ಉತ್ತರ ಕರ್ನಾಟಕ ಭಾಗದ ಕಥೆ ಹಿನ್ನೆಲೆಯುವಳ್ಳ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟಿಸಿರುವ ಕರಟಕ ದಮನಕ ಚಿತ್ರಕ್ಕೆ ರಾಜ್ಯಾದ್ಯಂತ ಭರ್ಜರಿ ರೆಸ್ಪಾನ್ಸ್ ಸಿಕ್ಕ ಬೆನ್ನಲ್ಲೇ ನಟ ಶಿವರಾಜಕುಮಾರ್ ಉತ್ತರ ಕರ್ನಾಟಕ ವಿಜಯಾತ್ರೆ ಆರಂಭಿಸಿದ್ದಾರೆ.
ವಿಜಯನಗರ (ಮಾ.11): ಉತ್ತರ ಕರ್ನಾಟಕ ಭಾಗದ ಕಥೆ ಹಿನ್ನೆಲೆಯುವಳ್ಳ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟಿಸಿರುವ ಕರಟಕ ದಮನಕ ಚಿತ್ರಕ್ಕೆ ರಾಜ್ಯಾದ್ಯಂತ ಭರ್ಜರಿ ರೆಸ್ಪಾನ್ಸ್ ಸಿಕ್ಕ ಬೆನ್ನಲ್ಲೇ ನಟ ಶಿವರಾಜಕುಮಾರ್ ಉತ್ತರ ಕರ್ನಾಟಕ ವಿಜಯಾತ್ರೆ ಆರಂಭಿಸಿದ್ದಾರೆ.
ಇಂದು ವಿಜಯನಗರದ ಹೊಸಪೇಟೆಯಲ್ಲಿ ಕರಟಕ-ದಮನಕ ಸಿನಿಮಾ ಪ್ರಮೋಷನ್ ಗೆ ಬಂದ ನಟ ಶಿವಣ್ಣ ರೋಡ್ ಶೋ ನಡೆಸಿದರು. ವಾಲ್ಮೀಕಿ ವೃತ್ತದಿಂದ ರೋಡ್ ಶೋ ಆರಂಭಿಸಿ, ಪುನೀತ್ ರಾಜಕುಮಾರ್ ಪುತ್ಥಳಿಗೆ ತೆರಳಿ ಮಾಲಾರ್ಪಣೆ ಮಾಡಿದರು. ರೋಡ್ ಶೋ ವೇಳೆ ಸಾವಿರಾರು ಅಭಿಮಾನಿಗಳು ಕಿಕ್ಕಿರಿದು ಸೇರಿದ್ದರು.
Karataka Dhamanaka Review ತಮಾಷೆಯ ದಾರಿ, ವಿಷಾದವೇ ಗುರಿ
ರೋಡ್ ಶೋ ಬಳಿಕ ಗೀತಾ ಶಿವರಾಜಕುಮಾರ್ ಲೋಕಸಭಾ ಚುನಾವಣೆಗೆ ಸ್ಪರ್ಧೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಶಿವರಾಜಕುಮಾರ, ನಾವು ಗೆಲ್ಲಲೇಬೇಕು ಎಂದು ಕಣಕ್ಕೆ ಇಳಿದಿದ್ದೇವೆ. ಉತ್ತಮ ಸ್ಪಂದನೆ ಇದೆ, ಜನರು ರೆಸ್ಪಾನ್ಸ್ ಮಾಡ್ತಿದ್ದಾರೆ. ಕಳೆದ ಬಾರಿ ಜೆಡಿಎಸ್ ನಿಂದ ಸ್ಪರ್ಧೆ ಮಾಡಿದ್ದೆವು. ಆದರೆ ಈ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದೇವೆ. ಕಳೆದ ಬಾರಿಗೂ ಈ ಬಾರಿಗೂ ವ್ಯತ್ಯಾಸ ಇದೆ. ಈ ಬಾರಿ ಲೋಕಸಭಾ ಚುನಾವಣೆ ಗೆಲ್ಲುತ್ತೇವೆ ವಿಶ್ವಾಸ ವ್ಯಕ್ತಪಡಿಸಿದರು. ಇದೇ ವೇಳೆ ಸಿನಿಮಾ ಬೇರೆ, ರಾಜಕೀಯವೇ ಬೇರೆ. ಸಿನಿಮಾಕ್ಕೂ ರಾಜಕೀಯಕ್ಕೂ ಸಂಬಂಧವಿಲ್ಲ ಎಂದರು.
ಗೋ ವಿತ್ ದಿ ಫ್ಲೋ; ಹಲವು ವರ್ಷಗಳ ನಂತರ ಕನ್ನಡಕ್ಕೆ ಮತ್ತೆ ಬಂದ ಪ್ರಭುದೇವ
ಕರಟಕ ದಮನಕ ಚಿತ್ರ ಬಯಲುಸೀಮೆಯ ಕಥೆಯಾಗಿದೆ ಜನರು ಈ ಸಿನಿಮಾವನ್ನ ಕುಟುಂಬ ಸಮೇತ ನೋಡುತ್ತಿದ್ದಾರೆ. ನಾನು ಅಭಿಮಾನಿಗಳಿಗೆ ಧನ್ಯವಾದಗಳನ್ನು ಹೇಳುತ್ತೇನೆ. ಧನ್ಯವಾದ ಹೇಳಲೆಂದೇ ಉತ್ತರ ಕರ್ನಾಟಕದ ಕಡೆ ವಿಜಯಾತ್ರೆ ಬಂದಿದ್ದೇವೆ ಎಂದರು. ಚಿತ್ರದುರ್ಗ, ಹೊಸಪೇಟೆ, ಬಳ್ಳಾರಿ, ಬೆಳಗಾವಿ, ನಿಪ್ಪಾಣಿ, ಧಾರವಾಡ ಸೇರಿದಂತೆ ಬಯಲುಸೀಮೆಯಲ್ಲಿ ವಿಜಯಾತ್ರೆಗೆ ಹೊರಟಿರುವ ಚಿತ್ರತಂಡ ಇನ್ನೆರಡು ದಿನ ಉತ್ತರ ಕರ್ನಾಟಕದಲ್ಲಿ ಟೀಂ ರೋಡ್ ಶೋ ನಡೆಸಲಿದೆ.