ಹತ್ತನೇ ದಿನದ ಕಾರ್ಯಾಚರಣೆಯಲ್ಲಿ ನೌಕಾದಳ, ಭೂಸೇನೆ, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಜತೆಗೆ ನಿವೃತ್ತ ಮೇಜರ್ ಜನರಲ್ ಇಂದ್ರಬಾಲನ್ ಅವರ ನೇತೃತ್ವದಲ್ಲಿ ಎಐ(ಆರ್ಟಿಫಿ ಷಿಯಲ್ ಇಂಟೆಲಿಜೆನ್ಸ್) ತಂತ್ರಜ್ಞಾನ ಹೊಂದಿರುವ ಮೂಲಕ ನದಿಯ ಆಳದಲ್ಲಿ ನಾಪತ್ತೆಯಾಗಿದೆ ಎನ್ನಲಾದ ಕೇರಳದ ಲಾರಿಯ ಇರುವಿಕೆಯನ್ನು ಪತ್ತೆಹಚ್ಚಲಾಗಿದೆ.
ಕಾರವಾರ (ಜು.26): ಶಿರೂರು ಗುಡ್ಡ ಕುಸಿತ ದುರಂತದಲ್ಲಿ ನಾಪತ್ತೆಯಾದವರ ಶೋಧ ಕಾರ್ಯಾಚರಣೆ ಇದೀಗ ನಿರ್ಣಾಯಕ ಘಟ್ಟಕ್ಕೆ ಬಂದು ತಲುಪಿದೆ. ಗುರುವಾರ ಹತ್ತನೇ ದಿನದ ಕಾರ್ಯಾಚರಣೆಯಲ್ಲಿ ನೌಕಾದಳ, ಭೂಸೇನೆ, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಜತೆಗೆ ನಿವೃತ್ತ ಮೇಜರ್ ಜನರಲ್ ಇಂದ್ರಬಾಲನ್ ಅವರ ನೇತೃತ್ವದಲ್ಲಿ ಎಐ(ಆರ್ಟಿಫಿ ಷಿಯಲ್ ಇಂಟೆಲಿಜೆನ್ಸ್) ತಂತ್ರಜ್ಞಾನ ಹೊಂದಿರುವ ಮೂಲಕ ನದಿಯ ಆಳದಲ್ಲಿ ನಾಪತ್ತೆಯಾಗಿದೆ ಎನ್ನಲಾದ ಕೇರಳದ ಲಾರಿಯ ಇರುವಿಕೆಯನ್ನು ಪತ್ತೆಹಚ್ಚಲಾಗಿದೆ.
ಇಂಟೆಲಿಜೆಂಟ್ ಅಂಡರ್‌ಗ್ಸ್‌ಂಡ್ ಬರೀಡ್ ಆಪ್ಟೆಕ್ಟ್ ಡಿಟೆಕ್ಷನ್ ಸಿಸ್ಟಮ್ ಒಳಗೊಂಡಿರುವ ಈ ವಿಶೇಷ ಡೋನ್ ನದಿ ಮೇಲೆ ಹಾಗೂ ಭೂಮಿ ಮೇಲೆ ಹಾರಾಟ ನಡೆಸಿ ಶೋಧ ಕಾರ್ಯ ಕೈಗೊಂಡಿದೆ. ಕೇರಳ ಮೂಲದ ಅರ್ಜುನ್ ಅವರಿದ್ದ ಬೆಂಜ್ ಲಾರಿ ಹಾಗೂ ನಾಪತ್ತೆಯಾಗಿದ್ದಾರೆನ್ನಲಾದ ಉಳಿದವರ ಮೃತದೇಹಗಳ ಹುಡುಕಾಟಕ್ಕೆ ಈ ತಂತ್ರಜ್ಞಾನ ಬಳಕೆ ಮಾಡಲಾಗಿದೆ. ನೌಕಾನೆಲೆಯ ಹೆಲಿಕಾಪ್ಟರ್ ಮೂಲಕವೂ ಪತ್ತೆ ಕಾರ್ಯಾಚರಣೆ ನಡೆಸಲಾಗಿದೆ.
