ಅರ್ಧಗಂಟೆ ಬೇಡಿದರೂ ಒಂದು ಹಿಡಿ ಅಕ್ಕಿ ಕೊಡದ ಕೇಂದ್ರ ಸರ್ಕಾರ: ಬರಿಗೈಲಿ ಬಂದ ಸಚಿವ ಮುನಿಯಪ್ಪ

By Sathish Kumar KH  |  First Published Jun 23, 2023, 1:16 PM IST

ಫುಡ್‌ ಕಾರ್ಪೋರೇಷನ್‌ ಆಫ್ ಇಂಡಿಯಾ (ಎಫ್‌ಸಿಐ) ಬಳಿ ಅಕ್ಕಿ ದಾಸ್ತಾನಿದ್ದರೂ ಕರ್ನಾಟಕಕ್ಕೆ ಅಕ್ಕಿಯುನ್ನು ಕೊಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.


ನವದೆಹಲಿ (ಜೂ.23): ಕೇಂದ್ರದ ಬಳಿ ಸಾಕಷ್ಟು ಪ್ರಮಾಣದಲ್ಲಿ ಅಕ್ಕಿಯ ದಾಸ್ತಾನು ಇದ್ದರೂ ಅದನ್ನು ಬೇರೆ ಯೋಜನೆಗೆ ಉಪಯೋಗಿಸಲು ಅಗತ್ಯವಾಗಿದೆ ಆದ್ದರಿಂದ ಕರ್ನಾಟಕಕ್ಕೆ ಅಕ್ಕಿಯನ್ನು ಪೂರೈಕೆ ಮಾಡಲು ಸಾಧ್ಯವಿಲ್ಲ ಎಂದು ಕೇಂದ್ರ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಪಿಯೂಶ್ ಗೊಯಲ್ ಹೇಳಿದ್ದಾರೆ ಎಂದು ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ಮಾಹಿತಿ ನೀಡಿದ್ದಾರೆ.

ರಾಜ್ಯ ಸರ್ಕಾರದಿಂದ ಅನ್ನಭಾಗ್ಯ ಯೋಜನೆ ಜಾರಿಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಪಿಯೂಶ್ ಗೊಯಲ್ ಅವರನ್ನು ಕರ್ನಾಟಕ ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ಅವರು ಅರ್ಧ ಗಂಟೆ ಚರ್ಚೆ ಮಾಡಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಮುನಿಯಪ್ಪ ಅವರು, ಫುಡ್‌ ಕಾರ್ಫೋರೇಷನ್‌ ಆಫ್‌ ಇಂಡಿಯಾ (ಎಫ್‌ಸಿಐ) ಬಳಿ ಸ್ಟಾಕ್ ಇದೆ. ನಮ್ಮ ರಾಜ್ಯದಲ್ಲಿ ಅನ್ನ ಭಾಗ್ಯಕ್ಕೆ ಅಕ್ಕಿ ಕೊಡಿ ಎಂದು ಮನವಿ ಮಾಡಿದೆ. ಆದರೂ ಅಕ್ಕಿ ಕೊಡೋದಕ್ಕಾಗಲ್ಲ ಎಂದರು. ಕೇಂದ್ರದ ಬಳಿ ಸ್ಟಾಕ್ ಇದ್ರೂ ಕೂಡ ಕೊಡಲ್ಲ ಎಂದು ಕೇಂದ್ರ ಮಂತ್ರಿಗಳು ಹೇಳುವ ಮೂಲಕ ರಾಜಕೀಯ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

Latest Videos

undefined

ಜೂನ್, ಜುಲೈ ಆಯ್ತು, ಈಗ ಆಗಸ್ಟ್‌ಗೆ ಮುಂದೂಡಿಕೆಯಾದ ಅನ್ನಭಾಗ್ಯ ಯೋಜನೆ

ಎಷ್ಟೇ ಅಕ್ಕಿ ಸ್ಟಾಕ್‌ ಇದ್ದರೂ ಬೇರೆ ಕಾರ್ಯಕ್ರಮಕ್ಕೆ ಬೇಕು:  ರಾಜ್ಯಕ್ಕೆ ಅಕ್ಕಿ ಕೊಡುವ ವಿಚಾರದಲ್ಲಿ ಕೇಂದ್ರ ಸರ್ಕಾರದ ರಾಜಕಾರಣ ಕಾಣಿಸುತ್ತಿದೆ. ಎಫ್ ಸಿಐ ಅಧಿಕಾರಿಗಳು ನೀಡಿದ ಪತ್ರ ಕೂಡ ಕೊಟ್ಟೆ. ಯುಪಿಎ ಅವಧಿಯಲ್ಲಿ ಆಹಾರ ಭದ್ರತೆ ಕಾಯ್ದೆ ತಂದಿದೆ. ನಾನು ಬಹಳ ಆಶಾಭವನೆಯಿಂದನೆ ಬಂದೆ. ಆದರೆ ಅಕ್ಕಿ ಇಲ್ಲವೆಂದರು. ಇದರ ಹಿಂದೆ ರಾಜಕೀಯ ಉದ್ದೇಶ ಇದೆ. ನಾವು ನಮ್ಮ ಪ್ಲಾನ್ ಮಾಡಿದ್ದೇವೆ. ಕೇಂದ್ರದ ಏಜೆನ್ಸಿಗಳಿಂದ ಈ ಹಿಂದೆ ಖರೀದಿ ಮಾಡಿದ್ದೇವೆ. ಈಗ ಅದೇ ರೀತಿ ಮಾಡುತ್ತಿದ್ದೇವೆ. ಎಷ್ಟೇ ಸ್ಟಾಕ್ ಇದ್ದರೂ ನಮಗೆ ಬೇರೆ ಬೇರೆ ಕಾರ್ಯಕ್ರಮಗಳಿಗೆ ಬೇಕು ಅಂಥ ಹಾರಿಕೆ ಉತ್ತರ ಕೊಟ್ಟಿದ್ದಾರೆ ಎಂದು ಸಚಿವ ಮುನಿಯಪ್ಪ ಆಕ್ರೋಶ ಹೊರಹಾಕಿದರು.

