Chitradurga: ಕವಾಡಿಗರಹಟ್ಟಿಗೆ ಸಚಿವ ರಹೀಂ ಖಾನ್ ಭೇಟಿ: ಅಧಿಕಾರಿಗಳೊಂದಿಗೆ ಸಭೆ!

By Govindaraj S  |  First Published Aug 6, 2023, 9:34 PM IST

ಕವಾಡಿಗರ ಹಟ್ಟಿಯಲ್ಲಿ ಕಲುಷಿತ ನೀರಿನಿಂದ ಉಂಟಾದ ಸಾರ್ವಜನಿಕ ಸಾವು, ನೋವುಗಳು ಮತ್ತೆಂದಿಗೂ ಮರುಕಳಿಸಬಾರದು, ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ನಗರ, ಸ್ಥಳೀಯ ಸಂಸ್ಥೆಗಳ ಎಲ್ಲ ವಾರ್ಡ್‍ಗಳ ನೀರು ಪೂರೈಕೆ ಪೈಪ್‍ಲೈನ್ ಸ್ಥಿತಿಗತಿ ಪರಿಶೀಲಿಸಿದರು.


ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ

ಚಿತ್ರದುರ್ಗ (ಆ.06): ಕವಾಡಿಗರ ಹಟ್ಟಿಯಲ್ಲಿ ಕಲುಷಿತ ನೀರಿನಿಂದ ಉಂಟಾದ ಸಾರ್ವಜನಿಕ ಸಾವು, ನೋವುಗಳು ಮತ್ತೆಂದಿಗೂ ಮರುಕಳಿಸಬಾರದು, ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ನಗರ, ಸ್ಥಳೀಯ ಸಂಸ್ಥೆಗಳ ಎಲ್ಲ ವಾರ್ಡ್‍ಗಳ ನೀರು ಪೂರೈಕೆ ಪೈಪ್‍ಲೈನ್ ಸ್ಥಿತಿಗತಿ ಪರಿಶೀಲಿಸಿ, ಒಂದು ವೇಳೆ ಯಾವುದೇ ಲೀಕೇಜ್ ಕಂಡುಬಂದಲ್ಲಿ ಕೂಡಲೆ ಅದನ್ನು ಸರಿಪಡಿಸುವ ಕಾರ್ಯ ಆಗಬೇಕು ಎಂದು ಪೌರಾಡಳಿತ ಹಾಗೂ ಹಜ್ ಸಚಿವ ಎಂ. ರಹೀಂ ಖಾನ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

Tap to resize

Latest Videos

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕವಾಡಿಗರ ಹಟ್ಟಿಯಲ್ಲಿ ನಡೆದಂತಹ ಘಟನೆಯನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಘಟನೆಗೆ ಪ್ರಮುಖ ಕಾರಣಗಳೇನು ಎಂಬುದನ್ನು ತಜ್ಞರ ತಂಡ ಸಮರ್ಪಕವಾಗಿ ಪರಿಶೀಲಿಸಿ ವರದಿ ಸಲ್ಲಿಸಬೇಕು ಎಂದು ಸಚಿವರು ಹೇಳಿದರು.  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಪರಶುರಾಮ್ ಅವರು ಮಾತನಾಡಿ, ಮೃತಪಟ್ಟ ವ್ಯಕ್ತಿಗಳ ಮರಣೋತ್ತರ ಪರೀಕ್ಷೆ ವರದಿ ಹಾಗೂ ಉಳಿದ ಎಫ್‍ಎಸ್‍ಎಲ್ ಪರೀಕ್ಷಾ ವರದಿ ಸೋಮವಾರದ ವೇಳೆಗೆ ಲಭ್ಯವಾಗುವ ಸಾಧ್ಯತೆಗಳಿದ್ದು, ವರದಿ ಬಂದ ಬಳಿಕ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.  

ಕಾಂಗ್ರೆಸ್‌ ಸರ್ಕಾರದಿಂದ ಭ್ರಷ್ಟಾಚಾರ, ವರ್ಗಾವಣೆ ದಂಧೆ: ಪ್ರಲ್ಹಾದ್‌ ಜೋಶಿ

ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಅವರು ಮಾತನಾಡಿ, ಘಟನೆಗೆ ಕಾರಣವಾದ ಅಂಶಗಳು ಹಾಗೂ ಸಮೀಕ್ಷೆಗೆ ರಾಜ್ಯದಿಂದ ತಜ್ಞ ವೈದ್ಯರುಗಳ ತಂಡ ಜಿಲ್ಲೆಗೆ ಆಗಮಿಸಿ, ಸರ್ವೆ ಕಾರ್ಯ ಕೈಗೊಂಡಿದೆ, ಈ ತಂಡವು ಕೂಡ ಕೆಲವು ಅಂಶಗಳನ್ನು ಸಲ್ಲಿಸಿದ್ದು, ಮುಂದಿನ ದಿನಗಳಲ್ಲಿ ದುರ್ಘಟನೆ ಮರುಕಳಿಸದಂತೆ ಆಗಲು, ಅವರಿಂದಲೂ ಕೂಡ ಸಲಹೆಗಳನ್ನು ಪಡೆಯಲಾಗುತ್ತಿದೆ.  ಕವಾಡಿಗರ ಹಟ್ಟಿ ಶಾಲೆಯಲ್ಲಿ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ತೆರೆದು ಅಲ್ಲಿನ ಜನರ ಆರೋಗ್ಯ ತಪಾಸಣೆ ಮತ್ತು 24*7 ಸೇವೆ ಲಭ್ಯವಿರುವಂತೆ ವ್ಯವಸ್ಥೆ ಮಾಡಲಾಗಿದೆ.  ಮೃತರ ಕುಟುಂಬಗಳಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 05 ಲಕ್ಷ ಹಾಗೂ ನಗರಸಭೆ ನಿಧಿಯಿಂದ 05 ಲಕ್ಷ ಸೇರಿದಂತೆ ಒಟ್ಟು ತಲಾ 10 ಲಕ್ಷ ರೂ. ಗಳಂತೆ ಪರಿಹಾರ ವಿತರಿಸಲಾಗಿದೆ. ಎಂದರು.

