ಕೊಟ್ಟ ಮಾತು ಉಳಿಸಿಕೊಂಡ ಸಂಸದ ಪ್ರತಾಪ್ ಸಿಂಹ; ಬಂತು ಮೈಸೂರು-ರಾಮೇಶ್ವರಂ ಟ್ರೈನ್!

Published : Feb 24, 2024, 10:33 AM IST
ಕೊಟ್ಟ ಮಾತು ಉಳಿಸಿಕೊಂಡ ಸಂಸದ ಪ್ರತಾಪ್ ಸಿಂಹ; ಬಂತು ಮೈಸೂರು-ರಾಮೇಶ್ವರಂ ಟ್ರೈನ್!

ಸಾರಾಂಶ

2014ಕ್ಕೂ ಮೊದಲು ಮೈಸೂರಿಗೆ ಒಂದೂ ರೈಲು ಬಂದಿಲ್ಲ. ಆದರೆ ಪ್ರತಾಪ್ ಸಿಂಹ ಲೋಕಸಭಾ ಚುನಾವಣೆ ಗೆದ್ದು ಸಂಸದರ ಬಳಿಕ ಕೇವಲ ಹತ್ತು ವರ್ಷಗಳಲ್ಲಿ 11 ರೈಲು ತಂದಿರುವುದು ನಿಜಕ್ಕೂ ಸಾಧನೆ. ಒಬ್ಬ ಸಂಸದ ತನ್ನ ಕ್ಷೇತ್ರವನ್ನು ಹೇಗೆ ಅಭಿವೃದ್ಧಿ ಮಾಡಬಹುದು ಎಂಬುದುಕ್ಕೆ ಸಂಸದ ಪ್ರತಾಪ್ ಸಿಂಹ ಉತ್ತಮ ನಿದರ್ಶನ. ಇದೀಗ 12 ನೇ ರೈಲು ಮೈಸೂರು-ರಾಮೇಶ್ವರಂ ನಡುವೆ ಓಡಲು ಸಿದ್ಧವಾಗಿದೆ!

ಮೈಸೂರು (ಫೆ.24): 2014ಕ್ಕೂ ಮೊದಲು ಮೈಸೂರಿಗೆ ಒಂದೂ ರೈಲು ಬಂದಿಲ್ಲ. ಆದರೆ ಪ್ರತಾಪ್ ಸಿಂಹ ಲೋಕಸಭಾ ಚುನಾವಣೆ ಗೆದ್ದು ಸಂಸದರ ಬಳಿಕ ಕೇವಲ ಹತ್ತು ವರ್ಷಗಳಲ್ಲಿ 11 ರೈಲು ತಂದಿರುವುದು ನಿಜಕ್ಕೂ ಸಾಧನೆ. ಒಬ್ಬ ಸಂಸದ ತನ್ನ ಕ್ಷೇತ್ರವನ್ನು ಹೇಗೆ ಅಭಿವೃದ್ಧಿ ಮಾಡಬಹುದು ಎಂಬುದುಕ್ಕೆ ಪ್ರತಾಪ್ ಸಿಂಹ ಉತ್ತಮ ನಿದರ್ಶನ.

ಮೈಸೂರಿಗೆ 12ನೇ ರೈಲು ಮೈಸೂರು-ರಾಮೇಶ್ವರಂ ತರುತ್ತೇನೆ ಎಂದು ಮಾತು ಕೊಟ್ಟಿದ್ದರು. ಇದೀಗ ಜನರಿಗೆ ಕೊಟ್ಟ ಮಾತಿನಂತೆ ಮೈಸೂರಿಗೆ ರೈಲು ಬಂದಿದೆ. ಈ ಬಗ್ಗೆ ಟ್ವಿಟರ್ ಎಕ್ಸ್ ನಲ್ಲಿ ಪೊಸ್ಟ್‌ ಮಾಡಿರುವ ಸಂಸದ ಪ್ರತಾಪ್ ಸಿಂಹ,  ಮೈಸೂರು ರಾಮೇಶ್ವರಂ ಚುಕುಬುಕು ರೈಲು ಬಂದೇ ಬಿಡ್ತು ರಾಮೇಶ್ವರಂಗೆ ಹೋಗೋಣ ರೆಡಿಯಾಗಿ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಅಲ್ಲದೇ ಮೈಸೂರಿಗೆ ಹನ್ನೆರಡನೇ ರೈಲು ಕೊಟ್ಟಿರುವ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

