ಬಸ್ ಓಡಿಸುತ್ತಿರುವ ಮೂಡುಬಿದಿರೆ ತಾಲೂಕು ಕಲ್ಲಬೆಟ್ಟಿನ ಮೊಹ್ಮದ್ ಆಲಿ ಎಂಬುವರು ತನ್ನ ಬಸ್ ಹಿಂಬದಿಯ ಗಾಜಿನಲ್ಲಿ ‘ಬೆದ್ರ’ (ಮೂಡುಬಿದಿರೆ ಎಂದು ತುಳುವಿನಲ್ಲಿ ಅರ್ಥ) ಎಂದು ಬರೆದು ಹುಟ್ಟೂರಿನ ಪ್ರೀತಿಯನ್ನು ತಾನು ಕೆಲಸ ಮಾಡುತ್ತಿರುವ ದೂರದ ಸೌದಿಯಲ್ಲಿ ಪಸರಿಸುತ್ತಿದ್ದಾರೆ.
ಮೂಡುಬಿದಿರೆ (ಮಾ.26): ಸೌದಿ ಅರೇಬಿಯಾದ ಜುಬೈಲ್‌ನಲ್ಲಿ ಓಡಾಡುವ ಬಸ್ಸಿನಲ್ಲಿ ಕನ್ನಡದ ಲಿಪಿಯಲ್ಲಿ ‘ಬೆದ್ರ’ ಎಂಬ ಪದ ರಾರಾಜಿಸುತ್ತಿದೆ.! ಅಲ್ಲಿ ಬಸ್ ಓಡಿಸುತ್ತಿರುವ ಮೂಡುಬಿದಿರೆ ತಾಲೂಕು ಕಲ್ಲಬೆಟ್ಟಿನ ಮೊಹ್ಮದ್ ಆಲಿ ಎಂಬುವರು ತನ್ನ ಬಸ್ ಹಿಂಬದಿಯ ಗಾಜಿನಲ್ಲಿ ‘ಬೆದ್ರ’ (ಮೂಡುಬಿದಿರೆ ಎಂದು ತುಳುವಿನಲ್ಲಿ ಅರ್ಥ) ಎಂದು ಬರೆದು ಹುಟ್ಟೂರಿನ ಪ್ರೀತಿಯನ್ನು ತಾನು ಕೆಲಸ ಮಾಡುತ್ತಿರುವ ದೂರದ ಸೌದಿಯಲ್ಲಿ ಪಸರಿಸುತ್ತಿದ್ದಾರೆ. ಸೌದಿಯಲ್ಲಿ ಅವರು ಸ್ವಂತ ಬಸ್ ಹೊಂದಿದ್ದು ಮಕ್ಕಾ, ಮದೀನಾದಂತಹ ಪವಿತ್ರ ಕ್ಷೇತ್ರಕ್ಕೆ ಯಾತ್ರಾರ್ಥಿಗಳನ್ನು ಬಾಡಿಗೆಗೆ ಕರೆದೊಯ್ಯುತ್ತಿದ್ದಾರೆ. ಉಳಿದ ಸಮಯಗಳಲ್ಲಿ ಕಂಪನಿಗಳ ಕೆಲಸಗಳಿಗೂ ಬಸ್ ಬಾಡಿಗೆಗೆ ಕೊಡುತ್ತಿದ್ದಾರೆ.
