ಸಿದ್ದರಾಮಯ್ಯ ಕೊಟ್ಟ ಹಣ ಎಸೆದಿದ್ದ ಮಹಿಳೆಯಿಂದ ಕ್ಷಮೆಯಾಚನೆ

Published : Jul 16, 2022, 08:58 PM IST
ಸಿದ್ದರಾಮಯ್ಯ ಕೊಟ್ಟ ಹಣ ಎಸೆದಿದ್ದ ಮಹಿಳೆಯಿಂದ ಕ್ಷಮೆಯಾಚನೆ

ಸಾರಾಂಶ

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ನೀಡಿದ್ದ ಹಣವನ್ನು ಎಸೆದಿದ್ದ ಮಹಿಳೆ ಇದೀಗ ಕ್ಷಮೆಯಾಚಿಸಿದ್ದಾಳೆ. ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಹಾಗಾದ್ರೆ, ಅವರು ಮಾಧ್ಯಮ ಹೇಳಿಕೆಯಲ್ಲಿ ಏನೆಲ್ಲಾ ಹೇಳಿಕೊಂಡಿದ್ದಾರೆ ಎನ್ನುವ ಮಾಹಿತಿ ಇಲ್ಲಿದೆ.  

ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷ್ಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ..

ಬಾಗಲಕೋಟೆ, (ಜುಲೈ.16)
: ಕೆರೂರ ಘಷ೯ಣೆಯಲ್ಲಿ ಗಾಯಗೊಂಡ ಗಾಯಾಳುಗಳಿಗೆ ಮಾಜಿ ಸಿಎಂ ಸಿದ್ದರಾಮಯ್ಯ ನೀಡಿದ್ದ ಪರಿಹಾರದ ಹಣವನ್ನು ಎಸೆದಿದ್ದ ಮಹಿಳೆ ಇದೀಗ ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಕ್ಷಮೆಯಾಚಿಸಿದ್ದಾಳೆ.

ಬಾಗಲಕೋಟೆಯಲ್ಲಿ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರೋ ಬಿಸ್ಮಿಲ್ಲಾ, ಕೆಲವರು ಸೃಷ್ಟಿ ಮಾಡಿದ ಅಶಾಂತಿಯ ವಾತಾವರಣದಿಂದ ಕೆರೂರಿನಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣವಾಗಿದೆ. ಯಾವುದೇ ತಪ್ಪು ಮಾಡದಿದ್ದರೂ ಅಮಾಯಕರು ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಹೀಗಾಗಿ ನಮ್ಮ ಮನಸ್ಸಿಗೆ ಭಾರಿ ನೋವಾಗಿತ್ತು.  ಈ ನೋವಿನಲ್ಲಿ ಮಾಜಿ ಸಿಎಂ  ಸಿದ್ದರಾಮಯ್ಯ ಅವರ ಮಂದೆ ಅನುಚಿತವಾಗಿ ನಡೆದುಕೊಳ್ಳಬೇಕಾಯಿತು. ಇದಕ್ಕಾಗಿ ನಾವು ತೀವ್ರ ವಿಷಾದ ವ್ಯಕ್ತಪಡಿಸುತ್ತೇವೆ. ಸಿದ್ದರಾಮಯ್ಯ ಅವರ ಮನಸ್ಸಿಗೆ ನೋವಾಗಿದ್ದರೆ ಕ್ಷಮೆಯಾಚಿಸುತ್ತೇವೆ ಎಂದಿದ್ದಾರೆ.

ಮಾನವೀಯ ದೃಷ್ಟಿಯಿಂದ ಹಣ ನೀಡಿದ್ದೆ, ಆಕೆಯನ್ನು ಯಾರೋ ಎತ್ತಿಕಟ್ಟಿದ್ದಾರೆ!

