ಬಾಬರಿ ಮಸೀದಿಯನ್ನ ಮರೆಯೊಲ್ಲ, ಎಷ್ಟೇ ಸಮಯವಾದರೂ ಅದೇ ಜಾಗದಲ್ಲಿ ಮಸೀದಿ ಕಟ್ತೇವೆಂದ ಸೈಯದ್

Published : Feb 04, 2024, 01:24 PM ISTUpdated : Feb 04, 2024, 01:30 PM IST
ಬಾಬರಿ ಮಸೀದಿಯನ್ನ ಮರೆಯೊಲ್ಲ, ಎಷ್ಟೇ ಸಮಯವಾದರೂ ಅದೇ ಜಾಗದಲ್ಲಿ ಮಸೀದಿ ಕಟ್ತೇವೆಂದ ಸೈಯದ್

ಸಾರಾಂಶ

ನಾವು ಬಾಬರಿ ಮಸೀದಿ ಮರೆಯೋಕೆ ಸಾಧ್ಯವಿಲ್ಲ. ಎಷ್ಟೇ ಸಮಯವಾದರೂ ಸರಿ ಅದೇ ಸ್ಥಳದಲ್ಲಿ ಮಸೀದಿಯನ್ನು ನಿರ್ಮಿಸುತ್ತೇವೆ ಎಂದು ಹೇಳಿದ ಯುವಕನ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ.

ಕಲಬುರಗಿ (ಫೆ.04): ನಾವು ಬಾಬರಿ ಮಸೀದಿಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಎಷ್ಟು ಸಮಯವನ್ನು ಕಳೆದರೂ ಸರಿ ಬಾಬರಿ ಮಸೀದಿಯಲ್ಲಿದ್ದ ಸ್ಥಳದಲ್ಲಿಯೇ ಮತ್ತೊಮ್ಮೆ ದೊಡ್ಡ ಮಸೀದಿಯನ್ನು ನಿರ್ಮಾಣ ಮಾಡುತ್ತೇವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದ ಕಲಬುರಗಿಯ ಮುಸ್ಲಿಂ ಯುವಕನ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ.

ಹೌದು, ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಮುಸ್ಲಿಂ ಆಡಳಿತದ ಅವಧಿಯಲ್ಲಿ ಬಾಬರ್ ರಾಮ ಮಂದಿರವನ್ನು ಒಡೆದು ಅಲ್ಲಿ ಬಾಬರಿ ಮಸೀದಿನಯನ್ನು ನಿರ್ಮಾಣ ಮಾಡಿದ್ದನು. ಆದರೆ, 500 ವರ್ಷಗಳ ಕಾಲ ರಾಮಮಂದಿರ ಕುರಿತ ವಿವಾದ ಬಗೆಹರಿಯದ ಕಾರಣ ಕಳೆದ 31 ವರ್ಷಗಳ ಹಿಂದೆ 1991ರಲ್ಲಿ ಬಾಬರಿ ಮಸೀದಿ ಧ್ವಂಸ ಮಾಡಲಾಯಿತು. ನಂತರ ದೀರ್ಘಕಾಲವಾಗಿ ನ್ಯಾಯಾಲಯದಲ್ಲಿ ರಾಮ ಜನ್ಮಭೂಮಿ ಕುರಿತ ವಿವಾದವನ್ನು ವಿಚಾರಣೆ ನಡೆಸಿದಿ ಇದೊಂದು ಪ್ರಕರಣದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಲಾಯಿತು.

ಮಥುರಾ ಮಂದಿರ ಕೆಡವಿದ್ದು ಔರಂಗಜೇಬ್: ಆರ್‌ಟಿಐ ಅರ್ಜಿಗೆ ಪುರಾತತ್ವ ಇಲಾಖೆ ಉತ್ತರ

ರಾಮ ಮಂದಿರ ಟ್ರಸ್ಟ್‌ನಿಂದ ಅಯೋಧ್ಯೆಯಲ್ಲಿ ಬಾಬರಿ ಮಸೀದಿಯನ್ನು ಸಂಪೂರ್ಣವಾಗಿ ತೆರವುಗೊಳಿಸಿ ಬೃಹತ್ ರಾಮ ಮಂದಿರವನ್ನು ನಿರ್ಮಿಸಿ ಉದ್ಘಾಟನೆ ಮಾಡಿ, ರಾಮಲಲ್ಲಾ ಪ್ರಾಣ ಪ್ರತಿಷ್ಠೆಯನ್ನೂ ಮಾಡಲಾಗಿದೆ. ಆದರೆ, ರಾಮ ಮಂದಿರ ಉದ್ಘಾಟನೆಯ ವೇಳೆ ಕಲಬುರಗಿಯ ಮುಸ್ಲಿಂ ಯುವಕನೊಬ್ಬ ನಾವು ಎಷ್ಟೇ ಸಮಯವಾದರೂ ಸರಿ ಬಾಬರಿ ಮಸೀದಿ ಇದ್ದ ಸ್ಥಳದಲ್ಲಿಯೇ ಮತ್ತೊಮ್ಮೆ ಮಸೀದಿಯನ್ನು ನಿರ್ಮಾಣ ಮಾಡುತ್ತೇವೆ. ಬಾಬರಿ ಮಸೀದಿ ನಮಗೆ ಅತ್ಯಂತ ಮಹತ್ವವಾದದುದು ಎಂದು ಸಾಮಾಜಿಕ ಜಾಲತಾಣ ಎಕ್ಸ್‌ (ಹಳೆಯ ಟ್ವಿಟಟರ್)ನಲ್ಲಿ ಪೋಸ್ಟ್ ಹಂಚಿಕೊಂಡಿದ್ದನು. ಆ ಕ್ಷಣಕ್ಕೆ ಯುವಕನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿ ಕೈ ಬಿಟ್ಟಿದ್ದರು. ಆದರೆ, ಈಗ ಯುವಕನ ವಿರುದ್ಧ ಎಫ್‌ಐಅರ್ ದಾಖಲಿಸಲಾಗಿದೆ.

