ಲೋಕಾಯುಕ್ತಕ್ಕೆ ನೀಡಲಾದ ಮುಡಾ ಪ್ರಕರಣದಿಂದ ಹಿಂದೆ ಸರಿಯುವಂತೆ ದೂರುದಾರರಿಗೆ ಆಮಿಷ ಒಡ್ಡಿದ ಆರೋಪವನ್ನು ಬಿಜೆಪಿ ಮುಖಂಡ ಹರ್ಷ ನಿರಾಕರಿಸಿದ್ದಾರೆ. ಸ್ಥಳೀಯ ಸಂಸ್ಥೆ ಚುನಾವಣೆ ಸಂಬಂಧ ಮಾಹಿತಿ ಕೇಳಲು ಹೋಗಿದ್ದೆ ಎಂದು ಸ್ಪಷ್ಟನೆ ನೀಡಿದ್ದಾರೆ. ದೂರುದಾರರು ಆಮಿಷದ ಆರೋಪದೊಂದಿಗೆ ಸಿಸಿಟಿವಿ ದೃಶ್ಯವನ್ನು ಬಿಡುಗಡೆ ಮಾಡಿದ್ದಾರೆ.
ಮೈಸೂರು (ಡಿ.19): ನನ್ನ ಮೇಲೆ ಬಂದಿರುವ ಆರೋಪ ಸುಳ್ಳು. ನಾನು ಸ್ನೇಹಮಯಿ ಕೃಷ್ಣ ಕುಟುಂಬಕ್ಕೆ ಯಾವುದೇ ಆಮಿಷೆಯೊಡ್ಡಿಲ್ಲ ಎಂದು ಆರೋಪಿತ, ಬಿಜೆಪಿ ಮುಖಂಡ ಕೆ.ಹರ್ಷ ಸ್ಪಷ್ಟನೆ ನೀಡಿದ್ದಾರೆ.
ಲೋಕಾಯುಕ್ತಕ್ಕೆ ನೀಡಲಾದ ಮುಡಾ ಪ್ರಕರಣದಿಂದ ಹಿಂದೆ ಸರಿಯುವಂತೆ ದೂರುದಾರ ಸ್ನೇಹಮಯಿ ಕೃಷ್ಣ ಅವರಿಗೆ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರ ಆಪ್ತನಾಗಿರುವ ಹರ್ಷ ಎಂಬುವವರು ಆಮಿಷೆ ಒಡ್ಡಿದ್ದಾರೆ ಎಂಬ ಆರೋಪ ಕೇಳಿಬಂದ ಹಿನ್ನೆಲೆ ಇಂದು ಸುದ್ದಿಗೋಷ್ಟಿ ನಡೆಸಿದ ಬಿಜೆಪಿ ಮುಖಂಡ ಹರ್ಷ, ನನ್ನ ಸ್ನೇಹಿತರಾದ ಶ್ರೀನಿಧಿ ಜೊತೆ ಮಾತನಾಡಲು ಹೋಗಿದ್ದೆ. ಸ್ಥಳೀಯ ಸಂಸ್ಥೆ ಚುನಾವಣೆ ಸಂಬಂಧ ಮಾಹಿತಿ ಕೇಳಲು ಹೋಗಿದ್ದೆ ಅಷ್ಟೇ. ಸ್ನೇಹಮಯಿ ಕೃಷ್ಣ ಒಬ್ಬ ಒಳ್ಳೆಯ ಹೋರಾಟಗಾರ. ಸಿಎಂ ಕುಟುಂಬಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ನಾನು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ. ಹೀಗಿರುವಾಗ ನಾನು ಈ ಪ್ರಕರಣದಲ್ಲಿ ಆಮಿಷೆಯೊಡ್ಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರಲ್ಲದೇ, ನನ್ನ ಮೇಲಿನ ಆರೋಪ ಸುಳ್ಳು ಎಂದರು.
undefined
ನನ್ನ ಮೇಲೆ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ. ನನ್ನ ಮೇಲೆ ಯಾಕೆ ಈ ರೀತಿ ಆರೋಪ ಮಾಡಿದ್ದಾರೆಂಬುದು ಗೊತ್ತಿಲ್ಲ. ಈ ಬಗ್ಗೆ ನಾನು ಯಾವುದೇ ತನಿಖೆಗೂ ಸಿದ್ಧ. ಈ ವಿಚಾರದಲ್ಲಿ ಕಾನೂನು ಹೋರಾಟದ ಕುರಿತು ನಮ್ಮ ವಕೀಲರ ಜೊತೆ ಚರ್ಚೆ ಮಾಡಿ ನಿರ್ಧಾರ ಮಾಡುತ್ತೇನೆ ಎಂದರು.
