
ಸಚಿವ ಶಿವರಾಜ್ ತಂಗಡಗಿಗೆ ಎದೆನೋವು:
ತುಮಕೂರು: ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರಿಗೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆ ಅವರನ್ನು ತುಮಕೂರಿನ ಸಿದ್ದಗಂಗಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊಪ್ಪಳದಿಂದ ಬೆಂಗಳೂರಿಗೆ ತೆರಳುವ ಮಾರ್ಗ ಮಧ್ಯೆ ಸಚಿವರಿಗೆ ಎದೆನೋವು ಕಾಣಿಸಿಕೊಂಡಿದ್ದು, ಕೂಡಲೇ ಅವರನ್ನು ಮಾರ್ಗಮಧ್ಯೆ ಸಿಗುವ ತುಮಕೂರಿನ ಸಿದ್ದಗಂಗಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ತುಮಕೂರಿನ ಸಿದ್ದಗಂಗಾ ಆಸ್ಪತ್ರೆಯ ಎಮರ್ಜೆನ್ಸಿಯಲ್ಲಿ ಸಚಿವ ಶಿವರಾಜ್ ತಂಗಡಗಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ: ಗಂಡನ ಸಾವನ್ನು ಆತ್ಮ*ಹತ್ಯೆ ಎಂದು ಬಿಂಬಿಸಿದ ಪತ್ನಿ: ಸಿಸಿಟಿವಿಯಿಂದ ಸಿಕ್ತು ಪ್ರಕರಣಕ್ಕೆ ರೋಚಕ ಟ್ವಿಸ್ಟ್
ತುಮಕೂರಿನ ಸಿದ್ದಗಂಗಾ ಆಸ್ಪತ್ರೆಗೆ ದಾಖಲು
ಸಚಿವರು ಕಾರು ಚಾಲಕ ಹಾಗೂ ಗನ್ ಮ್ಯಾನ್ ಜೊತೆ ಕೊಪ್ಪಳದಿಂದ ಬೆಂಗಳೂರಿಗೆ ತೆರಳುತ್ತಿದ್ದಾಗ ಘಟನೆ ನಡೆದಿದೆ. ಮಾರ್ಗಮಧ್ಯೆ ಸಿಗುವ ತುಮಕೂರು ನಗರದ ಬಿಹೆಚ್ ರಸ್ತೆಯಲ್ಲಿರುವ ಸಿದ್ದಗಂಗಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ರಾತ್ರಿ 10 ಗಂಟೆ ಸುಮಾರಿಗೆ ಸಚಿವರಿಗೆ ಎದೆನೋವು ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಬೆಕ್ಕು ಸಾಕೋದು ಬೇಡ ಎಂದಿದ್ದಕ್ಕೆ ಕೆಲ ದಿನಗಳಲ್ಲಿ ಡಾಕ್ಟರ್ ಆಗೋಳಿದ್ದ MBBS ವಿದ್ಯಾರ್ಥಿನಿ ಸಾವಿಗೆ ಶರಣು
ಈ ಬಗ್ಗೆ ಸಚಿವ ಶಿವರಾಜ್ ತಂಗಡಗಿಗೆ ಚಿಕಿತ್ಸೆ ಕೊಟ್ಟ ಸಿದ್ದಗಂಗಾ ಆಸ್ಪತ್ರೆ ವೈದ್ಯ ಡಾ ಶರತ್ ಮಾಹಿತಿ ನೀಡಿದ್ದು, ಗಳೂರಿಗೆ ಹೋಗುವಾಗ ಶಿರಾ ದಾಟಿದಾಗ, 15ರಿಂದ 20 ನಿಮಿಷದಿಂದ ಎದೆನೋವು ಬರ್ತಿತ್ತು ಅಂತ ಆಸ್ಪತ್ರೆಗೆ ಬಂದಿದ್ರು. ಸಿಜಿ, ಎಕೋ, ಹೃದಯ ಸಂಬಂಧಿ ಟೆಸ್ಟ್ ಗಳನ್ನ ಮಾಡಿದ್ವಿ. ಹೃದಯ ಸಂಬಂಧಿ ಸಮಸ್ಯೆ ಯಾವ್ದು ಇಲ್ಲ ಅಂತ ಗೊತ್ತಾಯ್ತು. ಅವರಿಗೆ ನೋವು ಕಡಿಮೆ ಆದ ಮೇಲೆ ಬೆಂಗಳೂರು ಕಡೆಗೆ ಹೊರಟ್ಟಿದ್ದಾರೆ. ಎದೆನೋವು ಬಂದಾಗ ನಾವು ನೋಡೋದು ಇಸಿಜಿ, ಎಕೋ, ಇಸಿಜಿ ಮಾಡಿದ್ವಿ ಇಸಿಜಿ ನಾರ್ಮಲ್ ಇತ್ತು. ಎಕೋ ಮಾಡಿದ್ವಿ ಅದು ನಾರ್ಮಲ್ ಇತ್ತು. ಬ್ಲಡ್ ಟೆಸ್ಟ್‌ಗೆ ತಗೊಂಡಿದಿವಿ, ಅದೆಲ್ಲಾ ನಾರ್ಮಲ್ ಬರುತ್ತೆ ಅಂತ ಅಂದುಕೊಂಡಿದ್ದೀವಿ. ಅವರು ಈಗ ನಾರ್ಮಲ್ ಆಗಿ ಬೆಂಗಳೂರಿಗೆ ಹೊರಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.