ಹಲವು ವರ್ಷಗಳಿಂದ ಅವರು ಸೌದಿಯಲ್ಲಿ ನೆಲೆಸಿದ್ದಾರೆ. ಕಲ್ಲಬೆಟ್ಟು ಗ್ರಾಮದ ಪಿಲಿಪಂಜರದವರಾಗಿರುವ ಮೊಹ್ಮದ್ ಹುಟ್ಟೂರಿನಲ್ಲಿ ಹಲವು ವರ್ಷ ‘ಕೊಹಿನೂರು’ ಹೆಸರಿನ ಆಟೋ ಬಾಡಿಗೆಗೆ ಓಡಿಸುತ್ತಿದ್ದರು. ಅದೇ ಹೆಸರನ್ನು ಅವರು ಸೌದಿಯಲ್ಲಿ ಬಸ್‌ಗೆ ಇಟ್ಟಿದ್ದಾರೆ. ‘ಬೆದ್ರ ನನ್ನ ಹುಟ್ಟೂರು. ಇಲ್ಲಿ ಓದಿ, ದೊಡ್ಡವನಾಗಿದ್ದೇನೆ. ನಾನು ಪ್ರಸ್ತುತ ಕೆಲಸ ಮಾಡುತ್ತಿರುವ ಸೌದಿಯ ಜುಬೈಲ್‌ನಲ್ಲಿ. ತುಂಬಾ ಮಂದಿ ಮೂಡುಬಿದಿರೆಯ ಸ್ನೇಹಿತರಿದ್ದಾರೆ. ಹುಟ್ಟೂರಿನ ಪ್ರೀತಿ, ಅಭಿಮಾನದಿಂದ ನನ್ನ ಬಸ್‌ನ ಹಿಂಬದಿ ಗಾಜಿನಲ್ಲಿ ಬೆದ್ರ ಎಂಬ ಹೆಸರು ಬರೆದಿದ್ದೇನೆ’ ಎಂದು ಅವರು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ. ಅವರ ಬೆದ್ರ ಹೆಸರಿನ ಬಸ್‌ನ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬಾಂಗ್ಲಾ ಸರ್ಕಾರದ ವಿರುದ್ಧ ಶೀಘ್ರ ಸೇನಾ ಕ್ಷಿಪ್ರಕ್ರಾಂತಿ?: ಯೂನುಸ್ ಸರ್ಕಾರದ ವಿರುದ್ಧ ವೈಫಲ್ಯದ ಆರೋಪ
ಪಶು ಚಿಕಿತ್ಸೆ ಆಸ್ಪತ್ರೆಗಳಿಗೆ ಶಿಲಾನ್ಯಾಸ: ದ.ಕ. ಜಿಲ್ಲಾ ಪಂಚಾಯಿತಿ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಆರ್. ಐ. ಡಿ. ಎಫ್ -28ರಲ್ಲಿ ಮಂಜೂರಾದ ತಾಲೂಕಿನ ಮೂಡುಬಿದಿರೆ ಮತ್ತು ಶಿರ್ತಾಡಿಯಲ್ಲಿ ತಲಾ 53.50 ಲಕ್ಷ ರು. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಪಶು ಆಸ್ಪತ್ರೆಯ ನೂತನ ಕಟ್ಟಡಕ್ಕೆ ಶಾಸಕ ಉಮಾನಾಥ ಎ. ಕೋಟ್ಯಾನ್ ಶುಕ್ರವಾರ ಶಿಲಾನ್ಯಾಸ ನೆರವೇರಿಸಿದರು. ಮೂಡುಬಿದಿರೆಗೆ ಈಗಾಗಲೇ ಎಂಆರ್‌ಪಿಎಲ್ ಸಿಆರ್‌ಎಸ್ ನಿಧಿಯಿಂದ ಪಶು ಶಸ್ತ್ರಚಿಕಿತ್ಸಾ ವಿಭಾಗ ತೆರೆಯಲಾಗಿದೆ. ಮುಂದಿನ ದಿನಗಳಲ್ಲಿ ಬೇಕಾಗುವ ಸವಲತ್ತುಗಳನ್ನು ಒದಗಿಸಲು ಪ್ರಯತ್ನಿಸಲಾಗುವುದು ಎಂದರು.
ಪುರಸಭಾ ಅಧ್ಯಕ್ಷೆ ಜಯಶ್ರೀ ಕೇಶವ್, ಉಪಾಧ್ಯಕ್ಷ ನಾಗರಾಜ್ ಪೂಜಾರಿ, ಸದಸ್ಯರಾದ ರಾಜೇಶ್ ನಾಯ್ಕ್, ನವೀನ್ ಶೆಟ್ಟಿ, ಸೌಮ್ಯ ಶೆಟ್ಟಿ, ಪ್ರಸಾದ್ ಭಂಡಾರಿ, ಶಿರ್ತಾಡಿ ಗ್ರಾ. ಪಂ. ಅಧ್ಯಕ್ಷೆ ಆಗ್ನೇಸ್ ಡಿಸೋಜ, ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಸಂತೋಷ್, ಪ್ರವೀಣ್ ಕುಮಾರ್ ಜೈನ್, ಸಂತೋಷ್, ತಾಲೂಕು ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ, ಜಿಲ್ಲಾ ಸಹಾಯಕ ಪಶು ಉಪನಿರ್ದೇಶಕ ಡಾ. ಅರುಣ್ ಕುಮಾರ್ ಶೆಟ್ಟಿ, ಹಿರಿಯ ಪಶು ವೈದ್ಯ ಡಾ. ಮಲ್ಲಿಕಾರ್ಜುನ ರಾಯಪ್ಪ ಈಳಿಗೇರ, ಎಂಜಿನಿಯರ್ ದತ್ತಾತ್ರೆಯ ಕುಲಕರ್ಣಿ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ದೊರೆಸ್ವಾಮಿ ಮತ್ತಿತರರು ಈ ಸಂದರ್ಭ ಹಾಜರಿದ್ದರು.