ಅಪಾಯ ಮರೆಯುತ್ತಿರುವ ಕರ್ನಾಟಕ, ಏಪ್ರಿಲ್‌ಗೆ ಕೊರೋನಾ ತಾರಕಕ್ಕೆ!

By Kannadaprabha NewsFirst Published Sep 23, 2020, 10:02 AM IST
Highlights

ಇದೇ ಸ್ಥಿ ತಿ ಮುಂದುವರೆದರೆ ಏಪ್ರಿಲ್‌ಗೆ ರಾಜ್ಯದಲ್ಲಿ 25 ಲಕ್ಷ ಜನಕ್ಕೆ ಸೋಂಕು|  ನವೆಂಬರ್‌ಗೆ 10 ಲಕ್ಷ ಜನಕ್ಕೆ ಕೊರೋನಾ ಐಐಎಸ್‌ಸಿ ತಜ್ಞರ ವರದಿ|  ತಜ್ಞರ ಹಿಂದಿನ ಕೊರೋನಾ ವರದಿಗಳು ನಿಜವಾಗಿದ್ದವು  ಮೈಮರೆತರೆ ಅಪಾಯ ತಪ್ಪಿದ್ದಲ್ಲ
 

ಶ್ರೀಕಾಂತ್ ಎನ್. ಗೌಡಸಂದ್ರ

ಬೆಂಗಳೂರು(ಸೆ.23) ರಾಜ್ಯದಲ್ಲಿ ಮಹಾಮಾರಿ ಕೊರೋನಾ ಸೋಂಕು ತಾರಕಕ್ಕೇರುವುದು ಅಕ್ಟೋಬರ್- ನವೆಂಬರ್‌ನಲ್ಲಿ ಅಲ್ಲ. ಬದಲಿಗೆ 2021ರ ಮಾರ್ಚ್, ಏಪ್ರಿಲ್‌ಗೆ ಎಂಬ ಆಘಾತಕಾರಿ ವಿಷಯ ಐಐಎಸ್‌ಸಿ ಅಧ್ಯಯನದಲ್ಲಿ ಬಹಿರಂಗವಾಗಿದೆ. ಮುಂದಿನ ಮಾರ್ಚ್‌ವರೆಗೂ ಸೋಂಕು ಏರುಗತಿಯಲ್ಲೇ ಸಾಗಲಿದ್ದು, ಏಪ್ರಿಲ್ ಮೊದಲ ವಾರದಲ್ಲಿ 25.7 ಲಕ್ಷ ಮುಟ್ಟಲಿದೆ. ಅದೇ ವೇಳೆ ರಾಜ್ಯದಲ್ಲಿ ಸುಮಾರು 25 ಸಾವಿರ ಮಂದಿ ಸೋಂಕಿಗೆ ಬಲಿಯಾಗಲಿದ್ದಾರೆ ಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ವರದಿಯಲ್ಲಿ ಅಂದಾಜು ಮಾಡಲಾಗಿದೆ.

"

ವಿಧಾನಸೌಧ​ದಲ್ಲಿ ಕೊರೋನಾ ಪರೀಕ್ಷೆ: 110 ಮಂದಿಗೆ ಪಾಸಿಟಿವ್‌!

ಐಐಎಸ್‌ಸಿಯ ಈ ಅಧ್ಯಯನ ವರದಿ ಪ್ರಕಾರ ಏ.4ರ ವೇಳೆಗೆ ರಾಜ್ಯದಲ್ಲಿ ಬರೋಬ್ಬರಿ 25.7 ಲಕ್ಷ ಮಂದಿಗೆ ಸೋಂಕು ದೃಢಪಡಲಿದೆ. ಅಲ್ಲದೆ, 24,960 ಮಂದಿ ಸೋಂಕಿಗೆ ಬಲಿ ಯಾಗಲಿದ್ದಾರೆ. ಅಲ್ಲದೆ, ಬರುವ ನವೆಂಬರ್ ಮೊದಲ ವಾರದಲ್ಲಿ ರಾಜ್ಯದ ಒಟ್ಟು ಸೋಂಕು 10 ಲಕ್ಷ ಗಡಿ ದಾಟಲಿದೆ. 5 ಮಾದರಿಯ ಅಧ್ಯಯನ: ಐಐಎಸ್ಸಿಯು ಒಟ್ಟು ಐದು ಮಾದರಿಯ ಸಾಧ್ಯತೆಗಳನ್ನು ಮುಂದಿಟ್ಟುಕೊಂಡು ಅಧ್ಯಯನ ನಡೆಸಿದೆ.

