ಗ್ಯಾರಂಟಿ ಯೋಜನೆ ಪರಿಷ್ಕರಣೆ ಮಾಡುವ ವಿಚಾರದ ಬಗ್ಗೆ ನಾನು ಮಾತನಾಡೊಲ್ಲ. ಯೋಜನೆಗಳು ದುರುಪಯೋಗ ಆಗಬಾರದು ಅಷ್ಟೇ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಬೆಂಗಳೂರು (ಆ.14): ಗ್ಯಾರಂಟಿ ಯೋಜನೆ ಪರಿಷ್ಕರಣೆ ಮಾಡುವ ವಿಚಾರದ ಬಗ್ಗೆ ನಾನು ಮಾತನಾಡೊಲ್ಲ. ಯೋಜನೆಗಳು ದುರುಪಯೋಗ ಆಗಬಾರದು ಅಷ್ಟೇ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಗ್ಯಾರಂಟಿ ಯೋಜನೆ ಪರಿಷ್ಕರಣೆ ಮಾಡುವ ವಿಚಾರ ಸಂಬಂಧ ಮಾಧ್ಯಮಗಳು ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಕೆಲವರು ಎರಡು ಮೂರು ಕಡೆ ಅನುಕೂಲ ಪಡೆಯುತ್ತಿದ್ದಾರೆ. ಆ ರೀತಿಯ ದುರುಪಯೋಗ ಆಗಬಾರದು. ಪರಿಷ್ಕರಣೆ ಬಗ್ಗೆ ಸಚಿವರು ಮಾತನಾಡಿದ್ದರೆ ಅದು ಅವರ ವೈಯಕ್ತಿಕ ಅಭಿಪ್ರಾಯ. ನಾನು ಗ್ಯಾರಂಟಿ ಯೋಜನೆಗಳು ದುರುಪಯೋಗ ಆಗಬಾರದು ಎಂದು ಮಾತ್ರ ಹೇಳುತ್ತೇನೆ. ದೆಹಲಿ ಮಟ್ಟದಲ್ಲಿ ಪರಿಷ್ಕರ ಈ ಸಂಬಂಧ ಏನೇ ತೀರ್ಮಾನ ಮಾಡಿದ್ರೂ ನಮ್ಮ ಸರ್ಕಾರ ಮಾಡುತ್ತದೆ ಎಂದರು.
ಅಕೌಂಟ್‌ಗೆ ಗೃಹಲಕ್ಷ್ಮೀ ಹಣ ಬಿದ್ದದ್ದೇ ತಡ ಮನೆಗೆ ವಾಷಿಂಗ್ ಮಷಿನ್ ತಂದ ಗೃಹಿಣಿ!
ಗ್ಯಾರಂಟಿ ಯೋಜನೆ ಬಂದ್ ಆಗುತ್ತಾ?
ಗ್ಯಾರಂಟಿ ಯೋಜನೆ ಲೋಕಸಭಾ ಚುನಾವಣೆ ಮುಗಿಯುವವರೆಗೆ ಮಾತ್ರ ಅನಂತರ ಬಂದ್ ಆಗುತ್ತೆ ಎಂದು ಭವಿಷ್ಯ ನುಡಿದಿದ್ದ ಬಿಜೆಪಿ ಶಾಸಕ ಯತ್ನಾಳ್. ಇದೀಗ ಯತ್ನಾಳ್ ಹೇಳಿದಂತೆ ರಾಜ್ಯಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗ್ಯಾರಂಟಿ ಯೋಜನೆ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಅದರಲ್ಲಿ ದೆಹಲಿ ಮಟ್ಟದಲ್ಲಿ ಮರುಪರಿಶೀಲನೆ ಮಾಡುವಂತೆ ಸಚಿವರು ಮನವರಿಕೆ ಮಾಡಿರುವ ಹಿನ್ನೆಲೆ ತೀವ್ರ ಚರ್ಚೆಗೆ ಕಾರಣವಾಗಿದೆ. ಗ್ಯಾರಂಟಿ ಯೋಜನೆಗಳಿಂದ ಇತರೆ ಇಲಾಖೆಗಳಿಗೆ ಹಣ ಸಾಕಾಗುತ್ತಿಲ್ಲ ಎನ್ನುತ್ತಿರುವ ಸಚಿವರು. ಗ್ಯಾರಂಟಿ ವಿಚಾರದಲ್ಲಿ ಶಾಸಕರ ಅಭಿಪ್ರಾಯ ಏನು? ಅಭಿವೃದ್ಧಿಗಾಗಿ ಶಾಸಕರು ಕೊಟ್ಟ ಮನವಿಗಳಿಗೆ ಪುರಸ್ಕರಿಸುತ್ತಿಲ್ಲ. ಕ್ಷೇತ್ರದ ವಿವಿಧ ಭಾಗಗಳಲ್ಲಿ ಸಮಸ್ಯೆಗಳು ಉಲ್ಬಣಗೊಳ್ಳುತ್ತಿವೆ. ಸಮಸ್ಯೆ ಪರಿಹಾರಕ್ಕೆ ಆರ್ಥಿಕ ನೆರವು