Chikkamagaluru: ಅನಧಿಕೃತ ಬಂದೂಕುಗಳ ವಶದ ಬೆನ್ನಲ್ಲೇ ಮೀಸಲು ಅರಣ್ಯದಲ್ಲಿ 60ಕ್ಕೂ ಹೆಚ್ಚು ಫೈರಿಂಗ್ ಕಾಟ್ರೇಜ್ ಪತ್ತೆ

By Govindaraj S  |  First Published Mar 8, 2023, 12:36 PM IST

ಜಿಲ್ಲೆಯಲ್ಲಿ ಅಕ್ರಮ ಬಂದೂಕುಗಳನ್ನು ಪೊಲೀಸ್ ಇಲಾಖೆಯ ಪತ್ತೆ ಹಚ್ಚಿ ಪ್ರಕರಣ ದಾಖಲಿಸಿದ ಬೆನ್ನಲ್ಲೇ ಖಾಲಿ  ಕಾಟ್ರೇಜ್‍ಗಳು ಪತ್ತೆ ಆಗಿರುವ ಪ್ರಕರಣ ಬೆಳಕಿಗೆ ಬಂದಿದೆ. 


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಮಾ.08): ಜಿಲ್ಲೆಯಲ್ಲಿ ಅಕ್ರಮ ಬಂದೂಕುಗಳನ್ನು ಪೊಲೀಸ್ ಇಲಾಖೆಯ ಪತ್ತೆ ಹಚ್ಚಿ ಪ್ರಕರಣ ದಾಖಲಿಸಿದ ಬೆನ್ನಲ್ಲೇ ಖಾಲಿ  ಕಾಟ್ರೇಜ್‍ಗಳು ಪತ್ತೆ ಆಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಜಿಲ್ಲೆಯ ಮೂಡಿಗೆರೆ ತಾಲೂಕಿನ ಸಾರಗೋಡು-ತತ್ಕೊಳ ಮೀಸಲು ಅರಣ್ಯ ಪ್ರದೇಶದಲ್ಲಿ  ಸುಮಾರು 60ಕ್ಕೂ ಹೆಚ್ಚು ಬಂದೂಕಿನ ಖಾಲಿ ಕಾಟ್ರೇಜ್‍ಗಳು ಪತ್ತೆ ಆಗಿವೆ. ವಗೇರ್‌ನಿಂದ-ಕನ್ನಹಳ್ಳಿಗೆ ಸಂಪರ್ಕ ಕಲ್ಪಿಸುವ ಅರಣ್ಯ ಪ್ರದೇಶದ ರಸ್ತೆಯಲ್ಲಿ ಕಾಟ್ರೇಜ್‍ಗಳು ಕಂಡು ಬಂದಿವೆ. 

Latest Videos

undefined

ಕಾಡು ಪ್ರಾಣಿಗಳ‌ ಶಿಕಾರಿಗಾಗಿ ಬಳಕೆ ಶಂಕೆ?: ಮಲೆನಾಡು ಭಾಗದಲ್ಲಿ ಕಾಫಿ ಬೆಳೆಗಾರರು ಕಾಡು ಪ್ರಾಣಿಗಳು ಹಾಗೂ ಕಳ್ಳ-ಕಾಕರಿಂದ ಬೆಳೆ ಹಾಗೂ ಆತ್ಮರಕ್ಷಣೆಗೆ ಅಕ್ರಮ-ಸಕ್ರಮವಾಗಿ ಬಂದೂಕಗಳನ್ನ ಮನೆಯಲ್ಲಿ ಇಟ್ಟುಕೊಂಡಿರುತ್ತಾರೆ. ಬಂದೂಕುಗಳನ್ನ ಪ್ರಾಣಿ ಬೇಟೆಗೂ ಬಳಸುತ್ತಾರೆ. ಆದರೆ, ಮೀಸಲು ಅರಣ್ಯ ಪ್ರದೇಶದಲ್ಲಿ ಹೀಗೆ 60ಕ್ಕೂ ಹೆಚ್ಚು ಬಂದೂಕಿನ ಉಪಯೋಗಿಸಲ್ಪಟ್ಟ ಫೈರಿಂಗ್ ಆದ ಖಾಲಿ ಕಾಟ್ರೇಜ್ ಪತ್ತೆಯಾಗಿದ್ದು, ಪ್ರಾಣಿಗಳ ಬೇಟೆಗೆ ಬಳಕೆಯಾಗಿರಬಹುದು ಎಂದು ಶಂಕಿಸಲಾಗಿದೆ. ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಬೇಟಿ ನೀಡಿರುವ ಅರಣ್ಯ ಅಧಿಕಾರಿಗಳು ಕಾಟ್ರೇಜ್‍ಗಳ ಬಗ್ಗೆ ತನಿಖೆ ಕೈಗೊಂಡಿದ್ದಾರೆ. 

