ಅಮಾಯಕ ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸರು ಉದ್ದೇಶಪೂರ್ವಕವಾಗಿ ಲಾಠಿಚಾರ್ಜ್ ನಡೆಸಿರುವ ಆರೋಪ ಕೇಳಿಬಂದಿರುವ ಹಿನ್ನೆಲೆ ವಿವಿಧ ಹಿಂದೂ ಸಂಘಟನೆಗಳಿಂದ ಮೇ.13 ರಂದು ಬಾಗಲಕೋಟೆಯ ನವನಗರದ ನಗರ ಸಭೆ ಮುಂದೆ ಪ್ರತಿಭಟನ ನಡೆಸಲು ನಿರ್ಧರಿಸಿವೆ.
ಬಾಗಲಕೋಟೆ (ಮೇ.11): ಅಮಾಯಕ ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸರು ಉದ್ದೇಶಪೂರ್ವಕವಾಗಿ ಲಾಠಿಚಾರ್ಜ್ ನಡೆಸಿರುವ ಆರೋಪ ಕೇಳಿಬಂದಿರುವ ಹಿನ್ನೆಲೆ ವಿವಿಧ ಹಿಂದೂ ಸಂಘಟನೆಗಳಿಂದ ಮೇ.13 ರಂದು ಬಾಗಲಕೋಟೆಯ ನವನಗರದ ನಗರ ಸಭೆ ಮುಂದೆ ಪ್ರತಿಭಟನ ನಡೆಸಲು ನಿರ್ಧರಿಸಿವೆ.
ಈ ಬಗ್ಗೆ ಬಾಗಲಕೋಟೆಯಲ್ಲಿ ಇಂದು ಮಾಧ್ಯಮಗೋಷ್ಟಿ ನಡೆಸಿದ ಹಿಂದೂ ಜಾಗರಣಾ ವೇದಿಕೆ ಕ್ಷೇತ್ರಿಯ ಸಂಘಟನಾ ಕಾರ್ಯದರ್ಶಿ ಜಗದೀಶ ಕಾರಂತ, ಹಿಂದೂ ಸಂಘಟನೆ ಕಾರ್ಯಕರ್ತರ ಮೇಲೆ ಪದೇಪದೆ ಪೊಲೀಸರಿಂದ ದೌರ್ಜನ್ಯವಾಗುತ್ತಿದೆ. ಅಮಾಯಕ ಹಿಂದೂ ಕಾರ್ಯಕರ್ತರ ಮೇಲೆ ಉದ್ದೇಶಪೂರ್ವಕವಾಗಿ ನಡೆಸುತ್ತಿರುವ ದೌರ್ಜನ್ಯ ಖಂಡಿಸಿ ಸಾಂಕೇತಿಕ ಪ್ರತಿಭಟನೆ ನಡೆಸುತ್ತೇವೆ. ಪೊಲೀಸರ ದೌರ್ಜನ್ಯ ರಾಜ್ಯಕ್ಕೆ ಗೊತ್ತಾಗಬೇಕು ಹೀಗಾಗಿ ಪ್ರತಿಭಟನೆಗೆ ಮುಂದಾಗಿದ್ದೇವೆ ಎಂದರು.
undefined
ಹಿಂದೂ ಸಂಘಟನೆ ಕಾರ್ಯಕರ್ತರ ಪ್ರತಿಭಟನೆ: ಕಲ್ಲು ತೂರಾಟ, ಪೊಲೀಸರಿಂದ ಲಾಠಿ ಚಾರ್ಜ್
ಅಮಾಯಕರನ್ನು ರಕ್ಷಿಸಬೇಕಾದ ಪೊಲೀಸರೇ ದೌರ್ಜನ್ಯ ನಡೆಸುತ್ತಿರುವುದು ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ. ಪೊಲೀಸರ ಲಾಠಿ, ಬೂಟು ಎಲ್ಲ ದೌರ್ಜನ್ಯಕ್ಕೆ ನಾವು ಹಿಂಜರಿಯುವುದಿಲ್ಲ. ಹಿಂದೂ ಸಮಾಜ ಎಂದರೆ ಬೇಲಿ ಇಲ್ಲದ ಹೊಲ ಅಲ್ಲ, ಇದನ್ನ ಹಿಂದೂ ವಿರೋಧಿಗಳಿಗೆ ತೋರಿಸಿಕೊಡಬೇಕಿದೆ. ನಾವು ಈಗಾಗಲೇ ಸಾಕಷ್ಟು ಬೆಲೆ ತೆತ್ತಿದ್ದೇವೆ, ತೆತ್ತುತ್ತೇವೆ. ಹಿಂದೂಗಳ ಸುರಕ್ಷತೆಯ ಆಂದೋಲನದಲ್ಲಿ ಯಾವುದೇ ಸ್ವಾರ್ಥ ಹಾಗೂ ರಾಜಕೀಯ ಇಲ್ಲ. ಮೊನ್ನೆಯ ನಡೆದ ಘಟನೆ ಅವಲೋಕನ ಮಾಡಿದಾಗ ಹಿಂದೂಗಳ ಹೋರಾಟವನ್ನ ಹತ್ತಿಕ್ಕುವ ಸರ್ಕಾರದ ಷಡ್ಯಂತ್ರ ಇದೆ ಎಂಬ ಅನುಮಾನವಿದೆ. ಪ್ರೇಮ ವಿವಾಹ ಮಾಡಿಕೊಂಡು ಬಂದ ದಂಪತಿಗಳನ್ನ ಮಧ್ಯಾಹ್ನ 2 ಗಂಟೆಯಿಂದ 7 ಗಂಟೆವರೆಗೆ ಕಾಯಿಸಿದ್ದಾರೆ ಎಂದು ಪೊಲೀಸರ ನಡೆ ವಿರುದ್ದ ಹರಿಹಾಯ್ದರು.
