ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರುವುದು ಕಾಲ ನಿರ್ಣಯಿಸಲಿದೆ, ಗ್ಯಾರಂಟಿ ಯೋಜನೆ ಹಾಡಿ ಹೊಗಳಿದ ಶಾಸಕ ಶಿವರಾಮ್ ಹೆಬ್ಬಾರ್ 

By Ravi JanekalFirst Published Mar 11, 2024, 10:43 PM IST
Highlights

ರಾಜ್ಯಸಭಾ ಚುನಾವಣೆಯ ಮತದಾನಕ್ಕೆ ಗೈರು ಆಗಿರುವ ಕುರಿತು ಸಮರ್ಪಕ ಉತ್ತರ ನೀಡಿದ್ದೇನೆ. ಅನರ್ಹ ಮಾಡುವುದು ಬಿಡುವುದು ಪಕ್ಷದ ನಿರ್ಣಯ ಎಂದು ಯಲ್ಲಾಪುರ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ತಿಳಿಸಿದರು.

ಕಾರವಾರ, ಉತ್ತರಕನ್ನಡ (ಮಾ.11): ರಾಜ್ಯಸಭಾ ಚುನಾವಣೆಯ ಮತದಾನಕ್ಕೆ ಗೈರು ಆಗಿರುವ ಕುರಿತು ಸಮರ್ಪಕ ಉತ್ತರ ನೀಡಿದ್ದೇನೆ. ಅನರ್ಹ ಮಾಡುವುದು ಬಿಡುವುದು ಪಕ್ಷದ ನಿರ್ಣಯ ಎಂದು ಯಲ್ಲಾಪುರ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ತಿಳಿಸಿದರು.

ಮುಂಡಗೋಡಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಹೆಬ್ಬಾರ್, ರಾಜ್ಯಸಭೆ ಚುನಾವನೆಗೆ ಗೈರು ಆಗಿದ್ದಕ್ಕೆ ಬಿಜೆಪಿಯವರು ನೋಟಿಸ್ ನೀಡಿದ್ದಾರೆ, ನಾನು ನೋಟಿಸ್ ಗೆ ಉತ್ತರ ನೀಡಿದ್ದೇನೆ. ಕಾಂಗ್ರೆಸ್ ಪಕ್ಷಕ್ಕೆ ಸೇರುವುದನ್ನು ಕಾಲ ನಿರ್ಣಯಿಸಲಿದೆ ಎನ್ನುವ ಮೂಲಕ ಬಿಜೆಪಿ ಪಕ್ಷದಿಂದ ಅನರ್ಹಗೊಂಡರೆ ಕಾಂಗ್ರೆಸ್ ಪಕ್ಷ ಸೇರುವ ಕುರಿತು ಪರೋಕ್ಷವಾಗಿ ಸುಳಿವು ನೀಡಿದರು.

ಶ್ರೀರಾಮನ ವನವಾಸದಂತೆ 14 ವರ್ಷಗಳ ಬಳಿಕ ನಾನು ಬಳ್ಳಾರಿಗೆ ಕಾಲಿಡುತ್ತೇನೆ ಅನ್ನೋ ಭಾವನೆ ಇದೆ: ಜನಾರ್ದನ ರೆಡ್ಡಿ

ಇನ್ನು ಸಂಸದ ಅನಂತಕುಮಾರ ಹೆಗ್ಡೆ ವಿವಾದಾತ್ಮಕ ಹೇಳಿಕೆ ಸಂಬಂಧ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅವರ ಹೇಳಿಕೆಗೆ ಜನರೇ ಉತ್ತರ ನೀಡುತ್ತಿದ್ದಾರೆ. ಅನಂತಕುಮಾರ ಹೆಗ್ಡೆ ಒಬ್ಬ  ದೊಡ್ಡ ಮನುಷ್ಯ, ಅವರ ಬಗ್ಗೆ ನಾನು ಬಗ್ಗೆ ನಾನು ಪ್ರತಿಕ್ರಿಯಿಸಲಾರೆ ಎಂದರು. ಇದೇ ವೇಳೆ ಸಚಿವ ರಾಮಲಿಂಗಾರೆಡ್ಡಿ ಬಗ್ಗೆ ಹಾಡಿಹೊಗಳಿದ ಹೆಬ್ಬಾರ್, ಮುಂಡಗೋಡದಲ್ಲಿ ರಾಮಲಿಂಗಾರೆಡ್ಡಿ ಅವಧಿಯಲ್ಲಿ ಸಾರಿಗೆ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು

ನಾವು ಬಿಜೆಪಿಗೆ ಬಂದಾಗ ಈಶ್ವರಪ್ಪ ಎಷ್ಟು ಕೋಟಿ ಕೊಟ್ಟಿದ್ದರು: ಮಾಜಿ ಸಚಿವ ಶಿವರಾಮ ಹೆಬ್ಬಾರ್‌

click me!