ಬಾಬರಿ ಮಸೀದಿ ಪರವಾಗಿ ಎಕ್ಸ್‌ನಲ್ಲಿ ಪೋಸ್ಟ್ ಹಾಕಿದ್ದ ಯುವಕನನ್ನು ಕಲಬುರಗಿಯ ಇಕ್ಬಾಲ್ ಕಾಲೋನಿ ನಿವಾಸಿ ಸೈಯದ್ ಮೊಹಿನ್ ಫೈಸಲ್ (23) ಎಂದು ಗುರುತಿಸಲಾಗುದೆ. ಈತನ ವಿರುದ್ಧ ಕಲಬುರಗಿ ನಗರದ ನ್ಯೂ ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಲಾಗಿದೆ. ಸಾಮಾಜಿಕ ಜಾಲತಾಣದಲ್ಲಿರುವ ಪೋಸ್ಟ್ ಆಧಾರದಲ್ಲಿಯೇ ಸಮಾಜದಲ್ಲಿ ಶಾಂತಿ ಸೌಹಾರ್ದತೆ ಹಾಳು ಮಾಡುವ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಯುವಕನ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ನ್ಯೂ ರಾಘವೇಂದ್ರ ನಗರ ಠಾಣೆಯಲ್ಲಿ ಐಪಿಸಿ ಸೆಕ್ಷನ್ 153(A), 295(A) ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

ಏಷ್ಯಾ ಖಂಡದಲ್ಲಿ ಬೆಂಗಳೂರೇ ನಂಬರ್ ಒನ್; ಚೀನಾ, ಜಪಾನ್ ಸಿಟಿಗಳನ್ನು ಹಿಂದಿಕ್ಕಿದ ಸಿಲಿಕಾನ್ ಸಿಟಿ

ರಾಮ ಮಂದಿರದ ಮೇಲೆ ಮುಸ್ಲಿಂ ಧ್ವಜ ಹಾರಿಸಿದ ಫೋಟೋ ಹಂಚಿಕೆ: ಇನ್ನು ರಾಮ ಮಂದಿರ ಉದ್ಘಾಟನೆಯ ವೇಳೆ ಗದಗ ಜಿಲ್ಲೆಯ ಮುಸ್ಲಿಂ ಯುವಕನೊಬ್ಬ ಬೃಹತ್ ರಾಮಮಂದಿರ ನಿರ್ಮಾಣದ ಸ್ಥಳದಲ್ಲಿ ಬಾಬರಿ ಮಸೀದಿ ಇತ್ತು. ಮಸೀದಿ ಇದ್ದ ಜಾಗದಲ್ಲಿ ನೀವು ರಾಮಮಂದಿರ ನಿರ್ಮಾಣ ಮಾಡಿದರೆ, ನಿಮ್ಮ ಮಂದಿರದ ಮೇಲೆ ನಾವು ಇಸ್ಲಾಂ ಧ್ವಜವನ್ನು ಹಾರಿಸುತ್ತೇವೆ ಎಂದು ಫೋಟೋ ಹಂಚಿಕೊಂಡಿದ್ದನು. ರಾಮಮಂದಿರ ಭಾವಚಿತ್ರದ ಮೇಲೆ ಮುಸ್ಲಿಂ ಧರ್ಮದ ಹಸಿರು ಧ್ವಜವನ್ನು ಹಾರಿಸಿದ ಎಡಿಟೆಡ್ ಫೋಟೋವನ್ನು ಹಂಚಿಕೊಂಡು ವಿಕೃತಿ ಮೆರೆದಿದ್ದನು. ತಕ್ಷಣ ಇದನ್ನು ಗಮನಿಸಿದ್ದ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ, ಇಂಗ್ಲೀಷ್ ಶಾಲೆಗಳ ಪೋಷಕರಿಂದ ಸಡಿಲಿಕೆಗೆ ಮನವಿ
ಚಿನ್ನಸ್ವಾಮಿಗೆ ಅಂತಾರಾಷ್ಟ್ರೀಯ ಮತ್ತು IPL ಪಂದ್ಯಗಳು ವಾಪಸ್; ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