ಜುಲೈ 20ರಿಂದ ಮದ್ಯದ ದರ ದುಬಾರಿ: ಬ್ರ್ಯಾಂಡ್‌ವಾರು ಬೆಲೆ ಏರಿಕೆ ವಿವರ ಇಲ್ಲಿದೆ...

By Sathish Kumar KH  |  First Published Jul 11, 2023, 11:49 AM IST

ಕಾಂಗ್ರೆಸ್‌ ಸರ್ಕಾರ ಬಜೆಟ್‌ನಲ್ಲಿ ಅಬಕಾರಿ ಸುಂಕವನ್ನು ಶೇ.20 ಹೆಚ್ಚಳ ಮಾಡಿದ ಬೆನ್ನಲ್ಲೇ ಜುಲೈ 20ರಿಂದ ಬೆಲೆ ಏರಿಕೆ ಅನ್ವಯವಾಗಲಿದೆ. ವಿಸ್ಕಿ, ರಂ, ಬ್ರಾಂಡಿ, ಜಿನ್, ಬಿಯರ್‌ ಎಲ್ಲ ಬೆಲೆಗಳ ಏರಿಕೆ ವಿವರ ಇಲ್ಲಿದೆ..


ಬೆಂಗಳೂರು (ಜು.11): ಕಾಂಗ್ರೆಸ್‌ ಸರ್ಕಾರ 2023 -24ನೇ ಸಾಲಿನ ಬಜೆಟ್ ನಲ್ಲಿ ಘೋಷಣೆ ಮಾಡಿರುವಂತೆ ಮದ್ಯದ ಮೇಲಿನ ಸುಂಕ ಏರಿಕೆ ಜುಲೈ 20 ರಿಂದ ಜಾರಿಯಾಗಲಿದೆ. ವಿಸ್ಕಿ, ರಂ, ಬ್ರಾಂಡಿ, ಜಿನ್ ಸೇರಿದಂತೆ ಎಲ್ಲಾ ಬಗೆಯ ಭಾರತೀಯ ಮದ್ಯದ ಮೇಲೆ ಎಲ್ಲಾ ಘೋಷಿತ 18 ಸ್ಲ್ಯಾಬ್ ಗಳ ಮೇಲಿನ ಹೆಚ್ಚುವರಿ ಅಬಕಾರಿ ಸುಂಕ ಹಾಲಿ ಇರುವ ದರಕ್ಕಿಂತ ಶೇಕಡ 20ರಷ್ಟು ಹೆಚ್ಚಳವಾಗಲಿದೆ. ಬ್ರ್ಯಾಂಡ್‌ವಾರು ಬೆಲೆ ಹೆಚ್ಚಳದ ವಿವರ ಇಲ್ಲಿದೆ ನೋಡಿ..

ಕಾಂಗ್ರೆಸ್‌ ಸರ್ಕಾರದ ಅಬಕಾರಿ ಸುಂಕ ಹೆಚ್ಚಳ ಹಿನ್ನೆಲೆಯಲ್ಲಿ ಮದ್ಯದ ದರ ದುಬಾರಿ ಆಗಲಿದೆ. ಇನ್ನು ಈ ದುಬಾರಿ ಹೊಸ ದರ ಜುಲೈ 20ರಿಂದಲೇ ಜಾರಿಯಾಗುವ ಸಾಧ್ಯತೆಯಿದೆ. ಅಬಕಾರಿ ಸುಂಕ ಹೆಚ್ಚಳ ಕುರಿತಂತೆ ಸರಕಾರ ಕರಡು ಪ್ರಕಟಿಸಿದೆ. 7 ದಿನಗಳ ಒಳಗೆ ಆಕ್ಷೇಪಣೆ ಸಲ್ಲಿಸುವಂತೆ ಕೋರಿದೆ. ಬ್ರಾಂದಿ, ವಿಸ್ಕಿ, ರಮ್, ಜಿನ್ ಎಲ್ಲಾ ಬಗೆಯ ಮದ್ಯದ ಬೆಲೆ ಸೇರಿದಂತೆ ಹಾಲಿ ಇರುವ ಸುಂಕಕ್ಕಿಂದ   ಶೇ.20 ಏರಿಕೆ ಆಗುತ್ತಿದೆ.  ಇನ್ನು ಬಿಯರ್ ಮೇಲಿನ ಅಬಕಾರಿ ಸುಂಕ ಶೇ.10ರಷ್ಟು ಏರಿಕೆಯನ್ನು ‌ಪ್ರಸ್ತಾಪಿಸಲಾಗಿದೆ. ಭಾರತೀಯ ಮದ್ಯ (ಐಎಂಎಲ್)  ಒಂದು ಪೆಗ್ (60ಎಂಲ್) ಗೆ  10 ರಿಂದ‌ 20 ರೂಪಾಯಿ ಹೆಚ್ಚಳವಾಗಲಿದೆ. ಬಿಯರ್ ಬೆಲೆ ಪ್ರತಿ ಬಾಟಲ್ ಗೆ 3 ರಿಂದ 5 ರೂ ಹೆಚ್ಚಳವಾಗುವ ಸಾಧ್ಯತೆ ಇದೆ. 

