ಬಿಗ್ ಬಾಸ್ ಮನೆಗೆ ಶಾಸಕ ಪ್ರದೀಪ್ ಈಶ್ವರ್ ಎಂಟ್ರಿ; ಸಚಿವ ಸತೀಶ್ ಜಾರಕಿಹೊಳಿ ಏನಂದ್ರು?

By Ravi Janekal  |  First Published Oct 9, 2023, 9:51 PM IST

ಸಂಪೂರ್ಣ ದಕ್ಷಿಣ ಭಾರತಕ್ಕೆ ಕೇಂದ್ರ ಸರ್ಕಾರ ವಿದ್ಯುತ್ ಪೂರೈಕೆ ನಿಲ್ಲಿಸಿದೆ. ಹೀಗಾಗಿ ರೈತರ ಪಂಪ್‌ಸೆಟ್‌ಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಆಗುತ್ತಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.


ಚಿಕ್ಕೋಡಿ (ಅ.9): ಸಂಪೂರ್ಣ ದಕ್ಷಿಣ ಭಾರತಕ್ಕೆ ಕೇಂದ್ರ ಸರ್ಕಾರ ವಿದ್ಯುತ್ ಪೂರೈಕೆ ನಿಲ್ಲಿಸಿದೆ. ಹೀಗಾಗಿ ರೈತರ ಪಂಪ್‌ಸೆಟ್‌ಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಆಗುತ್ತಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಮಾಧ್ಯಮದರೊಂದಿಗೆ ಮಾತನಾಡಿದ ಅವರು, ಎರಡ್ಮೂರು ದಿನಗಳಿಂದ ವಿದ್ಯುತ್ ಪೂರೈಕೆ ನಿಲ್ಲಿಸಿದ್ದು ಎಲ್ಲಿಯವರೆಗೆ ಅಂತೂ ಹೇಳಿಲ್ಲ. ನಾವು ರಾಜ್ಯದಲ್ಲಿ ಏನು ಉತ್ಪಾದನೆ ಮಾಡ್ತಿದ್ದೇವೆ ಅದನ್ನ ಮಾತ್ರ ಕೊಡ್ತಿದ್ದೇವೆ. ಕೇಂದ್ರ ಸರ್ಕಾರದವರು ವಿದ್ಯುತ್ ಕೊಟ್ಟರೇ ಸರಿ ಆಗುತ್ತೆ ಎಂದು ಕೇಂದ್ರದತ್ತ ಬೊಟ್ಟು ಮಾಡಿದ ಸಚಿವ ಸತೀಶ್ ಜಾರಕಿಹೊಳಿ.

Latest Videos

undefined

ಹಲವೆಡೆ ಜಲವಿದ್ಯುತ್ ಘಟಕ ಬಂದ್ ಆಗಿದೆ, ಕುಡತಿನಿ, ವಿಜಯಪುರ, ರಾಯಚೂರಲ್ಲಿ ವಿದ್ಯುತ್ ಘಟಕಗಳು ದುರಸ್ತಿ ಇವೆ.  ಸಾಮಾನ್ಯವಾಗಿ ಮಳೆಗಾಲದಲ್ಲಿ ರಿಪೇರಿ ಇರುತ್ತೆ, ಹೀಗಾಗಿ ಎಲ್ಲೆಡೆ ಸಮಸ್ಯೆ ಇದೆ. ವಿದ್ಯುತ್ ಖರೀದಿ ಮಾಡಬೇಕೆಂದರೂ ಎಲ್ಲೂ ಲಭ್ಯತೆ ಇಲ್ಲ. ಕೇಂದ್ರ ಸರ್ಕಾರದವರು ಏಕಾಏಕಿ ವಿದ್ಯುತ್ ಪೂರೈಕೆ ಏಕೆ ಸ್ಥಗಿತಗೊಳಿಸಿದ್ದಾರೆ ಗೊತ್ತಿಲ್ಲ. ಇದರ ಬಗ್ಗೆ ಏಕೆ ಏನು ಅಂತಾ ಚರ್ಚೆ ಮಾಡುತ್ತಿದ್ದೇವೆ. ಈ ವೇಳೆ ಕೇಂದ್ರ ಸರ್ಕಾರ ರಾಜಕಾರಣ ಮಾಡ್ತಿದೆಯಾ ಎಂದು ಪ್ರಶ್ನಿಸಿದ ಮಾಧ್ಯಮಗಳಿಗೆ ಈ ಬಗ್ಗೆ ಗೊತ್ತಿಲ್ಲ, ಅದರ ಬಗ್ಗೆ ಚರ್ಚೆ ಮಾಡ್ತೀವಿ, ರಾಜಕೀಯ ಅನಿಸಿದ್ರೆ ಅದರ ಬಗ್ಗೆ ರಿಯ್ಯಾಕ್ಟ್ ಮಾಡ್ತೀವಿ. ಗ್ಯಾರಂಟಿ ಯೋಜನೆಗೂ, ವಿದ್ಯುತ್ ಪೂರೈಕೆಗೂ ಸಂಬಂಧ ಇಲ್ಲ.  ಎಂದರು.

