ಶಿವಮೊಗ್ಗದ ವಿಮಾನ ನಿಲ್ದಾಣಕ್ಕೆ ಆಗಸ್ಟ್ 11ರಿಂದ ವಿಮಾನ ಹಾರಾಟ ಆರಂಭವಾಗಬೇಕು. ಆದರೂ, ಇಂಡಿಗೋ ಸಂಸ್ಥೆಯು ಆನ್‌ಲೈನ್ ಟಿಕೆಟ್ ಖರೀದಿ ಆರಂಭವಾಗಿಲ್ಲ.
ಶಿವಮೊಗ್ಗ (ಜು.11): ರಾಜ್ಯದ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ವಿಮಾನ ನಿಲ್ದಾಣಕ್ಕೆ ಆಗಸ್ಟ್ 11ರಿಂದ ವಿಮಾನ ಹಾರಾಟ ಆರಂಭವಾಗಬೇಕು. ವಿಮಾನ ಸಂಚಾರಕ್ಕೆ ಕೇವಲ ಒಂದು ತಿಂಗಳಷ್ಟೇ ಬಾಕಿಯಿದ್ದರೂ ಇಂಡಿಗೋ ಸಂಸ್ಥೆಯು ಇನ್ನೂ ಆನ್‌ಲೈನ್ ಟಿಕೆಟ್ ಖರೀದಿ ಆರಂಭವಾಗಿಲ್ಲ. ಶೀಘ್ರ ಎಲ್ಲ ಪ್ರಕ್ರಿಯೆಗಳು ಆರಂಭವಾಗಲಿವೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ.
ಈ ಕುರಿತು ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಂಡಿಗೋ ಸಂಸ್ಥೆಯ ಪ್ರಕಾರ ಆ.11 ರಂದು ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟ ಅರಂಭ ಆಗಬೇಕು. ಆದರೆ ಇಂಡಿಗೋ ಸಂಸ್ಥೆಯ ವೆಬ್ ಸೈಟ್ ನಲ್ಲಿ ಸಮಯ ನಿಗದಿಯಾಗಿಲ್ಲ. ಆನ್ ಲೈನ್ ಬುಕಿಂಗ್ ಆರಂಭವಾಗಬೇಕಿತ್ತು, ಇದೂ ಕೂಡ ಆರಂಭವಾಗಿಲ್ಲ. ಸಚಿವ ಎಂಬಿ ಪಾಟೀಲ್ ಅವರಿಗೆ ಈ ವಿಷಯ ತಿಳಿಸಿದ್ದು, ನೀವೇ ಮೊದಲ ಫ್ಲೈಟ್ ನಲ್ಲಿ ಬಂದು ಉದ್ಘಾಟನೆ ಮಾಡಬೇಕೆಂದು ಕೋರಿದ್ದೇನೆ ಎಂದರು.
ಜುಲೈ 20ರಿಂದ ಮದ್ಯದ ದರ ದುಬಾರಿ: ಬ್ರ್ಯಾಂಡ್‌ವಾರು ಬೆಲೆ ಏರಿಕೆ ವಿವರ ಇಲ್ಲಿದೆ...
