ಕರ್ನಾಟಕದಲ್ಲಿ ಕೊರೋನಾ ಯುಗಾಂತ್ಯ, ಶೇ.1ಕ್ಕಿಂತ ಕೆಳಕ್ಕೆ ಕುಸಿದ ಪಾಸಿಟಿವಿಟಿ ದರ

By Suvarna News  |  First Published Feb 27, 2022, 11:10 PM IST

* ಕರ್ನಾಟಕದಲ್ಲಿ ಕೊರೋನಾ ಯುಗಾಂತ್ಯ
* ಶೇ.1ಕ್ಕಿಂತ ಕೆಳಕ್ಕೆ ಕುಸಿದ ಪಾಸಿಟಿವಿಟಿ ದರ
* ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಬಗ್ಗೆ ಮಾಹಿತಿ


ಬೆಂಗಳೂರು, (ಫೆ.27): ರಾಜ್ಯದಲ್ಲಿ ಇಂದು(ಭಾನುವಾರ) ಕೊರೋನಾ (Coronavirus) ಮತ್ತಷ್ಟು ಇಳಿಕೆಯಾಗಿದೆ. 366 ಜನರಿಗೆ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, 17 ಜನರು ಮೃತಪಟ್ಟಿದ್ದಾರೆ. 801 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಒಟ್ಟು ಸೋಂಕಿತರ ಸಂಖ್ಯೆ 39,40,795 ಕ್ಕೆ ಏರಿಕೆಯಾಗಿದ್ರೆ, ಇದುವರೆಗೆ 39936 ಜನ ಸೋಂಕಿತರು ಮೃತಪಟ್ಟಿದ್ದಾರೆ. 38,94,333 ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪ್ರಸ್ತುತ 6488 ಸಕ್ರಿಯ ಪ್ರಕರಣಗಳಿದ್ದು, ಪಾಸಿಟಿವಿಟಿ ದರ ಶೇಕಡ 0.69 ರಷ್ಟು ಇದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಬಗ್ಗೆ ಮಾಹಿತಿ ನೀಡಿದೆ.

Latest Videos

Covid Crisis: ಕೋವಿಡ್‌ ನಿರ್ಬಂಧ ಸಡಿಲಕ್ಕೆ ರಾಜ್ಯಗಳಿಗೆ ಕೇಂದ್ರ ಸೂಚನೆ

ಇನ್ನು ರಾಜಧಾನಿ ಬೆಂಗಳೂರಿನಲ್ಲಿ ಭಾನುವಾರ ಹೊಸದಾಗಿ 224 ಜನರಿಗೆ ಸೋಂಕು ತಗುಲಿದ್ದು, 11 ಜನ ಮೃತಪಟ್ಟಿದ್ದಾರೆ. 326 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 3648 ಸಕ್ರಿಯ ಪ್ರಕರಣಗಳಿವೆ.

ಬೆಂಗಳೂರು ನಗರ ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ 11 ಮಂದಿ ಸಾವನ್ನಪ್ಪಿದ್ದಾರೆ. ಬೀದರ್, ಚಾಮರಾಜನಗರ, ದಕ್ಷಿಣ ಕನ್ನಡ, ಕೊಡಗು, ರಾಯಚೂರು, ಉಡುಪಿ ಜಿಲ್ಲೆಯಲ್ಲಿ 1 ಮಂದಿ ಕೊವಿಡ್​ನಿಂದ ಮೃತಪಟ್ಟಿದ್ದಾರೆ.

ಬಾಗಲಕೋಟೆ 2, ಬಳ್ಳಾರಿ 9, ಬೆಳಗಾವಿ 17, ಬೆಂಗಳೂರು ಗ್ರಾಮಾಂತರ 0, ಬೆಂಗಳೂರು ನಗರ 224, ಬೀದರ್ 2, ಚಾಮರಾಜನಗರ 4, ಚಿಕ್ಕಬಳ್ಳಾಪುರ 4, ಚಿಕ್ಕಮಗಳೂರು 2, ಚಿತ್ರದುರ್ಗ 6, ದಕ್ಷಿಣ ಕನ್ನಡ 10, ದಾವಣಗೆರೆ 1, ಧಾರವಾಡ 7, ಗದಗ 0, ಹಾಸನ 8, ಹಾವೇರಿ 2, ಕಲಬುರಗಿ 9, ಕೊಡಗು 4, ಕೋಲಾರ 1, ಕೊಪ್ಪಳ 5, ಮಂಡ್ಯ 2, ಮೈಸೂರು 17, ರಾಯಚೂರು 4, ರಾಮನಗರ 1, ಶಿವಮೊಗ್ಗ 4, ತುಮಕೂರು 7, ಉಡುಪಿ 5, ಉತ್ತರ ಕನ್ನಡ 5, ವಿಜಯಪುರ 1, ಯಾದಗಿರಿ ಜಿಲ್ಲೆಯಲ್ಲಿ 3 ಕೊವಿಡ್ 19 ಪ್ರಕರಣಗಳು ದಾಖಲಾಗಿವೆ.

