ಶ್ರೀರಾಮನ ಅವಹೇಳನ ಮಾಡಿದ ಶಿಕ್ಷಕಿ ಮೇಲೆ ಕೇಸ್ ಇಲ್ಲ; ಜೈ ಶ್ರೀರಾಮ್ ಎಂದವರ ಮೇಲೆ ಎಫ್‌ಐಆರ್: ಶಾಸಕ ಭರತ್ ಶೆಟ್ಟಿ

By Ravi Janekal  |  First Published Feb 15, 2024, 1:09 PM IST

ಮಂಗಳೂರಿನ ಜೆಪ್ಪುವಿನಲ್ಲಿರುವ ಸೇಂಟ್ ಗೆರೋಸಾ ಆಂಗ್ಲ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇರೆಗೆ ಶಾಲೆಬಳಿ ಪ್ರತಿಭಟನೆ ನಡೆಸಿದ್ದ ಬಿಜೆಪಿ ಶಾಸಕರ ವಿರುದ್ಧ ಪ್ರಕರಣ ದಾಖಲಾಗಿದೆ.


ಮಂಗಳೂರು (ಫೆ.15): ಮಂಗಳೂರಿನ ಜೆಪ್ಪುವಿನಲ್ಲಿರುವ ಸೇಂಟ್ ಗೆರೋಸಾ ಆಂಗ್ಲ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇರೆಗೆ ಶಾಲೆಬಳಿ ಪ್ರತಿಭಟನೆ ನಡೆಸಿದ್ದ ಬಿಜೆಪಿ ಶಾಸಕರ ವಿರುದ್ಧ ಪ್ರಕರಣ ದಾಖಲಾಗಿದೆ.

ಬಿಜೆಪಿ ಶಾಸಕರಾದ ಡಿ ವೇದವ್ಯಾಸ್ ಕಾಮತ್ ಮತ್ತು ಭರತ್ ಶೆಟ್ಟಿ, ವಿಎಚ್‌ಪಿ ಮುಖಂಡ ಶರಣ್ ಪಂಪ್‌ವೆಲ್ ಮತ್ತು ಇತರರ ವಿರುದ್ಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು, ಕಾನೂನುಬಾಹಿರ ಸಭೆ, ಧಾರ್ಮಿಕ ಭಾವನೆಗಳಿಗೆ ಧಕ್ಕೆ, ಕ್ರಿಮಿನಲ್ ಬೆದರಿಕೆ ಮತ್ತು ಇತರರ ವಿರುದ್ಧ ಸೇಂಟ್ ಜೆರೋಸಾ ಶಾಲೆಯ ಮುಂದೆ ಗಲಾಟೆ ಮಾಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ.

Tap to resize

Latest Videos

 ಶಾಲೆಯ ಮತ್ತು ಶಾಲಾ ಆಡಳಿತವನ್ನು ಬೆದರಿಸುತ್ತಿದ್ದಾರೆ. ಹಿಂದೂ-ಕ್ರೈಸ್ತರ ನಡುವೆ ಗಲಭೆ ಉಂಟು ಮಾಡಿ ದಕ್ಷಿಣ ಕನ್ನಡ ಜಿಲ್ಲೆಯ ಶಾಂತಿಗೆ ಧಕ್ಕೆ ತರುವ ಉದ್ದೇಶದಿಂದ ಹೇಳಿಕೆ ನೀಡುತ್ತಿದ್ದಾರೆ ಎಂಬ ಆರೋಪವೂ ಅವರ ಮೇಲಿದೆ.

ಶ್ರೀರಾಮನ ಅವಹೇಳನ ಮಾಡಿದ್ದ ಶಿಕ್ಷಕಿ ವಜಾ; ಘಟನೆ ಕುರಿತು ಸತ್ಯಶೋಧನಾ ತಂಡದಿಂದ ತನಿಖೆಗೆ ಆಗ್ರಹಿಸಿದ ಕಾಂಗ್ರೆಸ್!

ದುರುದ್ದೇಶದಿಂದ ಎಫ್‌ಐಆರ್!

