ಮಹಾನಾಯಕನ ಕೈವಾಡ ಬಯಲಿಗೆ ತರುತ್ತೇನೆ ಎಂದ ಶಾಸಕ ರಾಜೂಗೌಡ!

By Suvarna News  |  First Published May 11, 2022, 7:31 PM IST

ಶಾಸಕ ರಾಜುಗೌಡ ಅವರನ್ನು ಸಚಿವ ಸಂಪುಟದಲ್ಲಿ ಸೇರ್ಪಡೆ ಮಾಡಿಕೊಳ್ಳಬಾರದೆಂದು ರಾಜಕೀಯ ದ್ವೇಷ ಇಟ್ಟುಕೊಂಡು ರಾಜಕೀಯ ವ್ಯಕ್ತಿಯೊಬ್ಬರು ಆಡಿಯೋ ವೈರಲ್ ಮಾಡಲು ಕಾರಣರಾದ್ರಾ ಎಂಬ ಅನುಮಾನ ಕಾಡುತ್ತಿದೆ.
 


ವರದಿ: ಪರಶುರಾಮ್ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್

ಯಾದಗಿರಿ (ಮೇ.11): ಸರಕಾರಿ ನೌಕರಿ (government job) ಕೊಡಿಸುವುದಾಗಿ ರೇಖಾ (Rekha) ಎಂಬ ಮಹಿಳೆಯು ಮಾತನಾಡಿದ್ದ ಆಡಿಯೋದಲ್ಲಿ ಶಾಸಕ ರಾಜುಗೌಡರ (Raju Gowda) ಹೆಸರು ಬಳಕೆ ಮಾಡಿದ್ದ ಎನ್ನಲಾದ ಆಡಿಯೋ (Audio) ಪ್ರಕರಣಕ್ಕೆ  ಈಗ ರಾಜಕೀಯ ತಿರುವು ಪಡೆದುಕೊಂಡಿದೆ. 

Latest Videos

undefined

ಸಚಿವ ಸಂಪುಟ ವಿಸ್ತರಣೆ (cabinet expansion) ಹಾಗೂ ಪುನರ್ ರಚನೆ (cabinet reshuffle) ಸಂದರ್ಭದಲ್ಲಿ ಶಾಸಕ ರಾಜುಗೌಡ ಅವರ ಹೆಸರಿಗೆ ಕಳಂಕ ತರುವ ಕೆಲಸ ಮಾಡಲಾಗುತ್ತಿದೆಯಾ ಎಂಬ ಪ್ರಶ್ನೆ ಹುಟ್ಟು ಹಾಕಿದೆ. ಶಾಸಕ ರಾಜುಗೌಡ ಅವರನ್ನು ಸಚಿವ ಸಂಪುಟದಲ್ಲಿ ಸೇರ್ಪಡೆ ಮಾಡಿಕೊಳ್ಳಬಾರದೆಂದು ರಾಜಕೀಯ ದ್ವೇಷ ಇಟ್ಟುಕೊಂಡು ರಾಜಕೀಯ ವ್ಯಕ್ತಿಯೊಬ್ಬರು ಆಡಿಯೋ ವೈರಲ್ ಮಾಡಲು ಕಾರಣರಾದ್ರಾ ಎಂಬ ಅನುಮಾನ ಕಾಡುತ್ತಿದೆ.