ನಾವು ಮನವರಿಕೆ ಮಾಡೋದಲ್ಲ, ಅವರಿಗೆ ಆಗಬೇಕು: ಬರ ಪರಿಸ್ಥಿತಿ ಬಗ್ಗೆ ಬಿಜೆಪಿ ನಾಯಕರ ಆರೋಪಕ್ಕೆ ಜಾರಕಿಹೊಳಿ ತಿರುಗೇಟು

ಎರಡನೇ ತಿಂಗಳು ಗೃಹಲಕ್ಷ್ಮೀ ಯೋಜನೆ ಹಣ ಕೊಟ್ಟಿಲ್ಲ ಎಂಬ ಬಿಜೆಪಿ ನಾಯಕರ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇನ್ನೂ ಟೈಮ್ ಬರಬೇಕಲ್ಲ, ಟೈಮ್ ಬಂದಾಗ ಕೊಟ್ಟೇ ಕೊಡುತ್ತಾರೆ. ತಾಂತ್ರಿಕ ತೊಂದರೆಯಿಂದ ಇನ್ನೂ ಹತ್ತು ಪರ್ಸೆಂಟ್ ಫಲಾನುಭವಿಗಳಿಗೆ ಕೊಡಲಾಗಿಲ್ಲ, ಅವರು ದಾಖಲೆ ನೀಡಿಲ್ಲ. ಶೇಕಡ 90ರಷ್ಟು ಫಲಾನುಭವಿಗಳಿಗೆ ಗೃಹಲಕ್ಷ್ಮೀ ಹಣ ತಲುಪಿದೆ ಎಂದರು.

ಅದು ಅವರ ವೈಯಕ್ತಿಕ ವಿಚಾರ:

ಬರಗಾಲದ ಸಮಯದಲ್ಲಿ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ರಿಯಾಲಿಟಿ ಶೋ ಬಿಗ್ ಬಾಸ್ ಮನೆಗೆ ಹೋಗುವುದು ಬೇಕಿತ್ತಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಸತೀಶ್ ಜಾರಕಿಹೊಳಿ, ಅದು ಅವರ ವೈಯಕ್ತಿಕ ವಿಚಾರ. ಅವನೊಬ್ಬ ಟ್ಯೂಷನ್ ಮಾಸ್ಟರ್. ಅದು ಅವರ ವೃತ್ತಿ, ಅದಕ್ಕೂ ಇದಕ್ಕೂ ಏನೂ ಸಂಬಂಧ ಇಲ್ಲ. ಅವರದ್ದೇ ಆದ ಪ್ರೊಫೆಷನ್ ಇರುತ್ತೆ, ಅದಕ್ಕೆ ನಾವು ಕಮೆಂಟ್ ಮಾಡಕ್ಕಾಗಲ್ಲ. ಅದು ಅವರ ವೈಯಕ್ತಿಕ ವಿಚಾರ ಎಂದರು.

ಬಿಗ್‌ಬಾಸ್‌ ಮನೆಗೆ ಹೋದ ಪ್ರದೀಪ್‌ ಈಶ್ವರ್‌ಗೆ ಎದುರಾಯ್ತು ಸಂಕಷ್ಟ: ಶಾಸಕ ಸ್ಥಾನ ಅಮಾನತ್ತಿಗೆ ಆಗ್ರಹ

click me!