ಡಿಕೆ ಶಿವಕುಮಾರ ನಿಮ್ಮ ತತ್ವದ ವಿರುದ್ಧ ಇದ್ರೆ ಸಸ್ಪೆಂಡ್ ಮಾಡಿ ನೋಡೋಣ: ಕಾಂಗ್ರೆಸ್ ವಿರುದ್ಧ ಜಗದೀಶ್ ಶೆಟ್ಟರ್ ವಾಗ್ದಾಳಿ!

Published : Feb 27, 2025, 07:22 PM ISTUpdated : Feb 27, 2025, 07:44 PM IST
ಡಿಕೆ ಶಿವಕುಮಾರ ನಿಮ್ಮ ತತ್ವದ ವಿರುದ್ಧ ಇದ್ರೆ ಸಸ್ಪೆಂಡ್ ಮಾಡಿ ನೋಡೋಣ: ಕಾಂಗ್ರೆಸ್ ವಿರುದ್ಧ ಜಗದೀಶ್ ಶೆಟ್ಟರ್ ವಾಗ್ದಾಳಿ!

ಸಾರಾಂಶ

ಡಿಕೆ ಶಿವಕುಮಾರ್ ಅವರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆಯನ್ನು ಟೀಕಿಸುತ್ತಿರುವ ಕಾಂಗ್ರೆಸ್ ನಾಯಕರನ್ನು ಜಗದೀಶ್ ಶೆಟ್ಟರ್ ಟೀಕಿಸಿದ್ದಾರೆ. ಕಾಂಗ್ರೆಸ್‌ಗೆ ಹಿಂದೂಗಳ ಬಗ್ಗೆ ದ್ವೇಷವಿದ್ದು, ಅದಕ್ಕಾಗಿಯೇ ಅವರ ಉದ್ಧಾರವಾಗಿಲ್ಲ ಎಂದು ಕಿಡಿಕಾರಿದ್ದಾರೆ. ಖರ್ಗೆ ಕುಟುಂಬದ ಹಿಂದೂ ವಿರೋಧಿ ಹೇಳಿಕೆಗಳನ್ನೂ ಖಂಡಿಸಿದ್ದಾರೆ.

ಹುಬ್ಬಳ್ಳಿ (ಫೆ.27): ಡಿಕೆ ಶಿವಕುಮಾರ್ ನಿಮ್ಮ ತತ್ವದ ವಿರುದ್ಧ ಇದ್ರೆ ಅವರನ್ನು ಸಸ್ಪೆಂಡ್ ಮಾಡಿ ನೋಡೋಣ ಎಂದು ಸಂಸದ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಪಕ್ಷದ ವಿರುದ್ಧ ಗುಡುಗಿದ್ದಾರೆ.

ಡಿಸಿಎಂ ಡಿಕೆ ಶಿವಕುಮಾರ್ ಅವರು ಮಹಾಕುಂಭಮೇಳ, ಮಹಾಶಿವರಾತ್ರಿಯಂದು ಕೊಯಮತ್ತೂರಿನ ಧಾರ್ಮಿಕ ಕಾರ್ಯಕ್ರಮ ಭಾಗಿಯಾಗಿರುವುದು ಕಾಂಗ್ರೆಸ್ ನಾಯಕರಿಂದ ಟೀಕೆ ವ್ಯಕ್ತವಾಗುತ್ತಿರುವ ಹಿನ್ನೆಲೆ ಈ ವಿಚಾರವಾಗಿ ಮಾತನಾಡಿದ ಸಂಸದರು, ಡಿಕೆ ಶಿವಕುಮಾರ ಕುಂಭಮೇಳ, ಕೊಯಮತ್ತೂರಿಗೆ ಹೋಗಿರೋದು ಸಹಜ. ಇದರಲ್ಲೇನು ದೊಡ್ಡಸ್ತಿಕೆ ಇಲ್ಲ ಎಂದರು.

