ಜಾತ್ರೆಯಲ್ಲಿ ಪ್ರಸಾದ ಸೇವಿಸಿ 50ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕೇರೂರ ಗ್ರಾಮದಲ್ಲಿ ನಡೆದಿದೆ.
ಚಿಕ್ಕೋಡಿ (ಮೇ.30) ಜಾತ್ರೆಯಲ್ಲಿ ಪ್ರಸಾದ ಸೇವಿಸಿ 50ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕೇರೂರ ಗ್ರಾಮದಲ್ಲಿ ನಡೆದಿದೆ.
ಕೇರೂರ ಗ್ರಾಮದಲ್ಲಿ ನಡೆದಿದ್ದ ಬಾಳುಮಾಮಾ ದೇವರ ಜಾತ್ರೆ. ಪ್ರತಿವರ್ಷದಂತೆ ಈ ಬಾರಿಯೂ ಜಾತ್ರೆಯಲ್ಲಿ ಗ್ರಾಮಸ್ಥರು, ನೆರೆಹೊರೆ ಗ್ರಾಮದವರ ಸೇರಿ ಸಾವಿರಾರು ಜನರು ಭಾಗಿಯಾಗಿದ್ದರು. ಜಾತ್ರೆಗೆ ಬಂದಿದ್ದ ಪ್ರತಿಯೊಬ್ಬರೂ ನಿನ್ನೆ ಮಧ್ಯಾಹ್ನ ವೇಳೆ ನಡೆದ ಜಾತ್ರಾ ಮಹೋತ್ಸವದಲ್ಲಿ ಪ್ರಸಾದ ರೂಪದ ಊಟ ಸೇವಿಸಿದ್ದಾರೆ. ಬಳಿಕ ಮಧ್ಯಾಹ್ನ ಉಳಿದ ಸಾಂಬಾರು, ಅನ್ನವನ್ನೇ ಸಂಜೆಯೂ ಊಟ ಮಾಡಿದ್ದ 200ಕ್ಕೂ ಹೆಚ್ಚು ಜನರು. ಸಂಜೆ ಊಟ ಮಾಡಿದ ಕೆಲ ಹೊತ್ತಿನಲ್ಲಿ ಜನರಿಗೆ ವಾಂತಿ ಭೇದಿ ಶುರುವಾಗಿ ತೀವ್ರ ಅಸ್ವಸ್ಥಗೊಂಡಿದ್ದಾರೆ. 30 ಜನರು ಅಸ್ವಸ್ಥಗೊಂಡವರ ಪೈಕಿ ಮಹಿಳೆಯರು, ಮಕ್ಕಳು ಸೇರಿದ್ದಾರೆ.
ವಿಷಾಹಾರ ಸೇವಿಸಿ 55ಕ್ಕೂ ಹೆಚ್ಚು ಕುರಿಗಳು ಸಾವು; ಮುಂದೇನು ತೋಚದೇ ಕುರಿಗಾಹಿಗಳು ಕಂಗಾಲು!
ಅಸ್ವಸ್ಥರನ್ನ ಚಿಕ್ಕೋಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. 10 ಜನರಿಗೆ ಕೇರೂರ ಗ್ರಾಮದ ಅಂಗನವಾಡಿ ಕೇಂದ್ರದಲ್ಲೇ ಚಿಕಿತ್ಸೆ ನೀಡಲಾಗಿದೆ. ಇನ್ನೂ 15ಕ್ಕೂ ಹೆಚ್ಚು ಮಂದಿ ಯಕ್ಸಂಬಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಸಂಜೆ 200ಕ್ಕೂ ಅಧಿಕ ಜನರ ಊಟ ಸೇವಿಸಿರುವುದರಿಂದ ಇನ್ನಷ್ಟು ಪ್ರಕರಣಗಳು ಸಾಧ್ಯತೆ ಹಿನ್ನೆಲೆ ವೈದ್ಯರ ತಂಡ ಗ್ರಾಮದಲ್ಲಿ ಬೀಡುಬಿಟ್ಟಿದೆ.