ರಾಮನ ಅವಹೇಳನ ಖಂಡಿಸಿ ಪ್ರತಿಭಟನೆ ನಡೆಸಿದ, ಪ್ರಶ್ನಿಸಿದವರ ಮೇಲೆ ಎಫ್‌ಐಆರ್ ಹಾಕಿರುವ ಸಂಬಂಧ ಶಾಸಕ ಭರತ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದು, ನನ್ನ ಮೇಲೆ ದುರುದ್ದೇಶದಿಂದ ಎಫ್‌ಐಆರ್ ಹಾಕಿದ್ದಾರೆ ಎಂದಿದ್ದಾರೆ. ಮೊದಲು ಹರೀಶ್ ಪೂಂಜಾ ಮೇಲೆ ಕೇಸ್ ಹಾಕಿದ್ರು. ಈಗ ನನ್ನ ಹಾಗೂ ವೇದವ್ಯಾಸ್ ಕಾಮತ್ ಮೇಲೆ ಕೇಸ್ ಹಾಕಿದ್ದಾರೆ. ಜೈ ಶ್ರೀರಾಮ್ ಎಂದು ಕೂಗುವವರ ಮೇಲೆ ಕೇಸ್ ಹಾಕುತ್ತಿದ್ದಾರೆ. ರಾಮನನ್ನ ಅವಹೇಳನ ಮಾಡಿದ್ರೆ ಅವರನ್ನು ಹಂಗೆ ಬಿಡ್ತೀರಿ. ಅದರ ವಿರುದ್ಧ ದನಿ ಎತ್ತಿದ ನಮ್ಮ ಮೇಲೆ ಎಫ್‌ಐಆರ್ ಹಾಕ್ತಿರಿ. ನಾನು ಇದನ್ನು ಫೇಸ್ ಮಾಡುತ್ತೇನೆ ನಾವಿಬ್ಬುರ ಶಾಸಕರು ಜಾಮೀನು ಪಡೆಯೋದಿಲ್ಲ. ಈ ಪ್ರಕರಣವನ್ನು ಎದುರಿಸುತ್ತೇವೆ ಎಂದರು.

'ಶ್ರೀರಾಮ ಒಂದು ಕಲ್ಲು' ಎಂದ ಮಂಗಳೂರಿನ ಜೆರೋಸಾ ಶಾಲಾ ಶಿಕ್ಷಕಿ ವಿರುದ್ಧ ಪೋಷಕರು ಆಕ್ರೋಶ

ಈ ಪ್ರಕರಣದ ಬಗ್ಗೆ ಸದನದ ಶೂನ್ಯ ವೇಳೆಯಲ್ಲಿ ಪ್ರಸ್ತಾಪ ಮಾಡಿದ್ದೇನೆ. ಆದ್ರೆ ಜಿಲ್ಲಾ ಉಸ್ತುವಾರಿ ಸಚಿವರು ಸರಿಯಾಗಿ ಉತ್ತರ ಕೊಟ್ಟಿಲ್ಲ. ಸಂಜೆ ಗೃಹ ಸಚಿವರು ಉತ್ತರಿಸಬಹುದು.ನಾವು ಇದನ್ನ ಮತ್ತೆ ಪ್ರಸ್ತಾಪ ಮಾಡ್ತೇವೆ. ನಾನು ಶಾಲೆಗೆ ಹೋಗೇ ಇರಲಿಲ್ಲ.DDPI ಕಚೇರಿ ಗೆ ಮಾತ್ರ ಹೋಗಿದ್ದೆ‌. ಆದ್ರೆ ಗಲಾಟೆ ಮಾಡಿದ್ದಾರೆ ಎಂದು ಕೇಸ್ ಹಾಕಿದ್ದಾರೆ. ಇದು ದುರದ್ದೇಶದಿಂದ ಹಾಕಿರುವ ಕೇಸ್ ಎಂಬುದು ಗೊತ್ತಿರುವ ವಿಚಾರ. ರಾಮನ ಅವಹೇಳನ ಮಾಡಿದ ಶಿಕ್ಷಕಿಯ ಮೇಲೆ ಕೇಸ್ ಹಾಕಿಲ್ಲ. ಪೋಷಕರೇ ಶಿಕ್ಷಕಿಯ ಮೇಲೆ ದೂರು ನೀಡಿದ್ದಾರೆ‌. ಆದ್ರೂ ಅವರು ಮೇಲೆ ಕೇಸ್ ಹಾಕಿಲ್ಲ. ಆದ್ರೆ DDPI ಮಾತ್ರ ಟ್ರಾನ್ಫರ್ ಮಾಡಿದ್ದಾರೆ. ಅವರು ತನಿಖೆ ಮಾಡಿದ್ರೆ ಸತ್ಯ ಗೊತ್ತಾಗುತ್ತೆ ಅಂತ ಅವರನ್ನ ಎತ್ತಗಂಡಿ ಮಾಡಿದ್ದಾರೆ ಎಂದು ಕಿಡಿಕಾರಿದರು.

click me!