ಈ ಘಟನೆ ಜರುಗಿದೆ ಎಂದು ಕೇವಲ ಈ ಪ್ರದೇಶದಲ್ಲಿನ ಒಹೆಚ್‍ಟಿ ಟ್ಯಾಂಕ್ ಸ್ವಚ್ಛಗೊಳಿಸುವುದು ಹಾಗೂ ಪೈಪ್‍ಲೈನ್ ಪರಿಶೀಲಿಸುವುದು ಅಲ್ಲ, ಜಿಲ್ಲೆಯ ಎಲ್ಲ ನಗರ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವ ಎಲ್ಲ ವಾರ್ಡ್‍ಗಳಲ್ಲಿನ ಮೇಲ್ಮಟ್ಟದ ಹಾಗೂ ನೆಲಮಟ್ಟದ ನೀರು ಸಂಗ್ರಹಾಗಾರಗಳನ್ನು ನಿಯಮಿತವಾಗಿ ಸ್ವಚ್ಛ ಗೊಳಿಸಬೇಕು, ಅಲ್ಲದೆ ಎಲ್ಲ ಪೈಪ್‍ಲೈನ್‍ಗಳನ್ನು ಪರಿಶೀಲಿಸಬೇಕು, ಒಂದು ವೇಳೆ ಎಲ್ಲಿಯಾದರೂ ಸೋರಿಕೆ ಕಂಡುಬಂದು, ನೀರಿಗೆ ಕಲ್ಮಶ ಮಿಶ್ರಣವಾಗುತ್ತಿರುವುದು ಕಂಡುಬಂದಲ್ಲಿ, ತತಕ್ಷಣವೇ ಅದನ್ನು ಸರಿಪಡಿಸುವ ಕಾರ್ಯ ಆಗಬೇಕು.  

ದೇಶದಲ್ಲಿಯೇ ಭರವಸೆಗಳ ಈಡೇರಿಸಿದ ಸರ್ಕಾರ ಕಾಂಗ್ರೆಸ್‌: ಟಿ.ಬಿ.ಜಯಚಂದ್ರ

ಪ್ರಮುಖ ಪೈಪ್‍ನಿಂದ ಮನೆಗಳಿಗೆ ಸಂಪರ್ಕ ಕಲ್ಪಿಸುವ ಪೈಪ್‍ಲೈನ್ ಸರಿಯಾಗಿ ಆಗಿದೆಯೇ ಎಂಬುದನ್ನು ಪರಿಶೀಲಿಸಬೇಕು, ಯಾವುದೇ ಕಾರಣಕ್ಕೂ ನೀರಿನ ಪೈಪ್‍ಲೈನ್‍ಗಳು ಚರಂಡಿಗಳಲ್ಲಿ ಅಥವಾ ಯುಜಿಡಿ ಪೈಪ್‍ಲೈನ್‍ಗಳಲ್ಲಿ ಹಾದುಹೋಗಿರಬಾರದು.  ಇದನ್ನು ಪರಿಶೀಲಿಸಿ, ಇಂತಹ ಪ್ರಕರಣಗಳು ಇದ್ದಲ್ಲಿ, ಕೂಡಲೆ ಅಂತಹವುಗಳನ್ನು ತೆರವುಗೊಳಿಸಿ, ಸಮರ್ಪಕವಾಗಿ ಸಂಪರ್ಕ ನೀಡಬೇಕು ಎಂದರು.  ನಗರಸಭೆ ಪೌರಾಯುಕ್ತ ಶ್ರೀನಿವಾಸ್ ಉತ್ತರಿಸಿ, ಕವಾಡಿಗರ ಹಟ್ಟಿ ಸೇರಿದಂತೆ ಕೆಲವು ವಾರ್ಡ್‍ಗಳಲ್ಲಿ ಅನಧಿಕೃತವಾಗಿ ನಳದ ಸಂಪರ್ಕವನ್ನು ನಗರಸಭೆಯ ಗಮನಕ್ಕೆ ತಾರದಂತೆ ಪಡೆದಿರುವುದು ಕಂಡುಬಂದಿದ್ದು, ಈ ರೀತಿ ಅನಧಿಕೃತವಾಗಿ ಸಂಪರ್ಕ ಪಡೆಯುವಾಗ, ಚರಂಡಿಗಳ ಮೂಲಕವೂ ಪಡೆದಿರುತ್ತಾರೆ, ಇದರಿಂದಲೂ ತೊಂದರೆಯಾಗುವ ಸಾಧ್ಯತೆಗಳಿವೆ ಎಂದರು.

click me!