ಮಾಜಿ ಸಚಿವ ಸತೀಶ್ ಜಾರಕಿಹೊಳಿ ಭಾಗಿಯಾಗಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಜ್ಞಾನಪ್ರಕಾಶ ಸ್ವಾಮೀಜಿ ಬಂಧುತ್ವ ಇಲ್ಲದ ಹಿಂದುತ್ವ ಸಮಾಜಕ್ಕೆ ಅಪಾಯಕಾರಿ. ಮಂತ್ರದಿಂದ ದೇಶದ ಏಳ್ಗೆಯಾಗುವುದಿಲ್ಲ ಎಂದು ಹಿಂದುತ್ವ ಪ್ರತಿಪಾದಕರನ್ನು ಟೀಕಿಸಿದ್ಧಾರೆ.
ಚಿಕ್ಕೋಡಿ: "ಬಂಧುತ್ವ ಇಲ್ಲದ ಹಿಂದುತ್ವ ದೇಶಕ್ಕೆ ಅಪಾಯಕಾರಿ. ದೇಶ ಅತ್ಯಂತ ಅಪಾಯದಲ್ಲಿದೆ. ಇಬ್ಬರು ದೇಶವನ್ನು ಮಾರುತ್ತಿದ್ದಾರೆ, ಇಬ್ಬರು ದೇಶವನ್ನು ಕೊಳ್ಳುತ್ತಿದ್ದಾರೆ," ಎಂದು ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮೀತ್ ಷಾ ವಿರುದ್ಧ ಜ್ಞಾನಪ್ರಕಾಶ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಪ್ಪಾಣಿಯಲ್ಲಿ ಮೈಸೂರು ಉರಿಲಿಂಗ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾನವ ಬಂಧುತ್ವ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮನೆ ಮನೆಗೆ ಬುದ್ದ, ಬಸವ, ಅಂಬೇಡ್ಕರ್ ತಲುಪಬೇಕಿದೆ ಎಂದು ಅಭಿಪ್ರಾಯಪಟ್ಟರು. "ಈ ದೇಶದಲ್ಲಿ ಆರು ನಿಮಿಷಕ್ಕೆ ಒಂದು ರೇಪ್ ಆಗುತ್ತಿದೆ. ಮಂತ್ರದಿಂದ ದೇಶದಲ್ಲಿ ಏನು ಆಗುವುದಿಲ್ಲ, ನಿಮ್ಮನ್ನು ಮೂರ್ಖರನ್ನಾಗಿಸಲು ಯತ್ನ ನಡೆದಿದೆ. ಮಂತ್ರದಿಂದ ಭಾರತ ಆಗಬಾರದು ಬಂಧುತ್ವದಿಂದ ಭಾರತ ಆಗಬೇಕು. ಹಿಂದುತ್ವ ಹಾಗೂ ದೇವರು ಎಂಬುದು ಸುಳ್ಳು, ಕೋವಿಡ್ ಬಂದಾಗ ದೇವರು ಎಲ್ಲಿ ಹೊಗಿದ್ದ," ಎಂದು ಗಂಭೀರವಾಗಿ ಟೀಕಿಸಿದ್ದಾರೆ.
"ದೇಶದಲ್ಲಿ ಬೆಂಕಿ ಬಿದ್ದಿದೆ, ಜಾತಿ, ಧರ್ಮಗಳ ನಡುವೆ ಬೆಂಕಿ ಬಿದ್ದಿದೆ. ಹೆಣಗಳ ರಾಜಕಾರಣ, ಹಣದ ರಾಜಕಾರಣ ನಡಿಯುತ್ತಿದೆ. ಹೆಣ ಬಿದ್ದರೆ, ಯಾವ ಪಕ್ಷದ ಹೆಣ ಅನ್ನುವ ರೀತಿಯಾಗಿದೆ. ಇನ್ನು ಮುಂದೆ ಹಿಂದುತ್ವ ಜೊತೆ ಅಲ್ಲ ಬಂಧುತ್ವ ಜೊತೆ ಚುನಾವಣೆ ನಡಿಯಬೇಕು. ದೇಶದಲ್ಲಿ ವ್ಯಕ್ತಿ ಪೂಜೆ, ಅಪಾಯಕಾರಿ," ಎಂದು ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿ ಮೈಸೂರು ಉರಿಲಿಂಗ ಮಠ ಜ್ಞಾನ ಪ್ರಕಾಶ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸತೀಶ್ ಜಾರಕಿಹೊಳಿ ಮಾತನಾಡಿ, "ಬುದ್ದ, ಬಸವ, ಅಂಬೇಡ್ಕರ್ ನಮ್ಮ ನೇತಾರರು. ಎರಡು ಸಾವಿರ ವರ್ಷದ ಹಿಂದೆ ಯಾವುದೇ ಜಾತಿ, ಧರ್ಮ ಇರಲಿಲ್ಲ ಎಲ್ಲರೂ ಒಂದೇ ಇತ್ತು. ನಾವು ಮಾಡುತ್ತಿದ್ದು ಕೆಲಸ ಬೇರೆ ಬೇರೆಯಾಗಿತ್ತು ಅಷ್ಟೇ. ಅದರಿಂದ ನಮ್ಮನ್ನ ಬೇರೆ ಮಾಡಿದ್ರೂ ಈಗ ಮತ್ತೆ ಒಂದಾಗುವವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ. ಇದಕ್ಕೆ ರಾಜಕೀಯವಾಗಿ ಅಧಿಕಾರವೂ ಬಹಳ ಮುಖ್ಯ. ಅಧಿಕಾರ ಇಲ್ಲದೇ ನಾವು ಎನೂ ಮಾಡಲು ಆಗುವುದಿಲ್ಲ. ಸಮಾನತೆ ಬಗ್ಗೆ ಮಾತನಾಡುವವರ ಪವರ್ ನೀಡಬೇಕು. ಒಡೆದು ಆಳುವವರು ನಮಗೆ ಬೇಡ. ಹೀಗಾಗಿ ಒಂದು ಸಮಾನತೆ, ಅಧಿಕಾರಕ್ಕಾಗಿ ನಮ್ಮ ಹೋರಾಟ. ಈಗ ನಾವು ನೋಡುತ್ತಿರುವ ಇತಿಹಾಸ ನೀವು ಓದುತ್ತಿರುವ ಇತಿಹಾಸ ತಪ್ಪಾಗಿದೆ. ಹೀಗಾಗಿ ಇದರ ಪರಿಣಾಮಗಳು ಬೇರೆ ಬೇರೆಯಾಗುತ್ತೆ. ಅದಕ್ಕಾಗಿ ಇಂತಹ ಕಾರ್ಯಕ್ರಮಗಳು ಬಹಳ ಅವಶ್ಯಕತೆ ಇದೆ. ಶಿವಾಜಿ ಮಹಾರಾಜರ ಅಂತ್ಯೆ ಹೇಗಾಯ್ತು ಅಂತಾ ಯಾರು ಹೇಳಿಲ್ಲಾ. ಅವರ ಅಂತ್ಯ ಹೇಗೆ ಆಯ್ತು ಅಂತಾ ಎಲ್ಲಿಯೂ ಚರ್ಚೆ ಆಗ್ತಿಲ್ಲಾ. ಶಿವಾಜಿ ಮಹಾರಾಜರ ಜತೆಗೆ ಎನಾಗಿತ್ತು ಅನ್ನೋದನ್ನ ಹೊರ ತೆಗೆಯಲು ಮಾನವ ಬಂಧುತ್ವ ವೇದಿಕೆ ಮಾಡಿದ್ದೇವೆ. ಬಸವಣ್ಣನವರ ಜತೆಗೆ ಅವತ್ತು ಎನಾಯಿತು. ಅಂತಹ ಕ್ರಾಂತಿಕಾರಿ ಅವರು ನೀರಲ್ಲಿ ಮುಳಗಿ ಸಾಯುತ್ತಾರಾ. ಸಮಾಜಕ್ಕಾಗಿ ಹೋರಾಡುವವರು ಅಷ್ಟೊಂದು ಸುಲಭವಾಗಿ ಸಾಯುವುದಿಲ್ಲ. ಬಸವಣ್ಣನವರ ಜತೆಗೂ ಅಂದು ದೋಖಾ ಆಗಿದೆ. ಸಂತ ತುಕಾರಾಂ ಜತೆಗೂ ಹೀಗೆ ಆಗಿದೆ," ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಇದನ್ನೂ ಓದಿ: ನಮ್ಮ ಕುಟುಂಬ ಯಾವುದೇ ಸರ್ಕಾರ ಬೀಳಿಸಿಲ್ಲ: ಸತೀಶ್ ಜಾರಕಿಹೊಳಿ
