ಕರ್ನಾಟಕದಲ್ಲಿ ಕಾಂಗ್ರೆಸ್ ಒಂದು ಮನೆ, ಎರಡು ಬಾಗಿಲು, ಒಂದು ಕಡೆ ಸಿದ್ದರಾಮಯ್ಯ, ಇನ್ನೊಂದು ಕಡೆ ಡಿಕೆಶಿ ಇದ್ದಾರೆ, ರಾಹುಲ್ ಗಾಂಧಿ ಹೋದ ಕಡೆಗಳಲ್ಲೆಲ್ಲಾ ಕಾಂಗ್ರೆಸ್ ಚುನಾವಣೆಗಳಲ್ಲಿ ಸೋತಿದೆ ಎಂದು ಸಚಿವ ಕೆಎಸ್ ಈಶ್ವರಪ್ಪ ಲೇವಡಿ ಮಾಡಿದ್ದಾರೆ.
ಕಲಬುರಗಿ (ಫೆ.28): ಕರ್ನಾಟಕದಲ್ಲಿ (Karnataka) ಕಾಂಗ್ರೆಸ್ (Congress) ಒಂದು ಮನೆ, ಎರಡು ಬಾಗಿಲು, ಒಂದು ಕಡೆ ಸಿದ್ದರಾಮಯ್ಯ (Siddaramaiah), ಇನ್ನೊಂದು ಕಡೆ ಡಿಕೆಶಿ (DK Shivakumar) ಇದ್ದಾರೆ, ರಾಹುಲ್ ಗಾಂಧಿ (Rahul Gandhi) ಹೋದ ಕಡೆಗಳಲ್ಲೆಲ್ಲಾ ಕಾಂಗ್ರೆಸ್ ಚುನಾವಣೆಗಳಲ್ಲಿ ಸೋತಿದೆ ಎಂದು ಸಚಿವ ಕೆಎಸ್ ಈಶ್ವರಪ್ಪ (KS Eshwarappa) ಲೇವಡಿ ಮಾಡಿದ್ದಾರೆ.
ಕಲಬುರಗಿಯಲ್ಲಿ (Kalaburagi) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನ ಜನ ಯಾಕೆ ಓಡಿಸಿದ್ರು ಗೊತ್ತಾ? ಕಾಂಗ್ರೆಸ್ ರಾಜ್ಯದಲ್ಲಿ ಜಾತಿ ವಿಷ ಬಿಜ ಬಿತ್ತಿದ್ರು, ಗೋ ಹತ್ಯೆ ಮಾಡಿದವರಿಗೆ ರಕ್ಷಣೆ ನೀಡಿದ್ರು, ಹಾಗಾಗಿ ಜನ ಇವರನ್ನ ಕರ್ನಾಟಕದಿಂದ ಓಡಿಸಿದರು. ಕಾಂಗ್ರೆಸ್ ಇದೇ ರೀತಿಯಲ್ಲಿ ಮುಂದುವರೆದರೆ ಕರ್ನಾಟಕದಲ್ಲಿ ಕಾಂಗ್ರೆಸ್ ನಿರ್ನಾಮ ಆಗುತ್ತದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಧಿಕೃತ ವಿರೋಧ ಪಕ್ಷದಲ್ಲೂ ಇರೋದಿಲ್ಲ ಎಂದು ಈಶ್ವರಪ್ಪ ಹೇಳಿದರು.
