. ನಮ್ಮ ಸಂವಿಧಾನ ಸಹ ಸಹಿಷ್ಣುತೆ ಮತ್ತು ಸಹ ಬಾಳ್ವೆಯನ್ನು ಬೋಧಿಸುತ್ತದೆ. ನಾವು ನಮ್ಮ ಧರ್ಮದ ಜೊತೆಗೆ ಅನ್ಯ ಧರ್ಮವನ್ನೂ ಗೌರವಿಸಬೇಕು. ಎಲ್ಲಾ ಧರ್ಮದವರು ಸೌಹಾರ್ದತೆಯಿಂದ ಬದುಕಿದರೆ ಸಮಾಜದಲ್ಲಿ ನೆಮ್ಮದಿ-ಶಾಂತಿ ನಿರ್ಮಾಣವಾಗಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್‌, ಸರ್ಕಾರದ ಮುಖ್ಯ ಸಚೇತಕ ಖಲೀದ್ ಅಹ್ಮದ್‌, ಬಿಡಿಎ ಅಧ್ಯಕ್ಷ ಎನ್‌.ಎ.ಹ್ಯಾರಿಸ್‌, ಮುಖ್ಯಮಂತ್ರಿಗಳ ಕಾರ್ಯದರ್ಶಿ ನಜೀರ್‌ ಅಹ್ಮದ್‌, ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

click me!