ಸ್ವಪಕ್ಷದ ನಾಯಕರ ವಿರುದ್ಧ ಶಾಸಕ ರಾಜೂಗೌಡ ಗುಡುಗು: ಖುದ್ದು ಶಾಸಕ ರಾಜುಗೌಡ ಅವರೇ ಸ್ವಪಕ್ಷದ ' ನಾಯಕ'ನ ಕೈವಾಡವಿದೆ. ಆಡಿಯೋದ ಹಿಂದೆ 'ಮಹಾನಾಯಕ'ನ ಕೈವಾಡವಿದ್ದು ಸ್ವಪಕ್ಷದ ನಾಯಕನ ಕೈವಾಡವಿದೆ ಎಂದು ಆರೋಪಿಸಿದ್ದಾರೆ. ನಾನು ಆ ನಾಯಕನ ಕೈವಾಡದ ಬಗ್ಗೆ ಸುಮ್ಮನೆ  ಬಿಡುವುದಿಲ್ಲ. ನನಗೆ ಹೊರಗಿನ ಶತ್ರುಗಳು ಇಲ್ಲ, ಒಳಗಿನ ಶತ್ರುಗಳಿದ್ದಾರೆ. ನಾನು ಮೊದಲು ಮಂತ್ರಿಗೆ ಆಸೆಪಟ್ಟದ್ದು ನಿಜ ಆದರೆ, ಆಡಿಯೋ ಬಿಡಲಿ, ಬಿಟ್ಟಷ್ಟು ನನಗೆ ಒಳ್ಳೆದು ತಾಕತ್ ಇದ್ರೆ ನನ್ನ ಎದುರಿಗೆ ಬಂದು ಫೈಟ್ ಮಾಡಿ ಬೆನ್ನಿಗೆ ಚೂರಿ ಹಾಕಬೇಡಿ ಎಂದು ಕೊಡೇಕಲ್ ನಲ್ಲಿ ಶಾಸಕ ರಾಜುಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗೋಲ್ ಮಾಲ್ ರೇಖಾ ವಿರುದ್ಧ ಸುರಪುರದಲ್ಲಿ FIR ದಾಖಲು :  ರೇಖಾ ಎಂಬ ಮಹಿಳೆಯು ಸರಕಾರಿ ನೌಕರಿ ಕೊಡಿಸುವುದಾಗಿ ಕೆಲವರಿಂದ ಹಣ ಪಡೆದಿದ್ದಾಳೆ ಎನ್ನಲಾಗಿದ್ದು ಈ ಬಗ್ಗೆ ಹಣಕೊಟ್ಟ ವ್ಯಕ್ತಿಯೊಬ್ಬನ ಜೊತೆ ರೇಖಾ ಮಾತನಾಡಿರುವ ಆಡಿಯೋ ವೈರಲ್ ಆಗಿದ್ದು, ಆಡಿಯೋದಲ್ಲಿ ಶಾಸಕ ರಾಜುಗೌಡ ಅವರ ಹೆಸರು ಬಳಕೆ ಮಾಡಿದ್ದಾರೆ. ಈ ಹಿನ್ನೆಲೆ ಶಾಸಕ ರಾಜುಗೌಡ ಅವರು ಸುರಪುರ ಪೊಲೀಸ್ ಠಾಣೆಯಲ್ಲಿ ರೇಖಾ ವಿರುದ್ಧ ದೂರು ನೀಡಿದ್ದಾರೆ.

ರೇಖಾ ಎಂಬ ಮಹಿಳೆ ಯಾರೆಂದು ಅಂತ ಗೊತ್ತೇ ಇಲ್ಲ: ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ರಾಜುಗೌಡ ಅವರು ಮಾತನಾಡಿ, ರೇಖಾ ಎಂಬ ಮಹಿಳೆ ನನಗೆ ಗೊತ್ತಿಲ್ಲ‌. ಆಕೆಗೆ ನನ್ನ ಹೆಸರನ್ನು ಸ್ಪಷ್ಟವಾಗಿ ಹೇಳಲು ಬರುತ್ತಿಲ್ಲ. ಈ ಭಾಗದ ಮುಗ್ಧ ಜನರಿಗೆ ಕೆಲಸ  ಕೊಡಿಸುವುದಾಗಿ ಮೋಸ ಮಾಡಿದ್ದಾರೆ.

YADGIR ಆರೋಗ್ಯ ಇಲಾಖೆಯಲ್ಲಿ ಸತ್ತವರಿಗೂ ಕೋವಿಡ್ ಲಸಿಕೆ!

ಈ ಮಹಿಳೆಯಿಂದ ವಂಚನೆಯಾದವರು ಕೇಸ್ ನೀಡಬೇಕೆಂದರು. ಸದ್ಯಕ್ಕೆ ಅಡಿಯೋ ಪ್ರಕರಣ ಈಗ ರಾಜಕೀಯ ತಿರುವು ಪಡೆದುಕೊಂಡಿದೆ. ಈ ಬಗ್ಗೆ ಸುರಪುರ ಪೊಲೀಸರು ಆರೋಪಿಗಳ ಪತ್ತೆ ಹಚ್ಚಿ ಇದರ ಹಿಂದಿನ ಅಸಲಿ ಕಹಾನಿ ಹೊರತರುವ ಜೊತೆ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕಿದೆ.

PSI Recruitment Scam: ಜನವರಿಯಲ್ಲೇ ದೂರು ಬಂದರೂ ಮುಚ್ಚಿಟ್ಟರೇ?

ರೇಖಾಗಾಗಿ ಬಲೆ ಬೀಸಿದ ಸುರಪುರ ಪೋಲಿಸರು:  ರೇಖಾ ಎಂಬ ಮಹಿಳೆ ಯಾದಗಿರಿ, ರಾಯಚೂರು ಭಾಗದ ಹಲವಾರು ಯುವಕರಿಗೆ ಸರ್ಕಾರಿ ನೌಕರಿ ಕೊಡಿಸಲು ಅವರಿಂದ ಹಣ ಪೀಕಿದ್ದು, ನೌಕರಿ ಕೊಡಿಸದೇ ವಂಚನೆ ಮಾಡಿದ್ದಾರೆ. ರೇಖಾ ಎಂಬ ಮಹಿಳೆಗಾಗಿ ಸುರಪುರ ಪೋಲಿಸರು ಶೋಧ ಮುಂದುವರೆಸಿದ್ದಾರೆ. ಸುರಪುರ ಪಿಎಸ್ಐ ಸುನೀಲ್ ಮೂಲಿಮನಿ ನೇತೃತ್ವದಲ್ಲಿ ಶೋಧ ಚುರುಕುಗೊಂಡಿದೆ.

click me!