ಡೀಸೆಲ್ ಬೆಲೆ ಎಷ್ಟೇ ಹೆಚ್ಚಾದರೂ ನಿಮ್ಮ ವಾಹನಗಳಿಗೆ ಹಾಕಿಸುತ್ತೀರಿ. ಅಕ್ಕಿ, ಬಟ್ಟೆ, ಎಣ್ಣೆ, ಬೇಳೆ, ತರಕಾರಿ ಎಷ್ಟೇ ಹೆಚ್ಚಾ ದರೂ ಖರೀದಿಸುತ್ತೀರಿ. 10-15 ವರ್ಷದ ಬಳಿಕ ಶೇ.15 ರಷ್ಟು ದರ ಪರಿಷ್ಕರಣೆ ಮಾಡ ಲಾಗಿದೆ. ಸರ್ಕಾರ ಸಾರಿಗೆ ನಿಗಮಗಳಿಗೆ ಎಷ್ಟು ಬೆಂಬಲ ನೀಡಲು ಸಾಧ್ಯ ಎಂದ ಸಚಿವ ಎನ್. ಚಲುವರಾಯಸ್ವಾಮಿ
ಬೆಂಗಳೂರು(ಜ.05): ಮಟನ್ ಬೆಲೆ ಕೆಜಿಗೆ 100 ರು. ಇದ್ದದ್ದು 500 ರು. ಆದರೂ ಖರೀದಿ ಮಾಡುತ್ತೀರಿ. 10-15 ವರ್ಷದ ಅನಿವಾರ್ಯವಾಗಿ ಬಳಿಕ ಬಸು ಪ್ರಯಾಣ ದರ ಹೆಚ್ಚಳ ಮಾಡಿದ್ದರೆ ಅದನ್ನು ಯಾಕೆ ದೊಡ್ಡದು ಮಾಡುತ್ತೀರಿ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಪ್ರಶ್ನಿಸಿರುವುದು ವಿವಾದಕ್ಕೆ ಕಾರಣವಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡೀಸೆಲ್ ಬೆಲೆ ಎಷ್ಟೇ ಹೆಚ್ಚಾದರೂ ನಿಮ್ಮ ವಾಹನಗಳಿಗೆ ಹಾಕಿಸುತ್ತೀರಿ. ಅಕ್ಕಿ, ಬಟ್ಟೆ, ಎಣ್ಣೆ, ಬೇಳೆ, ತರಕಾರಿ ಎಷ್ಟೇ ಹೆಚ್ಚಾ ದರೂ ಖರೀದಿಸುತ್ತೀರಿ. 10-15 ವರ್ಷದ ಬಳಿಕ ಶೇ.15 ರಷ್ಟು ದರ ಪರಿಷ್ಕರಣೆ ಮಾಡ ಲಾಗಿದೆ. ಸರ್ಕಾರ ಸಾರಿಗೆ ನಿಗಮಗಳಿಗೆ ಎಷ್ಟು ಬೆಂಬಲ ನೀಡಲು ಸಾಧ್ಯ ಎಂದರು.
ಹೊಸ ಬಸ್ ಬಂದಾಗ ಉತ್ತರ ಕರ್ನಾಟಕ ಲೆಕ್ಕಕ್ಕಿಲ್ಲ, ಟಿಕೆಟ್ ದರ ಏರಿಕೆ ವೇಳೆ ಇವರು ಮಿಸ್ಸೇ ಇಲ್ಲ!
ಇನ್ನು ಗ್ಯಾರಂಟಿ ಯೋಜನೆಯ ಪರಿಣಾಮದಿಂದ ದರ ಪರಿಷ್ಕರಣೆ ಎಂದು ಸುಳ್ಳು ಹಬ್ಬಿಸಲಾಗುತ್ತಿದೆ. ದರ ಪರಿಷ್ಕರಣೆಗೂ ಗ್ಯಾರಂಟಿಗೂ ಸಂಬಂಧವೇ ಇಲ್ಲ. ಬಸ್ಸು ಪ್ರಯಾಣ ದರ ಪರಿಷ್ಕರಣೆ ಮಾಡಿದರೆ ಶಕ್ತಿ ಯೋಜನೆಯಡಿ ಸರ್ಕಾರ ನಿಗಮಗಳಿಗೆ ಕೊಡಬೇಕಾಗಿದ್ದ ಹಣವನ್ನೂ ಹೆಚ್ಚಾಗಿ ಕೊಡ ಬೇಕು. ಇದರಿಂದ ಸರ್ಕಾರಕ್ಕೆ ಇನ್ನೂ ಹೆಚ್ಚು ಹೊರೆಆಗುತ್ತದೆ.ಹೀಗಿದ್ದರೂ ಅನಿವಾರ್ಯವಾಗಿ ಪರಿ ಷ್ಕರಣೆ ಮಾಡ ಲಾಗಿದೆ ಎಂದು ಸರ್ಮಥಿಸಿದರು.