ಕೊರೋನಾ ಸೋಂಕಿಗೆ ಜನವರಿ 1ರೊಳಗಾಗಿ ವ್ಯಾಕ್ಸಿನ್ ದೊರೆಯದಿದ್ದರೆ ಮಾರ್ಚ್ ಕೊನೆಯ ವಾರದಲ್ಲಿ ಸೋಂಕು ತಾರಕ ಸ್ಥಿತಿ ಮುಟ್ಟಲಿದೆ. ಒಂದು ವೇಳೆ ಜ.1ರ ವೇಳೆಗೆ ವ್ಯಾಕ್ಸಿನ್ ಲಭ್ಯವಾದರೆ ಫೆಬ್ರುವರಿ ಮೊದಲ ವಾರದ ವೇಳೆಗೆ ಗರಿಷ್ಠ ಸ್ಥಿತಿಗೆ ತಲುಪಲಿದೆ ಎಂದು ಅಂದಾಜಿಸಲಾಗಿದೆ. ಆತಂಕಕಾರಿ ವಿಷಯವೆಂದರೆ, ಜ.1ರ ವೇಳೆಗೆ ಲಸಿಕೆ ದೊರೆಯದಿದ್ದರೆ ಏಪ್ರಿಲ್ 4ರ ವೇಳೆಗೆ ಒಟ್ಟು 25.7 ಲಕ್ಷ ಮಂದಿಗೆ ರಾಜ್ಯದಲ್ಲಿ ಸೋಂಕು ಉಂಟಾಗಲಿದೆ. ಈ ಪೈಕಿ 24.6 ಲಕ್ಷ ಮಂದಿ ಗುಣಮುಖರಾಗಲಿದ್ದು 24,960 ಮಂದಿ ಸಾವಿಗೀಡಾಗಲಿದ್ದಾರೆ. ಈ ವೇಳೆಗೆ 84,780 ಸಕ್ರಿಯ ಪ್ರಕರಣಗಳು ವರದಿಯಾಗಲಿವೆ ಎಂದು ಅಂದಾಜಿಸಲಾಗಿದೆ.

ಡಿಸಿಎಂ ಕಾರಜೋಳಗೆ ಕೊರೋನಾ, ಆಸ್ಪ​ತ್ರೆಗೆ ದಾಖ​ಲು

ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಕಂಪ್ಯೂಟೇಷನಲ್ ಅಂಡ್ ಡೇಟಾ ಸೈನ್‌ಸ್ ವಿಭಾಗದ ಮುಖ್ಯಸ್ಥರಾಗಿರುವ ಪ್ರೊ. ಶಶಿಕುಮಾರ್ ಗಣೇಶನ್ ನೇತೃತ್ವದ ತಂಡ, ಗಣಿತದ ಮಾದರಿಯಲ್ಲಿ ದೇಶ /ರಾಜ್ಯವಾರು ಸೋಂಕು ದೃಢ ಪ್ರಕರಣ, ಗುಣಮುಖ, ಸಕ್ರಿಯ, ಸಾವಿನ ಪ್ರಕರಣ ಆಧಾರದ ಮೇಲೆ ಮಲ್ಟಿ ಡೈಮನ್ಷನಲ್ ಪಿಡಿಇ (ಪಾಷಿರ್ಯಲ್ ಡಿಫರೆನ್ಸಿಯಲ್ ಈಕ್ವೇಷನ್) ಮಾದರಿಯಲ್ಲಿ ಅಂದಾಜು ಮಾಡಿದ್ದಾರೆ.

5 ಸಾಧ್ಯತೆಗಳು: ಗಣಿತ ಹಾಗೂ ಸೆರೋ ಅಧ್ಯಯನ ಮಾದರಿಯನ್ನು ಒಳಗೊಂಡ ಅಧ್ಯಯನಗಳನ್ನು ಮೇ 3, ಮೇ 28, ಜೂನ್ 18, ಆಗಸ್‌ಟ್ 6 ಹಾಗೂ ಸೆ.19 ರಂದು ಕ್ರಮವಾಗಿ ನಡೆಸಲಾಗಿದೆ. ಸೆ.19ರ ಅಧ್ಯ ಯನದ ಪ್ರಕಾರ ಒಟ್ಟು ಐದು ಸಾಧ್ಯತೆಗಳನ್ನು ಅಂದಾಜಿಸಲಾಗಿದೆ.