ಹೊಸ ರೈಲ್ವೆ ಮಾರ್ಗದ ಬಗ್ಗೆ ಸಕಾರಾತ್ಮಕ ವರದಿ ಬಂದಿದೆ: ತಾಳಗುಪ್ಪದಿಂದ ಸಿದ್ದಾಪುರ, ಸಿರ್ಸಿ ಮೂಲಕ ಹುಬ್ಬಳ್ಳಿಯ ಹೊಸ ರೈಲ್ವೆ ಮಾರ್ಗದ ಬಗ್ಗೆ ಸರ್ವೆ ಕಾರ್ಯದಲ್ಲಿ ಸಕಾರಾತ್ಮಕವಾಗಿ ವರದಿ ಬಂದಿದೆ. ಈ ಹೊಸ ರೈಲ್ವೆ ಮಾರ್ಗದಲ್ಲಿ ಅರಣ್ಯದ ಸಮಸ್ಯೆ ಇದ್ದು ಸುರಂಗ ಮಾರ್ಗ ನಿರ್ಮಾಣ ಮಾಡಬೇಕಿದೆ. ಶೀಘ್ರ ಎಲ್ಲ ಕಾರ್ಯಗಳು ಮುಕ್ತಾಯಗೊಂಡು ರೈಲು ಮಾರ್ಗ ನಿರ್ಮಾಣ ಆರಂಭವಾಗಲಿದೆ ಎಂದರು. ಮತ್ತೊಂದೆಡೆ ಟಿ.ನರಸೀಪುರದಲ್ಲಿ ಹಿಂದೂ ಕಾರ್ಯಕರ್ತ ವೇಣುಗೋಪಾಲ್ ಬರ್ಬರ ಹತ್ಯೆ ಹಾಗೂ ಜೈನ ಮುನಿ ಹತ್ಯೆ ಮಾಡಿರುವುದು ಖಂಡನೀಯವಾಗಿದೆ. ಈ ಬಗ್ಗೆ ಸರ್ಕಾರ ಸೂಕ್ತ ತನಿಖೆ ಮಾಡಬೇಕು ಎಂದರು.
ರಾಜ್ಯದಸಚಿವ ಸಂಪುಟದಲ್ಲಿ ಗೋಹತ್ಯೆ, ಮತಾಂತರ ಕಾಯ್ದೆ ತಿದ್ದುಪಡಿ ವಾಪಸ್ ಪಡೆಯುವ ಕುರಿತು ಮರು ಚಿಂತನೆ ಮಾಡುವುದಾಗಿ ಕಾಂಗ್ರೆಸ್ ಹೇಳಿಕೆ ನೀಡಿರುವುದರಿಂದ ಪ್ರಚೋದನೆ ಉಂಟಾಗಿದೆ. ಪಠ್ಯ ಪುಸ್ತಕದಲ್ಲಿ ಸ್ವಾತಂತ್ರ್ಯ ವೀರರ ಪಾಠವನ್ನ ತೆಗೆದಿರುವುದು ಎಲ್ಲವೂ ಕಾಂಗ್ರೆಸ್ ನ ತುಷ್ಟೀಕರಣ ನೀತಿಯಾಗಿದೆ. ಇತ್ತೀಚಿಗೆ ಶಿರಾಳಕೊಪ್ಪ ಬಳಿ ಎರಡು ಕ್ವಿಂಟಾಲ್ ಗೋಮಾಂಸ ಪತ್ತೆ ಪ್ರಕರಣದ ಹಿನ್ನೆಲೆ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆಯಾಗಿತ್ತು. ಇದರಿಂದಾಗಿ ಹಿಂದೂಪರ ಸಂಘಟನೆ ಶಿಕಾರಿಪುರದಲ್ಲಿ ಅಂಗಡಿ ಮುಗ್ಗಟ್ಟು ಮುಚ್ಚಿ ಬಂದ್ ನಡೆಸಿದ್ದರು.
