ಬೆಂಗಳೂರು ಲಾಕ್‌ಡೌನ್: ಶಾಸಕರು -ಸಚಿವರು-ಸಂಸದರು ಹೇಳೋದೇನು..?

By Suvarna NewsFirst Published Jun 26, 2020, 2:33 PM IST
Highlights

ಲಾಕ್‌ಡೌನ್ ಮಾಡಬೇಕೋ ಇಲ್ಲವೇ ಸೀಲ್‌ಡೌನ್ ಮಾಡಬೇಕೆ ಎನ್ನುವುದರ ವಿಚಾರವಾಗಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಬೆಂಗಳೂರಿನ ಶಾಸಕ, ಸಚಿವ-ಸಂಸದರೊಂದಿಗೆ ಸರ್ವಪಕ್ಷಗಳ ಸಭೆ ನಡೆಯಲಿದೆ. ಲಾಕ್‌ಡೌನ್ ಕುರಿತಂತೆ ಬೆಂಗಳೂರಿನ ಕೆಲವು ಶಾಸಕರು, ಸಂಸದರು ಹಾಗೂ ಸಚಿವರು ಸುವರ್ಣ ನ್ಯೂಸ್‌ ಜತೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಬೆಂಗಳೂರು(ಜೂ.26): ಕೊರೋನಾ ಅಟ್ಟಹಾಸಕ್ಕೆ ಉದ್ಯಾನನಗರಿ ಬೆಂಗಳೂರು ಬೆಚ್ಚಿಬಿದ್ದಿದೆ. ಕೋವಿಡ್ 19 ಸೋಂಕು ನಗರದಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ಸೀಲ್‌ಡೌನ್ ಇಲ್ಲವೇ ಲಾಕ್‌ಡೌನ್ ಮಾಡಬೇಕು ಎನ್ನುವ ಮಾತುಗಳು ಕೇಳಿಬರುತ್ತಿವೆ.

ಬೆಂಗಳೂರಿನಲ್ಲಿ ಸೋಂಕು ಹೆಚ್ಚಳದ ಜತೆಗೆ ಸಾವಿನ ಸಂಖ್ಯೆಯೂ ಹೆಚ್ಚುತ್ತಿರುವುದು ಮತ್ತಷ್ಟು ಆತಂಕವನ್ನುಂಟು ಮಾಡಿದೆ. ಬೆಂಗಳೂರು ನಗರವೊಂದರಲ್ಲೇ 80 ಕ್ಕೂ ಹೆಚ್ಚು ಮಂದಿಯನ್ನು ಕೊರೋನಾ ಬಲಿ ಪಡೆದಿದೆ. ಲಾಕ್‌ಡೌನ್ ಮಾಡಬೇಕೋ ಇಲ್ಲವೇ ಸೀಲ್‌ಡೌನ್ ಮಾಡಬೇಕೆ ಎನ್ನುವುದರ ವಿಚಾರವಾಗಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಬೆಂಗಳೂರಿನ ಶಾಸಕ, ಸಚಿವ-ಸಂಸದರೊಂದಿಗೆ ಸರ್ವಪಕ್ಷಗಳ ಸಭೆ ನಡೆಯಲಿದೆ. 

ಲಾಕ್‌ಡೌನ್ ಮಾಡುವ ಕುರಿತಂತೆ ಶಿವಾಜಿನಗರದ ಶಾಸಕ ರಿಜ್ವಾನ್ ಆರ್ಷದ್ ಹಾಗೂ ಸಂಸದ ಪಿ.ಸಿ. ಮೋಹನ್ ಸುವರ್ಣ ನ್ಯೂಸ್ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.

"

ಲಾಕ್‌ಡೌನ್ ಮಾಡುವ ವಿಚಾರದ ಬಗ್ಗೆ ಸಚಿವ ಕೆ. ಗೋಪಾಲಯ್ಯ ಹೇಳೋದೇನು?

"

ಲಾಕ್‌ಡೌನ್ ಕುರಿತಂತೆ ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಿದು:

"

ಲಾಕ್‌ಡೌನ್ ಅವಶ್ಯಕತೆ ಬಗ್ಗೆ ಉದಯ್ ಗರುಡಾಚಾರ್ ಹೇಳಿದ್ದೇನು:

"

ಲಾಕ್‌ಡೌನ್ ಅಗತ್ಯತೆ ಬಗ್ಗೆ ಆರ್. ಮಂಜುನಾಥ್ ಹೇಳಿದ್ದಿದು:

"

click me!