* ಸಾಧ್ಯತೆ 1: ಪ್ರಸ್ತುತ ಘೋಷಿತ ಸೋಂಕಿತರ ಸಂಖ್ಯೆಗಿಂತ ವಾಸ್ತವ ಸೋಂಕಿತರ ಸಂಖ್ಯೆ 10ಪಟ್ಟು ಹೆಚ್ಚು ಇರುವ ಸಾಧ್ಯತೆಯಿದೆ. ಈ ಸಾಧ್ಯತೆ ಆಧಾರದ ಮೇಲೆ ಲೆಕ್ಕಾಚಾರ ಹಾಕಿದಾಗ ಏ.4ರ ವೇಳೆಗೆ ರಾಜ್ಯದಲ್ಲಿ 25.7 ಲಕ್ಷ ಸೋಂಕಿತರಾಗಿರುತ್ತಾರೆ ಹಾಗೂ 24,960 ಮಂದಿ ಬಲಿ ಸಾಧ್ಯತೆ.

ಕರ್ನಾಟಕ ಸೇರಿ 7 ಸಿಎಂಗಳ ಜತೆ ಮೋದಿ ಸಭೆ!

* ಸಾಧ್ಯತೆ 2: 2ನೇ ಸಾಧ್ಯತೆಯಲ್ಲಿ ಜನವರಿ 1, 2021ರ ವೇಳೆಗೆ ಲಸಿಕೆ ಲಭಿಸಿದರೆ ಸೋಂಕು ಪ್ರಮಾಣ ಎಷ್ಟಾಗಲಿದೆ ಎಂಬುದನ್ನು ಅಂದಾಜಿಸಲಾ ಗಿದೆ. ಇದರ ಪ್ರಕಾರ ಏ.4ರ ವೇಳೆಗೆ 22.9 ಲಕ್ಷ ಮಂದಿಗೆ ಸೋಂಕು ತಗುಲಿ 22.38 ಲಕ್ಷ ಮಂದಿಗೆ ಗುಣಮುಖವಾಗಿರಲಿದೆ.

* ಸಾಧ್ಯತೆ 3: ವಾಸ್ತವವಾಗಿ ಸೋಂಕಿತರಾದವರಲ್ಲಿ ಶೇ.10 ಮಂದಿ ಸೋಂಕಿತರು ಮಾತ್ರ ಈವರೆಗೆ ಪತ್ತೆಯಾಗಿದ್ದಾರೆ ಎಂದು ಭಾವಿಸಿದರೆ ಹಾಗೂ ಏಪ್ರಿಲ್ 1ರ ವೇಳೆಗೆ ವ್ಯಾಕ್ಸಿನ್ ದೊರೆತರೆ 25.7 ಲಕ್ಷ ಮಂದಿಗೆ ಸೋಂಕು ಉಂಟಾಗಲಿದೆ. 24.6 ಲಕ್ಷ ಮಂದಿಗೆ ಗುಣಮುಖವಾಗಿ 24,960 ಮಂದಿ ಬಲಿಯಾಗಲಿದ್ದಾರೆ.

* ಸಾಧ್ಯತೆ 4: ಒಟ್ಟು ವಾಸ್ತವ ಸೋಂಕಿತರಲ್ಲಿ ಶೇ.5 ರಷ್ಟು ಮಂದಿ ಸೋಂಕಿತರು ಮಾತ್ರ ಈವರೆಗೆ ಪತ್ತೆಯಾಗಿದ್ದಾರೆ ಎಂದು ಭಾವಿಸಿದರೆ ಏ.4ರ ವೇಳೆಗೆ 13.7 ಲಕ್ಷ ಮಂದಿಗೆ ಸೋಂಕು ಉಂಟಾಗಲಿದೆ. ಈ ಪೈಕಿ 13.3 ಲಕ್ಷ ಮಂದಿ ಗುಣಮುಖ, 15,270 ಮಂದಿ ಮೃತಪಡಲಿದ್ದಾರೆ.

ಗರಿಷ್ಠ ಕೋವಿಡ್-19 ಸೋಂಕಿತರ ಗುಣಮುಖ ರಾಷ್ಟ್ರಗಳ ಪಟ್ಟಿ ಬಹಿರಂಗ; ಭಾರತೀಯರಿಗೆ ಸಿಹಿ ಸುದ್ದಿ!

