'ಕೊರೋನಾ ಓಡಿಸಲು ಬಿಎಸ್‌ವೈ, ಪ್ರಧಾನಿ ಮೋದಿ ದಿಟ್ಟ ನಿರ್ಧಾರ'

By Suvarna NewsFirst Published Sep 23, 2020, 2:28 PM IST
Highlights

ದೇಶದಲ್ಲಿ ಕೊರೋನಾ ಮಹಾಮಾರಿ ಅಟ್ಟಹಾಸ ಇನ್ನೂ ಮುಂದುವರಿದಿದೆ. ಇದು ದೇಶದಿಂದ ತೊಲಗುವ ಲಕ್ಷಣಗಳು ಮಾತ್ರ ಕಾಣುತ್ತಿಲ್ಲ. ಆದರೆ ಈ ಬಗ್ಗೆ ಸರ್ಕಾರಗಳು ವಿವಿಧ ರೀತಿಯ ಕ್ರಮ ಕೈಗೊಳ್ಳುತ್ತಿವೆ.

ಬೆಂಗಳೂರು (ಸೆ.23): ದೇಶದಲ್ಲಿ ಕೊರೋನಾ ಹೆಚ್ಚಾದ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ನಮ್ಮ ಸಿಎಂ ಬಿ ಎಸ್ ಯಡಿಯೂರಪ್ಪ ದಿಟ್ಟ ನಿರ್ಧಾರ ತೆಗೆದುಕೊಂಡರು. ಇಂತಹ ಸಿಎಂ ಜೊತೆ ಕೆಲಸ ಮಾಡಲು ಹೆಮ್ಮೆ ಆಗುತ್ತದೆ ಖುಷಿ ಆಗುತ್ತದೆ ಎಂದರು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಹೇಳಿದರು. 

ದೇಶದಲ್ಲೇ ಮೊದಲ ಬಾರಿಗೆ ಏರ್‌ಪೋರ್ಟಲ್ಲಿ ಸ್ಕ್ರೀನಿಂಗ್ ಶುರು ಮಾಡಿದೆವು. ಕೆಲವು ದೇಶದ ಪ್ರಯಾಣಿಕರಿಗೆ ಮಾತ್ರ ಸ್ಕ್ರೀನಿಂಗ್ ಮಾಡಿದೆವು. ಎಲ್ಲಾ ದೇಶದ ಪ್ರಯಾಣಿಕರಿಗೆ ಸ್ಕ್ರೀನಿಂಗ್ ಮಾಡಿದ್ದರೆ ಈ ಪ್ರಮಾಣದಲ್ಲಿ ಕೊರೋನಾ ಏರುತ್ತಿರಲಿಲ್ಲ ಎಂದರು.

ಅಮೆರಿಕಾ, ಆಸ್ಟ್ರೇಲಿಯಾ, ಅಮೆರಿಕಾ ಸೇರಿದಂತೆ ಬೇರೆ ಬೇರೆಗಳಲ್ಲಿ ಜನಸಾಂದ್ರತೆ ವ್ಯತ್ಯಾಸ ಇದೆ. ನಾಗರಿಕ ತಿಳುವಳಿಕೆವಿಚಾರದಲ್ಲಿಯೂ ಕೂಡ ಸಾಕಷ್ಟು ವ್ಯತ್ಯಾಸ ಇದೆ ಎಂದು ಸುಧಾಕರ್ ಹೇಳಿದ್ದಾರೆ. 

ಬಾಯಾರಿಕೆ ಆದಾಗ ಬಾವಿ ತೋಡುವ ಸ್ಥಿತಿ ನಿರ್ಮಾಣವಾಗಿದೆ. ದೂರದೃಷ್ಟಿ ಇರಲಿಲ್ಲ ಎಂದು ವಿಪಕ್ಷಗಳು ಆರೋಪ ಮಾಡಿದವು. ಆದರೆ 73 ವರ್ಷಗಳಲ್ಲಿ ಯಾವ ರೀತಿ ದೂರದೃಷ್ಟಿ ಹೊಂದಿದ್ದರು ಎನ್ನುವುದು ಗೊತ್ತಿಲ್ಲ ಎಂದು ಸಚಿವ ಸುಧಾಕರ್ ಟಾಂಗ್ ನೀಡಿದರು.

ಖಾದರ್ ಪ್ರಶ್ನೆ
ಕೊರೋನಾ ರಾಜ್ಯಕ್ಕೆ ಕಾಲಿಟ್ಟು 6 ತಿಂಗಳುಗಳೇ ಕಳೆದಿವೆ. ಯಾವ ರೀತಿಯ ಕ್ರಮ ಕೈಗೊಂಡಿದ್ದೀರಿ ಎಂದು ಕೇಳಿದ್ದು, ಕಳೆದ 73 ವರ್ಷಗಳಿಂದ ಏನ್ ಮಾಡಿದ್ರಿ ಅಂತಾನೂ ಕೇಳ್ತೀನಿ ಎಂದು ಹೇಳಿದರು. 

