ಮುಸಲ್ಮಾನರು ನಮ್ಮ ನಾಡಿನವರು. ಈ ನೆಲದ ಮೇಲೆ ಅವರಿಗೂ ಹಕ್ಕಿದೆ. ಈ ದೇಶದ ಸಂಪತ್ತು ಅವರಿಗೂ ಹಂಚುವುದರಲ್ಲಿ ತಪ್ಪೇನಿದೆ ಎಂದು ಅಬಕಾರಿ ಸಚಿವ ಆರ್.ಬಿ ತಿಮ್ಮಾಪುರ ಹೇಳಿದರು.
ಹುಬ್ಬಳ್ಳಿ (ಡಿ.5): ಮುಸಲ್ಮಾನರು ನಮ್ಮ ನಾಡಿನವರು. ಈ ನೆಲದ ಮೇಲೆ ಅವರಿಗೂ ಹಕ್ಕಿದೆ. ಈ ದೇಶದ ಸಂಪತ್ತು ಅವರಿಗೂ ಹಂಚುವುದರಲ್ಲಿ ತಪ್ಪೇನಿದೆ ಎಂದು ಅಬಕಾರಿ ಸಚಿವ ಆರ್.ಬಿ ತಿಮ್ಮಾಪುರ ಹೇಳಿದರು.
ಮುಸ್ಲಿಮರಿಗೆ ದೇಶದ ಸಂಪತ್ತು ಹಂಚುತ್ತೇವೆ ಎಂಬ ಮುಖ್ಯಮಂತ್ರಿಗಳ ಹೇಳಿಕೆ ಸಂಬಂಧ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಸಿದ್ದರಾಮಯ್ಯ ಸಾಹೇಬರು ಹೇಳಿದ್ದು ನೂರಕ್ಕೆ ನೂರು ಸತ್ಯವಿದೆ. ಮುಸ್ಲಿಮರು ನಮ್ಮ ನಾಡಿನವರು, ಇಲ್ಲೇ ಹುಟ್ಟಿದವರು, ಇಲ್ಲೇ ಸಾಯುವವರು ಹೀಗಾಗಿ ಈ ನೆಲದ ಮೇಲೆ ಅವರಿಗೂ ಹಕ್ಕಿದೆ. ನಾವು ಅವರಿಗೆ ಹಕ್ಕು ಕೊಡುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.
ಬಿಜೆಪಿಯವರು ಹಿಂದೂಗಳ ಓಲೈಕೆ ಮಾಡ್ತಾರೆ, ಮುಸ್ಲೀಮರು ಗಲಾಟೆ ಹಚ್ತಾರೆ. ಹೌದು ನಾನು, ಸಿದ್ದರಾಮಯ್ಯನವರು ಹಿಂದೂಗಳೇ ಅಲ್ವೇ? ಬಿಜೆಪಿಯವರು ರಾಜಕೀಯಕ್ಕಾಗಿ ಹಿಂದೂಗಳನ್ನು ಬಳಸುತ್ತಿದ್ದಾರೆ. ಹಾಗಾದರೆ ಮುಸ್ಲಿಮರೇನು ಪಾಕಿಸ್ತಾನದವರಾ? ಈ ದೇಶದಲ್ಲಿರೋ ಎಲ್ಲರೂ ಇಲ್ಲಿನ ಪ್ರಜೆಗಳು, ಭಾರತದವರೇ. ಅವರು ಮುಸ್ಲಿಮರೆಂದು ಇಲ್ಲಿ ಇರೋರನ್ನ ಪಾಕಿಸ್ತಾನಕ್ಕೆ ಕಳಿಸ್ತೀರಾ? ಅವರಿಗೇನು ಈ ಭೂಮಿ ಮೇಲೆ ಹಕ್ಕು ಇಲ್ವ? ದಿನಾ ಬೆಳಗಾದ್ರೆ ಹಿಂದೂ ಮುಸ್ಲಿಂ ನಡುವೆ ಗಲಾಟೆ ಮಾಡಿಸೋದು ನಿಮ್ಮ ಸಂಸ್ಕೃತಿನಾ ? ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ನಮ್ಮ ಕುಟುಂಬ ಯಾರಿಗೂ ನೋವುಂಟು ಮಾಡಲ್ಲ: ಭವಾನಿ ಕಾರು ಅಪಘಾತ ಪ್ರಕರಣಕ್ಕೆ ಕ್ಷಮೆ ಕೇಳಿದ ಎಚ್‌ಡಿ ರೇವಣ್ಣ
ಇನ್ನು ಮುಸ್ಲಿಮರ ಒಲೈಕೆ ವಿಚಾರ ಸಂಬಂಧ ಮಾತನಾಡಿದ ಸಚಿವರು, ಬಿಜೆಪಿಯವರು ಯಾರನ್ನು ಒಲೈಕೆ ಮಾಡುತ್ತಿದ್ದಾರೆ? ಕಾಂಗ್ರೆಸ್ ಮುಸ್ಲಿಮರನ್ನು ಒಲೈಕೆ ಮಾಡಿದ್ರೆ ಬಿಜೆಪಿಯವರು ಹಿಂದುಗಳನ್ನು ಒಲೈಕೆ ಮಾಡಲ್ವಾ? ಹಿಂದುತ್ವ ಅನ್ನೋದು ಅವರ ಮನೆ ಆಸ್ತಿನಾ? ಸ್ವಂತ ಮನೆ ಆಸ್ತಿಗೆ ಹಿಂದೂತ್ವ ಉಪಯೋಗ ಮಾಡ್ತಾರೆ. ಅಧಿವೇಶನದಲ್ಲಿ ಬಿಜೆಪಿ ಉತ್ತರ ಕರ್ನಾಟಕ ಸಮಸ್ಯೆ ಬಗ್ಗೆ ನಿರಾಸಕ್ತಿ ತೋರಿಸಿದೆ. ನಾವು ಚರ್ಚೆ ಮಾಡಲು ಸಿದ್ಧರಿದ್ದೇವೆ. ಉತ್ತರ ಕೊಡಲು ನಮ್ಮ ಸರ್ಕಾರ ಸಿದ್ಧವಿದೆ. ಆದರೆ ಬಿಜೆಪಿ ಹಿಂದು ಮುಸ್ಲಿಂ ಅಂತಾ ರಾಜಕೀಯ ಮಾಡುವುದು ಬಿಟ್ಟು ಬೇರೇನೂ ಮಾಡ್ತಿಲ್ಲ ಎಂದು ಎಂದು ಹರಿಹಾಯ್ದರು.