ಇದನ್ನೂ ಓದಿ: DK Shivakumar ವಿರುದ್ಧ ಸುನೀಲ್ ಬೋಸ್ ಪರೋಕ್ಷ ಅಸಮಾಧಾನ | Suvarna News | Kannada News

ಕಾಂಗ್ರೆಸ್‌ಗೆ ಹಿಂದೂಗಳ ಬಗ್ಗೆ ದ್ವೇಷವಿದೆ:

ಡಿಕೆ ಶಿವಕುಮಾರ್ ಸಹಜವಾಗಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಕ್ಕೆ ಕಾಂಗ್ರೆಸ್ ನಾಯಕರು ಟೀಕಿಸುತ್ತಿದ್ದಾರೆ. ಅವರು ಹೋಗಿದ್ದ ಸರಿಯಲ್ಲವೆಂದರೆ, ತಮ್ಮ ಪಕ್ಷದ ತತ್ವಗಳಿಗೆ ವಿರುದ್ಧವಾಗಿದ್ದರೆ ಅವರನ್ನು ಸಸ್ಪೆಂಡ್ ಮಾಡಿ. ಪಾರ್ಟಿಯಿಂದ ಹೊರಗೆ ಹಾಕಿ ನೋಡೋಣ. ಈ ಕಾಂಗ್ರೆಸ್‌ಗೆ ಹಿಂದೂಗಳ ಬಗ್ಗೆ ದ್ವೇಷವಿದೆ. ಇದರಿಂದಾಗಿಯೇ ಕಾಂಗ್ರೆಸ್ ಉದ್ಧಾರವಾಗಿಲ್ಲ, ಮುಂದೆನೂ ಆಗೋಲ್ಲ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: 'ಅಧಿಕಾರ ನಶ್ವರ, ಮತದಾರನೇ ಈಶ್ವರ..' ಯಾಸೀರ್ ಖಾನ್‌ಗೆ ಮತ ನೀಡುವಂತೆ ಡಿಕೆ ಶಿವಕುಮಾರ ಮನವಿ

ಖರ್ಗೆ ಕುಟುಂಬದ ವಿರುದ್ಧ ಕಿಡಿ:

ಹಿಂದೂಗಳು ಇಲ್ಲದೆ ನೀವು ರಾಜಕಾರಣ ಮಾಡ್ತೀವಿ ಅಂದ್ರೆ ಅದು ನಿಮ್ಮ ಹಣೆಬರಹ. ಹಿಂದೂಗಳನ್ನು ಕೀಳಾಗಿ ಕಾಣೋದ್ರಿಂದಲೇ ನಿಮ್ಮ ಅವನತಿಗೆ ಕಾರಣ. ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ್ ಖರ್ಗೆ ಹೇಳಿಕೆಗಳು ಹಿಂದೂ ವಿರೋಧಿಯಾಗಿವೆ. ಈ ದೇಶ ಹಿಂದೂಗಳ ದೇಶ, ಹಿಂದೂ ರಾಷ್ಟ್ರ ಅನ್ನೋ ಪರಂಪರೆ ಇದೆ. ಇದಕ್ಕೆ ಎಲ್ಲಿ ಅಡ್ಡಿಯಾಗಬಾರದು. ಕಮ್ಯುನಿಷ್ಟರೂ ಕೂಡ ಹಿಂದೂ ದೇವಾಲಯಕ್ಕೆ ಹೋಗಿದ್ದಾರೆ. ಕಾಂಗ್ರೆಸ್‌ನ ಎಷ್ಟು ಜನ ಕುಂಭಮೇಳಕ್ಕೆ ಹೋಗಿಲ್ಲ? ರಾಜಕಾರಣಕ್ಕೆ ಧರ್ಮ ಥಳಕು ಹಾಕಬಾರದು ಎಂದು ಪರೋಕ್ಷವಾಗಿ ಖರ್ಗೆ ವಿರುದ್ದ ಹರಿಹಾಯ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೇರೆಯದನ್ನು ಬಿಟ್ಟು, 120 ಅಡಿಕೆ ಮರಗಳನ್ನು ಅರಣ್ಯ ಇಲಾಖೆ ಕಡಿದಿದ್ದು ಯಾಕೆ? ಅನಂತಮೂರ್ತಿ ಹೆಗಡೆ ಆಕ್ರೋಶ
ಗಾಂಧೀಜಿ ಕೊಡುಗೆ ಬಗ್ಗೆ ಬಿಜೆಪಿಯವರಿಗೆ ಜ್ಞಾನ ಇಲ್ಲ: ಸಚಿವ ರಾಮಲಿಂಗಾರೆಡ್ಡಿ ವಾಗ್ದಾಳಿ