ಕರ್ನಾಟಕದಲ್ಲಿ ಗೆದ್ದೇ ಗೆಲ್ತೀವಿ ಎಂದ ಅಮಿತ್‌ ಶಾ, ಜೆಡಿಎಸ್‌ಗೂ ನೀಡಿದ್ರು ಸಂದೇಶ!

By Santosh Naik  |  First Published Feb 14, 2023, 3:28 PM IST

ಎಎನ್‌ಐಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅಮಿತ್‌ ಶಾ ಮುಂಬರುವ ವಿಧಾನಸಭಾ ಚುನಾವಣೆಯ ಪೈಕಿ, ಕರ್ನಾಟಕ ಸೇರಿದಂತೆ ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್‌ಗಢದಲ್ಲಿ ಪಕ್ಷ ಅಧಿಕಾರ ಸ್ಥಾಪನೆ ಮಾಡಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಇದರ ನಡುವೆ ಜೆಡಿಎಸ್‌ಗೂ ಒಂದು ಸಂದೇಶವನ್ನು ಅವರು ನೀಡಿದ್ದಾರೆ.


ಬೆಂಗಳೂರು (ಫೆ.14): ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಸ್ಥಾಪನೆ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅದರೊಂದಿಗೆ ವಿಪಕ್ಷಗಳ ಕುಟುಂಬ ರಾಜಕಾರಣದ ಬಗ್ಗೆಯೂ ಅಮಿತ್‌ ಶಾ ಮಾತನಾಡಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ ಪಕ್ಷ ಗೆದ್ದೇ ಗೆಲ್ಲುತ್ತದೆ. ನಾನು ಕರ್ನಾಟಕಕ್ಕೆ ಈವರೆಗೆ 5 ಬಾರಿ ಭೇಟಿ ನೀಡಿದ್ದೇನೆ. ರಾಜ್ಯದಲ್ಲಿ ಮೋದಿ ಪರ ಅಲೆ ಇರುವುದನ್ನು ಅರಿತಿದ್ದೇವೆ. ಕರ್ನಾಟಕದ ಜನರ ನಾಡಿ ಮಿಡಿತವನ್ನು ಈಗಾಗಲೇ ತಿಳಿದುಕೊಂಡಿದ್ದೇನೆ. ಕರ್ನಾಟಕದಲ್ಲಿ ಭರ್ಜರಿ ಬಹುಮತದೊಂದಿಗೆ ಗೆಲ್ಲಲಿದ್ದೇವೆ. ಕರ್ನಾಟಕ ಮಾತ್ರವಲ್ಲ, ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಢದಲ್ಲೂ ಬಿಜೆಪಿಯ ಗೆಲುವು ಪಕ್ಕಾ. ಈ ನಾಲ್ಕು ರಾಜ್ಯದಲ್ಲಿ ಬಿಜೆಪಿ ಗೆಲ್ಲುವುದು ನಿಶ್ಚಿತ ಎಂದು ಅಮಿತ್‌ ಶಾ ಹೇಳಿದ್ದಾರೆ. ಜನ ವಂಶ ರಾಜಕಾರಣವನ್ನು ಕಿತ್ತೊಗೆದು ಕೇಸರಿ ಪಕ್ಷದ ಅಭಿವೃದ್ಧಿ ರಾಜಕಾರಣವನ್ನು ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.
ಚುನಾವಣೆಗೂ ಮುನ್ನ ಕರ್ನಾಟಕಕ್ಕೆ ಭೇಟಿ ನೀಡಿದ ಬಗ್ಗೆ ಮಾತನಾಡಿದ ಗೃಹ ಸಚಿವರು, "ನನ್ನ ಕರ್ನಾಟಕ ಪ್ರವಾಸದ ಸಮಯದಲ್ಲಿ ನಾನು ಮಂಡ್ಯದಿಂದ ಅಭಿಯಾನ ಪ್ರಾರಂಭಿಸಿದೆ. ಇದಕ್ಕೂ ಮುನ್ನ ಬಿಜೆಪಿ ಕರ್ನಾಟದಲ್ಲಿ ದೊಡ್ಡ ಮಟ್ಟದ ಸಮಾವೇಶವನ್ನು ನಡೆಸಿರಲಿಲ್ಲ. ಮಂಡ್ಯದ ಜನರು ಕೂಡ ವಂಶ ರಾಜಕಾರಣದಿಂದ ವಿಮುಖರಾಗುತ್ತಿದ್ದಾರೆ, ಬಿಜೆಪಿಯ ಅಭಿವೃದ್ಧಿಯ ರಾಜಕಾರಣವನ್ನು ಅಪ್ಪಿಕೊಳ್ಳುತ್ತಿದ್ದಾರೆ. ಇದು ಕರ್ನಾಟಕದ ಪಾಲಿಗೆ ಒಳ್ಳೆಯ ಸಂಕೇತ ಎಂದು ಹೇಳಿದ್ದಾರೆ.

