ನಮ್ಮ ಕುಟುಂಬದ ವಿರುದ್ಧ ರಾಜಕೀಯ ಷಡ್ಯಂತ್ರ ನಡೆದಿದೆ. ಇದಕ್ಕೆ ಕಾಲವೇ ಉತ್ತರಿಸಲಿದೆ. ಏನೇ ಷಡ್ಯಂತ್ರ ಮಾಡಿದ್ರೂ ನಾಡಿನ ಅಧಿದೇವತೆ ನಮ್ಮ ರಕ್ಷಣೆಗೆ ಇದ್ದಾಳೆ ಎಂದು ಎಂಎಲ್‌ಸಿ ಸೂರಜ್ ರೇವಣ್ಣ ತಿಳಿಸಿದರು.
ಮೈಸೂರು (ಜು.26): ನಮ್ಮ ಕುಟುಂಬದ ವಿರುದ್ಧ ರಾಜಕೀಯ ಷಡ್ಯಂತ್ರ ನಡೆದಿದೆ. ಇದಕ್ಕೆ ಕಾಲವೇ ಉತ್ತರಿಸಲಿದೆ ಎಂದು ಎಂಎಲ್‌ಸಿ ಸೂರಜ್ ರೇವಣ್ಣ ತಿಳಿಸಿದರು.
ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಜೈಲುವಾಸ ಅನುಭವಿಸಿ ಬಿಡುಗಡೆ ಬಳಿಕ ಇಂದು ಮೊದಲ ಬಾರಿಗೆ ಮೈಸೂರಿನ ಚಾಮುಂಡಿ ದರ್ಶನ ಪಡೆದರು. ಆಷಾಢ ಮಾಸದ ಮೂರನೇ ಶುಕ್ರವಾರ ಹಿನ್ನೆಲೆ ಶ್ರೀಚಾಮುಂಡೇಶ್ವರಿ ದರ್ಶನ ಪಡೆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಷಡ್ಯಂತ್ರ ಮಾಡಿ ನಮ್ಮನ್ನ ಪ್ರಕರಣದಲ್ಲಿ ಸಿಲುಕಿಸಿದ್ರು. ಸತ್ಯವನ್ನು ತುಂಬಾ ದಿನ ಮುಚ್ಚಿಡಲು ಸಾದ್ಯವಿಲ್ಲ. ಇನ್ನು 15 ದಿನ ಕಾದು ನೋಡಿ ಎಲ್ಲದಕ್ಕೂ ಉತ್ತರ ಸಿಗಲಿದೆ ಎಂದರು.
undefined
ಅಸಹಜ ಲೈಂಗಿಕ ದೌರ್ಜನ್ಯ ಕೇಸ್: ಜಾಮೀನು ಪಡೆದು ಜೈಲಿನಿಂದ ಹೊರಬಂದ ಸೂರಜ್ ರೇವಣ್ಣ
ಇಂದು ನಾಡ ದೇವತೆ ಶ್ರೀ ಚಾಮುಂಡಿ ದರ್ಶನ ಪಡೆದಿದ್ದೇನೆ. ಪ್ರತಿವರ್ಷ ತಂದೆಯವರ ಜೊತೆ ಚಾಮುಂಡಿ ಬೆಟ್ಟಕ್ಕೆ ಬಂದು ಚಾಮುಂಡೇಶ್ವರಿ ದೇವಿಯ ದರ್ಶನ ಪಡೆಯುತ್ತಿದ್ದೆ. ಆದರೆ ಈ ಬಾರಿ ಬರಲು ತಡವಾಯಿತು. ನಾಡಿನ ಅಧಿದೇವತೆ ನಮ್ಮ ರಕ್ಷಣೆಗೆ ಇದ್ದಾಳೆ ಎಂದರು.
ಜೆಡಿಎಎಸ್ ಬೆಂಬಲಿಗರು ಸಾಥ್:
ತಿಂಗಳ ಕಾಲ ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಯಾದ ಬಳಿಕ ಮೊದಲ ಬಾರಿಗೆ ಚಾಮುಂಡೇಶ್ವರಿ ತಾಯಿ ಸನ್ನಿಧಿಗೆ ಬೆಂಬಲಿಗರೊಂದಿಗೆ ಬಂದಿದ್ದ ಸೂರಜ್ ರೇವಣ್ಣ. ಈ ವೇಳೆ ಸೂರಜ್ ರೇವಣ್ಣ ಜತೆ ಬೆಂಬಲಿಗರು ಕಾರ್ಯಕರ್ತರು ಫೋಟೋ ಕ್ಲಿಕ್ಕಿಸಿಕೊಂಡರು.