ಮುಡಾ ಕೇಸ್‌ಗೆ ಇಡಿ ಎಂಟ್ರಿ, ಯಾವುದೇ ಕ್ಷಣದಲ್ಲಿ ಸಿಎಂ ನಿವಾಸದ ಮೇಲೆ ದಾಳಿ!

By Santosh Naik  |  First Published Oct 1, 2024, 11:36 AM IST

ಮುಡಾ ಹಗರಣದಲ್ಲಿ ಜಾರಿ ನಿರ್ದೇಶನಾಲಯ ಎಂಟ್ರಿ ನೀಡಿದ್ದು, ಸಿಎಂ ನಿವಾಸದ ಮೇಲೆ ದಾಳಿ ನಡೆಯುವ ಸಾಧ್ಯತೆ ಇದೆ. ಸಿಎಂ ಸಿದ್ದರಾಮಯ್ಯ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.


ಬೆಂಗಳೂರು (ಅ.1): ಮುಡಾ ಹಗರಣದಲ್ಲಿ ಈಗ ಜಾರಿ ನಿರ್ದೇಶನಾಲಯ ಎಂಟ್ರಿ ಆಗಿದೆ. ಇದರಿಂದಾಗಿ ಯಾವುದೇ ಕ್ಷಣದಲ್ಲಿ ಸಿಎಂ ನಿವಾಸದ ಮೇಲೆ ಇಡಿ ದಾಳಿ ಮಾಡುವ ಸಾಧ್ಯತೆ ಕಾಣುತ್ತಿದೆ. ಸಿಎಂ ನಿವಾಸದ ಮೇಲಿನ ದಾಳಿಯ ಕುರಿತು ಕಳೆದ ರಾತ್ರಿ ಗಂಭೀರ ಚರ್ಚೆಯಾಗಿದೆ. ದಾಳಿಯ ವೇಳೆ ಪ್ರಕರಣ ಸಂಬಂಧ ದಾಖಲೆ ಶೋಧ ನಡೆಯುವುದು ಖಚಿತವಾಗಿದೆ. ಅಗತ್ಯವಾದ ಮಾಹಿತಿ ಸಿಗದೇ ಇದ್ದಾಗ ಸಿಎಂಗೆ ನೊಟೀಸ್ ಕೂಡ ಕೊಡುವ ಸಾಧ್ಯತೆ ಇದೆ. ನೊಟೀಸ್ ಗೆ ಉತ್ತರ ನೀಡುವುದು ಇಲ್ಲವೇ ಕಾನೂನು ಹೋರಾಟ ರೂಪಿಸುವ ಕುರಿತು ಸಭೆಯಲ್ಲಿ ಚರ್ಚೆಯಾಗಿದೆ. ಸಭೆಯ ಆರಂಭದಲ್ಲಿ ವಕೀಲರ ಜೊತೆಗೆ ಸಿಎಂ ದೂರವಾಣಿಯಲ್ಲಿ ಚರ್ಚೆ ಮಾಡಿದ್ದಾರೆ. ಕಾನೂನು ಹೋರಾಟ ರೂಪಿಸುವ ಕುರಿತು ಸಭೆಯಲ್ಲಿ ತಿರ್ಮಾನ ಮಾಡಲಾಗಿದೆ. ಇ.ಡಿ. ಮುಂದಿನ‌ ತಿರ್ಮಾನ ಗಮನಿಸಿ ಹೋರಾಟ ಮಾಡುವ ನಿಲುವನ್ನು ಸಿಎಂ ತೆಗೆದುಕೊಂಡಿದ್ದಾರೆ.

