
ಬೆಂಗಳೂರು (ಮಾ.24): ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (KRPP) ಘೋಷಣೆಯ ದಿನವೇ ಹೇಳಿದ್ದೆನು. ಅದೇ ರೀತಿಯಾಗಿ ಇನ್ನುಮುಂದೆಯೂ ರಾಜಕಾರಣದಲ್ಲಿ ನಾನು ಯಡಿಯೂರಪ್ಪ ಅವರಿಗೆ ತಂದೆ ಸ್ಥಾನದ ಗೌರವ ನೀಡುತ್ತೇನೆ. ಅದೇ ರೀತಿಯಲ್ಲಿ ಶ್ರೀರಾಮುಲು ಅವರನ್ನು ಮಗು ರೀತಿಯಲ್ಲಿ ಬೆಳೆಸಿದ್ದೇವೆ. ಮುಂದೆ ಸಹ ಭೇದಭಾವ ಇರಲ್ಲ ಎಂದು ಎಂದು ಕೆಆರ್‌ಪಿಪಿ ಶಾಸಕ ಜನಾರ್ಧನರೆಡ್ಡಿ ಹೇಳಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ನಾಳೆ ಬೆಳಗ್ಗೆ ಬಿಜೆಪಿ ಕಚೇರಿಗೆ ಬರೋಕೆ ಹೇಳಿದ್ದಾರೆ. ನಾಳೆ ಬೆಳಗ್ಗೆ 10 ಗಂಟೆಗೆ ಬಿಜೆಪಿ ರಾಜ್ಯಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ರಾಜ್ಯ ಚುನಾವಣಾ ಉಸ್ತುವಾರಿ ರಾಧಾಮೋಹನ್ ಸಮ್ಮುಖದಲ್ಲಿ ನಾಳೆ ಬಿಜೆಪಿ ಸೇರುತ್ತೇನೆ. ಲೋಕಸಭಾ ಚುನಾವಣೆ ನಿಲ್ಲುವ ವಿಚಾರ ಇಲ್ಲ. ಇನ್ನು ಶ್ರೀರಾಮುಲುಗೆ ಬೆಂಬಲ ನೀಡುವ ವಿಚಾರ ಹಾಗೂ ಬಳ್ಳಾರಿಯಿಂದ ದೂರ ಉಳಿದಿದಕ್ಕೆ ಸಾಕಷ್ಟು ಚರ್ಚೆ ಆಯ್ತು. ಆದರೆ, ನಾನು KRPP ಪಕ್ಷ ಘೋಷಣೆ ಮಾಡುವ ಮೊದಲ ದಿನ ಹೇಳಿದಂತೆ, ಯಡಿಯೂರಪ್ಪ ತಂದೆ ಸ್ಥಾನದ ಗೌರವ ನೀಡುತ್ತೇನೆ. ಅದೆ ರೀತಿಯಲ್ಲಿ ಶ್ರೀರಾಮುಲು ಅವರನ್ನು ಮಗು ರೀತಿಯಲ್ಲಿ ಬೆಳೆಸಿದ್ದೇವೆ. ಮುಂದೆ ಸಹ ಭೇದಭಾವ ಇರಲ್ಲ. ನಾನು ಮತ್ತೆ ತಾಯಿ ಬಿಜೆಪಿ ಮಡಲಿಗೆ ಸೇರ್ಪಡೆ ಆಗುತ್ತಿದ್ದೇನೆ. ಎಲ್ಲರೂ ಒಟ್ಟಾಗಿ ಮೋದಿ ಪ್ರಧಾನಿ ಆಗಲು ಶ್ರಮ ಪಡುತ್ತೇವೆ ಎಂದರು.
ಕಾಂಗ್ರೆಸ್‌ಗೆ ಕೈ ಕೊಟ್ಟು, ಬಿಜೆಪಿಯಲ್ಲಿ ಕೆಆರ್‌ಪಿಪಿ ವಿಲೀನ ಮಾಡಿದ ಶಾಸಕ ಜನಾರ್ಧನರೆಡ್ಡಿ!
ನಾನು ಬಿಜೆಪಿಯಲ್ಲಿ ಚಿಕ್ಕ ವಯಸ್ಸಿನಿಂದ ಕೂಡ ಅಡ್ವಾಣಿ ಜೊತೆಗೆ ರಥಯಾತ್ರೆಯಲ್ಲಿ ಭಾಗವಹಿಸಿದ್ದೆನು. ಅದರೆ ಮದ್ಯದಲ್ಲಿ ಆಗಿರುವ ಎಲ್ಲಾ ಘಟನೆಗಳು ನಿಮಗೆ ಗೊತ್ತಿವೆ. ಉಳಿದಿದ್ದು ನಾಳೆ ಮಾತನಾಡುತ್ತೇನೆ. ಬಿಜೆಪಿಯ ಎಲ್ಲಾ ಹಿರಿಯ ನಾಯಕರಿಂದ ಪಕ್ಷಕ್ಕೆ ಸೇರ್ಪಡೆಯಾಗಬೇಕು ಎಂಬ ವಿಚಾರದಲ್ಲಿ, ನಾನು ಸಹ ತಾಯಿ ಸಮನಾದ ಬಿಜೆಪಿ ಪಕ್ಷಕ್ಕೆ ಮರಳಲು ಮನಸ್ಸು ಮಾಡುವ ಮೊದಲು, ನನ್ನ ಕಷ್ಟದ ಜೊತೆಗೆ ಇದ್ದ ಎಲ್ಲಾ ಕಾರ್ಯಕರ್ತರು ಮುಖಂಡರ ಜೊತೆಗೆ ಚರ್ಚೆ ಮಾಡಿದ್ದೇನೆ. ಚಿತ್ರದುರ್ಗ, ಬಳ್ಳಾರಿ ರಾಯಚೂರು ಕೊಪ್ಪಳ ಕಲಬುರಗಿ , ಕೊಪ್ಪಳ ಜಿಲ್ಲೆಯಲ್ಲಿ ನನ್ನ ಬೆಂಬಲಿಸಿದವರಿಂದ ಅವರ ಅಭಿಪ್ರಾಯ ಪಡೆಯುವ ಕೆಲಸ ಮಾಡಿದ್ದೇನೆ. ಎಲ್ಲರೂ ಮುಕ್ತ ಕಂಠದಿಂದ ನಾನು ತೆಗೆದುಕೊಳ್ಳುವ ನಿರ್ಧಾರಕ್ಕೆ ಬೆಂಬಲವಾಗಿ ನಿಂತು ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿಸಿದರು.
