Aero India 2023: 70 ಕಂಪನಿಗಳ ಸಿಇಒಗಳ ಜತೆ ಸಚಿವ ರಾಜನಾಥ ಸಿಂಗ್‌ ಸಭೆ

Published : Feb 14, 2023, 10:11 PM IST
Aero India 2023: 70 ಕಂಪನಿಗಳ ಸಿಇಒಗಳ ಜತೆ  ಸಚಿವ ರಾಜನಾಥ ಸಿಂಗ್‌ ಸಭೆ

ಸಾರಾಂಶ

ರಕ್ಷಣಾ ಮತ್ತು ಭದ್ರತೆಯಲ್ಲಿ ‘ಮೇಕ್‌ ಇನ್‌ ಇಂಡಿಯಾ: ಮೇಕ್‌ ಫಾರ್‌ ದಿ ವಲ್ಡ್‌ರ್‍’ ದೃಷ್ಟಿಕೋನದಲ್ಲಿ ಸ್ನೇಹಪರ ದೇಶಗಳೊಂದಿಗೆ ಪರಿಣತಿ ಮತ್ತು ಸಾಮರ್ಥ್ಯಗಳನ್ನು ಹಂಚಿಕೊಳ್ಳಲಾಗುತ್ತಿದೆ. ಹೊಸ ಆಲೋಚನೆಗಳಿಗೆ ತೊಡಗಿಸಿಕೊಳ್ಳಲು ಎದುರು ನೋಡಲಾಗುತ್ತಿದೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್‌ ಹೇಳಿದರು.

ಬೆಂಗಳೂರು (ಫೆ.15) ರಕ್ಷಣಾ ಮತ್ತು ಭದ್ರತೆಯಲ್ಲಿ ‘ಮೇಕ್‌ ಇನ್‌ ಇಂಡಿಯಾ: ಮೇಕ್‌ ಫಾರ್‌ ದಿ ವಲ್ಡ್‌ರ್‍’ ದೃಷ್ಟಿಕೋನದಲ್ಲಿ ಸ್ನೇಹಪರ ದೇಶಗಳೊಂದಿಗೆ ಪರಿಣತಿ ಮತ್ತು ಸಾಮರ್ಥ್ಯಗಳನ್ನು ಹಂಚಿಕೊಳ್ಳಲಾಗುತ್ತಿದೆ. ಹೊಸ ಆಲೋಚನೆಗಳಿಗೆ ತೊಡಗಿಸಿಕೊಳ್ಳಲು ಎದುರು ನೋಡಲಾಗುತ್ತಿದೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್‌(Defence Minister Rajnath Singh) ಹೇಳಿದರು.

ಏರೋ ಇಂಡಿಯಾ(Aero indian) ಅಂಗವಾಗಿ ಸೋಮವಾರ ದೇಶೀಯ ಮತ್ತು ವಿದೇಶದ ವಿವಿಧ 70ಕ್ಕೂ ಹೆಚ್ಚಿನ ರಕ್ಷಣಾ ವಲಯದ ಸಿಇಒಗಳೊಂದಿಗೆ ಸೋಮವಾರ ನಡೆಸಿದ ದುಂಡುಮೇಜಿನ ಸಭೆಯಲ್ಲಿ ಮಾತನಾಡಿದ ಅವರು, ರಕ್ಷಣಾ ಕ್ಷೇತ್ರದಲ್ಲಿ ಖಾಸಗಿ ಪಾಳುದಾರಿಕೆ ಶಕ್ತಿ, ಉದ್ಯಮಶೀಲತಾ ಮನೋಭಾವ ಮತ್ತು ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಮತ್ತು ವ್ಯವಹಾರಗಳನ್ನು ಸುಗಮಗೊಳಿಸಲು ಮತ್ತು ಅಡೆತಡೆಗಳನ್ನು ನಿವಾರಿಸಲು ಸರ್ಕಾರವು ಸಂಪೂರ್ಣ ಬದ್ಧವಾಗಿದೆ ಎಂದರು.

AERO INDIA 2023 ಬೆಂಗಳೂರಿನ ಏರ್‌ಶೋಗೆ ಜನಸಾಗರ, ಬಾನಂಗಳದಲ್ಲಿ ಸ್ವದೇಶಿ ಏರ್‌ಕ್ರಾಫ್ಟ್ ಚಿತ್ತಾರ!