ರಾಜ್ಯದಲ್ಲಿ 4,000ಕ್ಕೂ ಹೆಚ್ಚು ಹೊಸ ಬಸ್ಸು ಖರೀದಿಸಲಾಗಿದೆ. 7ನೇ ವೇತನ ಆಯೋಗ ಜಾರಿ ಮಾಡಲಾಗಿದೆ. ಡೀಸೆಲ್ ದರವೂ ಹೆಚ್ಚಳವಾಗಿದೆ. ಇನ್ನು ನಮ್ಮಲ್ಲಿ 84 ರು. ಪ್ರಯಾಣ ದರ ಇದ್ದರೆ ನೆರೆಯ ಆಂಧ್ರಪ್ರದೇಶದಲ್ಲಿ 140 ರು. ಇದೆ. ನಗರ ಹಾಗೂ ಗ್ರಾಮೀಣ ಸಾರಿಗೆ ವಿಚಾರದಲ್ಲಿ ಮಹಾರಾಷ್ಟ್ರ, ಆಂಧ್ರ, ತೆಲಂಗಾಣ, ತಮಿಳುನಾಡು, ಕೇರಳ ಸೇರಿ ಎಲ್ಲಾ ನೆರೆ ರಾಜ್ಯಗಳಲ್ಲೂ ರಾಜ್ಯಕ್ಕಿಂತ ತುಂಬಾ ಹೆಚ್ಚಿನ ಪ್ರಯಾಣದರ ಇದೆ. ಇದೆಲ್ಲವನ್ನೂ ನೋಡಿಕೊಂಡು ಅಲ್ಪ ಪ್ರಮಾಣದಲ್ಲಿ ದರ ಹೆಚ್ಚಳ ಮಾಡಲಾಗಿದೆ. ಇದನ್ನು ವಿರೋಧಿಸಿದರೆ ಹೇಗೆ ಎಂದು ಪ್ರಶ್ನಿಸಿದರು.
ಬಸ್ ಪ್ರಯಾಣ ದರ ಏರಿಕೆ ಹಿಂದೆ ಸದುದ್ದೇಶ ಇರಬಹುದು: ಸ್ಪೀಕರ್ ಯು.ಟಿ.ಖಾದರ್
ಮಂಗಳೂರು: ರಾಜ್ಯ ಸರ್ಕಾರ ಶೇ.15ರಷ್ಟು ಬಸ್ ಪ್ರಯಾಣ ದರ ಏರಿಕೆಯೇ ಮೊದಲಾದ ವಿಚಾರಗಳಲ್ಲಿ ಜನಹಿತದ ದೃಷ್ಟಿಯನ್ನು ಗಮನದಲ್ಲಿರಿಸಿಯೇ ಸರ್ಕಾರ ನಿರ್ಧಾರ ಕೈಗೊಳ್ಳುತ್ತದೆ ಎಂದು ಸ್ಪೀಕರ್ ಯು.ಟಿ.ಖಾದರ್ ಸಮರ್ಥಿಸಿಕೊಂಡಿದ್ದಾರೆ. ಬಸ್ ಪ್ರಯಾಣ ದರ ಏರಿಕೆಗೆ ಜನತೆಯ ವಿರೋಧ ಕುರಿತ ಸುದ್ದಿಗಾರರ ಪ್ರಶ್ನೆಗೆ ಶುಕ್ರವಾರ ಮಂಗಳೂರಲ್ಲಿ ಪ್ರತಿಕ್ರಿಯಿಸಿದ ಯು.ಟಿ.ಖಾದರ್, ಸರ್ಕಾರದ ಈ ನಿರ್ಧಾರದ ಹಿಂದೆ ಯಾವುದೋ ಸದುದ್ದೇಶ ಇರಬಹುದು. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಎಂದರೆ, ಮಹಿಳೆಯರು ಹಣ ತೆತ್ತು ಪ್ರಯಾಣಿಸುವುದಿಲ್ಲ. ಆದರೆ ಅವರ ಟಿಕೆಟ್ ಮೊತ್ತವನ್ನು ಸರ್ಕಾರವೇ ಕೆಎಸ್ಆರ್‌ಟಿಸಿಗೆ ಭರಿಸುತ್ತದೆ.