ಮುಕ್ತ ಮಾರುಕಟ್ಟೆಗೆ ಅಕ್ಕಿ ಮಾರಾಟ: ಇನ್ನು ಕೇಂದ್ರಿದಂದ ದಾಸ್ತಾನು ಇರುವ ಅಕ್ಕಿಯನ್ನು ಮುಕ್ತ ಮಾರುಕಟ್ಟೆಗೆ ಮಾರಾಟ ಮಾಡಲು ಸಿದ್ಧವಾಗಿದೆ. ಒಟ್ಟು 15 ಲಕ್ಷ ಟನ್ ಅಕ್ಕಿಯನ್ನು ಮುಕ್ತ ಮಾರುಕಟ್ಟೆಯಲ್ಲಿ ಕೇಂದ್ರ ಮಾರಾಟ ಮಾಡುತ್ತಿದೆ. ಅದು ಕೂಡ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಆದರೆ, ರಾಜ್ಯಕ್ಕೆ ಅಕ್ಕಿ ಕೊಡಿ ಎಂದರೆ ಕೊಡುತ್ತಿಲ್ಲ ಎಂದು ಸಚಿವ ಮುನಿಯಪ್ಪ ಹೇಳಿದರು.

ಜುಲೈಗಿಲ್ಲ ಅನ್ನಭಾಗ್ಯ, ಪ್ಲಾನ್ "ಸಿ" ವರ್ಕ್ ಆಗುತ್ತಾ?: ಅಕ್ಕಿವ್ಯೂಹ ಭೇದಿಸ್ತಾರಾ ಸಿಎಂ ಸಿದ್ದು ?

ಆಗಸ್ಟ್‌ಗೆ ಅಕ್ಕಿ ಕೊಡಲು ತೀರ್ಮಾನ: 
ರಾಜ್ಯದಲ್ಲಿ ಇನ್ನೂ ಅಕ್ಕಿ ಖರೀದಿ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಆದ್ದರಿಂದ ಜುಲೈ 1 ರಿಂದ ಅಕ್ಕಿ ಕೊಡೊಲ್ಲ. ಆದರೆ, ಆಗಸ್ಟ್ 1 ನೇ ತಾರೀಖಿಗಿಂತ ಮುಂಚಿತವಾಗೇ ಅಕ್ಕಿ‌ ಕೊಡಲು ಪ್ರಯತ್ನ ಮಾಡುತ್ತೇವೆ. ಬೇರೆ ಬೇರೆ ಮೂಲಗಳಿಂದ ಅಕ್ಕಿ ಖರೀದಿಸುವ ಪ್ರಯತ್ನಗಳು ಮುಂದುವರಿದಿದೆ. NCCF, ನಾಫೆಡ್, ಕೇಂದ್ರೀಯ ಭಂಡಾರದಿಂದ ಅಕ್ಕಿ ಖರೀದಿ ಪ್ರಕ್ರಿಯೆ ನಡೆಯಿತ್ತಿದೆ. ನಮಗೆ ಟ್ರಾನ್ಸ್‌ಪೋರ್ಟ್‌ ಚಾರ್ಜ್‌ ಕೂಡ ಹೆಚ್ಚಾಗಲಿದೆ. ಇದೆಲ್ಲಾ ಗಮನದಲ್ಲಿಟ್ಟುಕೊಂಡು ತೀರ್ಮಾನ ಮಾಡುತ್ತೇವೆ. ಕೇಂದ್ರ ಸರ್ಕಾರ ಬಡವರಿಗೆ ನೀಡುವ ಅಕ್ಕಿ ವಿಚಾರದಲ್ಲೂ ಕೇಂದ್ರ ರಾಜಕೀಯ ಮಾಡುತ್ತಿದೆ ಎಂದು ಸಚಿವ ಮುನಿಯಪ್ಪ ವಾಗ್ದಾಳಿ ನಡೆಸಿದರು.

click me!