ರಕ್ಷಣಾ ಇಲಾಖೆ(Defense Department)ಯಲ್ಲಿ ಖಾಸಗಿ ಪಾಲ್ಗೊಳ್ಳುವಿಕೆಯಲ್ಲಿನ ಉತ್ಸಾಹ ಮತ್ತು ಭಾಗವಹಿಸುವಿಕೆಯು ಹೂಡಿಕೆಯನ್ನು ಉತ್ತೇಜಿಸುತ್ತಿದೆ. ಸ್ಥಳೀಯ ಉತ್ಪಾದನೆಯನ್ನು ವಿಸ್ತರಿಸುತ್ತಿದ್ದು, ದೇಶದಲ್ಲಿ ಏರೋಸ್ಪೇಸ್‌ ಮತ್ತು ರಕ್ಷಣಾ ಪರಿಸರ ವ್ಯವಸ್ಥೆಯನ್ನು ಬಲವರ್ಧಿಸುತ್ತಿದೆ ಎಂದರು.

ಸಭೆಯಲ್ಲಿ ಬೋಯಿಂಗ್‌, ಲಾಕ್‌ಹೀಡ್‌ ಮಾರ್ಟಿನ್‌, ಇಸ್ರೇಲ… ಏರೋಸ್ಪೇಸ್‌ ಇಂಡಸ್ಟ್ರೀಸ್‌, ಜನರಲ… ಅಟಾಮಿ ಲೈಬರ್‌ ಗ್ರೂಪ್‌, ರೇಥಿಯಾನ್‌ ಟೆಕ್ನಾಲಜೀಸ್‌, ಎಚ್‌ಎಎಲ್‌, ಬಿಎಚ್‌ಇಎಲ್‌, ಬಿಇಎಂಎಲ… ಲಾರ್ಸೆನ್‌ ಮತ್ತು ಟೂಬ್ರೊ ಸೇರಿ ಇತರೆ ಕಂಪನಿಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ದುಂಡುಮೇಜಿನ ಸಭೆಯ ಉದ್ದೇಶ

ಪ್ರಸ್ತುತ ಮತ್ತು ಭವಿಷ್ಯದ ಜಾಗತಿಕ ಅಗತ್ಯಗಳನ್ನು ಪರಿಹರಿಸುವುದು, ಏರೋಸ್ಪೇಸ್‌ ಮತ್ತು ರಕ್ಷಣಾ ಕ್ಷೇತ್ರದ ದೇಶೀಯ ಮತ್ತು ಜಾಗತಿಕ ಕೈಗಾರಿಕೆಗಳ ನಡುವೆ ಪಾಲುದಾರಿಕೆ ರೂಪಿಸುವುದು, ಸಾಂಕ್ರಾಮಿಕ ಮತ್ತು ಜಾಗತಿಕ ಅಡೆತಡೆಗಳ ನಂತರ ಜಗತ್ತು ವ್ಯವಹರಿಸುವಾಗ ಪೂರೈಕೆ ಸರಪಳಿ ಕಾರ್ಯತಂತ್ರ ಮತ್ತು ಕಾರ್ಯಾಚರಣೆಗಳ ಪ್ರಾಮುಖ್ಯತೆಯನ್ನು ಚರ್ಚಿಸುವ ಉದ್ದೇಶದಿಂದ ದುಂಡುಮೇಜಿನ ಸಭೆಯ ಉದ್ದೇಶವಾಗಿತ್ತು.

Aero India 2023 ಬೆಂಗಳೂರಿನ ಏರ್‌ಶೋಗೆ ಜನಸಾಗರ, ಬಾನಂಗಳದಲ್ಲಿ ಸ್ವದೇಶಿ ಏರ್‌ಕ್ರಾಫ್ಟ್ ಚಿತ್ತಾರ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಶದಿಕ್ಕುಗಳಿಂದ ಕರ್ನಾಟಕಕ್ಕೆ ಡ್ರಗ್ಸ್‌ ಗಂಡಾಂತರ
Karnataka News Live: Namratha Gowda ಪ್ರೀತಿಯಲ್ಲಿದ್ದಾರಾ? ಆ ಕಪ್ಪು ಬ್ಯಾಂಡ್‌ ಕೊಟ್ಟ ಸುಳಿವಿನ ಬಗ್ಗೆ Karthik Mahesh ಏನಂದ್ರು?