Bengaluru: ಪರಿಷ್ಕೃತ ದರ ಪಟ್ಟಿ ಬಿಡುಗಡೆ ಮಾಡಿದ ಬಿಎಂಟಿಸಿ, ಬಸ್ ಹತ್ತೋ ಮುನ್ನ ಚಿಲ್ಲರೆ ಕೈಯಲ್ಲಿರಲಿ!
ಅದು ಕೆಎಸ್ಆರ್‌ಟಿಸಿಗೆ ಉಚಿತವಲ್ಲ. ಈಗ ದರ ಏರಿಕೆಯನ್ನು ಜನಸಾಮಾನ್ಯರೂ ವಿರೋಧಿಸುತ್ತಾರೆ ಎನ್ನುವಂತಿಲ್ಲ. ಜನತೆಗೆ ತೊಂದರೆಯಾಗದಂತೆ ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದು ಸರ್ಕಾರದ ನಿಲುವನ್ನು ಸ್ಪೀಕರ್ ಸಮರ್ಥಿಸಿದರು. ರಾಜ್ಯದಲ್ಲಿ ಗೋಹತ್ಯೆ ನಿಷೇಧವನ್ನು ಸ್ಪೀಕರ್ ಬೆಂಬಲಿಸಲಿ ಎನ್ನುವ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಹೇಳಿಕೆ ಬಗ್ಗೆ ಉತ್ತರಿಸಿದ ಯು.ಟಿ.ಖಾದರ್, ಗೋಹತ್ಯೆ ನಿಷೇಧ ಕಾನೂನು ಮೊದಲು ದೇಶದಲ್ಲಿ ಜಾರಿಗೆ ತಂದದ್ದು ಆಗಿನ ಪ್ರಧಾನಿ ಇಂದಿರಾ ಗಾಂಧಿ. ಆಗ ಅವರು ಬೇರೆ ಬೇರೆ ರಾಜ್ಯದಲ್ಲಿ ಬೇರೆ ಬೇರೆ ಕಾನೂನು ಎಂದು ಜಾರಿ ಮಾಡಿಲ್ಲ. ದೇಶದ ಎಲ್ಲ ರಾಜ್ಯಗಳಿಗೂ ಒಂದೇ ಕಾನೂನು ಜಾರಿಗೆ ತಂದರು. ಅದು ದೇಶದಲ್ಲೇ ಅನುಷ್ಠಾನಗೊಳ್ಳುತ್ತಿದೆ.
ಕರ್ನಾಟಕದಲ್ಲಿ ಪ್ರತ್ಯೇಕ ಅನುಷ್ಠಾನಗೊಳಿಸುವ ಮಾತೇ ಇಲ್ಲ. ಆನೆ, ಹಸು ಸೇರಿದಂತೆ ಪ್ರಾಣಿಗಳ ಯಾವುದೆಲ್ಲ ಜೀವ ಉಳಿಸಬೇಕು ಎಂಬ ಬಗ್ಗೆ ಬೇಕಾದರೆ ಅವರಿಗೆ ಪಟ್ಟಿ ನೀಡಲು ಸಿದ್ಧ ಎಂದರು. ಜಿಲ್ಲೆಗೊಂದು ಗೋಶಾಲೆ ಯೋಜನೆ ಜಾರಿಗೊಳಿಸಿದ್ದು ಹಿಂದಿನ ಸರ್ಕಾರ. ಅವರು ಎಷ್ಟು ಕಡೆ ಜಾರಿ ಮಾಡಿದ್ದಾರೆ ಎಂಬುದನ್ನು ಮೊದಲು ಹೇಳಲಿ. ಮತ್ತೆ ಈ ಸರ್ಕಾರ ಗೋಶಾಲೆ ಯೋಜನೆ ರದ್ದುಗೊಳಿಸಿದ ಬಗ್ಗೆ ಮಾತನಾಡಲಿ ಎಂದು ಸ್ಪೀಕರ್ ಖಾದರ್ ಹೇಳಿದರು. ನಾನು ಸಚಿವನಾಗುವ ವಿಚಾರ ನನಗೆ ಗೊತ್ತಿಲ್ಲ ಎಂದು ಸಂಪುಟ ವಿಸ್ತರಣೆಯಲ್ಲಿ ಸಚಿವರಾಗುವಿರಾ ಎಂಬ ಪ್ರಶ್ನೆಗೆ ಸ್ಪೀಕರ್ ಖಾದರ್ ಉತ್ತರಿಸಿದರು.