ಬಿಜೆಪಿ ಪಕ್ಷ ಯಾವುದೇ ತೀರ್ಮಾನ ತೆಗೆದುಕೊಂಡರೂ ಬದ್ಧ: ಮಾಡಾಳು ವಿರೂಪಾಕ್ಷಪ್ಪ

ಇಷ್ಟೊಂದು ಕಾಟ್ರೇಜ್‍ಗಳು ಇಲ್ಲಿಗೆ ಹೇಗೆ ಬಂತು. ಯಾರು ತಂದು ಹಾಕಿದ್ದು. ಬೇರೆ ಕಡೆ ಬಳಸಿ ಇಲ್ಲಿಗೆ ತಂದು ಎಸೆದಿದ್ದಾರಾ ಅಥವ ಇಲ್ಲಿಯೇ ಬಳಕೆಯಾಗಿದ್ಯಾ. ಇಲ್ಲಿಯೇ ಬಳಕೆಯಾಗಿದ್ರೆ ಇಷ್ಟೊಂದು ಕಾಟ್ರೇಜ್‍ಗಳನ್ನ ಏಕೆ ಬಳಸಿದ್ದಾರೆ ಎಂಬೆಲ್ಲಾ ದೃಷ್ಥಿಕೋನದಲ್ಲಿ ತನಿಕೆ ಕೈಗೊಂಡಿದ್ದಾರೆ. ಮಲೆನಾಡಲ್ಲಿ 12 ಸಾವಿರಕ್ಕೂ ಅಧಿಕ ಸಕ್ರಮ ಬಂದೂಕಗಳಿದ್ರೆ, ಅದರರ್ಧದಷ್ಟು ಅಕ್ರಮ ಬಂದೂಕುಗಳು ಇವೆ ಎಂಬ ಮಾಹಿತಿ ಇದೆ. ಆದ್ರೆ, ಬಂದೂಕುಗಳು ಬೆಳೆ-ಪ್ರಾಣ ಉಳಿಸಿಕೊಳ್ಳುವುದರ ಜೊತೆ ಪ್ರಾಣಿಬೇಟೆ ಹಾಗೂ ಸಮಾಜದಲ್ಲಿ ವೈಯಕ್ತಿಕ ದ್ವೇಷ ತೀರಿಸಿಕೊಳ್ಳಲು ಬಳಕೆಯಾಗಿದ್ದು ಉಂಟು. ಆದ್ರೆ, ಅರಣ್ಯ ಪ್ರದೇಶದಲ್ಲಿ ಇಷ್ಟೊಂದು ಕಾಟ್ರೇಜ್‍ಗಳು ಪತ್ತೆಯಾಗಿರೋದು ಅಧಿಕಾರಿಗಳ ಆತಂಕಕ್ಕೂ ಕಾರಣವಾಗಿದ್ದು, ತನಿಖೆ ಕೈಗೊಂಡಿದ್ದಾರೆ.

click me!