ಕೊಬ್ಬರಿ ಖರೀದಿ ನೋಂದಣೀಲೂ ಭಾರೀ ಅಕ್ರಮ..!

Published : Feb 15, 2024, 12:20 PM ISTUpdated : Feb 15, 2024, 12:22 PM IST
ಕೊಬ್ಬರಿ ಖರೀದಿ ನೋಂದಣೀಲೂ ಭಾರೀ ಅಕ್ರಮ..!

ಸಾರಾಂಶ

ನೋಂದಣಿಯ ಸರಾಸರಿ ಅವಧಿ ತೆಗೆದುಕೊಂಡು ಪರಿಶೀಲಿಸಿದಾಗ ಈ ಅಕ್ರಮ ಬೆಳಕಿಗೆ ಬಂದಿದೆ. ಅಧಿಕಾರಿಗಳು, ವರ್ತಕರು ಬೃಹತ್ ರೈತರೊಂದಿಗೆ ಶಾಮೀಲಾಗಿ ಲಾಗಿನ್‌ ಐಡಿ ದುರುಪಯೋಗ ಮಾಡಿಕೊಂಡು ಅಕ್ರಮ ನಡೆಸಿದ್ದಾರೆ. ನೋಂದಣಿ ಪುನಃ ಪ್ರಾರಂಭಿಸಬೇಕೆಂದು ರೈತರು ಒತ್ತಾಯಿಸಿದ್ದಾರೆ.

ಸಿದ್ದು ಚಿಕ್ಕಬಳ್ಳೇಕೆರೆ 

ಬೆಂಗಳೂರು(ಫೆ.15):  ನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಕೊಬ್ಬರಿ ಖರೀದಿಗೆಂದು ಸರ್ಕಾರ ಆರಂಭಿಸಿರುವ ನೋಂದಣಿಯಲ್ಲೂ ಭಾರೀ ಗೋಲ್‌ಮಾಲ್ ನಡೆದಿ ರುವ ವಿಷಯ ಬೆಳಕಿಗೆ ಬಂದಿದೆ. ಹೆಸರು ನೋಂದಣಿಗೆ ಆರಂಭಿಸಿದ್ದ ರಾಜ್ಯದ 58 ಕೇಂದ್ರಗಳ ಪೈಕಿ 3 ಜಿಲ್ಲೆಯ 9 ಕೇಂದ್ರಗಳಲ್ಲಿ, 2 ಲಕ್ಷ ಕ್ವಿಂಟಲ್‌ಗೂ ಅಧಿಕ ನೋಂದಣಿ ಅಕ್ರಮ ಎಸಗಿರುವುದು ಪತ್ತೆಯಾಗಿದೆ. 

ನೋಂದಣಿಯ ಸರಾಸರಿ ಅವಧಿ ತೆಗೆದುಕೊಂಡು ಪರಿಶೀಲಿಸಿದಾಗ ಈ ಅಕ್ರಮ ಬೆಳಕಿಗೆ ಬಂದಿದೆ. ಅಧಿಕಾರಿಗಳು, ವರ್ತಕರು ಬೃಹತ್ ರೈತರೊಂದಿಗೆ ಶಾಮೀಲಾಗಿ ಲಾಗಿನ್‌ ಐಡಿ ದುರುಪಯೋಗ ಮಾಡಿಕೊಂಡು ಅಕ್ರಮ ನಡೆಸಿದ್ದಾರೆ. ನೋಂದಣಿ ಪುನಃ ಪ್ರಾರಂಭಿಸಲು ರೈತರು ಒತ್ತಾಯಿಸಿದ್ದಾರೆ.

ಗೋಲ್‌ಮಾಲ್‌ ಹಿನ್ನೆಲೆ: 1 ತಿಂಗಳು ಕೊಬ್ಬರಿ ಖರೀದಿ ಸ್ಥಗಿತ: ಸಚಿವ ಶಿವಾನಂದ ಪಾಟೀಲ್

ಹೆಸರು ನೋಂದಣಿ: 

ಕೇಂದ್ರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ (ಎಂಎಸ್ ಪಿ) ರಾಜ್ಯದಲ್ಲಿ 6.25 ಲಕ್ಷ ಕ್ವಿಂಟಲ್‌ ಕೊಬ್ಬರಿ ಮಾರಾಟ ಮಾಡಲು ರೈತರು ನೋಂದಣಿ ಮಾಡಿಸಿದ್ದು ಇದರಲ್ಲಿ 9 ಕೇಂದ್ರಗಳಿಂದಲೇ 2.03ಲಕ್ಷ ಕ್ವಿಂಟಲ್ ಕೊಬ್ಬರಿ ಮಾರಾಟ ಮಾಡಲು 15,368 ರೈತರು ನೋಂದಣಿ ಮಾಡಿಸಿದ್ದಾರೆ.

ಕಡಿಮೆ ಅವಧಿ, ಹೆಚ್ಚು ನೋಂದಣಿ

ಸ್ಥಳ            ರೈತರ ನೋಂದಣಿ   ಕೊಬ್ಬರಿ ನೋಂದಣಿ(ಕ್ವಿಂಟಲ್‌ಗಳಲ್ಲಿ)

ಜಾವಗಲ್‌       1308                18,071
ಗಂಡಸಿ          1352                17,170
ಅರಸೀಕೆರೆ      1847                 23,871.5
ಶ್ರವಣಬೆಳಗೊಳ 2001                26,743.5
ಚನ್ನರಾಯಪಟ್ಟಣ 2102               27,998
ಕೆ..ಆರ್‌.ಪೇಟೆ    1485                17,748.5
ಕಿಕ್ಕೇರಿ           1925                24,967
ಪಾಂಡವರಪುರ  1148                 14,748.5
ಕಡೂರು         2200                32,100
ಒಟ್ಟು            15,368               2,03,450
 