10 ವರ್ಷದಲ್ಲಿ ಕರ್ನಾಟಕಕ್ಕೆ 11 ರೈಲು ತಂದಿದ್ದೇನೆ; ಮೈಸೂರು-ರಾಮೇಶ್ವರಂ 12ನೇ ರೈಲು ಬರಲಿದೆ: ಸಂಸದ ಪ್ರತಾಪ್ ಸಿಂಹ ಘೋಷಣೆ!

ಅಯೋಧ್ಯೆ ರಾಮಮಂದಿರ ಉದ್ಘಾಟನೆ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಮೇಶ್ವರಂಗೆ ಸಮುದ್ರದಲ್ಲಿ ಮುಳುಗೆದ್ದು ದೇವರ ದರ್ಶನ ಪಡೆದಿದ್ದು ಭಾರೀ ವೈರಲ್ ಆಗಿತ್ತು. ಅಂದು ಸಂಸದ ಪ್ರತಾಪ್ ಸಿಂಹ ಟ್ವಿಟರ್ ಎಕ್ಸ್‌ನಲ್ಲಿ ನರೇಂದ್ರ ಮೋದಿಯವರ ಫೋಟೊ ಹಂಚಿಕೊಂಡು, 'ನಾವು ಪ್ರಧಾನಿ ಮೋದಿಯವರಂತೆ ರಾಮೇಶ್ವರಂಗೆ ಹೋಗಿ ಸಮುದ್ರದಲ್ಲಿ ಮುಳುಗೆದ್ದು ದೇವರ ದರ್ಶನ ಪಡೆಯುವಂತಿದ್ದರೆ, ಮೈಸೂರು-ರಾಮೇಶ್ವರಂಗೆ ಒಂದು ಟ್ರೈನ್‌ ಇದ್ದಿದ್ರೆ ಚೆನ್ನಾಗಿತ್ತು ಅನ್ನಿಸುತ್ತಿದೆಯೇ?' ಎಂದು ಪ್ರಶ್ನಿಸಿ ಪೋಸ್ಟ್ ಮಾಡಿದ್ದರು. ಕೇವಲ ಪೋಸ್ಟ್ ಮಾಡಿ ಸುಮ್ಮನಾಗಲಿಲ್ಲ. ಕೆಲದಿನಗಳ ಬಳಿಕ ಮತ್ತೆ ಆ ಬಗ್ಗೆ ಪ್ರತಿಕ್ರಿಯೆ ನೀಡಿದ್ದರು. ಅಂದು, 

2014ಕ್ಕೂ ಮೊದಲು ಮೈಸೂರಿಗೆ ಒಂದು ರೈಲು ಬಂದಿಲ್ಲ. ನನ್ನ ಸಂಸದ ಸೇವೆ ಅವಧಿಯಲ್ಲಿ ಕರ್ನಾಟಕಕ್ಕೆ 11 ರೈಲು ಸೇವೆ ತಂದಿದ್ದೇನೆ. ಶೀಘ್ರದಲ್ಲೇ 12ನೇ ರೈಲಾಗಿ ಮೈಸೂರು-ರಾಮೇಶ್ವರಂ ಟ್ರೈನ್ ತಂದೇ ತೀರುತ್ತೇನೆ ಎಂದು ಜನತೆಗೆ ಮಾತು ಕೊಟ್ಟಿದ್ದರು. ಇದೀಗ ಕೊಟ್ಟು ಮಾತು ಉಳಿಸಿಕೊಂಡಿದ್ದಾರೆ.

ನೀಲಾಂಬೂರು– ನಂಜನಗೂಡು ರೈಲ್ವೆ ಮಾರ್ಗಕ್ಕೆ ಪ್ರತಾಪ್ ಸಿಂಹ ವಿರೋಧ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