ಪಾಕಿಸ್ತಾನಕ್ಕೆ ಹರಿಯುವ ಸಿಂಧೂ ನದಿ ನೀರು ನಿಲ್ಲಿಸಲು ಮೋದಿಗೆ ಸಾಧ್ಯವಿಲ್ಲ; ರಹೀಂ ಖಾನ್

Published : Apr 28, 2025, 05:13 PM ISTUpdated : Apr 28, 2025, 05:26 PM IST
ಪಾಕಿಸ್ತಾನಕ್ಕೆ ಹರಿಯುವ ಸಿಂಧೂ ನದಿ ನೀರು ನಿಲ್ಲಿಸಲು ಮೋದಿಗೆ ಸಾಧ್ಯವಿಲ್ಲ; ರಹೀಂ ಖಾನ್

ಸಾರಾಂಶ

ಸಿಂಧೂ ನದಿ ನೀರು ಪಾಕಿಸ್ತಾನಕ್ಕೆ ಹರಿಯುವುದನ್ನು ತಡೆಯಲು ೨೦ ವರ್ಷ ಬೇಕಾಗುತ್ತದೆ ಎಂದು ಸಚಿವ ರಹೀಂ ಖಾನ್ ಹೇಳಿದ್ದಾರೆ. ಪಹಲ್ಗಾಮ್ ದಾಳಿಯನ್ನು ಖಂಡಿಸಿ, ಕಠಿಣ ಕ್ರಮಕ್ಕೆ ಆಗ್ರಹಿಸಿದರು. ವಕ್ಫ್ ಮಸೂದೆಯಲ್ಲಿನ ಬದಲಾವಣೆಗಳನ್ನು ಟೀಕಿಸಿ, ವಾಪಸ್ ಪಡೆಯಲು ಒತ್ತಾಯಿಸಿದರು.

ಬೀದರ್ (ಏ.28): ನೈಸರ್ಗಿಕವಾಗಿ ಸಿಂಧೂ ನದಿಯ ನೀರು ಪಾಕಿಸ್ತಾನಕ್ಕೆ ಹರಿದು ಹೋಗುತ್ತಿದೆ. ಹಿಗಾಗಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದ ಸಿಂಧೂ ನದಿ ನೀರು ಪಾಕಿಸ್ತಾನಕ್ಕೆ ಹರಿದು ಹೋಗುವುದನ್ನು ನಿಲ್ಲಿಸೋಕೆ ಆಗುವುದಿಲ್ಲ ಎಂದು ಸಚಿವ ರಹೀಂ ಖಾನ್ ಹೇಳಿದ್ದಾರೆ.

ಬೀದರ್‌ನಲ್ಲಿ ಮಾಧ್ಯಮಗಳೊಂದಿಗೆ ಕಾಶ್ಮೀರದ ಪಹಲ್ಗಾಮ್‌ನಲ್ಲಿ ಹಿಂದೂಗಳ ಮೇಲೆ ದಾಳಿ ವಿಚಾರದ ಬಗ್ಗೆ ಸೋಮವಾರ ಮಾತನಾಡಿದ ಅವರು, ಪಾಕಿಸ್ತಾನದ ಪರ ಬ್ಯಾಟ್ ಬಿಸುವಂತೆ ಮಾತನಾಡಿದ್ದಾರೆ. ಸಿಂಧೂ ನದಿಯ ನೀರು ಪಾಕಿಸ್ತಾನಕ್ಕೆ ಹರಿಯುವುದನ್ನು ಬಂದ್ ಮಾಡಲು ಮೋದಿಗೆ ಬರಲ್ಲ. ಸಿಂಧೂ ನದಿ ನೀರು ಬಂದ್ ಮಾಡಬೇಕು ಎಂದರೆ 20 ವರ್ಷ ಬೇಕು. ವಾಟರ್ ಹಿಸಾಬ್ ಮಾಡಬೇಕು ಎದರೆ ಅದಕ್ಕೆ ಬೇಕಾದ ಡ್ಯಾಂ ಮತ್ತು ಕೆನಾಲ್‌ಗಳನ್ನು ನಿರ್ಮಾಣ ಮಾಡಬೇಕು. ನಾವು ಯಾವುದು ಕೆಲಸ ಮಾಡೋದಕ್ಕೆ ಸಾಧ್ಯವಾಗುತ್ತದೆಯೋ ಅದನ್ನಷ್ಟೇ ಮೋದಿ ಹೇಳಬೇಕು ಎಂದರು.