ಅಧಿಕಾರಿಗಳು ವರ್ತಕರೊಂದಿಗೆ ಸೇರಿಕೊಂಡು ಎಲ್ಲೋ ಕುಳಿತು ಅಕ್ರಮವಾಗಿ ಸೋಂದಣಿ ಮಾಡಿಸಲು ಸಹಕರಿಸಿದ್ದಾರೆ. ಅಧಿಕಾರಿಗಳ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿ ಬಂಧಿಸಬೇಕು. ಹೊಸದಾಗಿ ಕೊಬ್ಬರಿ ಖರೀದಿಗೆ ನೋಂದಣಿ ಪ್ರಾರಂಭಿಸಬೇಕು ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ. 

ಎಲ್ಲೆಲ್ಲಿ ಎಷ್ಟು ನೋಂದಣಿ: 

ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ರಾಮನಗರ, ತುಮ ಕೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ರೈತರು ಎಂಎಸ್‌ಪಿ ಅಡಿ ಕೊಬ್ಬರಿ ಮಾರಲು ಅವಕಾಶ ಕಲ್ಪಿಸಿದ್ದು ಇದರಲ್ಲಿ ದಕ್ಷಿಣ ಕನ್ನಡದಲ್ಲಿ ನೋಂದಣಿಗೆ ಯಾರೂ ಮುಂದೆ ಬಂದಿಲ್ಲ. ಇನ್ನುಳಿದ ಜಿಲ್ಲೆಗಳ ಪೈಕಿ ಹಾಸನದ ಜಾವಗಲ್, ಗಂಡಸಿ, ಅರಸೀಕೆರೆ, ಶ್ರವಣ ಬೆಳಗೊಳ, ಚನ್ನರಾಯಪಟ್ಟಣ ಮುಂತಾದವು ಕಡೆ ಸರಾಸರಿ ಅವಧಿ ಪರಿಗಣಿಸಿದರೆ ಹೆಚ್ಚು ನೋಂದಣಿ ನಡೆದಿದ್ದರಿಂದ ಈ 9 ಕೇಂದ್ರಗಳ ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.

ಕೊಬ್ಬರಿ ನೋಂದಣಿ: ತುಮಕೂರು ತೆಂಗು ಬೆಳೆಗಾರರಿಗೆ ಅನ್ಯಾಯ

ಪ್ರಕ್ರಿಯೆಯನ್ನೇರದ್ದುಪಡಿಸಿ ಹೊಸದಾಗಿ ನೋಂದಣಿ ಮಾಡಬೇಕು' ಎಂದು ರೈತರು ಆಗ್ರಹಿಸಿದ್ದಾರೆ. ಚಾಮರಾಜನಗರ ಕಡಿಮೆ, ತುಮಕೂರು ಅಧಿಕ: ಕೇಂದ್ರ ಸರ್ಕಾರವು ಕ್ವಿಂಟಲ್ ಉಂಡೆ ಕೊಬ್ಬರಿಗೆ 12 ಸಾವಿರ ರು. ಎಂಎಸ್‌ಪಿ ನಿಗದಿಪಡಿಸಿದ್ದು ರಾಜ್ಯ ಸರ್ಕಾರ 1500 ರು. ಸಹಾಯಧನ ನೀಡಲಿದೆ. ಪ್ರಸಕ್ತ ಸಾಲಿನಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ಅತಿ ಕಡಿಮೆ 129 ಕ್ವಿಂಟಲ್ ಕೊಬ್ಬರಿ ಮಾರಲು * ರೈತರು, ರಾಮನಗರದಲ್ಲಿ 129 ರೈತರು 1593 ಕ್ವಿಂಟಲ್, ಮೈಸೂರಿನ 399 ರೈತರು 5012 ಕ್ವಿಂಟಲ್‌ ಮಾರಾಟಕ್ಕೆ ನೋಂದಣಿ ಮಾಡಿಸಿದ್ದಾರೆ.

ತುಮಕೂರು ಜಿಲ್ಲೆಯಲ್ಲಿ ಅತಿ ಹೆಚ್ಚು 15,199 ರೈತರು 2.10ಲಕ್ಷ ಕ್ವಿಂಟಲ್ ಮಾರಾಟಕ್ಕೆ, ಹಾಸನ ಜಿಲ್ಲೆ 15,728 3 2,08,416 0 0 ಮಾರಾಟಕ್ಕೆನೋಂದಾಯಿಸಿದ್ದಾರೆ.ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ಕುಸಿದಿರುವುದರಿಂದ ರೈತರು ಎಂಎಸ್‌ಪಿ ಕೆಲ ಅಧಿಕಾರಿಗಳ ಅಕ್ರಮದಿಂದಾಗಿ ನೋಂದಣಿಗೆ ಅವಕಾಶ ಸಿಗದಿರುವುದಕ್ಕೆ ಕಿಡಿಕಾರಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಹೊಸ ವರ್ಷ ಸಂಭ್ರಮದಲ್ಲಿ ಕಾರು ಖರೀದಿಸುವವರಿಗೆ ಶಾಕ್, ಜನವರಿಯಿಂದ ರೆನಾಲ್ಟ್ ಬೆಲೆ ಏರಿಕೆ
ಮೈಸೂರು ಅರಮನೆ ಬಳಿ ಸ್ಫೋಟ ಪ್ರಕರಣ; ಸಾವಿನ ಸಂಖ್ಯೆ 3ಕ್ಕೆ ಏರಿಕೆ, ಸಲೀಂ ಮೇಲೆ ಅನುಮಾನ