ಎರಡು ಸಾವಿರ ಹಾಸಿಗೆಗಳಿದಿದ್ದನ್ನ, ಇವತ್ತು‌ 28 ಸಾವಿರ ಬೆಡ್‌ಗಳಷ್ಟು ಮಾಡಿದ್ದೇವೆ. 103 ವರ್ಷಗಳ ಹಿಂದೆ ‌ಇದಕ್ಕಿಂತ‌ ಭಯಾನಕವಾಗಿದ್ದ ಸ್ಪಾನಿಷ್ ಪ್ಲೂ ಬಂದಿತ್ತು.  ಇದೇ ರೀತಿಯ ಮಾರ್ಗಸೂಚಿ ನೀಡಲಾಗಿತ್ತು  ಎಂದು ಸುಧಾಕರ್ ಕೇಳಿದರು. 

ಅಪಾಯ ಮರೆಯುತ್ತಿರುವ ಕರ್ನಾಟಕ, ಏಪ್ರಿಲ್‌ಗೆ ಕೊರೋನಾ ತಾರಕಕ್ಕೆ! .

 ದೀಪ‌ ಹಚ್ಚೋದು, ಗಂಟೆ ಬಾರಿಸುವ ಮೂಲಕ 130 ಕೋಟಿ ಜನರ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿದರು. ಇದರಲ್ಲಿ ಅಪಹಾಸ್ಯ ಮಾಡುವುದು ಏನಿ ಎಂದು ಸಚಿವ ಸುಧಾಕರ್ ಹೇಳಿದಾಗ ಮಧ್ಯಪ್ರವೇಶಿಸಿದ ಕಾಂಗ್ರೆಸ್ ಮುಖಂಡ ಯು ಟಿ ಖಾದರ್ , ಇದನ್ನು ಅಪಹಾಸ್ಯ ಮಾಡಿಲ್ಲಾದರೆ ಚಪ್ಪಾಳೆ ತಟ್ಟಲು ಜನ ರಸ್ತೆಗೆ ಬಂದಿದ್ದರು. ಇದು ಲಾಕ್‌ ಡೌನಾ ಎಂದರು

ಇನ್ನು ದೀಪ ಬೆಳಗಲು ವೈಜ್ಞಾನಿಕ ಕಾರಣ ಏನು ಎಂದು ಕಾಂಗ್ರೆಸ್ ಮುಖಂಡ ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿದ್ದು, ಇದಕ್ಕೆ ದೀಪ ಬೆಳಗೋದು ಒಂದು ಸಂಸ್ಕೃತಿ ಎಂದು ಸುಧಾಕರ್ ಉತ್ತರಿಸಿದರು. ಅಲ್ಲದೇ ಜನಸಾಮಾನ್ಯರ ಕಷ್ಟಗಳನ್ನು ನೋಡಿದ್ದೆವು. ಶ್ರಮಿಕ ವರ್ಗದ ಪ್ರಾಣ ಉಳಿಸಲು ಲಾಕ್‌ ಡೌನ್ ಮಾಡಿದ್ದೆವು ಎಂದು ಸುಧಾಕರ್ ಉತ್ತರಿಸಿದರು.   

ಜೂನ್ ಕೊನೆಯಲ್ಲಿ ನಮ್ಮಲ್ಲಿ 15 ಸಾವಿರ ಕರೋನಾ ಕೇಸ್ ಇತ್ತು . ನಾವು ಭೌಗೋಳಿಕವಾಗಿ ಆರು ರಾಜ್ಯಗಳ ಮಧ್ಯ ಇದ್ದೇವೆ. ಆಂದ್ರ ತೆಲಂಗಾಣ ಮಹಾರಾಷ್ಟ್ರ ಅಕ್ಕ ಪಕ್ಕದ ರಾಜ್ಯಗಳಿಂದ ಬರುವ ನಮ್ಮವರನ್ನು ಅಲ್ಲೆ ಬಿಡೋಕೆ ಆಗತ್ತದೆಯೇ .ಅವರೆಲ್ಲರೂ ನಮ್ಮ‌ ಕನ್ನಡಿಗರು ಹೀಗಾಗಿ ನಾವು ಎಲ್ಲರನ್ನೂ‌ ರಾಜ್ಯಕ್ಕೆ ವಾಪಸ್ ಕರೆಸಿಕೊಂಡೆವು ಎಂದರು.  

click me!