ಭಾರತದಲ್ಲಿ ಕೊರೋನಾ ಯುಗಾಂತ್ಯ
 ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ದೇಶದಲ್ಲಿ ಕೊರೋನಾ ಸೋಂಕಿನ ಪ್ರಕರಣ ಸಂಖ್ಯೆಯಲ್ಲೂ ಕುಸಿದಿದೆ. 

ಪಾಸಿಟಿವಿಟಿ ದರ ಕಳೆದ 24 ಗಂಟೆಗಳಲ್ಲಿ ಶೇ.1ಕ್ಕೆ ಕುಸಿದಿದೆ. ನಿನ್ನೆ ಸೋಂಕಿತರು ದೇಶದಲ್ಲಿ ಕೇವಲ 10,000 ಮಾತ್ರ ಪತ್ತೆಯಾಗಿದ್ದಾರೆ. 20,439 ಜನ ಕೋವಿಡ್ ಸೋಂಕಿನಿಂದ ಗುಣಮುಖರಾಗುವ ಮೂಲಕ ದೇಶದಲ್ಲಿ ಒಟ್ಟಾರೆ 4,22,90,921 ಮಂದಿ ಪೂರ್ಣ ಪ್ರಮಾಣದಲ್ಲಿ ಚೇತರಿಕೆ ಕಂಡಿದ್ದಾರೆ.

ಚೇತರಿಕೆಯ ಪ್ರಮಾಣ ಶೇ.98.54ರಷ್ಟಿದೆ. ಸೋಂಕಿಗೆ 243 ಮಂದಿ ಸಾವನ್ನಪ್ಪಿದ್ದಾರೆ. ಕೊರೊನಾ ಸೋಂಕು ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ನಿರ್ಬಂಧಗಳನ್ನೂ ತೆರವುಗೊಳಿಸಲಾಗಿದೆ.

ಮಾಸ್ಕ್ ಮತ್ತು ಸಾಮಾಜಿಕ ಅಂತರ ಹೊರತುಪಡಿಸಿ ಸಾಂಸ್ಕಂತಿಕ, ಧಾರ್ಮಿಕ ಚಟುವಟಿಕೆಗಳು, ಸರ್ಕಾರಿ ಕಾರ್ಯಕ್ರಮಗಳು ಸೇರಿದಂತೆ ಎಲ್ಲ ಕಾರ್ಯಕ್ರಮಗಳಿಗೂ ಅವಕಾಶ ಕಲ್ಪಿಸಲಾಗಿದೆ.

ಕೊರೋನಾ ನಿಯಂತ್ರಣಕ್ಕಾಗಿ ಸಮರೋಪಾದಿಯಲ್ಲಿ ಲಸಿಕಾ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ. ಈವರೆಗೆ ದೇಶದಲ್ಲಿ ಸುಮಾರು 1,77,67,27,441 ಕೋಟಿ ಡೋಸ್ ವ್ಯಾಕ್ಸಿನೇಷನ್ ನೀಡಲಾಗಿದೆ. ಜನರಲ್ಲಿ ಕೊರೊನಾ ಆತಂಕ ಕೂಡ ಕ್ರಮೇಣ ದೂರವಾಗುತ್ತಿದೆ.

ದೇಶದಲ್ಲಿ (India) ಕೋವಿಡ್‌ ಪ್ರಕರಣಗಳ (Covid Cases) ಸಂಖ್ಯೆ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯವು (Union Home Ministry) ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ರಾತ್ರಿ ಕರ್ಫ್ಯೂ (Night Curfew) ಸೇರಿದಂತೆ ಸಾಮಾಜಿಕ, ಕ್ರೀಡೆ, ಮನರಂಜನೆ, ಶಿಕ್ಷಣ, ಧಾರ್ಮಿಕ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಎಲ್ಲ ನಿರ್ಬಂಧಗಳನ್ನು ಸಡಿಲಗೊಳಿಸಲು ಸೂಚಿಸಿದೆ.

ಕೇಂದ್ರ ಗೃಹ ಕಾರ್ಯದರ್ಶಿ ಅಜಯ ಭಲ್ಲಾ ‘ಎಲ್ಲ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳು ಸ್ಥಳೀಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕ ಸಂಚಾರ, ಶಾಂಪಿಗ್‌ ಕಾಂಪ್ಲೆಕ್ಸ್‌, ಸಿನಿಮಾ ಮಂದಿರ, ಜಿಮ್‌, ಸ್ಪಾ, ರೆಸ್ಟೋರೆಂಟ್‌, ಶಾಲೆ, ಕಾಲೇಜು, ಕಚೇರಿ ಹಾಗೂ ಎಲ್ಲ ಇತರೆ ಆರ್ಥಿಕ ಚಟುವಟಿಕೆಯ ಮೇಲಿನ ನಿರ್ಬಂಧಗಳನ್ನು ಸಡಿಲಗೊಳಿಸಬೇಕು’ ಎಂದು ಹೊಸ ಕೋವಿಡ್‌ ಮಾರ್ಗದರ್ಶಿಯಲ್ಲಿ ಸೂಚಿಸಿದ್ದಾರೆ.’

click me!