'6 ತಿಂಗಳಲ್ಲಿ 40ಕ್ಕೂ ಹೆಚ್ಚು ಬಾರಿ ಪೆಟ್ರೋಲ್‌ ದರ ಹೆಚ್ಚಳ'

Kannadaprabha News   | Asianet News
Published : Jun 12, 2021, 07:45 AM ISTUpdated : Jun 12, 2021, 08:01 AM IST
'6 ತಿಂಗಳಲ್ಲಿ 40ಕ್ಕೂ ಹೆಚ್ಚು ಬಾರಿ  ಪೆಟ್ರೋಲ್‌ ದರ ಹೆಚ್ಚಳ'

ಸಾರಾಂಶ

ಕಳೆದ ಆರು ತಿಂಗಳಲ್ಲಿ ಬರೋಬ್ಬರಿ 40ಕ್ಕೂ ಹೆಚ್ಚು ಬಾರಿ ಪೆಟ್ರೋಲ್‌ ದರ ಏರಿಕೆ  ಮಧ್ಯಮ ವರ್ಗದ ವೇತನ ಹಾಗೂ ರೈತರ ಬೆಂಬಲ ಬೆಲೆ, ಉದ್ಯೋಗ ಖಾತ್ರಿ, ಕನಿಷ್ಠ ವೇತನವನ್ನು ಎಷ್ಟುಬಾರಿ ಏರಿಕೆ? ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಸರ್ಕಾರವನ್ನು ಪ್ರಶ್ನೆ

ಬೆಂಗಳೂರು (ಜೂ.12):  ಕಳೆದ ಆರು ತಿಂಗಳಲ್ಲಿ ಬರೋಬ್ಬರಿ 40ಕ್ಕೂ ಹೆಚ್ಚು ಬಾರಿ ಪೆಟ್ರೋಲ್‌ ದರವನ್ನು ಕೇಂದ್ರ ಸರ್ಕಾರ ಹೆಚ್ಚಿಸಿದೆ. ಇದೇ ರೀತಿ ಮಧ್ಯಮ ವರ್ಗದ ವೇತನ ಹಾಗೂ ರೈತರ ಬೆಂಬಲ ಬೆಲೆ, ಉದ್ಯೋಗ ಖಾತ್ರಿ, ಕನಿಷ್ಠ ವೇತನವನ್ನು ಎಷ್ಟುಬಾರಿ ಹೆಚ್ಚಿಸಿದೆ? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಸರ್ಕಾರ ಇದೇ ರೀತಿ ಬೆಲೆ ಏರಿಕೆ ಮಾಡಿದರೆ ಪೆಟ್ರೋಲ್‌ ಬೆಲೆ 2022ರಲ್ಲಿ 120 ರು., 2023ರಲ್ಲಿ 160 ರು., 2024ರಲ್ಲಿ 200 ರು. ಆಗಲಿದೆ. ಹೀಗಾಗಿ ಪರಿಸ್ಥಿತಿ ಕೈಮೀರಿ ಹೋಗುವ ಮೊದಲು ನಾವು ಧ್ವನಿ ಎತ್ತಬೇಕು ಎಂದು ಕರೆ ನೀಡಿದ್ದಾರೆ.

5,000 ಪೆಟ್ರೋಲ್‌ ಬಂಕ್‌ ಮುಂದೆ ಕೈ ನಾಯಕರ ‘100 ನಾಟೌಟ್‌’ ಪ್ರತಿಭಟನೆ!

ಕೇಂದ್ರ ಸರ್ಕಾರದ ಪೆಟ್ರೋಲ… ಹಾಗೂ ಡೀಸೆಲ್‌ ಬೆಲೆ ಏರಿಕೆ ನೀತಿ ಖಂಡಿಸಿ ಕೆಪಿಸಿಸಿ ವತಿಯಿಂದ ರಾಜ್ಯಾದ್ಯಂತ 800 ಪೆಟ್ರೋಲ್‌ ಬಂಕ್‌ಗಳಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಮಾತನಾಡಿದ ಅವರು, 2021ರಲ್ಲಿ ಬಿಜೆಪಿಯು 40ಕ್ಕೂ ಹೆಚ್ಚು ಬಾರಿ ಪೆಟ್ರೋಲ್‌ ದರ ಏರಿಕೆ ಮಾಡಿದೆ. ಆದರೆ, ಸರ್ಕಾರ ಮಧ್ಯಮ ವರ್ಗದವರ ಸಂಬಳವನ್ನು ಎಷ್ಟುಬಾರಿ ಹೆಚ್ಚಿಸಿದೆ? ಕನಿಷ್ಠ ವೇತನವನ್ನು ಎಷ್ಟುಬಾರಿ ಪರಿಷ್ಕರಿಸಲಾಗಿದೆ? ಉದ್ಯೋಗ ಖಾತ್ರಿ ವೇತನವನ್ನು ಎಷ್ಟುಬಾರಿ ಹೆಚ್ಚಿಸಲಾಗಿದೆ? ರೈತರಿಗಾಗಿ ಕನಿಷ್ಠ ಬೆಂಬಲ ಬೆಲೆಯನ್ನು ಎಷ್ಟುಬಾರಿ ಹೆಚ್ಚಿಸಲಾಗಿದೆ? ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ-ಡಿಕೆಶಿ ಗೌಪ್ಯ ಚರ್ಚೆ : ಚುನಾವಣೆಗೆ ನಾವು ಸಿದ್ದವೆಂದ ನಾಯಕರು

ಬಿಜೆಪಿ ಸರ್ಕಾರ ಜನರ ಹಿತಕ್ಕಿಂತ ತಮ್ಮ ಬೊಕ್ಕಸ ತುಂಬಿಸಿಕೊಳ್ಳಲು ಹಗಲು ದರೋಡೆಗಿಳಿದಿದೆ. ಆರ್ಥಿಕ ಹಿಂಜರಿತ ಹಾಗೂ ಇಂಧನ ದರ ಹೆಚ್ಚಳದಿಂದ ದೇಶದ ಪ್ರತಿಯೊಬ್ಬ ನಾಗರಿಕನು ತೊಂದರೆ ಅನುಭವಿಸುತ್ತಿದ್ದಾನೆ. ಇಂತಹ ಸಮಯದಲ್ಲಿ ಪೆಟ್ರೋಲ್‌ ತೆರಿಗೆ ಹೆಸರಿನಲ್ಲಿ ಬಿಜೆಪಿಯು ಬಡವರ ಜೇಬಿಗೆ ಕತ್ತರಿ ಹಾಕುತ್ತಿದೆ ಎಂದು ಕಿಡಿಕಾರಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸಿಎಂ ಸಿದ್ದರಾಮಯ್ಯಗೆ ಸುಪ್ರೀಂಕೋರ್ಟ್‌ ನೋಟೀಸ್: ವರುಣಾ ಕ್ಷೇತ್ರದ ಆಯ್ಕೆ ಪ್ರಶ್ನಿಸಿದ್ದ ಅರ್ಜಿ ವಿಚಾರಣೆ
ಉಡುಪಿ: 2 ಗಂಟೆ ಕಾದರೂ ಬರಲಿಲ್ಲ 108 ಆಂಬುಲೆನ್ಸ್‌, ಗೂಡ್ಸ್ ಟೆಂಪೋದಲ್ಲಿ ಸಾಗಿಸಿ ವೃದ್ಧನ ರಕ್ಷಣೆ!