ಪಹಲ್ಗಾಮ್ ದಾಳಿ ಮಾಡಿದವರ ಮೇಲೆ ಅತಿ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಜೀವನದಲ್ಲಿ ಮತ್ತೆ ಉಗ್ರರು ಈ ರೀತಿ ದಾಳಿ ಮಾಡಬಾರದು. ಮುಸ್ಲಿಂ ಬಾಂಧವರು ನಿಮ್ಮ ಜೊತೆ ಇದ್ದೇವೆ. ಪ್ರವಾಸಿಕ್ಕೆ ಹೋದವರ ಮೇಲೆ ದಾಳಿ ಮಾಡಿದ್ದಾರೆ. ಪಾಪ ಅವರಿಗೆ ಏನು ಗೊತ್ತಿರಲಿಲ್ಲ. ಜೊತೆಗೆ ಕಾಶ್ಮೀರ ಜನರಿಗೆ ಉಗ್ರರು ತೊಂದರೆ ಮಾಡಿದ್ದಾರೆ. ಟೆರೆರಿಸ್ಟ್ ಎಂದರೆ ಅವರು ಟೆರೆರಿಸ್ಟ್ ಅಷ್ಟೇ. ನಮ್ಮ ಮತ್ತು ಹಿಂದೂಗಳನ್ನು ಬೇರೆ ಪಡಿಸಿಲು ಧರ್ಮ ಕೇಳಿ ಗುಂಡಿನ ದಾಳಿ ಮಾಡಿದ್ದಾರೆ. ಕೇಂದ್ರ ಸರ್ಕಾರ ಕೂಡಾ ಕಮ್ಯುನಿಟಿ ಇಬ್ಬಾಗ ಮಾಡ್ತಾ ಇದ್ದಾರೆ ಎಂದು ಆರೋಪಿಸಿದರು.

ಇದನ್ನೂ ಓದಿ: ಕಾಶ್ಮೀರ ಉಗ್ರರ ಗುಂಡೇಟಿಗೆ ಹುತಾತ್ಮರಾದ ಕನ್ನಡಿಗರ ಮಕ್ಕಳಿಗೆ ಉಚಿತ ಶಿಕ್ಷಣ, 10 ಲಕ್ಷ ರೂ. ನೆರವು; ತೇಜಸ್ವಿ ಸೂರ್ಯ!

ಕೇಂದ್ರ ಸರ್ಕಾರ ವಕ್ಫ್‌ ಬಿಲ್ ಜಾರಿ ವಿಚಾರದ ಬಗ್ಗೆ ಮಾತನಾಡಿ, ವಕ್ಫ್ ಬಿಲ್‌ನಲ್ಲಿ ಏನೋನೋ ಬದಲಾವಣೆ ಮಾಡಿದ್ದಾರೆ. ವಕ್ಫನಲ್ಲಿ ಎಲ್ಲಾ ಧರ್ಮದವರನ್ನು ಕಮಿಟಿಯಲ್ಲಿ ಹಾಕಿದ್ದಾರೆ. ಹೀಗಾಗಿ ಈ ವಕ್ಫ ಕಾನೂನು ಬಿಲ್ ವಾಪಸ್ ಪಡೆಯಬೇಕು ಎಂದು ಬೀದರ್‌ನಲ್ಲಿ ಪೌರಾಡಳಿತ ಸಚಿವ ರಹೀಂಖಾನ್ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್