ನಿರೀಕ್ಷಿತ ಮಟ್ಟದಲ್ಲಿ ಸಿಕ್ಕಿಲ್ಲ. ದೊಡ್ಡ ಪ್ರಮಾಣದಲ್ಲಿ ಆರ್ಥಿಕ ನೆರವು ಸಿಗುವ ಸಾಧ್ಯತೆಗಳು ತೀರಾ ಕಡಿಮೆ. ಗ್ಯಾರಂಟಿ ಯೋಜನೆಗಳಿಗೆ ದೊಡ್ಡ ಮೊತ್ತ ಹಂಚಿಕೆಯಾಗುತ್ತಿರುವ ಹಿನ್ನೆಲೆ.. ಗ್ಯಾರಂಟಿ ಯೋಜನೆಗಳನ್ನ ಪರಿಷ್ಕರಣೆ ಮಾಡಲು ನೀತಿ ರೂಪಿಸಬೇಕು. ಅನುದಾನ ಸಿಗದಿದ್ದರೆ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಲು ಕಷ್ಟವಾಗುತ್ತದೆ. ಪರಿಷ್ಕೃತ ರೂಪದಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಬೇಕು ಎಂದು ಮನವಿ ಮಾಡಿರುವ ಪ್ರಮುಖರು. ಅದರಲ್ಲೂ ಕಾಂಗ್ರೆಸ್ ವಿರುದ್ಧ ಇರುವವರು ಸಹ ಗ್ಯಾರಂಟಿ ಯೋಜನೆಗಳನ್ನು ಬಳಕೆ ಮಾಡುತ್ತಿರುವುದು ಆಕ್ಷೇಪ ವ್ಯಕ್ತಪಡಿಸಿರುವ ಸಚಿವರು. ಸರ್ಕಾರದ ವಿರುದ್ಧ, ಗ್ಯಾರಂಟಿ ಯೋಜನೆಗಳ ವಿರುದ್ಧ ಹೋರಾಟ ಮಾಡುತ್ತಿರುವವರಿಗೆ ಯಾಕೆ ಗ್ಯಾರಂಟಿ ಯೋಜನೆ ಬೇಕು. ಹೀಗಾಗಿ ಮರುಪರಿಶೀಲನೆ ನಡೆಸುವಂತೆ ಮನವರಿಕೆ ಮಾಡಿರುವ ನಾಯಕರು.
ಗ್ಯಾರಂಟಿ ನಾಶವೇ ವಿಪಕ್ಷ ಗುರಿ: ಸುರ್ಜೇವಾಲಾ
ಈಗಿನ ಸ್ಥಿತಿಯಲ್ಲಿ ಗ್ಯಾರಂಟಿ ಯೋಜನೆಗಳು ಮುಂದುವರಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಗ್ಯಾರಂಟಿ ಯೋಜನೆಯಿಂದ ರಾಜಕೀಯವಾಗಿಯೂ ಕೂಡ ಲಾಭವಾಗುವ ಬಗ್ಗೆ ಅನುಮಾನವಿದೆ. ಅಭಿವೃದ್ಧಿಯನ್ನೇ ಮೆಚ್ಚಿಕೊಂಡು ಚುನಾವಣೆ ಮಾಡುವವರಿಗೆ ಬಹಳ ಸಂಕಷ್ಟ ಎದುರಾಗಲಿದೆ. ಕ್ಷೇತ್ರದಲ್ಲಿ ಅಭಿವೃದ್ಧಿಯಾಗದಿದ್ದರೆ ನಿರೀಕ್ಷಿತ ಪ್ರಮಾಣದಲ್ಲಿ ಮತಗಳು ಬರುವುದಿಲ್ಲ. ಮುಂಬರುವ ಎಲ್ಲ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಪಕ್ಷಕ್ಕೆ ಹಾನಿಯಾಗುವ ಸಾಧ್ಯತೆಯಿದೆ. ಹೀಗಾಗಿ ತಕ್ಷಣೆವೇ ಗ್ಯಾರಂಟಿ ಯೋಜನೆಗಳಿಗೆ ಒಂದು ಸ್ಪಷ್ಟವಾದ ಪರಿಷ್ಕೃತ ರೂಪ ನೀಡುವ ಮೂಲಕ ಜನರೊಂದಿಗೆ ನಿಲ್ಲುವಂತೆ ಮನವರಿಕೆ ಮಾಡಿರುವ ನಾಯಕರು. ಈ ಹಿಂದೆಯೂ ಸಹ ಶಾಸಕಾಂಗ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ್ದ ಶಾಸಕರು ಸಚಿವರು. ಇದೀಗ ಮತ್ತೆ ಮುನ್ನಲೆಗೆ ಬಂದಿದೆ. ಹೀಗಾಗಿ ಗ್ಯಾರಂಟಿ ಯೋಜನೆ ಬಂದ್ ಆಗುತ್ತಾ ? ಪರಿಷ್ಕರಣೆಯೊಂದಿಗೆ ಮುಂದುವರಿಯುತ್ತಾ ಕಾದು ನೋಡಬೇಕು.