ಜಾತಿ ಗಣತಿ ವರದಿಗೆ ಸರ್ಕಾರ ಬದ್ಧ; 29ರೊಳಗೆ ವರದಿಸಲ್ಲಿಕೆ ನಿರೀಕ್ಷೆ: ಸಚಿವ ತಂಗಡಗಿ

By Kannadaprabha NewsFirst Published Feb 24, 2024, 11:09 AM IST
Highlights

ಪರಿಷ್ಕೃತ ಜಾತಿ ಗಣತಿ ವರದಿ ಸ್ವೀಕಾರಕ್ಕೆ ಸರ್ಕಾರ ಬದ್ಧವಾಗಿದ್ದು, ವರದಿ ಸಲ್ಲಿಕೆಯಾದ ನಂತರ ಸಂಪುಟದಲ್ಲಿ ಚರ್ಚಿಸಿ, ನ್ಯೂನತೆಗಳಿದ್ದರೆ ಸರಿಪಡಿಸಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.

ವಿಧಾನ ಪರಿಷತ್‌ (ಫೆ.24): ಪರಿಷ್ಕೃತ ಜಾತಿ ಗಣತಿ ವರದಿ ಸ್ವೀಕಾರಕ್ಕೆ ಸರ್ಕಾರ ಬದ್ಧವಾಗಿದ್ದು, ವರದಿ ಸಲ್ಲಿಕೆಯಾದ ನಂತರ ಸಂಪುಟದಲ್ಲಿ ಚರ್ಚಿಸಿ, ನ್ಯೂನತೆಗಳಿದ್ದರೆ ಸರಿಪಡಿಸಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.

ಶುಕ್ರವಾರ ಬಿಜೆಪಿಯ ಕೆ.ಪಿ. ನಂಜುಂಡಿ ವಿಶ್ವಕರ್ಮ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಸ್ತುತ ಕೆ. ಜಯಪ್ರಕಾಶ್‌ ಹೆಗ್ಡೆ ನೇತೃತ್ವದ ಆಯೋಗದ ಕಾರ್ಯಾವಧಿ ಈ ತಿಂಗಳು 29ಕ್ಕೆ ಕೊನೆಗೊಳ್ಳಲಿದೆ. ಅಷ್ಟರೊಳಗೆ ವರದಿ ಸಲ್ಲಿಕೆ ನಿರೀಕ್ಷಿಸಲಾಗಿದೆ. ಆಯೋಗವು ಎಚ್‌. ಕಾಂತರಾಜ್ ನೇತೃತ್ವದ ಆಯೋಗ ಸಿದ್ಧಪಡಿಸಿದ ವರದಿಯ ದತ್ತಾಂಶಗಳನ್ನು ಬಳಸಿಕೊಂಡು ಪರಿಷ್ಕೃತ ವರದಿ ಸಿದ್ಧಪಡಿಸುತ್ತಿದೆ. ಸರ್ಕಾರ ವರದಿ ಸ್ವೀಕರಿಸಿದ ನಂತರ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್‌ ಹೆಗ್ಡೆ ಅವಧಿ ವಿಸ್ತರಣೆ: ಸರ್ಕಾರದ ಕೈ ಸೇರಲಿದೆ ಜಾತಿಗಣತಿ ವರದಿ

ಇದಕ್ಕೂ ಮುನ್ನ ಮಾತನಾಡಿದ ನಂಜುಂಡಿ ವಿಶ್ವಕರ್ಮ ಅವರು, ರಾಜ್ಯದಲ್ಲಿ ಪರಿಶಿಷ್ಟರ ನಂತರ ಹಿಂದುಳಿದ ವರ್ಗಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನೂರಾರು ಜಾತಿ, ಉಪಜಾತಿಗಳು ಇವೆ. ಆದರೆ ಯಾವ ಜಾತಿಯ ಜನರು ಎಷ್ಟು ಸಂಖ್ಯೆಯಲ್ಲಿ ಇದ್ದಾರೆ ಎಂಬುದು ನಿಖರವಾಗಿ ಗೊತ್ತಿಲ್ಲ. ರಾಜ್ಯದಲ್ಲಿ 40 ಲಕ್ಷ ವಿಶ್ವಕರ್ಮ ಸಮಾಜದವರಿದ್ದಾರೆಂದು ನಾವು ಹೇಳುತ್ತೇವೆ. ಆದರೆ ಸರ್ಕಾರದ ಪ್ರಕಾರ ಆರೇಳು ಲಕ್ಷ ಇದ್ದೇವೆ. ವಾಸ್ತವವಾಗಿ ನಮಗೆ ವರದಿ ಬೇಡ. ಆದರೆ ಸಮಾಜದ ಸಂಖ್ಯೆ ಎಷ್ಟಿದೆ ಎಂದು ಗೊತ್ತಾದರೆ, ಸಂಖ್ಯೆಗೆ ಅನುಗುಣವಾಗಿ ಸೌಲಭ್ಯ ಕೊಡುವಂತೆ ಸರ್ಕಾರದ ಮುಂದೆ ಕೇಳಲು ಆಗುತ್ತದೆ ಎಂದರು.

click me!