'ನನ್ನ ಜೀವ ಹೋದ್ರೂ ಮುಡಾ ಹಗರಣ ತಾರ್ಕಿಕ ಅಂತ್ಯಕ್ಕೆ ತರುತ್ತೇನೆ'; ಸರ್ಕಾರದ ವಿರುದ್ಧ ತೊಡೆ ತಟ್ಟಿದ ಸ್ನೇಹಮಯಿ ಕೃಷ್ಣ!
ಏನಿದು ಘಟನೆ?
ಮುಡಾ ಅಕ್ರಮ ಕುರಿತು ಸಿಬಿಐ ತನಿಖೆ ನಡೆಸಬೇಕೆಂದು ದೂರುದಾರ ಸ್ನೇಹಮಯಿ ಕೃಷ್ಣ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯನ್ನು ವಾಪಸ್ ಪಡೆಯುವಂತೆ ಪಾರ್ವತಿ ಅವರ ಆಪ್ತ ಎನ್ನಲಾದ ಹರ್ಷ ಪತ್ರಕರ್ತರೊಬ್ಬರ ಜೊತೆ ಬಂದು ಹಣದ ಆಮಿಷ ಒಡ್ಡಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ಆರೋಪ ಮಾಡಿದ್ದಾರೆ.ಅಲ್ಲದೆ ಆಮಿಷೆ ಒಡ್ಡಿರುವುದು ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹರ್ಷ ಹಾಗೂ ಜತೆಗೆ ಬಂದ ಖಾಸಗಿ ವಾಹಿನಿಯ ಪತ್ರಕರ್ತ ಶ್ರೀನಿಧಿ ಎನ್ನುವವರ ವಿರುದ್ಧ ಸಿಸಿಟಿವಿ ದೃಶ್ಯ ಸಮೇತ ಲೋಕಾಯುಕ್ತರಿಗೆ ದೂರು ನೀಡಿದ್ದಾರೆ.
ಸ್ನೇಹಮಯಿ ಕೃಷ್ಣ ನಾಪತ್ತೆ: ಸಿಎಂ ವಿರುದ್ಧ ದೂರು ನೀಡಿದ್ದಕ್ಕೆ ಸೇಡು ತೀರಿಸಿಕೊಂಡಿತಾ ಸರ್ಕಾರ?
ಏನು ಆಮಿಷೆ?
ಲೋಕಾಯುಕ್ತದಿಂದ ನಮಗೆ ಸಮಸ್ಯೆ ಇಲ್ಲ. ಕೇಸ್ ಸಿಬಿಐಗೆ ಹೋದರೆ ಸಮಸ್ಯೆಯಾಗುತ್ತದೆ. ಹಾಗಾಗಿ ನಿಮಗೆ ಎಷ್ಟು ಹಣ ಬೇಕು ಕೇಳಿ ನಾವು ಕೊಡುತ್ತೇವೆಂದು ಹರ್ಷ ಕಾಲು ಹಿಡಿದಿದ್ದಾರೆ. ಇದನ್ನ ನಾನು ನಿರಾಕರಿಸಿದೆ. ಅಲ್ಲದೆ, ನನ್ನ ಮಗನ ಬಳಿಗೆ ಹೋಗಿ ಮಾತನಾಡಿದ್ದು, ಈಗಾಗಲೇ ಇನ್ನೊಬ್ಬ ಹೋರಾಟಗಾರನಿಗೆ ₹3 ಕೋಟಿಗೆ ವ್ಯವಹಾರ ಮುಗಿಸಿದ್ದು, ಒಂದೂವರೆ ಕೋಟಿ ಕೊಟ್ಟಿದ್ದೇವೆಂದು ಹಣದ ಬ್ಯಾಗ್ ಸಹ ತೋರಿಸಿದ್ದಾರೆ. ಆದರೆ ನನ್ನ ಮಗ ಒಪ್ಪಿಲ್ಲ ಎಂದು ಸ್ನೇಹಮಯಿ ಗಂಭೀರ ಆರೋಪ ಮಾಡಿದ್ದಾರೆ. ಆ ಕುರಿತು ಸಿಸಿ ಕ್ಯಾಮೆರಾ ದೃಶ್ಯವನ್ನು ಸ್ನೇಹಮಯಿ ಕೃಷ್ಣ ಬಿಡುಗಡೆಗೊಳಿಸಿದ್ದಾರೆ. ದೃಶ್ಯದಲ್ಲಿರುವ ಹರ್ಷ ಚಾಮರಾಜ ಕ್ಷೇತ್ರದ ಬಿಜೆಪಿ ಮುಖಂಡ ಎನ್ನಲಾಗಿದೆ.