ಚಿಕಿತ್ಸೆ ಬಳಿಕ ಸಚಿವ ಶಿವರಾಜ್ ತಂಗಡಗಿ ಪ್ರತಿಕ್ರಿಯಿಸಿದ್ದು, ಎಂದು ನನಗೆ ಆ ರೀತಿಯ ನೋವಿನ ಫೀಲ್ ಎಂದೂ ಆಗಿರಲಿಲ್ಲ. ನನ್ನ ಫ್ಯಾಮಿಲಿ ಡಾಕ್ಟರ್ ರೊಂದಿಗೆ ಮಾತನಾಡಿದೆ. ಸಿದ್ದಗಂಗಾ ಆಸ್ಪತ್ರೆಯಲ್ಲಿ ಶರತ್ ಅಂತ ವೈದ್ಯರಿದ್ದಾರೆ, ಅವರೊಂದಿಗೆ ಮಾತನಾಡುತ್ತೇನೆ ಚಿಕಿತ್ಸೆ ತೆಗೆದುಕೊಳ್ಳಿ ಅಂತ ಹೇಳಿದ್ರು. ಬಂದು ಇಸಿಜಿ ಮಾಡಿಸಿದೆ.ಇಕೋ ಮಾಡಿದ್ರು ಯಾವುದೇ ತೊಂದರೆ ಇಲ್ಲ ಅಂದರು. ತೊಂದರೆ ಇಲ್ಲ ಅಂದ್ಮೇಲೆ ನಾನು ಹೊರಟ್ಟಿದ್ದೇನೆ.
ದಯಮಾಡಿ ನನ್ನ ಕ್ಷೇತ್ರದ ಜನರಿಗೆ ಸ್ನೇಹಿತರಿಗೆ ತಿಳಿಸುತ್ತೇನೆ. ಅಂತ ಸಮಸ್ಯೆಯಿಲ್ಲ, ತೊಂದರೆಯಿಲ್ಲ ಡಾಕ್ಟರ್ ಸಲಹೆ ತೆಗೆದುಕೊಂಡು ಹೊರಟ್ಟಿದ್ದೇನೆ. ಬೆಂಗಳೂರಿಗೆ ಹೋಗುತ್ತಿದ್ದೇನೆ. ನಾನು ಊರಿನಲ್ಲಿದ್ದೆ ಬೆಳಗ್ಗೆಯಿಂದ ನಿರಂತರ ಕಾರ್ಯಕ್ರಮ ಇತ್ತು, ಹಾಗಾಗಿ ತಡವಾಗಿ ಊಟ ಮಾಡಿದೆ. ಅಸಿಡಿಟಿಯಿಂದ ಈ ರೀತಿಯಾಗಿದೆ. ಟ್ಯಾಬ್ಲೆಟ್ ತಗೊಂಡಿದ್ದೇನೆ. ಆರಾಮ ಇದ್ದೀನಿ, ನನಗೆ ಈ ರೀತಿ ಎಂದು ಕಾಣಿಸಿಕೊಂಡಿಲ್ಲ,ಹೀಗಾಗಿ ಮೊದಲ ಸಲ ಈ ರೀತಿ ಆಗಿದ್ದಕ್ಕೆ ಸ್ವಲ್ಪ ಗಾಬರಿ ಅದೆ. ಡಾಕ್ಟರ್ ಏನು ತೊಂದರೆ ಇಲ್ಲ ಅಂತ ಹೇಳಿದ್ದಾರೆ. ಈಗ ನೋವೇನು ಇಲ್ಲ ಎಂದು ತಂಗಡಗಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