ಹಿಜಾಬ್ ವಿಚಾರ: ಯುಟಿ ಖಾದರ್ ನೇತೃತ್ವದಲ್ಲಿ ಎಲ್ಲಾ ಕಾಂಗ್ರೆಸ್ ಮುಸ್ಲಿಂ ಶಾಸಕರು ಸಭೆ ನಡೆಸಿದ್ದಾರೆ. ಕಾಂಗ್ರೆಸ್ ಶಾಸಕರು ಹಿಜಾಬ್ ಗಲಾಟೆಗೆ ಎಸ್‌ಡಿಪಿಐ, ಪಿಎಫ್‌ಐ ಕಾರಣ ಬ್ಯಾನ್ ಮಾಡಬೇಕು ಅಂತಾ ಹೇಳಿದ್ದಾರೆ. ಆದರೆ, ಕಾಂಗ್ರೆಸ್ಸಿನ ನಾಯಕರಾದ ಡಿಕೆಶಿ, ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ಗಲಭೆಗೆ ಕಾರಣ ಆರ್‌ಎಸ್‌ಎಸ್, ಬಿಜೆಪಿ ಕಾರಣ ಅಂತಾ ಹೇಳ್ತಾರೆ, ರಾಜ್ಯದಲ್ಲಿ ಗಲಭೆ ಆಗೋದಕ್ಕೆ ಕಾಂಗ್ರೆಸ್ ಕಾರಣ ಎಂದರು. ಕೋಮು ಭಾವನೆಗಳ ಹಿನ್ನೆಲೆಯಲ್ಲಿ ಹಿಂದು ಮುಸ್ಲಿಂ ದೂರ ದೂರ ಆಗಬೇಕು,
ಸಾಲು-ಸಾಲು ಸಂಕಷ್ಟದ ನಡುವೆ ವಿನಯ್ ಗುರೂಜಿ ಮೊರೆ ಹೋದ ಈಶ್ವರಪ್ಪ
ಮುಸ್ಲಿಂ ಮತಗಳು ಕಾಂಗ್ರೆಸ್‌ಗೆ ಬರಬೇಕು ಈ ರೀತಿ ಕುತಂತ್ರ ರಾಜಕಾರಣ ಮಾಡಿದ್ರು ಹಿಂದೆ ಜಾತಿ ಒಡೆಯೋದಕ್ಕೆ ಮುಂದಾಗಿ ಅಧಿಕಾರ ಕಳೆದುಕೊಂಡರು, ಈಗ ಹಿಜಾಬ್ ವಿಚಾರದಲ್ಲಿ ಹಿಂದು ಮುಸ್ಲಿಂ ವಿಚಾರದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ನಿರ್ನಾಮ ಆಗುತ್ತದೆ ಎಂದು ಈಶ್ವರಪ್ಪ ಭವಿಷ್ಯ ನುಡಿದರು. ಕಲಬುರಗಿ ಶಾಸಕಿ ಖನಿಜ್ ಫಾತಿಮಾ ಕೂಡ ಹಿಜಾಬ್ ಬಗ್ಗೆ ಹೇಳಿದ್ರು, ಇವರು ಧಮ್ ಇದ್ರೆ ತಡೆಯರಿ ಅಂತಾ ಹೇಳಿದ್ದಾರೆ, ಕಾಂಗ್ರೆಸ್ ಶಾಸಕಿ ಮಹಿಳೆಯರು ಮಸೀದಿಗೆ ಬರೋದಕ್ಕೆ ಧಮ್ ಇದ್ರೆ ತಡೆಯಿರಿ ಅಂತಾ ಹೇಳಬೇಕಾಗಿತ್ತು, ಆದ್ರೆ ಇಲ್ಲಿ ಧಮ್ ಪ್ರಶ್ನೆ ಯಾಕೆ ಬಂತು ನನಗೆ ಗೋತ್ತಿಲ್ಲ ಎಂದರು.
ಮೀಸಲು ಗೊಂದಲ ಸರಿಪಡಿಸಿ: ಓಬಿಸಿಗೆ ರಿಸರ್ವೇಷನ್ ಇಲ್ಲದೆ ಚುನಾವಣೆ ಮಾಡಬಾರದು ಎಂದು ಸರ್ಕಾರ ತೀರ್ಮಾನ ಮಾಡಿದ್ದರಿಂದ ಜಿಲ್ಲಾ ಪಂಚಾಯ್ತಿ ತಾಲೂಕು ಪಂಚಾಯ್ತಿ ಚುನಾವಣೆ ಮುಂದೂಡಲಾಗಿದೆ, ಅದಕ್ಕಾ ನಾವು ಏನು ಮಾಡಬೇಕು ಎಂಬುದನ್ನ ಸಿಎಂ ಜೊತೆ ಸೇರಿ ಚರ್ಚಿಸುತ್ತೇವೆ. ಓಬಿಸಿಗೆ ಅನ್ಯಾಯ ಆಗಬಾರದು. ಜಿಪಂ, ತಾಪಂ ಚುನಾವಣೆ ಓಬಿಸಿ ಸೇರಿದಂತೆ ಯಾರಿಗೂ ಮೀಸಲಾತಿಯಲ್ಲಿ ನ್ಯಾಯವಾಗದಂತೆಯೇ ಮಾಡಲು ತೀರ್ಮಾನ ಮಾಡಿದ್ದೇವೆ, ಹಾಗೆಯೇ ಮಾಡುತ್ತೇವೆ ಎಂದರು.
