Mekedatu Padayatra: ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ

By Suvarna News  |  First Published Feb 27, 2022, 1:27 PM IST

*  ನಾಲ್ಕು ರಾಜ್ಯಗಳ ಕಾವೇರಿ ವಿವಾದ ಇದೆ
*  ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರ ಇದ್ದರೂ ಯೋಜನೆ ಮಾಡಿಲ್ಲ
*  ರಾಜಕೀಯ ಕಾರಣಕ್ಕಾಗಿ ವಿರೋಧ 


ರಾಮನಗರ(ಫೆ.27):  ಸರ್ಕಾರ ನಿಯಮ ಪಾಲನೆ, ನ್ಯಾಯಾಲಯ ಆದೇಶ ಪಾಲನೆ ಉದ್ದೇಶ ಹಾಗೂ ಜನರ ಆರೋಗ್ಯ ದೃಷ್ಟಿಯಿಂದ ಮೇಕೆದಾಟು ಪಾದಯಾತ್ರೆಯನ್ನ(Mekedatu Padayatra) ಸ್ಥಗಿತಗೊಳಿಸಿದ್ದೆವು. ಇಂದಿನಿಂದ(ಭಾನುವಾರ) ಐದು ದಿನ ಪಾದಯಾತ್ರೆಯನ್ನ ಆರಂಭಿಸಿದ್ದೇವೆ. ಈ ಯೋಜನೆ ನಾವು ಅಧಿಕಾದಲ್ಲಿದ್ದಾಗಲೇ ಡಿಪಿಆರ್ ಸಿದ್ದಪಡಿಸಿದ್ದವು. ಬಿಜೆಪಿ ಸರ್ಕಾರ ಹೆದರಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಕಾಲ ಹರಣ ಮಾಡಿತೆಂದು ಸುಳ್ಳು ಜಾಹೀರಾತು ನೀಡುತ್ತಿದೆ ಅಂತ ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಹರಿಹಾಯ್ದಿದ್ದಾರೆ. 

ಇಂದು(ಭಾನುವಾರ) ನಗರದಲ್ಲಿ ಮೇಕೆದಾಟು ಪಾದಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಿದ್ದರಾಮಯ್ಯ ಅವರು, ನಾಲ್ಕು ರಾಜ್ಯಗಳ ಕಾವೇರಿ ವಿವಾದ(Kaveri Dispute) ಇದೆ. 2018ರಲ್ಲಿ ತೀರ್ಪು ಬಂದಿತ್ತು. 2017ರಲ್ಲಿಯೇ ಡಿಪಿಆರ್‌(DPR) ಸಿದ್ದಪಡಿಸಿ ಕಳುಹಿಸಿದ್ದೆವು. ಮೈತ್ರಿ ಸರ್ಕಾರದಲ್ಲಿ ಡಿ.ಕೆ.ಶಿವಕುಮಾರ್‌(DK Shivakumar) ಸಿಡಬ್ಲುಸಿ ತಕರಾರು ಪರಿಷ್ಕರಿಸಿ 9 ಸಾವಿರ ಕೋಟಿ ಡಿಪಿಆರ್ ಕಳುಹಿಸಿದ್ದೆವು. ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರ ಇದ್ದರೂ ಮಾಡಿಲ್ಲ. ಕಾನೂನು ಬಲದಿಂದ ವಿರೋಧ ಮಾಡುತ್ತಿಲ್ಲ. ರಾಜಕೀಯ ಕಾರಣಕ್ಕಾಗಿ ವಿರೋಧಿಸುತ್ತಿದೆ ಅಂತ ಬಿಜೆಪಿ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. 

Tap to resize

Latest Videos

Mekedatu Politics: ನಾನು ಚಿಕ್ಕವನು ಕುಮಾರಸ್ವಾಮಿಗೆ ಹೊಡೆಯಲು ಆಗುತ್ತಾ? ಹೆಚ್ಡಿಕೆ ಬಗ್ಗೆ ಡಿಕೆಶಿ ವ್ಯಂಗ್ಯ

