ಅಕ್ರಮ ವಿದ್ಯುತ್ ಸಂಪರ್ಕ ಕಡಿತ ಮಾಡಿದ್ದಕ್ಕೆ ಬೆಸ್ಕಾಂನೌಕರಗೆ ಕಪಾಳಮೋಕ್ಷ ಮಾಡಿದ ಮಹಿಳೆ!

By Kannadaprabha News  |  First Published Jan 29, 2024, 5:10 AM IST

ಮನೆಗೆ ಅಕ್ರಮ ವಿದ್ಯುತ್ ಸಂಪರ್ಕವನ್ನು ಕಡಿತ ಮಾಡಿದ ಬೆಸ್ಕಾಂ ಸಿಬ್ವಂದಿಗೆ ಮಹಿಳೆ ನಿಂದಿಸಿ, ಕಪಾಳ ಮೋಕ್ಷ ಮಾಡಿದ ಘಟನೆ ಸೂರ್ಯನಗರ ಠಾಣಾ ವ್ಯಾಪ್ತಿಯ ಹಳೇ ಚಂದಾಪುರದಲ್ಲಿ ನಡೆದಿದೆ


ಆನೇಕಲ್ (ಜ.29): ಮನೆಗೆ ಅಕ್ರಮ ವಿದ್ಯುತ್ ಸಂಪರ್ಕವನ್ನು ಕಡಿತ ಮಾಡಿದ ಬೆಸ್ಕಾಂ ಸಿಬ್ವಂದಿಗೆ ಮಹಿಳೆ ನಿಂದಿಸಿ, ಕಪಾಳ ಮೋಕ್ಷ ಮಾಡಿದ ಘಟನೆ ಸೂರ್ಯನಗರ ಠಾಣಾ ವ್ಯಾಪ್ತಿಯ ಹಳೇ ಚಂದಾಪುರದಲ್ಲಿ ನಡೆದಿದೆ.

ರೂಪಮ್ಮ ಹಲ್ಲೆ ಮಾಡಿ ತಲೆ ತಪ್ಪಿಸಿಕೊಂಡಿರುವ ಮಹಿಳೆ. ಹಳೆ ಚಂದಾಪುರ ನಿವಾಸಿ ರೂಪಮ್ಮ ಹೊಸದಾಗಿ ಮನೆ ನಿರ್ಮಾಣ ಮಾಡುತ್ತಿದ್ದಾರೆ. ಕಟ್ಟಡಕ್ಕೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ತೆಗೆದುಕೊಂಡಿದ್ದರು. ವಿಚಾರ ತಿಳಿದ ಬೆಸ್ಕಾಂ ಸಿಬ್ಬಂದಿ ವಿದ್ಯುತ್ ಲೈನ್ ಕತ್ತರಿಸಿ ಮಾಡಿ ದಂಡ ವಿಧಿಸಲು ಮುಂದಾದರು.

Tap to resize

Latest Videos

undefined

ಆ ವೇಳೆ ಸಿಟ್ಟಿಗೆದ್ದ ರೋಪಮ್ಮ ಅವಾಚ್ಯ ಶಬ್ದಗಳಿಂದ ಬೈದು, ನಡುರಸ್ತೆಯಲ್ಲೇ ರಂಪಾಟ ಮಾಡಿದರು. ವೀರಸಂದ್ರ ಬೆಸ್ಕಾಂ ಸಬ್ ಡಿವಿಷನ್ ಸಿಬ್ಬಂದಿಯ ಕಪಾಳಕ್ಕೆ ಹೊಡೆದು ಕರ್ತವ್ಯಕ್ಕೆ ಅಡ್ಡಿ ಮಾಡಿದರು. ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಮಹಿಳೆ ವಿರುದ್ಧ ಪ್ರಕರಣ ದಾಖಲಾಗಿದೆ. ಮಹಿಳೆಯ ಬಂಧನಕ್ಕೆ ತಂಡ ರಚಿಸಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ.

ಕಾಂಗ್ರೆಸ್‌ನಿಂದಲೇ ರಾಜ್ಯದಲ್ಲಿ ಕೋಮುಗಲಭೆಗೆ ಯತ್ನ? ಬಿವೈ ವಿಜಯೇಂದ್ರ ಹೇಳಿದ್ದೇನು?

click me!