ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತದಲ್ಲಿ ಎಫ್‌ಐಆರ್ ಆಗಿದೆ. ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಸಹ ನೀಡಲಾಗಿದೆ ಎಂದು ದೂರುದಾರ ಸ್ನೇಹಮಯಿ ಕೃಷ್ಣ ತಿಳಿಸಿದರು.
ಮೈಸೂರು (ಅ.1): ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತದಲ್ಲಿ ಎಫ್‌ಐಆರ್ ಆಗಿದೆ. ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಸಹ ನೀಡಲಾಗಿದೆ ಎಂದು ದೂರುದಾರ ಸ್ನೇಹಮಯಿ ಕೃಷ್ಣ ತಿಳಿಸಿದರು.
ಮೈಸೂರಿನಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಭೂಮಾಪನ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಸ್ಥಳ ಮಹಜರು ಆಗಿದೆ. ಜಮೀನು ಅಳತೆ ಮಾಡಿ ಪರಿಶೀಲನೆ ನಡೆಸಲಾಗಿದೆ. ಸಿಎಂ ಪತ್ನಿ ಖರೀದಿಸಿರುವ ಜಮೀನಿನಲ್ಲಿ ನಿವೇಶನ ರಚನೆ ಕುರುಹು ಸ್ಪಷ್ಟವಾಗಿದೆ ಎಂದರು.
undefined
ಬಿಜೆಪಿ ನಾಯಕರ ಮಾತಿಗೆ ನೊಂದು ಸಿಎಂ ಪತ್ನಿ 14 ಸೈಟ್ ಹಿಂದಿರುಗಿಸಿದ್ದಾರೆ: ಸಚಿವ ಮಂಕಾಳು ವೈದ್ಯ
ಮುಡಾ ಆಸ್ತಿಯನ್ನ ಕೃಷಿ ಭೂಮಿ ಮಾಡಿಕೊಂಡಿರುವುದು ನನ್ನ ಆರೋಪವಾಗಿತ್ತು. ಆ ಆರೋಪ ನಿಜವೆಂದು ಮೇಲ್ನೋಟಕ್ಕೆ ಕಂಡು ಬಂದಿದೆ. ಭೂಮಾಪಕರು, ಮುಡಾ ಅಧಿಕಾರಿಗಳಿಂದಲೂ ಲೋಕಾಯುಕ್ತ ಅಧಿಕಾರಿಗಳು ದಾಖಲೆ ಪಡೆದುಕೊಂಡಿದ್ದಾರೆ. ಇವತ್ತಿನ ಸ್ಥಳ ಮಹಜರು ಪ್ರಕ್ರಿಯೆ ತೃಪ್ತಿ ನೀಡಿದೆ. ಸಿಎಂ ಸಿದ್ದರಾಮಯ್ಯರ ಪತ್ನಿಗೆ ಸೇರಿದೆ ಎನ್ನುತ್ತಿರುವ ಆಸ್ತಿ ವಾಸ್ತವವಾಗಿ ಮುಡಾಕ್ಕೆ ಸೇರಿದ್ದು ಅದೇ ಆಸ್ತಿನಾ ದೇವರಾಜು ಸುಳ್ಳು ದಾಖಲೆ ಸೃಷ್ಟಿಸಿ ಸಿಎಂ ಸಿದ್ದರಾಮಯ್ಯ ಬಾಮೈದಾ ಮಲ್ಲಿಕಾರ್ಜುನ ಸ್ವಾಮಿಗೆ ಮಾರಾಟ ಮಾಡಲಾಗಿದೆ. ಅದನ್ನ ಸಿಎಂ ಪತ್ನಿಗೆ ಬರೆದಿರುವ ದಾಖಲಾತಿ ನನ್ನ ಬಳಿ ಇದೆ. 3.16 ಗುಂಟೆ ಜಾಗ ಮುಡಾಕ್ಕೆ ಸೇರಿದ್ದಾಗಿದೆ. ಮತ್ತೆ ಮುಡಾಗೆ ಕೊಟ್ಟಿದ್ದೇವೆಂದು ಮುಡಾದಿಂದ ಬದಲಿ ಸೈಟ್ ಪಡೆಯಲಾಗಿದೆ. ಅ. 3 ರಂದು 14 ನಿವೇಶನದಲ್ಲಿ ಮಹಜರು ನಡೆಯಲಿದೆ. ನನ್ನನ್ನು ಮಹಜರಿಗೆ ಬರುವಂತೆ ಲೋಕಾಯುಕ್ತ ಅಧಿಕಾರಿಗಳು ಹೇಳಿದ್ದಾರೆ.