ಅವನು ಏನಾದ್ರೂ ಹೇಳಲಿ, ಅವನಿಗೆ ಸೋಲ್ತೀನಿ ಅನ್ನೋ ಹೆದರಿಕೆ ಶುರು ಆಗಿದೆ: ಪ್ರತಾಪ್ ಸಿಂಹ ವಿರುದ್ಧ ಸಿಎಂ ಕಿಡಿ

By Ravi JanekalFirst Published Jan 13, 2024, 2:29 PM IST
Highlights

ಪ್ರತಾಪ್ ಸಿಂಹ ಏನಾದ್ರೂ ಹೇಳಲಿ. ಅವನಿಗೆ ಹೆದರಿಕೆ ಶುರುವಾಗಿದೆ. ಲೋಕಸಭಾ ಚುನಾವಣೆಯಲ್ಲಿ ಸೋಲ್ತೀನಿ ಅನ್ನೋ ಭಯ ಈಗಳೇ ಶುರುವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಸದ ಪ್ರತಾಪ ಸಿಂಹ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

ರಾಯಚೂರು (ಜ.13): ಪ್ರತಾಪ್ ಸಿಂಹ ಏನಾದ್ರೂ ಹೇಳಲಿ. ಅವನಿಗೆ ಹೆದರಿಕೆ ಶುರುವಾಗಿದೆ. ಲೋಕಸಭಾ ಚುನಾವಣೆಯಲ್ಲಿ ಸೋಲ್ತೀನಿ ಅನ್ನೋ ಭಯ ಶುರುವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದರು.

ಇಂದು ರಾಯಚೂರು ಜಿಲ್ಲೆಯ ತಿಂಥಿಣಿಗೆ ಭೇಟಿ ನೀಡಿದ ವೇಳೆ ಮೈಸೂರು ಲೋಕಸಭಾ ಕ್ಷೇತ್ರದ ಟಿಕೆಟ್ ಯತೀಂದ್ರಗೆ ನೀಡುವ ವಿಚಾರ ಸಂಬಂಧ ಪ್ರತಾಪ್ ಸಿಂಹ ಹೇಳಿಕೆ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಟಿಕೆಟ್ ವಿಚಾರ ಯತೀಂದ್ರ ಎಲ್ಲೂ ಮಾತಾಡಿಲ್ಲ. ನಾನೂ ಕೂಡ ಹೇಳಿಲ್ಲ. ಬೈರತಿ ಸುರೇಶ್ ಅಲ್ಲಿ ಅಬ್ಸರ್ವರ್ ಆಗಿ ಹೋಗಿದ್ರು. ಅವರ ವರದಿ ಆಧಾರದಲ್ಲಿ ತೀರ್ಮಾನ ತೆಗೆದುಕೊಳ್ತೇವೆ ಎಂದರು.

ಗೂಂಡಾಗಿರಿ ಹತ್ತಿಕ್ಕುವುದಾಗಿ ಹೇಳುವ ಸಿಎಂ ಸಿದ್ದರಾಮಯ್ಯ ಹಾನಗಲ್ ಗ್ಯಾಂಗ್ ರೇಪ್ ಪ್ರಕರಣದ ಬಗ್ಗೆ ಯಾಕೆ ಮೌನ?

ಅಯೋಧ್ಯೆಗೆ ನಾನು ಹೋಗ್ತಿನಿ ಅಂದಿಲ್ಲ, ಹೋಗಲ್ಲ ಅಂದಿಲ್ಲ: 