ನಾಳೆ ಬೆಳಗ್ಗೆ ಬಿಜೆಪಿ ಪಕ್ಷದ ನಾಯಕರ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆ ಆಗುತ್ತೇನೆ. ಲೋಕಸಭಾ ಚುನಾವಣೆ ನಿರ್ಧಾರಾನಾ..? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ಬಾಹ್ಯ ಬೆಂಬಲ ಕೊಟ್ಟು ಪ್ರಚಾರ ಮಾಡಬೇಕು ಅಂತ ಇತ್ತು. ಎಲ್ಲಾ ನಮ್ಮ ಕಾರ್ಯಕರ್ತರ ಅಭಿಪ್ರಾಯ ಮುಖ್ಯ. ಲೋಕಸಭಾ ಚುನಾವಣೆ ಅಂತ ಉದ್ಭವಾಗಲ್ಲ. ಭಾರತದ ಅಭಿವೃದ್ಧಿ ಆಗಿರಬಹುದು ನಿರೀಕ್ಷೆಯಿದೆ. ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಇಡೀ ವಿಶ್ವದಲ್ಲೇ ಭಾರತವನ್ನು ವಿಶ್ವಗುರು ಆಗುವಂತೆ ಮಾಡಿದ್ದಾರೆ. ಕೇವಲ 10 ವರ್ಷಗಳಲ್ಲಿ ಭಾರತಕ್ಕೆ ಈ ಖ್ಯಾತಿ ಬಂದಿದೆ. ಹೀಗಾಗಿ, ಮೊರನೇ ಬಾರಿ ಮೋದಿ ಪ್ರಧಾನಿ ಆಗಬೇಕು ಎಂಬುದು ದೇಶದ ಜನರ ಅಭಿಪ್ರಾಯ ಆಗಿದೆ. ಆ ವಿಚಾರದಲ್ಲಿ ಬಿಜೆಪಿಗೆ ಸೇರ್ಪಡೆ ಆಗತ್ತಿದ್ದೇನೆ. ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷ ಸೇರ್ಪಡೆ ಆಗುತ್ತಿದ್ದೇನೆ ಎಂದು ತಿಳಿಸಿದರು.
ಶಿವಮೊಗ್ಗ ಗೀತಾ ಶಿವರಾಜ್ ಕುಮಾರ್ ಡಮ್ಮಿ ಕ್ಯಾಂಡಿಡೇಟ್; ಈಶ್ವರಪ್ಪ ಡಬ್ಬ ಸೌಂಡ್: ವಾಗ್ದಾಳಿ ರಾಜಕಾರಣ
ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಬೆಂಬಲ ನೀಡಿದ ವಿಚಾರದ ಬಗ್ಗೆ ಮಾತನಾಡಿ, ಮತ ಯಾರಿಗೆ ಚಲಾಯಿಸಿದ ವಿಚಾರ ಹೇಗೆ ಬಂತು ಅಂದರೆ ಆಗ ಆನೆಗುಂದಿ ಉತ್ಸವ ಇತ್ತು. ಅದೇ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಅವರಿಗೆ ಆಹ್ವಾನ ನೀಡಲಾಗಿತ್ತು. ಅದರ ನಂತರ ರಾಜ್ಯಸಭೆ ಚುನಾವಣೆ ನಡೆದಿತ್ತು. ಹೀಗಾಗಿ ನಾನು ಆತ್ಮಸಾಕ್ಷಿಯಾಗಿ ಮತ ಚಲಾಯಿಸಿದ್ದೇನೆ ಅಂತ ಆವತ್ತೆ ಹೇಳಿದ್ದೇನೆ. ಆದರೆ, ಈಗ ಜನರು ಮೋದಿ ಪರವಾಗಿ ನಿಂತಿರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ಪ್ರಧಾನಿ ಆಗಬೇಕು. ರಷ್ಯಾ ದೇಶದ ಅಧ್ಯಕ್ಷರು ಸಹ ಮೋದಿ ಪ್ರಧಾನಿ ಆಗ್ತಾರೆ. ಆ ಬಳಿಕವೇ ಭಾರತಕ್ಕೆ ಬಂದು ಭೇಟಿ ಆಗ್ತೇನೆ ಅಂತ ಹೇಳಿದ್ದಾರೆ. ಇಡೀ ವಿಶ್ವವೇ ಬಿಜೆಪಿ ಗೆಲ್ಲಬೇಕು ಎಂಬುದು ಅಭಿಪ್ರಾಯ ಇದೆ. ಮೋದಿ ಪ್ರಧಾನ ಮಂತ್ರಿ ಆಗಬೇಕು ಎಂದು ಈ ನಿರ್ಧಾರ ತೆಗೆದುಕೊಂಡೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