ಎಸ್ಸೆಸ್ಸೆಲ್ಸಿ-ಪಿಯು ಪಾಸ್‌ ಅಂಕ ಇಳಿಕೆ ಹಿಂಪಡೆದರೆ ಆಂದೋಲನ: ಎಂಎಲ್‌ಸಿ ಪುಟ್ಟಣ್ಣ

Published : Nov 01, 2025, 07:18 AM IST
mlc puttanna

ಸಾರಾಂಶ

ಪರೀಕ್ಷೆ ಉತ್ತೀರ್ಣಕ್ಕೆ ಪಡೆಯಬೇಕಾದ ಕನಿಷ್ಠ ಅಂಕ ಪ್ರಮಾಣ ಶೇ.33ಕ್ಕೆ ಇಳಿಸಿರುವ ಕ್ರಮ ವಿದ್ಯಾರ್ಥಿ ಸ್ನೇಹಿ ಹಾಗೂ ನ್ಯಾಯಸಮ್ಮತವಾಗಿದೆ. ಹಾಗಾಗಿ ಇದನ್ನು ಯಾವುದೇ ಕಾರಣಕ್ಕೆ ಹಿಂಪಡೆಯಬಾರದು’ ಎಂದು ಎಂಎಲ್‌ಸಿ ಪುಟ್ಟಣ್ಣ ಆಗ್ರಹಿಸಿದ್ದಾರೆ.

ಬೆಂಗಳೂರು (ನ.01): ‘ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ ಉತ್ತೀರ್ಣಕ್ಕೆ ಪಡೆಯಬೇಕಾದ ಕನಿಷ್ಠ ಅಂಕ ಪ್ರಮಾಣ ಶೇ.33ಕ್ಕೆ ಇಳಿಸಿರುವ ಕ್ರಮ ವಿದ್ಯಾರ್ಥಿ ಸ್ನೇಹಿ ಹಾಗೂ ನ್ಯಾಯಸಮ್ಮತವಾಗಿದೆ. ಹಾಗಾಗಿ ಇದನ್ನು ಯಾವುದೇ ಕಾರಣಕ್ಕೆ ಹಿಂಪಡೆಯಬಾರದು’ ಎಂದು ವಿಧಾನ ಪರಿಷತ್‌ನ ಸದಸ್ಯ ಪುಟ್ಟಣ್ಣ ಆಗ್ರಹಿಸಿದ್ದಾರೆ. ನಗರದಲ್ಲಿ ಕ್ಯಾಮ್ಸ್‌, ಕುಸ್ಮಾ ಸೇರಿ ವಿವಿಧ ಖಾಸಗಿ ಶಾಲಾ ಸಂಘಟನೆಗಳು ಮತ್ತು ಸರ್ಕಾರಿ ಪ್ರಾಥಮಿಕ ಶಾಲಾ ಸಂಘದ ಪ್ರತಿನಿಧಿಗಳೊಂದಿಗೆ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು.

ಕೇಂದ್ರೀಯ ಪಠ್ಯಕ್ರಮದ (ಸಿಬಿಎಸ್‌ಇ, ಐಸಿಎಸ್‌ಇ) ಶಾಲೆಗಳಲ್ಲಿರುವಂತೆ ರಾಜ್ಯದಲ್ಲೂ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ ಪಾಸ್ ಅಂಕವನ್ನು ಕನಿಷ್ಠ ಶೇ.33ಕ್ಕೆ ಇಳಿಸಿರುವುದರಿಂದ ರಾಜ್ಯ ಪಠ್ಯಕ್ರಮದ ವಿದ್ಯಾರ್ಥಿಗಳಿಗೆ ಈವರೆಗೆ ಆಗುತ್ತಿದ್ದ ಅನ್ಯಾಯ, ತಾರತಮ್ಯ ದೂರವಾಗಲಿದೆ. ಸಂವಹನ ದೃಷ್ಟಿಯಿಂದ ಸಭಾಪತಿ ಬಸವರಾಜ ಹೊರಟ್ಟಿ ಅವರು ಈ ನಿರ್ಧಾರ ಕೈಬಿಡಲು ಶಿಕ್ಷಣ ಸಚಿವರಿಗೆ ಪತ್ರ ಬರೆದಿರಬಹುದು. ಆದರೆ, ಅವರನ್ನು ಭೇಟಿ ಮಾಡಿ ಮನವರಿಕೆ ಮಾಡಿಕೊಡಲಾಗುವುದು ಎಂದರು.