ಇನ್ನು ರಾಮಮಂದಿರ ಉದ್ಘಾಟನೆಗೆ ಹೋಗುವ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಸಿಎಂ, ನಾನು ಅಯೋಧ್ಯೆಗೆ ಹೋಗಲ್ಲ ಅಂತಾ ಎಲ್ಲೂ ಹೇಳಿಲ್ಲ. ಈ ವಿಷಯದಲ್ಲಿ ಬಿಜೆಪಿ ಅವ್ರು ರಾಜಕೀಯ ಮಾಡ್ತಿದ್ದಾರೆ. ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠಾಪನೆಗೆ ನಮ್ಮ ಅಭ್ಯಂತರವಿಲ್ಲ. ಆದ್ರೆ ಬಿಜೆಪಿಯವರು ಅದನ್ನ ರಾಜಕೀಯವಾಗಿ ಬಳಸಿಕೊಳ್ತಿರೋದ್ರಿಂದ ನಮ್ಮ ವಿರೋಧವಿದೆ. ನಾನು ಹೋಗಲ್ಲ ಅಂದಿಲ್ಲ, ಹೋಗ್ತಿನಿ ಅಂದಿಲ್ಲ ಎಂದ ಸ್ಪಷ್ಟಪಡಿಸಿದರು.

ಜೋಶಿ ಹೇಳಿಕೆ ಸಿಎಂ ಕಿಡಿ:

ಕಾಂಗ್ರೆಸ್ ಮುಸ್ಲಿಂ ‌ತುಷ್ಟಿಕರಣ ರಾಜಕೀಯ ಮಾಡ್ತಿದೆ ಎಂಬ ಬಗ್ಗೆ  ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ನೀನು ಯಾರಪ್ಪ? ಹಿಂದೂನಾ? ನಾವು ನಿಮ್ಮ ಪರವಾಗಿ ಇದ್ದಿವಿ ಅಂತ ಪತ್ರಕರ್ತರಿಗೆ ಹೇಳಿದರು. ನಾವು ಎಲ್ಲ ಸಮಾಜದವರ ಪರವಾಗಿದ್ದೇವೆ.ಒಂದು ಧರ್ಮ, ಜಾತಿ ಪರ ಅಲ್ಲ. ಧರ್ಮದ ಆಧಾರದಲ್ಲಿ ಸಮಾಜ  ಒಡೆಯುವವರಲ್ಲ ನಾವು. ಜಾತಿ ಆಧಾರದಲ್ಲಿ ಒಡೆಯುವವರಲ್ಲ ನಾವು. ಜಾತ್ಯಾತೀತ ತತ್ವದಲ್ಲಿ ನಂಬಿಕೆ ಇಟ್ಟುಕೊಂಡಿರೋರು ನಾವು ಧರ್ಮ ನಿರಪೇಕ್ಷತೆಯಲ್ಲಿ ನಂಬಿಕೆ ಇಟ್ಟುಕೊಂಡವರು. ಕಾಂಗ್ರೆಸ್ ಪಕ್ಷ ಜಾತ್ಯಾತೀತ ಪಕ್ಷ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟುವರು ಯಾರು? ಹೋರಾಟ ಮಾಡಿ ತಂದುಕೊಟ್ಟಿದ್ದು ಕಾಂಗ್ರೆಸ್ ಪಕ್ಷ ಎಂದರು.

'ನಾನು ಕೊಚ್ಚೆಗೆ ಕಲ್ಲು ಹಾಕುವುದಿಲ್ಲ' ಶಾಸಕ ಪ್ರದೀಪ್ ಈಶ್ವರ್ ಹೇಳಿಕೆಗೆ ಸಂಸದ ಪ್ರತಾಪ್ ಸಿಂಹ ತಿರುಗೇಟು!

ಸರ್ಕಾರದ ಗೃಹಲಕ್ಷ್ಮೀ ಯೋಜನೆಯ ಎರಡು ಸಾವಿರ ಹಣ ಯಾರಿಗೆ ಸಾಲುತ್ತೆ ಎಂಬ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ ಸಿದ್ದರಾಮಯ್ಯ, ನೀವು ಏನು ಕೊಟ್ರಿ?  ನೀವು ಅಧಿಕಾರದಲ್ಲಿದ್ದಾಗ ಬಡವರಿಗೆ ಮಹಿಳೆಯರಿಗೆ ನೂರು ರೂಪಾಯಿ ಸಹ ಕೊಟ್ಟಿಲ್ಲ ಎಂದು ತಿರುಗೇಟು ನೀಡಿದರು. 

click me!