ಕುಟುಂಬ ರಾಜಕಾರಣದ ವಿರುದ್ಧ ಅಮಿತ್​ ಶಾ ವಾಗ್ದಾಳಿ ನಡೆಸಿದ ಅಮಿತ್‌ ಶಾ, ಬಿಜೆಪಿ ಇತರ ಪಕ್ಷಗಳಂತಲ್ಲ. ರಾಜಕಾರಣಿಯ ಎರಡನೆ, ಮೂರನೇ ಪೀಳಿಗೆಯನ್ನು ಬೆಳೆಸುವ ಆಸಕ್ತಿ ನಮಗಿಲ್ಲ. ಇತರ ಪಕ್ಷಗಳಂತೆ ಬಿಜೆಪಿಯಲ್ಲಿ ಮಕ್ಕಳು, ಮೊಮ್ಮಕ್ಕಳಿಗೆ ಸ್ಥಾನ ನೀಡುವುದಿಲ್ಲ. ಪಕ್ಷದ ಅಧ್ಯಕ್ಷ ಸ್ಥಾನದಂಥ ಪ್ರಭಾವಿ ಸ್ಥಾನವನ್ನೇ ಕೆಲವು ಪಕ್ಷಗಳು ನೀಡುತ್ತವೆ. ವಿರೋಧ ಪಕ್ಷಗಳು ಪ್ರಜಾಪ್ರಭುತ್ವ ಪದ್ಧತಿಯನ್ನೇ ನಾಶ ಮಾಡುತ್ತಿವೆ. ಜನರನ್ನು ಭ್ರಮೆಯಲ್ಲಿಟ್ಟು ಕುಟುಂಬ ರಾಜಕಾರಣ ಮಾಡಲಾಗದು. ನಮ್ಮ ಪಕ್ಷದಲ್ಲಿ ಕೂಡ ಎರಡು ಅಥವಾ ಮೂರನೇ ತಲೆಮಾರಿನವರು ಇದ್ದಾರೆ ಎಂಬುದು ನಿಜ. ಆದರೆ, ಅವರೇ ಪಕ್ಷದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆಯೇ, ಅವರೇ ಅಧಿಖಾರ ಹಿಡಿಯುತ್ತಾರೆ ಎನ್ನುವ ಯಾವುದೇ ನಿಯಮ ನಮಗಿಲ್ಲ  ಎಂದು ಹೇಳುವ ಮೂಲಕ ಜೆಡಿಎಸ್‌ ಪಕ್ಷದ ಹೆಸರು ಹೇಳದೆ ಜೆಡಿಎಸ್‌ ವಿರುದ್ಧ ಹರಿಹಾಯ್ದಿದ್ದಾರೆ.

'ಪ್ರತಿಪಕ್ಷದ ಬಳಿ ಸಾಕ್ಷ್ಯಗಳಿದ್ದರೆ, ಕೋರ್ಟ್‌ಗೆ ಹೋಗಲಿ..' ಅದಾನಿ ಗ್ರೂಪ್‌ ವಿಚಾರದಲ್ಲಿ ಅಮಿತ್‌ ಶಾ ತಿರುಗೇಟು!

ಏಪ್ರಿಲ್‌ ಅಥವಾ ಮೇ ತಿಂಗಳ ಆರಂಭದಲ್ಲಿ 224 ಸದಸ್ಯ ಬಲದ ಕರ್ನಾಟಕ ವಿಧಾನಸಭೆಯ ಚುನಾವಣೆ ನಡೆಯುವ ಸಾಧ್ಯತೆ ಇದೆ. 2018ರಲ್ಲಿ ಕರ್ನಾಟಕ ವಿಧಾನಸಭೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿತ್ತು. ಬಿಎಸ್‌ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದರೂ, ಬಹುಮತ ಸಾಧಿಸಲು ಸಾಧ್ಯವಾಗದ ಹಿನ್ನಲೆಯಲ್ಲಿ ರಾಜೀನಾಮೆ ನೀಡಿದ್ದರು.ನಂತರ ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರ ರಚಿಸಿದವು. ಬಿಎಸ್ ಯಡಿಯೂರಪ್ಪ ಅವರು 2019 ರಲ್ಲಿ ಮತ್ತೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದರು ಆದರೆ 2021 ರಲ್ಲಿ ಅವರ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿ ಅವರನ್ನು ಆಯ್ಕೆ ಮಾಡಲಾಗಿತ್ತು.

Tap to resize

Latest Videos

ಟಿಪ್ಪು ಹೆಸರಲ್ಲಿ ಕಾಂಗ್ರೆಸ್, ಜೆಡಿಎಸ್‌ಗೆ ಓಟ್ ಕೊಡ್ತೀರಾ?- ರಾಣಿ ಅಬ್ಬಕ್ಕ ಹೆಸರಲ್ಲಿ ಬಿಜೆಪಿಗೆ ಓಟ್ ಕೊಡ್ತೀರಾ.?: ಅಮಿತ್‌ ಶಾ

ಪಿಎಫ್ಐ ನಿಷೇಧ ಸಮರ್ಥಿಸಿಕೊಂಡ ಅಮಿತ್‌ ಶಾ: ಸಂದರ್ಶನದಲ್ಲಿ ಅಮಿತ್‌ ಶಾ ಪಿಎಫ್‌ಐಗೆ ನಿಷೇಧ ಹೇರಿದ್ದನ್ನು ಸಮರ್ಥಿಸಿಕೊಂಡರು. ಪಿಎಫ್​ಐ ದೇಶದಲ್ಲಿ ಧಾರ್ಮಿಕ ಮತಾಂಧತೆ ಹರಡುತ್ತಿದ್ದ ಸಂಸ್ಥೆ . ದೇಶದ ಸಮಗ್ರತೆ ಹಾಗೂ ಏಕತೆಗೆ ಭಂಗ ತರುವ ಕೆಲಸ ಮಾಡುತ್ತಿತ್ತು. ದೇಶದ ವಿರುದ್ಧ ಕೆಲಸ ಮಾಡುತ್ತಿದ್ದ ಬಗ್ಗೆ ಸರಿಯಾದ ಸಾಕ್ಷಿಯೂ ಸಿಕ್ಕಿತ್ತು. ವೋಟ್​​ ಬ್ಯಾಂಕ್​ ರಾಜಕಾರಣ ಮೀರಿ  ನಾವು PFI ನಿಷೇಧಿಸಿದೆವು ಎಂದು ಹೇಳಿದ್ದಾರೆ.

click me!