Tap to resize

Latest Videos

Karnataka Budget 2023 ಅಬಕಾರಿ ಸುಂಕ ಶೇ.20 ಹೆಚ್ಚಳ: ಮದ್ಯದ ದರ ಭಾರಿ ಏರಿಕೆ

ಬ್ರಾಂಡ್ ಗಳು - ಇಂದಿನ ಬೆಲೆ - ಏರಿಕೆಯಾಗಲಿರು ಬೆಲೆ 
ಹೈವಾಟ್ಸ್ ಪಂಚ್ - 
ಈಗಿನ ಬೆಲೆ - 70 
ಏರಿಯ ಬೆಲೆ  -80 

ಬಟ್ ವೈಸರ್-
ಈಗಿನ ಬೆಲೆ - 220 
ಏರಿಕೆ ಬೆಲೆ - 240 

ಕಿಂಗ್ ಫಿಷರ್ ಪ್ರಿಮಿಯನ್ 
ಈಗಿನ ಬೆಲೆ - 170 
ಏರಿಕೆ ಬೆಲೆ -190

ಬ್ಯಾಕ್ ಪೇಪರ್ ವಿಸ್ಕಿ
ಈಗಿನ ಬೆಲೆ - 106 
ಏರಿಕೆ ಬೆಲೆ - 120 

ಬ್ಲಾಕ್ ಆ್ಯಂಡ್ ವೈಟ್ 
ಈಗಿನ ಬೆಲೆ - 2,464
ಏರಿಕೆ ಬೆಲೆ - 2,800

ಒಲ್ಡ್ ಮಂಕ್ 
ಈಗಿನ ಬೆಲೆ - 137 
ಏರಿಕೆ ಬೆಲೆ-  155 

ಮ್ಯನ್ಷನ್ ಹೌಸ್ ಬ್ರಾಂಡಿ 
ಈಗಿನ ಬೆಲೆ - 220
ಏರಿಕೆ  ಬೆಲೆ- 240

ಮಾಕ್ ಡುವೆಲ್ದ್ ಬ್ರಾಂಡಿ 
ಈಗಿನ ಬೆಲೆ - 170
ಏರಿಕೆ ಬೆಲೆ - 190 

ಇಂಪಿಯರಿಯಲ್ ಬ್ಲೂ 
ಈಗಿನ ಬೆಲೆ  - 220
ಏರಿಕೆ ಬೆಲೆ -  240 

ಒಲ್ಡ್ ಟವರ್ ವಿಸ್ಕಿ 
ಈಗಿನ ಬೆಲೆ - 87 
ಏರಿಕೆ  ಬೆಲೆ - 100

ಜಾನಿ ವಾಕರ್ ಬ್ಲಾಕ್ ಲೇಬಲ್ 
ಈಗಿನ ಬೆಲೆ - 6,250
ಏರಿಕೆ ಬೆಲೆ - 7,150

BENGALURU: ಭಿಕ್ಷಾಟನೆ ಬಿಟ್ಟು ರಾಬರಿಗಿಳಿದ ಮಂಗಳಮುಖಿಯರು: ಟೆಕ್ಕಿಗಳೇ ಇವರ ಟಾರ್ಗೆಟ್‌

ಶಿವಾಸ್ ಸೀಗಲ್ 
ಈಗಿನ ಬೆಲೆ - 6,200
ಏರಿಕೆ ಬೆಲೆ - 7,000

ರಮನವ್ ಒಡ್ಕಾ - 
ಈಗಿನ ಬೆಲೆ - 915
ಏರಿಕೆ ಬೆಲೆ - 1,000

ಮ್ಯಾಜಿಕ್ ಮುಮೆಂಟ್ 
ಈಗಿನ ಬೆಲೆ  - 330 
ಏರಿಕೆ ಬೆಲೆ - 380

click me!