"ಶಿವಾಜಿ ಮಹಾರಾಜರ ಇತಿಹಾಸವನ್ನ ಮುಚ್ಚಿಡಲಾಗಿತ್ತು. ಯಾಕೆ ಇತಿಹಾಸವನ್ನ ಮುಚ್ಚಿಡಲಾಗಿತ್ತು ಅನ್ನೋದು ಚರ್ಚೆ ಆಗಿಲ್ಲ. ಮಹಾತ್ಮ ಫುಲೆ ಇಲ್ಲದಿದ್ರೇ ಇತಿಹಾಸ ಹೊರ ಬರುತ್ತಿರಲಿಲ್ಲ. ಇತಿಹಾಸವನ್ನ ಮುಚ್ಚಿಡಲಾಗಿತ್ತು ಅದರ ಬಗ್ಗೆ ಈಗ ಚರ್ಚೆ ಆಗುತ್ತಿದೆ. ಶಿವಾಜಿ ಮಹಾರಾಜರಿಗೆ ಯುದ್ದದ ವೇಳೆ ಹಿಂದೂ, ಮರಾಠ ಸಲಹೆ ನೀಡಿಲ್ಲ ಮುಸ್ಲಿಂರು ಸಲಹೆ ನೀಡಿದ್ರೂ. ಆಗ್ರಾದಲ್ಲಿ ಬಂಧಿತರಾಗಿದ್ದ ಶಿವಾಜಿ ಅವರನ್ನ ಮುಸ್ಲಿಮರೇ ಬಿಡಿಸಿಕೊಂಡು ಬಂದಿದ್ದರು. ಆದ್ರೇ ಈಗ ಮರಾಠ ಮುಸ್ಲಿಂ ಜಗಳ, ಶಿವಾಜಿ ಮಹಾರಾಜರ ಕಾಲದಲ್ಲಿ ಹೀಗಿರಲಿಲ್ಲ. ಎಲ್ಲ ಜಾತಿಯವರಿಗೂ ಸಮಾನವಾಗಿ ನೋಡಿಕೊಳ್ಳುತ್ತಿದ್ದರು. ಶಿವಾಜಿ ಅವರ ಪೇಂಟಿಂಗ್ ಪಾಟೀಲ್, ಜಾಧವ್, ದೇಶಪಾಂಡೆ ಬರೆದಿಲ್ಲ. ಮುಸಲ್ಮಾನರಾದ ಮೊಹಮ್ಮದ್ ಮುರಾರಿ ಬರೆದಿದ್ದು. ಶಿವಾಜಿ ಮಹಾರಾಜರ ಅಂಗರಕ್ಷಕರು ಮುಸಲ್ಮಾನರಿದ್ದರು ಇದನ್ನ ಮರಾಠರು ತಿಳಿದುಕೊಳ್ಳುವುದು ಬಹಳ ಅವಶ್ಯಕತೆ ಇದೆ. ಪ್ರತಾಪ್‌ಘಡ್ ಕೋಟೆಯಲ್ಲಿ ಶಿವಾಜಿ ಮಹಾರಾಜರು ಮಸೀದಿಯನ್ನ ನಿರ್ಮಾಣ ಮಾಡಿದ್ರೂ. ಈಗ ನಮಗೆ ಇತಿಹಾಸವನ್ನ ಬೇರೆ ರೀತಿ ತೋರಿಸಲಾಗುತ್ತಿದೆ," ಎಂದು ಅವರು ಇತಿಹಾಸದ ಮೇಲೆ ಬೆಳಕು ಚೆಲ್ಲಿದರು.
"ಶಿವಾಜಿ ಮಹಾರಾಜರ, ಬಸವಣ್ಣನವರ, ಶಾಹು ಮಹಾರಾಜ ಇತಿಹಾಸ ಬೇರೆ ಬೇರೆ ತೋರಿಸುತ್ತಿದ್ದಾರೆ. ಶಿವಾಜಿ ಮಹಾರಾಜರ ಅಂತ್ಯ ಹೇಗಾಯ್ತು ಅಂತಾ ಚರ್ಚೆಯಾಗುವುದು ಬಹಳ ಮುಖ್ಯ ಇದೆ. ಬಸವಣ್ಣನವರ ಹತ್ಯೆಯಾಗಿದೆ ಅದನ್ನ ಮುಸ್ಲಿಮರು ಮಾಡಿದ್ರ? ಒಂದು ಲಕ್ಷ ಜೈನ್ ರ ಹತ್ಯೆಯಾಗಿತ್ತು ಅದನ್ನ ಆದಿಲ್ ಶಾಹಿ ಮಾಡಿದ್ರ? ಈ ಇತಿಹಾಸ ಬೇರೆ ನಾವು ನೋಡುತ್ತಿರುವ ಇತಿಹಾಸ ಬೇರೆ. ಈಗ ತೋರಿಸುತ್ತಿರುವ ಸಿನೇಮಾ ಎನಾಗುತ್ತಿದೆ ಅಂತಾ ಗೊತ್ತಾಗುತ್ತಿಲ್ಲ. ನಿಪ್ಪಾಣಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿಕೆ. ಹಿಂದು ಶಬ್ದ ಎಲ್ಲಿಂದ ಬಂತೂ, ಅದು ನಮ್ಮದು ಅಲ್ಲಾ ಪರ್ಷಿಯನ್‌ದ್ದು. ಪರ್ಷಿಯನ್ ಇರಾಕ್, ಇರಾನ್, ಖಜಕಿಸ್ತಾನ್‌ದು ಅದಕ್ಕೂ ಭಾರತಕ್ಕೂ ಎನೂ ಸಂಬಂಧ. ಹಿಂದು ಶಬ್ದ ಹೇಗೆ ಬಂತೂ ಅನ್ನೋದು ಚರ್ಚೆಯಾಗಬೇಕು. ಪರ್ಷಿಯನ್ ಶಬ್ದವನ್ನ ಇಷ್ಟೊಂದು ಮೇಲಕ್ಕೆ ಯಾಕೆ ತೆಗೆದುಕೊಂಡು ಹೋಗುತ್ತಿದ್ದೀರಿ. ಹಿಂದು ಶಬ್ದದ ಅರ್ಥ ಗೊತ್ತಾದ್ರೇ ನಿಮಗೆ ನಾಚಿಕೆ ಬರುತ್ತೆ. ಹಿಂದು ಶಬ್ದದ ಅರ್ಥ ಬಹಳ ಅಶ್ಲೀಲವಾಗಿದೆ. ಇದು ಈಗಾಗಲೇ ವೆಬ್ ಸೈಟ್ ನಲ್ಲಿದೆ," ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಇದನ್ನೂ ಓದಿ: Belagavi: ಮಕ್ಕಳ ಭವಿಷ್ಯದ ಚಿಂತನೆ ಆಗಬೇಕು: ಸತೀಶ್ ಜಾರಕಿಹೊಳಿ
ಮುಂದುವರೆದ ಅವರು, ಎಲ್ಲಿಂದಲೋ ತೆಗೆದುಕೊಂಡು ಬಂದು ನಮ್ಮ ಮೇಲೆ ಒತ್ತಾಯಪೂರ್ವಕವಾಗಿ ಹೇರುತ್ತಿದ್ದಾರೆ. ಇದರ ಬಗ್ಗೆ ಚರ್ಚೆಯಾಗಬೇಕು ಇದು ಯಾರದ್ದು ಎಲ್ಲಿಂದ ಬಂತೂ ಅನ್ನೋದು. ಹೀಗಾಗಿ ಮೊದಲು ನೀವು ಇತಿಹಾಸ ತಿಳಿದುಕೊಳ್ಳುವುದು ಅವಶ್ಯವಿದೆ. ಬಹಳ ಜನರ ಹತ್ಯೆಯಾಗಿದೆ ಹೇಳಿದ್ತೂ ಮುಗಿತು. ಇಲ್ಲಿ ನೀರಲ್ಲಿ ಮುಳುಗಿ ಸತ್ರೂ ಅವರ ದೇವಸ್ಥಾನ ಕಟ್ಟಿ ಪೂಜೆ ಮಾಡಿ ಮುಗಿತು. ಬಹಳ ವಿಚಿತ್ರ ಇತಿಹಾಸ ಇದೆ ಅದನ್ನ ತಿಳಿದುಕೊಳ್ಳಲು ಬಹಳ ಸಮಯ ಬೇಕಾಗುತ್ತೆ. ಇಂಗ್ಲೆಂಡ್‌ಗೆಲ್ಲಾ ನೀವು ಹೋಗಬೇಕಾಗಿಲ್ಲ ನಿಮ್ಮ ಅಂಗೈಯಲ್ಲೇ ಇತಿಹಾಸ ಇದೆ ಓದಿ. ನಾವು ಹಿಂದೆ ಹೋಗಿ ಎನಾಗಿದೆ ಅನ್ನೋದನ್ನ ನೋಡಬೇಕಾಗಿದೆ.
ಸುಳ್ಳು ಯಾರು ಹೇಳ್ತಿದ್ದಾರೆ ಅವರಿಗೆ ನಾವು ಮಹಾನ್ ವ್ಯಕ್ತಿ ಅಂತಾ ಹೇಳ್ತಿದ್ದೇವೆ. ಸುಳ್ಳು ಹೇಳ್ತಿರುವವರಿಗೆ ನಾವು ದೇಶದ ಆದರ್ಶ ಮಾಡುತ್ತಿದ್ದೇವೆ ಎಂದು ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.