ಜೋಗ ಜಲಪಾತ ಕಾಮಗಾರಿ ಶೇ.70 ಪೂರ್ಣ: ಇನ್ನು ಜೋಗದಲ್ಲಿ ಅಭಿವೃದ್ಧಿ ಕಾಮಗಾರಿ ಪರಿಶೀಲನೆ ನಡೆಸಿದ ಸಂಸದ ಬಿ ವೈ ರಾಘವೇಂದ್ರ, ಅವರು ಜೋಗದ ಅಭಿವೃದ್ಧಿಗೆ ಬಿಎಸ್ ವೈ ಸಿಎಂ ಇದ್ದಾಗ 185 ಕೋಟಿ ಪ್ರಾರಂಭಿಸಿದ್ದು ಇದರಲ್ಲಿ ಶೇ.70 ಕಾಮಗಾರಿ ಮುಗಿದಿದೆ. ಡಿಸೆಂಬರ್ ಕೊನೆಗೆ ಅಭಿವೃದ್ಧಿ ಕಾಮಗಾರಿ ಮುಗಿಯಲಿದೆ. ಪ್ರವೇಶದ್ವಾರ, ಮಕ್ಕಳ ಉದ್ಯಾನವನ, ಉಪಹಾರ ಗೃಹ ವಿಶ್ರಾಂತಿ ಗೃಹ, ರೋಪ್ ವೇ ನಿರ್ಮಾಣವಾಗುತ್ತಿದೆ. ಕೊಡಚಾದ್ರಿಯಲ್ಲಿ ರೋಪ್ ವೇ, ಕೊಲ್ಲೂರಿನಲ್ಲಿ ಹಾರ್ಬರ್ ನಿರ್ಮಾಣಕ್ಕೆ ಪ್ರಪೋಸಲ್ ಹಾಕಲಾಗಿದೆ. ಅಕ್ಕಮಹಾದೇವಿ ಜನ್ಮಸ್ಥಳ ಶಿವಮೊಗ್ಗದ ಅಭಿವೃದ್ಧಿಗಾಗಿ ಹಲವು ಯೋಜನೆ ರೂಪಿಸಲಾಗಿದೆ. ಜೋಗ ಜಲಪಾತದಲ್ಲಿ ಮಳೆಗಾಲದ ವೇಳೆ ಪ್ರವಾಸಗರು ನಿಲ್ಲಲು ಶೆಲ್ಟರ್ ಇರಲಿಲ್ಲ. ಈಗ ಮೂರು ಗ್ಯಾಲರಿ, ರೋಪ್ ವೇ, ನಿರ್ಮಾಣವಾಗುತ್ತಿದೆ ಎಂದರು.
ಚಕ್ರವರ್ತಿ ಸೂಲಿಬೆಲೆ ನೆಚ್ಚಿನ ಶಿಷ್ಯನ ಹತ್ಯೆ: ಸ್ನೇಹಿತರಿಂದಲೇ ಕೊಲೆಯಾದ್ನ ದಲಿತ ಯುವಕ ?
ಮೂರು ತಿಂಗಳಲ್ಲಿ ಕಾಮಗಾರಿ ಮುಕ್ತಾಯ: ಒಂದೇ ಬಾರಿಗೆ 10 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಜೋಗಜಲಪಾತ ನೋಡಲು ಅವಕಾಶ ಕಲ್ಪಿಸಲಾಗುತ್ತಿದೆ. ಎರಡು ಮೂರು ತಿಂಗಳಲ್ಲಿ ಕಾಮಗಾರಿ ಮುಗಿಯಬೇಕಿತ್ತು. ಕೆಲಸಕ್ಕೆ ವೇಗ ಹೆಚ್ಚಿಸಬೇಕಿದೆ. ಶಾಸಕರು ಈಜು ಕೊಳ ಬೇಡ ಎಂದಿದ್ದಾರೆ. ಇವನ್ನೆಲ್ಲ ಪರಿಗಣಿಸಿ ಪೂರ್ಣಗೊಳಿಸಲಾಗುವುದು. ಪರಿಸರವಾದಿಗಳ ವಿರೋಧ ವ್ಯಕ್ತವಾಗಿದ್ದು, ಅವರ ಕಳಕಳಿಯಂತೆ ಮರಗಳ ಕಡಿತಲೆ ಇಲ್ಲದೆ ಕಾಮಗಾರಿ ನಡೆಸಲಾಗುತ್ತದೆ. ಮಳೆ ಗಾಲ ಸೇರಿದಂತೆ ಹಬ್ಬ ಹರಿದಿನಗಳಲ್ಲಿ ಫಾಲ್ಸ್ ಗೆ ನೀರು ಹರಿಸಿ ನೋಡಲು ಅನುಕೂಲ ಮಾಡಿಕೊಡಲಾಗುತ್ತದೆ. ತಲಕಳಲೆ ವಾಟರ್ ಸ್ಪೋರ್ಟ್ ಅಭಿವೃದ್ಧಿ ಮಾಡಲಾಗುತ್ತದೆ. ರೋಪ್ ವೇ ಕೂಡ 2 ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗುತ್ತಿದೆ ಎಂದು ಮಾಹಿತಿ ನೀಡಿದರು.