 ಅಗೌರವ ತೋರುವ ಉದ್ದೇಶ ನಮಗಿರಲಿಲ್ಲ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಗೌರವ ತೋರಿಸುವ ಯಾವುದೇ ಉದ್ದೇಶ ನಮ್ಮದಾಗಿರಲಿಲ್ಲ ಎಂದು ಮಹಿಳೆಯರು ತಿಳಿಸಿದ್ದಾರೆ. ಅವರಿಗೆ ಅವಮಾನ ಮಾಡುವ ಉದ್ದೇಶವೂ ಎಳ್ಳಷ್ಟು ನಮ್ಮಲ್ಲಿ ಇರಲಿಲ್ಲ.  ನಡೆದಿರುವ ಘಟನೆಗಳ ಹಿನ್ನೆಲೆಯಲ್ಲಿ ನಮ್ಮ ಮನಸ್ಸಿಗೆ ತೀವ್ರ ಘಾಸಿಯಗಿದೆ. ಸಿದ್ದರಾಮಯ್ಯ ಅವರು ಹಣ ನೀಡುವುದಕ್ಕಿಂತ ಅವರು ನಮಗೆ ನ್ಯಾಯ ಒದಗಿಸಿಕೊಡಬೇಕು ಎಂಬುದೇ ನಮ್ಮ ಕಳಕಳಿಯ ಮನವಿ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮ್ಮ ಸಮುದಾಯದ ನಾಯಕರು. ಸದಾ ನಮ್ಮ ಸಮುದಾಯದ ಪರ ನಿಲ್ಲುವ ರಾಜಕಾರಣಿ ಅವರು. ಈ ರೀತಿ ಇರುವಾಗ ಅವರಿಗೆ ಅವಮಾನ ಮಾಡುವ ಮಟ್ಟಕ್ಕೆ ನಾವು ಹೋಗುವುದಿಲ್ಲ. ಆಕಸ್ಮಿಕವಾಗಿ ನಡೆದಿರುವ ಘಟನೆ ಇದಾಗಿದೆಯೇ ಹೊರತು ಸಿದ್ದರಾಮಯ್ಯ ಅವರಿಗೆ ಅಗೌರವ ತೋರಿಸುವ ಉದ್ದೇಶ ನಮ್ಮದಾಗಿರಲಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸುತ್ತೇವೆ ಎಂದು ಮಾದ್ಯಮ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಸಿದ್ದರಾಮಯ್ಯನವರ ಹಣ ವಾಪಸ್ ಎಸೆದ ಮುಸ್ಲಿಂ ಮಹಿಳೆ, ಸ್ಪಷ್ಟನೆ ಕೊಟ್ಟ ಖಾದರ್

ಘಟನೆ ಹಿನ್ನೆಲೆ

ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬಾಗಲಕೋಟೆಯ ಕೆರೂರು ಕೋಮು ಘರ್ಷಣೆಯ ಸಂತ್ರಸ್ತರನ್ನು ಶುಕ್ರವಾರ ಭೇಟಿಯಾಗಿದ್ದರು. ಈ ವೇಳೆ ರಾಜ್ಮಾ ಎಂಬ ಮುಸ್ಲಿಂ ಮಹಿಳೆಗೆ ಸಿದ್ದರಾಮಯ್ಯನವರು ಆಸ್ಪತ್ರೆ ಚಿಕಿತ್ಸೆಗೆಂದು 2 ಲಕ್ಷ ಕೊಟ್ಟು ಬಂದಿದ್ದರು. ಆದ್ರೆ, ಮಹಿಳೆ ನಿಮ್ಮ ದುಡ್ಡು ಯಾರಿಗೆ ಬೇಕು ಸ್ವಾಮಿ ನನಗೆ ನ್ಯಾಯ ಕೊಡಿಸಿ ಎಂದು ಸಿದ್ದರಾಮಯ್ಯನವರ ಬೆಂಗಾವಲು ವಾಹನಕ್ಕೆ ಹಣ ಎಸೆದಿದ್ದರು. ಇದು ಭಾರೀ ಸುದ್ದಿಯಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಉಡುಪಿ: ಧರ್ಮ-ಸಂವಿಧಾನ ಬೇರೆಯಲ್ಲ:-ಪವನ್ ಕಲ್ಯಾಣ ಬಣ್ಣನೆ
ಪಬ್ಬಲ್ಲಿ ಮೊಬೈಲ್‌ ತರಲುಹೋದ ಕನ್ನಡಿಗ ಬಲಿ, ಗೋವಾ ಪಬ್ ದುರಂತಕ್ಕೆ ಕಾರಣವೇನು?