'ಓ.. ಪ್ರೇಮದ ಗಂಗೆಯೇ ಇಳಿದು ಬಾ..' ವರ್ಷದ ಮೊದಲ ಮಳೆಗೆ ನೃತ್ಯ ಮಾಡಿ ಸ್ವಾಗತ ಕೋರಿದ ಬೆಳಗಾವಿ ರೈತ!

By Ravi Janekal  |  First Published May 11, 2024, 8:55 PM IST

ಭೀಕರ ಬರಗಾಲ, ಮಳೆ ಕೊರತೆಯಿಂದ ಸಂಕಷ್ಟಕ್ಕೀಡಾಗಿದ್ದ ರೈತರು. ಇದೀಗ ಬೆಳಗಾವಿಯಲ್ಲಿ ಬಿದ್ದ ಮೊದಲ ಮಳೆಗೆ ಸಂತಸಗೊಂಡಿದ್ದಾರೆ. ವರ್ಷಧಾರೆಗೆ ರೈತಾಪಿ ವರ್ಗ ಫುಲ್ ಖುಷಿಯಾಗಿದ್ದಾರೆ. ವರ್ಷದ ಮೊದಲ ಮಳೆಗೆ ನೃತ್ಯ ಮಾಡಿ ರೈತ ಸ್ವಾಗತ ಕೋರುತ್ತಿರುವ ವಿಡಿಯೋ ವೈರಲ್ ಆಗಿದೆ.


ಬೆಳಗಾವಿ (ಮೇ.11): ಭೀಕರ ಬರಗಾಲ, ಮಳೆ ಕೊರತೆಯಿಂದ ಸಂಕಷ್ಟಕ್ಕೀಡಾಗಿದ್ದ ರೈತರು. ಇದೀಗ ಬೆಳಗಾವಿಯಲ್ಲಿ ಬಿದ್ದ ಮೊದಲ ಮಳೆಗೆ ಸಂತಸಗೊಂಡಿದ್ದಾರೆ. ಬೆಳಗಾವಿ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ವರ್ಷಧಾರೆಗೆ ರೈತಾಪಿ ವರ್ಗ ಫುಲ್ ಖುಷಿಯಾಗಿದ್ದಾರೆ.

ವರ್ಷದ ಮೊದಲ ಮಳೆಗೆ ರೈತನೊಬ್ಬ ಮಳೆಯಲ್ಲೇ ನೃತ್ಯ ಮಾಡಿ ಮಳೆರಾಯನಿಗೆ ಸ್ವಾಗತ ಕೋರುತ್ತಿರುವ ವಿಡಿಯೋ ಗಮನ ಸೆಳೆದಿದ್ದು, ಸೋಷಿಯಲ್ ಮೀಡಿಯಾದಲ್ಲಿ ರೈತನ ನೃತ್ಯ ವೈರಲ್ ಆಗಿದೆ.

Latest Videos

undefined

ಚಿತ್ರದುರ್ಗ: ಮಳೆ ಅವಾಂತರಕ್ಕೆ ತತ್ತರಿಸಿದ ಮಲ್ಲಾಪುರ ಗ್ರಾಮದ ಜನರು!

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೋರಗಲ್ ಗ್ರಾಮದ ರಮೇಶ ಮಗದುಮ್ಮ ಎಂಬ ರೈತನೇ, ಜೋರು ಮಳೆಯಲ್ಲಿ 'ಓ.. ಪ್ರೇಮದ ಗಂಗೆಯೇ ಇಳಿದು ಬಾ.. ಇಳಿದು ಬಾ.. ಎಂಬ ಹಾಡಿಗೆ ಮಾಡುವ ಮೂಲಕ ವರುಣದೇವನಿಗೆ ಸ್ವಾಗತ ಕೋರಿದ್ದಾನೆ. 

ಈ ವರ್ಷದ ಭೀಕರ ಬರಗಾಲಕ್ಕೆ ರೈತರಷ್ಟೇ ಅಲ್ಲ, ಜಲಚರಗಳು ಸಹ ಸಂಕಷ್ಟಕ್ಕೀಡಾದವು. ನದಿಗಳು ಖಾಲಿಯಾಗಿ ಅಸಂಖ್ಯ ಜಲಚರಗಳು ಸಾವನ್ನಪ್ಪಿದವು. ಮೊಸಳೆಗಳು ಆಹಾರ ಹುಡುಕಿ ಜನವಸತಿ ಪ್ರದೇಶ, ರೈತರ ಜಮೀನುಗಳಿಗೆ ನುಗ್ಗಿದವು. ಒಟ್ಟಿನಲ್ಲಿ ಬಿಸಿಲಿನ ಬೇಗೆಗೆ ಕಂಗೆಟ್ಟಿದ್ದ ಬೆಳಗಾವಿ ರೈತರಿಗೆ ಇದೀಗ ವರ್ಷದ ಮೊದಲ ಮಳೆಗೆ ಮಂದಹಾಸ ಮೂಡಿಸಿದೆ.

ತಪ್ಪಿದ ಭಾರೀ ಅನಾಹುತ; ಬಿರುಗಾಳಿ ಸಹಿತ ಭಾರೀ ಮಳೆಗೆ ಬಸ್ ಮೇಲೆ ಕಳಚಿಬಿದ್ದ ಕಟ್ಟಿಗೆಗಳು!

click me!