
ಧಾರವಾಡ (ಜ.13): ಡಿಗ್ರಿ ಇಲ್ಲದೆ ಕ್ಲಿನಿಕ್ ನಡೆಸುತ್ತಿದ್ದ ವೈದ್ಯನಿಗೆ ಸಚಿವ ಸಂತೋಷ್ ಲಾಡ್ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಜಿಲ್ಲೆಯಲ್ಲಿ ನಕಲಿ ವೈದ್ಯರ ಹಾವಳಿ ಹಿನ್ನೆಲೆ ಕಳೆದ ಮೂರು ದಿನದ ಹಿಂದೆ ನಕಲಿ ಕ್ಲಿನಿಕ್‌ಗಳ ಮೇಲೆ ದಾಳಿ ನಡೆಸಿದ್ದ ಆರೋಗ್ಯ ಇಲಾಖೆ ಅಧಿಕಾರಿಗಳು. ಈ ವೇಳೆ ಡಿಗ್ರಿಯೂ ಮುಗಿಸದೇ ಕ್ಲಿನಿಕ್ ನಡೆಸುತ್ತಿದ್ದುದು ಪತ್ತೆಯಾಗಿತ್ತು. ಧಾರವಾಡ ಬೂಸಪ್ಪ ಚೌಕ್ ನಲ್ಲಿ ಕ್ಲಿನಿಕ್ ನಡೆಸುತ್ತಿದ್ದ ನಕಲಿ ವೈದ್ಯ ತರುಣಕುಮಾರ ರಾಯರನ್ನ ಕರೆಸಿ ಹಿಗ್ಗಾಮುಗ್ಗಾ ಜಾಡಿಸಿದ ಸಚಿವ ಸಂತೋಷ್ ಲಾಡ್. ವೈದ್ಯನ ಪರವಾಗಿ ನಿಂತಿರುವ ಕಾಂಗ್ರೆಸ್ ಮುಖಂಡ ಮಾಕಡವಾಲೆಯನ್ನೂ ತರಾಟೆಗೆ ತೆಗೆದುಕೊಂಡ ಸಚಿವರು.
ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಯಾವ ಹಿಂದೂವಿಗೆ ಲಾಭವಾಗಿದೆ?: ಸಚಿವ ಸಂತೋಷ್ ಲಾಡ್
ವೈದ್ಯ ವೃತ್ತಿಗೆ ಬೇಕಾದ ಅರ್ಹತೆ ತರಬೇತಿ ಇಲ್ಲದವರು ಕ್ಲಿನಿಕ್ ನಡೆಸುತ್ತಿದ್ದಾರೆ. ಇಂಥವರಿಂದ ಚಿಕಿತ್ಸೆ ಪಡೆದುಕೊಂಡು ನಾಳೆ ಯಾರಾದ್ರೂ ಸತ್ತರೆ ಅದಕ್ಕೆ ಯಾರು ಹೊಣೆ. ಡಿಗ್ರಿ ಇಲ್ಲದವರ ಪರವಾಗಿ ಮಾತಾಡ್ತೀರ ಎಂದು ಕಾಂಗ್ರೆಸ್ ಮುಖಂಡನನ್ನು ತರಾಟೆಗೆ ತೆಗೆದುಕೊಂಡರು.
ನಿನ್ನೆ ಸಚಿವ ಸಂತೋಷ್ ಲಾಡ್ ಕನಸಲ್ಲಿ ಶ್ರೀರಾಮ ಬಂದಿದ್ದನಂತೆ! ಕನಸಲ್ಲಿ ಹೇಳಿದ್ದೇನು?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