ಮುದ್ದಹನುಮೇಗೌಡ, ಗೌರಿಶಂಕರ್‌,ಸೋಮಣ್ಣ ಕಾಂಗ್ರೆಸ್ಸಿಗೆ: ಸಚಿವ ರಾಜಣ್ಣ ಸುಳಿವು!

By Kannadaprabha NewsFirst Published Nov 14, 2023, 5:55 AM IST
Highlights

ಮಾಜಿ ಸಂಸದ ಮುದ್ದಹನುಮೇಗೌಡ, ಶಾಸಕ ಡಿ.ಸಿ.ಗೌರಿಶಂಕರ್ ಕಾಂಗ್ರೆಸ್‌ಗೆ ಬರುವ ಕುರಿತು ಚರ್ಚೆ ನಡೆದಿದ್ದು, ಐದು ರಾಜ್ಯಗಳ ಚುನಾವಣೆ ಬಳಿಕ ರಾಜ್ಯ ರಾಜಕಾರಣದಲ್ಲಿ ಮತ್ತಷ್ಟು ಬದಲಾವಣೆ ಸಾಧ್ಯತೆ ಇದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು.

ತುಮಕೂರು (ನ.14):  ಮಾಜಿ ಸಂಸದ ಮುದ್ದಹನುಮೇಗೌಡ, ಶಾಸಕ ಡಿ.ಸಿ.ಗೌರಿಶಂಕರ್ ಕಾಂಗ್ರೆಸ್‌ಗೆ ಬರುವ ಕುರಿತು ಚರ್ಚೆ ನಡೆದಿದ್ದು, ಐದು ರಾಜ್ಯಗಳ ಚುನಾವಣೆ ಬಳಿಕ ರಾಜ್ಯ ರಾಜಕಾರಣದಲ್ಲಿ ಮತ್ತಷ್ಟು ಬದಲಾವಣೆ ಸಾಧ್ಯತೆ ಇದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು.

ಅವರು ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಮಾಜಿ ಸಚಿವ ವಿ.ಸೋಮಣ್ಣ ಕಾಂಗ್ರೆಸ್ ಸೇರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿ ಯಿಸಿ, ಡಿ.6ರಂದು ಸಿದ್ಧಗಂಗಾ ಮಠದಲ್ಲಿ ಸೋಮಣ್ಣ ಅವರು ದೊಡ್ಡ ಕಾರ್ಯಕ್ರಮ ಮಾಡುತ್ತಿದ್ದಾರೆ. ಅದಕ್ಕೆ ನನ್ನನ್ನೂ ಆಹ್ವಾನಿಸಿದ್ದಾರೆ. ಅಧಿವೇಶನ ಇರುವುದರಿಂದ ಬಿಡುವು ಮಾಡಿಕೊಂಡು ಬರಲು ಪ್ರಯತ್ನಿಸುವೆ ಎಂದಿದ್ದೇನೆ ಎಂದರು.

Latest Videos

ನಿಗಮ ಮಂಡಳಿ 2ನೇ ಪರೀಕ್ಷೆಗೆ ಹದ್ದಿನ ಕಣ್ಣು; ಪರೀಕ್ಷಾರ್ಥಿಗಳೇ ಏನೆಲ್ಲ ನಿಯಮ ಇರುತ್ತೆ ಇಲ್ಲಿ ನೋಡಿ!

ಕಾಂಗ್ರೆಸ್ ಸಾಮೂಹಿಕ ನಾಯಕತ್ವದ ಪಾರ್ಟಿ, ನಮ್ಮದು ಕೇಡರ್ ಬೇಸ್ ಪಾರ್ಟಿಯಲ್ಲ. ಅಂತೆಯೇ ಕಾಂಗ್ರೆಸ್ ಎನ್ನುವುದು ಒಂದು ಮಹಾಸಾಗರ, ಇಲ್ಲಿಗೆ ಗಂಗಾ ನದಿಯ ನೀರೂ ಬರುತ್ತದೆ, ಕಾವೇರಿ ನೀರೂ ಸೇರುತ್ತದೆ ಎಂದವರು ಪ್ರತಿಪಾದಿಸಿದರು.

 

ಪರಮೇಶ್ವರ್ ಗೆ ಸಿಎಂ ಆಗುವ ಅವಕಾಶವಿದೆ; ಸಹಕಾರಿ ಸಚಿವ ಕೆ.ಎನ್ ರಾಜಣ್ಣ

ಲೋಕಸಭೆಗೆ ಸ್ಪರ್ಧಿಸುವ ಆಸೆ ಇದೆ ಎಂದ ರಾಜಣ್ಣ:

ನಾನು ಸಹ ಈ ಬಾರಿ ಲೋಕಸಭೆಗೆ ಸ್ಪರ್ಧಿಸಲು ಇಚ್ಛಿಸಿದ್ದೇನೆ. ಹೈಕಮಾಂಡ್ ಒಪ್ಪಿ ಟಿಕೇಟ್ ನೀಡಿದರೆ ಸ್ಪರ್ಧಿಸುತ್ತೇನೆ ಎಂದು ಸಹಕಾರ ಸಚಿವ ರಾಜಣ್ಣ ತಿಳಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆಯನ್ನು ಒಮ್ಮೆ ನೋಡುವ ಆಸೆಯಿದೆ. ಇಲ್ಲಿವರೆಗೂ ರಾಜ್ಯ ರಾಜಕಾರಣದ ಅನೇಕ ಮಜುಲುಗಳ ಅನುಭವವಾಗಿದೆ, ಅನೇಕ ಸ್ಥಾನಮಾನಗಳು ದೊರೆತಿವೆ. ಇನ್ನು ಲೋಕಸಭೆಗೆ ಒಮ್ಮೆ ಕಾಲಿರಿಸುವ ಉಮೇದಿ ಇದೆ. ಇದಕ್ಕೆ ಪೂರಕವಾಗಿ ವರಿಷ್ಠರು ಒಪ್ಪಿ ಟಿಕೆಟ್‌ ನೀಡುವುದಾದರೆ ಸ್ಪರ್ಧಿಸುವುದಾಗಿ ಇಂಗಿತ ವ್ಯಕ್ತಪಡಿಸಿದರು,

click me!