ಸಿಎಂ ವಿರುದ್ಧ ಇಡಿಯಲ್ಲಿ ದೂರು ದಾಖಲಾದ ಹಿನ್ನೆಲೆ, ಸಿದ್ದರಾಮಯ್ಯ ನಿವಾಸದಲ್ಲಿ ಸಭೆ ನಡೆಸಲಾಗಿತ್ತು. ಇದರಲ್ಲಿ ಕಾನೂನು ಸಚಿವ ಎಚ್.ಕೆ ಪಾಟೀಲ್,  ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ಭಾಗಿಯಾಗಿದ್ದರು. ಗುಪ್ತಚರ ಇಲಾಖೆ ಮುಖ್ಯಸ್ಥ ಹೇಮಂತ್ ನಿಂಬಾಳ್ಕರ್, ಸಿಎಂ ಅಪರ ಕಾರ್ಯದರ್ಶಿ ಎಲ್ ಕೆ ಅತೀಕ್, ಸಚಿವ ಮಹದೇವಪ್ಪ ಕೂಡ ಸಭೆಯಲ್ಲಿ ಭಾಗಿಯಾಗಿದ್ದರು. ಮುಂದಿನ ಕಾನೂನು ಹೋರಾಟದ ಬಗ್ಗೆ ಸಿಎಂ ಇನ್ನೂ ಯಾವುದೇ ತೀರ್ಮಾನಕ್ಕೂ ಬಂದಿಲ್ಲ ಎನ್ನಲಾಗಿದೆ.

ಮುಡಾ ಹಗರಣ: ನಾನು ಸಂಪತ್ತು ಬಯಸಿಲ್ಲ, ಈ ಸೈಟ್‌ಗಳು ತೃಣಕ್ಕೆ ಸಮ, ಸಿಎಂ ಪತ್ನಿ ಪಾರ್ವತಿ

ಈ ನಡುವೆ  ಮುಖ್ಯಮಂತ್ರಿಗಳ ಪತ್ನಿ 14 ಸೈಟ್‌ಗಳನ್ನು ವಾಪಸ್ ನೀಡಿರುವ ವಿಚಾರದಲ್ಲಿ ಮಾತನಾಡಿರುವ ಬಿಜೆಪಿ ನಾಯಕ ಹಾಗೂ ಮಾಜಿ ಸಚಿವ ಸಿ ಸಿ ಪಾಟೀಲ್,  ಈ ಹಿಂದೆ ಯಡಿಯೂರಪ್ಪನವರು ಸೈಟ್ ವಾಪಸ್ ಕೊಟ್ಟಾಗ ಸಿದ್ದರಾಮಯ್ಯನವರು ಏನಂತ ಹೇಳಿಕೆ ನೀಡಿದ್ದರು ಅನ್ನೋದು ಎಲ್ಲರಿಗೂ ಗೊತ್ತಿದೆ. ಅವರು ಕೊಟ್ಟ ಹೇಳಿಕೆಗಳು ಮಾಧ್ಯಮಗಳಲ್ಲಿ ಈಗಾಗಲೇ ಪ್ರಸಾರ ಆಗುತ್ತಿದೆ. ತಪ್ಪು ಮಾಡಿದ ಕಾರಣಕ್ಕಾಗಿಯೇ ಸೈಟ್ ವಾಪಸ್ ಕೊಟ್ಟಿದ್ದಾರೆ ಎಂದಿದ್ದರು. ಈ ಹಿಂದೆ ಸಿದ್ದರಾಮಯ್ಯ ಹೇಳಿದ ಮಾತುಗಳೇ ಈಗ ಮರು ಕಳಿಸುತ್ತಿದೆ. ದಿನದಿಂದ ದಿನಕ್ಕೆ ಪರಿಸ್ಥಿತಿ ಗಂಭೀರವಾಗುತ್ತಿದೆ. ಲೋಕಾಯುಕ್ತ ತನಿಖೆಯಿಂದ ವಿಶ್ವಾಸ ಇಲ್ಲ. ಮುಂದೇನಾಗುತ್ತದೆ ಎಂದು ನಾವು ಕಾದು ನೋಡುತ್ತಿದ್ದೇವೆ. ಇ.ಡಿ. ಎಂಟ್ರಿ ಆಗಿರೋದ್ರಿಂದ ಮುಂದೇನಾಗಲಿದೆ ನೋಡೋಣ ಎಂದು ಹೇಳಿದ್ದಾರೆ.

Tap to resize

Latest Videos

ಮುಡಾ ಉರುಳು ಸಿದ್ದರಾಮಯ್ಯ ಪುತ್ರ ಯತೀಂದ್ರಗೂ ಸುತ್ತಿಕೊಳ್ಳುವ ಸಾಧ್ಯತೆ!

click me!