ಕೊರೋನಾದಿಂದ ಸುರೇಶ್‌ ಕುಮಾರ್‌ ಆಸ್ಪತ್ರೆಗೆ ದಾಖಲು: ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದ ಸಚಿವರು

By Suvarna NewsFirst Published Oct 11, 2020, 9:35 AM IST
Highlights

ವೈದ್ಯರ ಸಲಹೆ ಮೇರೆಗೆ ನಾನು ಈಗ ಬೆಂಗಳೂರಿನಲ್ಲಿಯೇ ಗೆಳೆಯರೊಬ್ಬರ ಚಿಕ್ಕ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದೇನೆ. ವೈದ್ಯರ ನಿಗಾದಲ್ಲಿದ್ದೇನೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ. ಎಲ್ಲಾ ರೀತಿಯಿಂದಲೂ ನನ್ನ ಆರೋಗ್ಯ ಸುಧಾರಿಸುತ್ತಿದೆ ಎಂದು ತಿಳಿಸಿದ ಸಚಿವ ಎಸ್‌. ಸುರೇಶ್‌ ಕುಮಾರ್‌

ಬೆಂಗಳೂರು(ಅ.11): ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ಅವರಿಗೂ ಮಹಾಮಾರಿ ಕೊರೋನಾ ವೈರಸ್‌ ದೃಢಪಟ್ಟಿತ್ತು. ಹೀಗಾಗಿ ಸಚಿವರು ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು.  ಆದರೆ, ನಿನ್ನೆ(ಶನಿವಾರ) ಏಕಾಏಕಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 

ಈ ಬಗ್ಗೆ ಸ್ವತಃ ಸಚಿವ ಎಸ್‌. ಸುರೇಶ್‌ ಕುಮಾರ್‌ ಅವರೇ ಸಾಮಾಜಿಕ ಜಾಲತಾಣ ಪೇಸ್‌ಬುಕ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಕಳೆದ ಸೋಮವಾರದಿಂದ ನಾನು ಕೋವಿಡ್ 19 ವೈರಸ್ ಪೀಡಿತನಾಗಿ ಮನೆಯಲ್ಲಿಯೇ ಹೋಂ ಐಸೋಲೇಷನ್‌ನಲ್ಲಿದ್ದೆ.  ವೈದ್ಯರ ಸಲಹೆ ಮೇರೆಗೆ ನಾನು ಈಗ ಬೆಂಗಳೂರಿನಲ್ಲಿಯೇ ಗೆಳೆಯರೊಬ್ಬರ ಚಿಕ್ಕ  ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದೇನೆ. ವೈದ್ಯರ ನಿಗಾದಲ್ಲಿದ್ದೇನೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ. ಎಲ್ಲಾ ರೀತಿಯಿಂದಲೂ ನನ್ನ ಆರೋಗ್ಯ ಸುಧಾರಿಸುತ್ತಿದೆ ಎಂದು ತಿಳಿಸಿದ್ದಾರೆ. 

ಕೊರೋನಾ ಸೋಂಕಿನಿಂದ ಹೋಂ ಕ್ವಾರಂಟೈನ್‌ನಲ್ಲಿದ್ದ ಸಚಿವರು ದಿಢೀರ್ ಆಸ್ಪತ್ರೆಗೆ ಶಿಫ್ಟ್..!

 

ಅಕ್ಟೋಬರ್ 5ರಂದು ಕೊರೋನಾ ಪರೀಕ್ಷೆಗೆ ಒಳಗಾಗಿದ್ದ ಸಚಿವ ಎಸ್ ಸುರೇಶ್ ಕುಮಾರ್ ಅವರಿಗೂ ಪಾಸಿಟಿವ್ ದೃಢಪಟ್ಟಿತ್ತು. ಶನಿವಾರ ವೈದ್ಯರ ಸಲಹೆ ಮೇರೆಗೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 

click me!