ಇಷ್ಟು ದಿನ ಕಾಂಗ್ರೆಸ್ ಏನ್ಮಾಡ್ತಿತ್ತು: ಕಾಂಗ್ರೆಸ್ 2ನೇ ಹಂತದ ಮೇಕೆದಾಟು ಪಾದಯಾತ್ರೆ ವಿಚಾರವಾಗಿ ಮಾತನಾಡಿದ ಈಶ್ವರಪ್ಪ ಇಷ್ಟುದಿವಸ ಕಾಂಗ್ರೆಸ್ ಪರ ಸಿದ್ದರಾಮಯ್ಯ ಪರ ಜನರು ಇರಲಿಲ್ಲವಾ? ಮೇಕೆದಾಟು ಯೋಜನೆ ಪಾರ್ಟ್ 2, ಇದು ಕಾಂಗ್ರೆಸ್ ಪಕ್ಷದ ಪಾರ್ಟ್ 2 ಅಷ್ಟೆ, ಕಾಂಗ್ರೆಸ್‌ನವರು ಏನು ಮಾಡಬೇಕು ಬಿಡಬೇಕು ಅಂತಾ ಗೊತ್ತಿಲ್ಲ. ಮೇಕಾದಾಟು ಯೋಜನೆ ಡಿಪಿಆರ್ ಮಾಡಿದ್ದು ಕುಮಾರಸ್ವಾಮಿ ಅವಧಿಯಲ್ಲಿ. ಅದಾದ ಬಳಿಕ ಬಿಜೆಪಿ ಅಧಿಕಾರಕ್ಕೆ ಬಂದು ಜಾರಿ ಮಾಡಲು ಮುಂದಾಗಿದ್ದೀವಿ ಎಂದರು.
ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆ ಬಗ್ಗೆ ಮಹತ್ವದ ವಿಚಾರ ಬಿಚ್ಚಿಟ್ಟ ಸಚಿವ ಈಶ್ವರಪ್ಪ
ಕಾಂಗ್ರೆಸ್ ಪಾದಯಾತ್ರೆ ಮಾಡೋದಕ್ಕೆ ನಮ್ಮದು ಏನು ಅಭ್ಯಂತರ ಇಲ್ಲ, ಆದ್ರೆ ನೀವು ಕಾಂಗ್ರೆಸ್ಸಿಗರು ಸರ್ಕಾರದಲ್ಲಿ ಇದ್ದಾಗ ಯಾಕೆ ಮಾಡಲಿಲ್ಲ , ನೀವು ಪಾದಯಾತ್ರೆ ಮಾಡಿದ್ರು ನಾವು ಮಾಡ್ತೆವೆ, ಮಾಡದೆ ಹೋದ್ರು, ನಾವು ಯೋಜನೆ ಜಾರಿ ಮಾಡುತ್ತೇವೆ. ಡಿಕೆಶಿ, ಸಿದ್ದರಾಮಯ್ಯ ಮಾಡು ಅಂದ್ರೂ ಮಾಡ್ತೆವೆ, ಬೇಡ ಅಂದ್ರು ಮಾಡ್ತೆವೆ. ಕಾಂಗ್ರೆಸ್ ನವರು ಇದನ್ನ ಅಸ್ತ್ರವನ್ನಾಗಿ ಮಾಡಿಕೊಂಡಿದ್ದಾರೆ, ರಾಜಕೀಯ ಅಸ್ತ್ರದಲ್ಲಿ ಆದ್ರು ಏನು ಲಾಭವಾಗಲ್ಲ ಎಂದರು.