* ಸಾಧ್ಯತೆ 5: ಈವರೆಗೆ ಶೇ.5 ರಷ್ಟು ಸೋಂಕಿತರು ಮಾತ್ರ ಪತ್ತೆಯಾಗಿದ್ದಾರೆ. ಜ.1, 2021ರ ವೇಳೆಗೆ ವ್ಯಾಕ್ಸಿನ್ ದೊರೆತಿದೆ ಎಂದು ಭಾವಿಸಿದರೆ ಏ.4ರ ವೇಳೆಗೆ 12.9 ಲಕ್ಷ ಜನಕ್ಕೆ ಸೋಂಕು ಉಂಟಾಗಲಿದೆ. ಈ ಪೈಕಿ 12.7 ಲಕ್ಷ ಮಂದಿಗೆ ಗುಣಮುಖ, 14,759 ಜನ ಮೃತಪಡಲಿದ್ದಾರೆ.

ನವೆಂಬರ್ ಮೊದಲ ವಾರಕ್ಕೆ 10 ಲಕ್ಷ ಮಂದಿಗೆ ಸೋಂಕು! 

ಐಐಎಸ್‌ಸಿ ಅಧ್ಯಯನ ವರದಿ ಪ್ರಕಾರ ನವೆಂಬರ್ 5ರ ವೇಳೆಗೆ 10.4 ಲಕ್ಷ ಮಂದಿ ಜನರಿಗೆ ರಾಜ್ಯದಲ್ಲಿ ಸೋಂಕು ಉಂಟಾಗಲಿದ್ದು, 11,620 ಮಂದಿ ಸಾವನ್ನಪ್ಪಲಿದ್ದಾರೆ. ಇನ್ನು ರಾಜ್ಯ ಕೊರೋನಾ ಟಾಸ್ಕ್ ಫೋರ್ಸ್ ಸಹ ದ್ವಿಗುಣ ದರದ ಆಧಾರದ ಮೇಲೆ ಸೋಂಕು ಅಂದಾಜು ಮಾಡಿದ್ದು, ನವೆಂಬರ್ 10ರೊಳಗಾಗಿ ರಾಜ್ಯದಲ್ಲಿ ಸೋಂಕು 10 ಲಕ್ಷದ ಗಡಿ ದಾಟಲಿದೆ ಎಂದು ಅಂದಾಜಿಸಿದೆ.

ಕೊರೋನಾ ವಾರಿಯರ್ಸ್‌ ಮೇಲೆ ಹಲ್ಲೆ ಮಾಡಿದ್ರೆ ಸೀದಾ ಜೈಲು, ನೋ ಬೇಲ್!

ಸುರಕ್ಷತೆ ನಿಯಮ ಪಾಲಿಸುತ್ತಿಲ್ಲ ಜನ

- ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್‌ಕ್ ಧರಿಸಬೇಕು. 

- ಸಾಮಾಜಿಕ ಅಂತರ ಕಾಪಾಡಬೇಕೆಂಬ ನಿಯಮ ಬಹುತೇಕ ಜನರಿಂದ ಉಲ್ಲಂಘನೆ. 

- ಹಲವಾರು ಪ್ರತಿಭಟನೆಗಳು, ಧರಣಿ, ರ್ಯಾಲಿಗಳು ದೇಶದಲ್ಲಿ ನಡೆಯುತ್ತಿವೆ. ಇಲ್ಲಿ ಸಾಮಾಜಿಕ ಅಂತರ ಮಾಯವಾಗಿದೆ. ಮಾಸ್ಕ್ ನಾಪತ್ತೆ. 

- ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಏರಿಕೆಯಾಗಿದೆ. ಹಾಗೆಯೇ ಸಾಮಾಜಿಕ ಅಂತರ ಕಣ್ಮರೆಯಾಗಿದೆ. 

- ಮಾರುಕಟ್ಟೆಗಳಲ್ಲಿ ಲಾಕ್‌ಡೌನ್ ಗಿಂತ ಹಿಂದಿನ ಸ್ಥಿತಿ ಕಾಣುತ್ತಿದೆ. ಜನಜಂಗುಳಿ ಸಾಮಾನ್ಯವಾಗಿದೆ. 

- ಆರೋಗ್ಯ ನಿಯಮ ಇಲ್ಲಿ ಲೆಕ್ಕಕ್ಕಿಲ್ಲ ಇವೆಲ್ಲದರ ಪರಿಣಾಮ ಸೋಂಕು ವೇಗವಾಗಿ ಹರಡುತ್ತಿದೆ. ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ.

click me!