undefined
ನೌಕಾಸೇನೆಯ ಸೋನಾರ್‌ಸಿಗ್ನಲ್ ಮೂಲಕ ಅವಶೇಷಗಳಿರಬಹುದಾದ ಸ್ಥಳ ಗುರುತು ಮಾಡಿದ್ದು, ಮೃತದೇಹ, ಲಾರಿ ಕುರುಹುವಿಗಾಗಿ ಹೆಲಿಕಾಪ್ಟರ್‌ಮೂಲಕ ಪ್ರಯತ್ನ ನಡೆಸಲಾಗಿದೆ. ನೌಕಾಸೇನೆಯ ಮುಳುಗು ತಜ್ಞರೂ ಕಾರ್ಯಾಚರಣೆ ನಡೆಸಿದರೂ ಯಾವುದೇ ಪ್ರಯೋಜನ ಆಗಲಿಲ್ಲ. ಬೃಹತ್ ಬೂಮ್ ಪೋನ್ ಎಕ್‌ಸೈವೇಟ ಹಾಗೂ ರೇಡಾರ್ ಸಿಗ್ನಲ್ ಹರಿಸುವ ಡೋನ್ ಮೂಲಕ ಕಾರ್ಯಾಚರಣೆ ನಡೆಸಲಾಗಿದೆ. ನದಿಯಲ್ಲಿ ಲಾರಿ ಇರುವುದು ಖಚಿತವಾಗಿದೆ.
ಶಿರೂರು ಗುಡ್ಡ ಕುಸಿತ ದುರಂತ: ಗಂಗಾವಳಿ ನದಿಯಲ್ಲಿ ಲಾರಿ ಇರುವುದು ಖಚಿತ
ಅರ್ಧ ದೇಹದ ಶವ ತ.ನಾಡು ಚಾಲಕ ಸರವಣನ್‌ದು: ಗೋಕರ್ಣ ಕಡಲ ಸಮೀಪ ಇತ್ತೀಚೆಗೆ ದೊರೆತಿದ್ದ ಸೊಂಟದ ಕೆಳಭಾಗ ಮಾತ್ರವಿದ್ದ ಮೃತದೇಹ ತಮಿಳುನಾಡು ಮೂಲದ ಟ್ಯಾಂಕರ್ ಚಾಲಕ ಸರವಣನ್ ಅವರದ್ದು ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ. ಗುಡ್ಡಕುಸಿತದ ವೇಳೆ ಸಮುದ್ರಕ್ಕೆಸೆಯಲ್ಪಟ್ಟಿದ್ದ ಟ್ಯಾಂಕರ್‌ನಲ್ಲಿದ್ದ ಚಾಲಕನ ಮೃತದೇಹ ಅಂದೇ ಸಮುದ್ರದಲ್ಲಿ ಪತ್ತೆಯಾಗಿತ್ತು. ಆದರೆ ಮತ್ತೊಬ್ಬ ಚಾಲಕ ಸರವಣನ್ ಮೃತದೇಹ ಪತ್ತೆಯಾಗಿರಲಿಲ್ಲ. ಆದರೆ ಘಟನೆ ನಡೆದ ಒಂದೆರಡು ದಿನಗಳ ಸೊಂಟದ ಕೆಳಭಾಗ ಇರುವ ಬಳಿಕ ಸಮುದ್ರದಲ್ಲಿ ಮೃತದೇಹವೊಂದು ಪತ್ತೆಯಾಗಿತ್ತು. ಶವವನ್ನು ಡಿಎನ್‌ಎ ಪರೀಕ್ಷೆಗೊಳಪಡಿಸಿದಾಗ ಅದು ಅವರದ್ದೇ ಎಂದು ದೃಢಪಟ್ಟಿದೆ.