ಹಿಂದೂ ಸಮಾಜ ಖಾಕಿಗೆ ಯಾವತ್ತೂ ಗೌರವ ನೀಡ್ತದೆ. ನಾವು ಭಾರತದ ಸಂವಿಧಾನ ಗೌರವಿಸುವುದನ್ನ ನಮ್ಮ ದೌರ್ಬಲ್ಯ ಅಂತ ಅಂದುಕೊಳ್ಳಬಾರದು. ಎಂಜಿಜಿ(ಮತಾಂಧ ಮುಸಲ್ಮಾನರ ಗೂಂಡಾ ಗ್ಯಾಂಗ್) ಆ ಗ್ಯಾಂಗ್‌ನ್ನ ಪೊಲೀಸರು ಪ್ರೋತ್ಸಾಹಿಸಿ ಸೇಡಿನ ಕ್ರಮಕ್ಕೆ ಮುಂದಾದರೆ, ಉಗ್ರ ಹೋರಾಟ ನಡೆಸಬೇಕಾಗುತ್ತದೆ. ಈಗ ಕಾಲ ಬದಲಾಗಿದೆ ಎಂದು ಎಚ್ಚರಿಸಿದರು.
ಸಿಪಿಐ ರಾಮಪ್ಪ ಬಿರಾದಾರ, ಪಿಎಸ್‌ಐ ಯಮನಪ್ಪ ಮಾಂಗ್ ಅವರು ಯಾರದೋ ಕೈಗೊಂಬೆಯಾಗಿದ್ದಾರೆ. ಯಾರದೋ ತೀಟೆ,ತೆವಲು ತೀರಿಸಲು ಹಿಂದೂ ಕಾರ್ಯಕರ್ತರ ಮೇಲೆ ದೌರ್ಜನ್ಯ ಎಸಗಿದರೆ ಸಹಿಸುವ ಕಾಲ ಇದಲ್ಲ, ಈಗ ಕಾಲ ಬದಲಾಗಿದೆ. ಹತ್ತು ಕಡೆ ಸಾರ್ವಜನಿಕ ಭಾಷಣ ಮಾಡಿ ನಿಮ್ಮನ್ನ ನಿಂದಿಸುವ ಸ್ಪರ್ಧೆ ಕೂಡ ನಾವು ಮಾಡಬಹುದು. ಮೊದಲು ಆ ಅಧಿಕಾರಿಗಳು ಧಿಮಾಕನ್ನ ನಿಲ್ಲಿಸಬೇಕು. ಅಕ್ರಮವಾಗಿ ನಡೆದುಕೊಂಡಿರುವ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು. ಅಮಾಯಕ ಹಿಂದೂ ಯುವಕರ ಮೇಲೆ ಅಮಾನವೀಯ ದೌರ್ಜನ್ಯ ನಡೆಸಿದ ಪೊಲೀಸರ ವಿರುದ್ಧ ರಾಜ್ಯಪಾಲರು ಕಠಿಣ ಕಾನೂನು ಕ್ರಮಕ್ಕೆ ಜರುಗಿಸಬೇಕು ಎಂದು ಆಗ್ರಹಿಸಿದರು.
ದೇಶದಲ್ಲಿ ಹಿಂದೂ ಸಂಖ್ಯೆ ಕುಸಿತ, ಮುಸ್ಲಿಮರ ಜನಸಂಖ್ಯೆಯಲ್ಲಿ ಏರಿಕೆ, ವರದಿ ಬಹಿರಂಗ!
ಹಿಂದೂ ಸುರಕ್ಷಾ ಆಂದೋಲನ ನಿಲ್ಲುವುದಿಲ್ಲ. ಇದಕ್ಕೆ ಸಂಬಂಧಿಸಿದಂತೆ ಹೋರಾಟ ಆರಂಭಿಸುತ್ತೇವೆ. ಒಂದು ವೇಳೆ ಪೊಲೀಸರು ಸೇಡಿನ ಕ್ರಮಕ್ಕೆ ಮುಂದಾದರೆ ನಮ್ಮ ಹೋರಾಟವೂ ತೀವ್ರವಾಗುತ್ತೆಕ. ಪೊಲೀಸರೇ ಸೇಡಿನ ಕ್ರಮದಿಂದ ಹಿಂದೆ ಸರಿಯಿರಿ. ಮುಂದೆ ಆಗಬಹುದಾದ ಎಲ್ಲಾ ಅನಾಹುತಗಳಿಗೆ ಪೊಲೀಸ್ ವರಿಷ್ಠಾಧಿಕಾರಿ ಹೊಣೆಯಾಗುತ್ತಾರೆ ಕೆಂದು ಜಗದೀಶ ಕಾರಂತ ಎಚ್ಚರಿಕೆ ನೀಡಿದರು.