ರಾಜ್ಯದಲ್ಲಿ ಪ್ರತೀ ವರ್ಷ ಎಸ್ಸೆಸ್ಸೆಲ್ಸಿ ಫೇಲಾಗುತ್ತಿರುವವರ ಪ್ರಮಾಣ ಶೇ.22ರಷ್ಟಿದೆ. ಫೇಲಾಗಿ ಶಿಕ್ಷಣದಿಂದ ದೂರ ಉಳಿಯುವ, ಅಡ್ಡದಾರಿ ಹಿಡಿಯುತ್ತಿರುವ ಅನೇಕ ಮಕ್ಕಳು ಪಾಸಾಗಿ ಮುಂದೆ ಯಾವುದಾದರೊಂದು ಉದ್ಯೋಗಾಧಾರಿತ ಶಿಕ್ಷಣಕ್ಕೆ ಸೇರಿ ಭವಿಷ್ಯ ರೂಪಿಸಿಕೊಳ್ಳಲು ಸರ್ಕಾರದ ನಿರ್ಧಾರ ಸಹಕಾರಿ. ಜವಾಬ್ದಾರಿ ಹೆಚ್ಚಾಗಿ ಒಂದಷ್ಟು ಮಕ್ಕಳು ಉನ್ನತ ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡಲೂಬಹುದು. ಇದನ್ನು ತಪ್ಪಿಸಲು ಕೆಲವರು ಶಿಕ್ಷಣದ ಗುಣಮಟ್ಟದ ಹೆಸರಲ್ಲಿ ತಪ್ಪು ಮಾಹಿತಿ ನೀಡಿ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಇದಕ್ಕೆ ಮಣಿಯಬಾರದು. ಹಿಂಪಡೆಯಲು ಮಂದಾದರೆ ಆಂದೋಲನ ರೂಪಿಸಲಾಗುವುದು ಎಂದರು.

ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್‌ ಮತ್ತು ಕುಸ್ಮಾ ಅಧ್ಯಕ್ಷ ಸತ್ಯಮೂರ್ತಿ ಅವರು ಮಾತನಾಡಿ, ಬೇರೆ ರಾಜ್ಯಗಳಲ್ಲಿ ಎಸ್ಸೆಸ್ಸೆಲ್ಸಿ ಬಳಿಕ ಶಿಕ್ಷಣದಿಂದ ದೂರು ಉಳಿಯುವವರ ಪ್ರಮಾಣ ಶೇ.7ರಿಂದ 8 ಇದ್ದರೆ, ನಮ್ಮ ರಾಜ್ಯದಲ್ಲಿ ಶೇ.22ರಷ್ಟಿದೆ. ಪರೀಕ್ಷಾ ವ್ಯವಸ್ಥೆ ಸುಧಾರಣೆ ಆಗದಿರುವುದೇ ಇದಕ್ಕೆ ಕಾರಣ. ಪಾಸ್‌ ಅಂಕ 33ಕ್ಕೆ ಇಳಿಸಿರುವುದರಿಂದ ನಮ್ಮ ಮಕ್ಕಳಿಗೆ ಆಗುತ್ತಿದ್ದ ಅನ್ಯಾಯ ತಪ್ಪಲಿದೆ. ಕನಿಷ್ಠ ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆಯೂ ಇಲ್ಲದೆ ಸಾಕಷ್ಟು ಉದ್ಯೋಗಗಳು ಅನ್ಯ ರಾಜ್ಯದವರ ಪಾಲಾಗುತ್ತಿವೆ. ಇದನ್ನು ತಪ್ಪಿಸಲು ಸರ್ಕಾರ ಕೈಗೊಂಡಿರುವ ನಿಧಾರ ಉತ್ತಮವಾದದ್ದು.

ತಪ್ಪು ಮಾಹಿತಿ ನೀಡುವ ಕೆಲಸ

ಸರ್ಕಾರ ಎಲ್ಲ ಭಾಗೀದಾರರ ಅಭಿಪ್ರಾಯ ಪಡೆದೇ ನಿಯಮಾವಳಿ ಬದಲಾವಣೆ ಮಾಡಿದೆ. ಆದರೆ, ಶಿಕ್ಷಣ ತಜ್ಞರೆಂದು ಹೇಳಿಕೊಳ್ಳುವ ಕೆಲವರು ದಾರಿತಪ್ಪಿಸುವ, ತಪ್ಪು ಮಾಹಿತಿ ನೀಡುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಸರ್ಕಾರ ಮನ್ನಣೆ ನೀಡಬಾರದು ಎಂದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಕರ ನುಗ್ಗಲಿ, ಪಾಸ್‌ ಅಂಕ ಇಳಿಕೆಯಿಂದ ಗುಣಮಟ್ಟ ಕುಸಿತವಾಗುವುದಿಲ್ಲ. ಗುಣಮಟ್ಟ ಹೆಚ್ಚಿಸಲು ಸರ್ಕಾರಿ ಶಾಲೆಗಳಲ್ಲಿ ಕನಿಷ್ಠ ವಿಷಯಕ್ಕೊಬ್ಬ ಶಿಕ್ಷಕರಲ್ಲದಿದ್ದರೂ ತರಗತಿಗೊಬ್ಬ ಶಿಕ್ಷಕರನ್ನಾದರೂ ನೇಮಕ ಮಾಡಬೇಕು ಎಂದು ಮನವಿ ಮಾಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Justice for Bongo: ಮಗು ಹುಟ್ಟಿದ್ದಕ್ಕೆ ಸಾಕಿ ಸಲುಹಿದ ಶ್ವಾನ ಕೊಂದ್ರಾ ಪಾಪಿಗಳು? ಸಿಲಿಕಾನ್ ಸಿಟಿಯಲ್ಲಿ 'ಬೋಂಗೋ' ಸಾವಿನ ರೋಚಕ ಕಹಾನಿ!
ಸಿಎಂ ಸಿದ್ದರಾಮಯ್ಯನವರೇ ಮತಿಗೇಡಿಗಳಾಗಿ, ಆದ್ರೆ ಅಧಿಕಾರಕ್ಕಾಗಿ ಲಜ್ಜೆಗೇಡಿಗಳಾಗಬೇಡಿ-ಆರ್. ಅಶೋಕ್ ಟೀಕೆ