ನೆಲಮಂಗಲದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಂಸದ ಸುಧಾಕರ್, ಶಾಸಕ ಪ್ರದೀಪ್ ಈಶ್ವರ್ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. ಪ್ರದೀಪ್ ಈಶ್ವರ್ ಅವರು ಎಲ್ಲಿ ಏನು ಮಾತನಾಡಬೇಕೆಂದು ತಿಳಿದುಕೊಳ್ಳಬೇಕು ಎಂದು ಅವರು ಹೇಳಿದರು.
ನೆಲಮಂಗಲ (ಮಾ.16): ನೆಲಮಂಗಲ (ಮಾ.16): ಅವರ ಬಗ್ಗೆ ಮಾತನಾಡುವಷ್ಟು ದೊಡ್ಡವನಲ್ಲ ನಾನು. ಅವರು ಇಡೀ ರಾಜ್ಯದ ಜನರಿಗೆ ಜ್ಞಾನ ತುಂಬುವ ಮಹಾನ್ ಕೆಲಸ ಮಾಡುತ್ತಾರೆ ಎಂದು ಪರೋಕ್ಷವಾಗಿ ಶಾಸಕ ಪ್ರದೀಪ್ ಈಶ್ವರ್ ಗೆ ಸಂಸದ ಸುಧಾಕರ್ ಟಾಂಗ್ ನೀಡಿದರು.
ಇಂದು ನೆಲಮಂಗಲ ತಾಲೂಕಿನ ಶಿವಗಂಗೆಯ ಮೇಲಣಗವಿ ಮಠದಲ್ಲಿ ನಡೆದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಹಾಗೂ ಶಿವಗಂಗಾ ಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಾತನಾಡಿದ ಸಂಸದರು, ಅವರು ಏನು ಎಂಬುದು ನನಗೆ ಗೊತ್ತಿದೆ, ಪ್ರಪಂಚ ನೋಡಲಿ ಎಂದು ತಿವಿದರು.
ಇದನ್ನೂ ಓದಿ: ಇದು ಸಿದ್ದರಾಮಯ್ಯ ಸರ್ಕಾರ, Pradeep Eshwar ಅಬ್ಬರ
ಸಾಧು ಸಂತರ, ಪವಾಡ ಪುರುಷರ ಕಾರ್ಯಕ್ರಮ ಅದು, ಪಕ್ಷದ ಕಾರ್ಯಕ್ರಮ ಅಲ್ಲ. ಇಂಥ ಕಾರ್ಯಕ್ರಮದಲ್ಲಿ ರಾಜಕೀಯ ಮಾಡಬಾರದು. ಎಲ್ಲಿ ಏನು ಮಾತನಾಡಬೇಕು ಎಂಬ ತಿಳಿವಳಿಕೆ ಇಲ್ಲದಿದ್ರೆ ಏನಾಗುತ್ತೆ ಅನ್ನೋದಕ್ಕೆ ಇಂಥ ಘಟನೆಗಳು ಸಾಕ್ಷಿ. ಪವಾಡ ಪುರುಷರು, ಸಂತರನ್ನು ಯಾವುದೇ ಸಮುದಾಯ, ಪಕ್ಷಕ್ಕೆ ಸೀಮಿತಗೊಳಿಸಬಾರದು.ಇಡೀ ಮನುಕುಲ್ಲಕ್ಕೆ ಮಾನವೀಯತೆ ಪಾಠ ಹೇಳಿದ್ದಾರೆ. ಎಲ್ಲಾ ಸಮುದಾಯಕ್ಕೆ ಒಳ್ಳೆಯದು ಬಯಸಿದ್ದಾರೆ. ಮಾನವೀಯತೆ ಮೆರಿಬೇಕು ಅಂತ ಹೇಳಿದ್ದಾರೆ. ನಾವು ಅದನ್ನ ಬಿಟ್ಟು ಅವರ ಹೆಸರಲ್ಲಿ ರಾಜಕೀಯ ಮಾಡಬಾರದು. ಅವರು ವಿಶ್ವಮಾನವರಾಗಿ ಅಂತಾ ಹೇಳಿದ್ರೆ ಇವರು ಅಲ್ಪ ಮಾನವರಾಗಲು ಹೊರಟಿದ್ದಾರೆ. ಅವರಿಗೆ(ಪ್ರದೀಪ್ ಈಶ್ವರ್)ಗೆ ತಾತಯ್ಯ ಬುದ್ಧಿ ಕೊಡಲಿ ಎಂದು ಟಾಂಗ್ ನೀಡಿದರು.