ನ್ಯಾಯಾಲಯ(Court) ತಮಿಳುನಾಡಿನ(Tamil Nadu) ವಾದಕ್ಕೆ ಮಾನ್ಯತೆ ನೀಡಿಲ್ಲ. ಹೀಗಿದ್ದರೂ ಡಬಲ್ ಇಂಜಿನ್ ಸರ್ಕಾರ ಯೋಜನೆ ಜಾರಿಗೆ ನಿರಾಸಕ್ತಿ ತೋರುತ್ತಿದೆ. ಯೋಜನೆ ಕಾರ್ಯಗತವಾದರೆ 50-60 ವರ್ಷ ಬೆಂಗಳೂರು ಸೇರಿ ಬಯಲುಸೀಮೆ ಜಿಲ್ಲೆಗಳಿಗೆ ಕುಡಿಯುವ ನೀರಿನ ಸಮಸ್ಯೆ ಇರಲ್ಲ. ವಿದ್ಯುತ್ ಕೂಡ ಉತ್ಪಾದಿಸಬಹುದು. ಕೇಂದ್ರ ಸರ್ಕಾರ ಕೂಡಲೇ ಎನ್ವಾರ್ನಮೆಂಟ್ ಅನುಮೋದನೆ ನೀಡಬೇಕು. ಇಲ್ಲದಿದ್ದರೆ ನಾಡಿನ ಜನರಿಗೆ ದ್ರೋಹ ಮಾಡಿದಂತಾಗುತ್ತದೆ. ಇಲ್ಲದಿದ್ದರೆ ಹೋರಾಟ ಮುಂದುವರೆಯುತ್ತದೆ ಅಂತ ಖಡಕ್‌ ಎಚ್ಚರಿಕೆ ರವಾನಿಸಿದ್ದಾರೆ. 

ಬಿಜೆಪಿ ಸರ್ಕಾರಕ್ಕೆ ಜವಾಬ್ದಾರಿಯೇ ಇಲ್ಲ: 

ಮಂಗಳೂರು(Mangaluru): ಉಕ್ರೇನ್‌ನಲ್ಲಿ(Ukraine) ಭಾರತೀಯ ವಿದ್ಯಾರ್ಥಿಗಳು(Students) ಸಿಲುಕಿರುವ ವಿಚಾರಕ್ಕೆ ಸಂಬಂಧಿಸಿದಂತೆ ನಿನ್ನೆ(ಶನಿವಾರ) ಮಂಗಳೂರಿನಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ, ರಷ್ಯಾ(Russia), ಉಕ್ರೇನ್ ಮೇಲೆ ಯುದ್ಧ(War) ಸಾರಿರೋದು ಬಹಳ ದಿನದ ಹಿಂದೆಯೇ ಗೊತ್ತಿತ್ತು. ಈ ಬಗ್ಗೆ 10-15 ದಿನಗಳ ಹಿಂದೆಯೇ ತಿಳಿದಿತ್ತು. ಭಾರತ, ಕರ್ನಾಟಕದ(Karnataka) ವಿದ್ಯಾರ್ಥಿಗಳು ಅಲ್ಲಿದ್ದಾರೆ ಎಂಬುದೂ ಗೊತ್ತಿತ್ತು. ಆ ವಿದ್ಯಾರ್ಥಿಗಳನ್ನು ಕರೆ ತರಲು ಕೇಂದ್ರ, ರಾಜ್ಯ ಸರ್ಕಾರ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ. ಈಗ ವಿದ್ಯಾರ್ಥಿಗಳು ಬಂಕರ್ಸ್‌ಗಳಲ್ಲಿ, ಬೇರೆ ಬೇರೆ ಕಡೆಗಳಲ್ಲಿ ಆಶ್ರಯ ಪಡೆದಿದ್ದಾರೆ. ವಿದ್ಯಾರ್ಥಿಗಳಿರುವ ಪಕ್ಕದಲ್ಲಿಯೇ ಬಾಂಬ್ ಸ್ಫೋಟ ಆಗುತ್ತಿದೆ. ಈಗ ಫ್ಲೈಟ್‌ಗಳನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಮರಳಿ ತಾಯ್ನಾಡಿಗೆ ಬರಲು ಸಮಸ್ಯೆಯಾಗಿದೆ ಅಂತ ಹೇಳಿದ್ದರು. 

Chamarajanagar: ಮೇಕೆದಾಟು ಪಾದಯಾತ್ರೆ ಪಕ್ಷಾತೀತ ಹೋರಾಟ: ಸತೀಶ್ ಜಾರಕಿಹೊಳಿ

ಬಹಳ ಮಂದಿ ವಿದ್ಯಾರ್ಥಿಗಳಿಗೆ ಊಟಕ್ಕೂ ತೊಂದರೆಯಾಗಿದ್ದು, ದುಡ್ಡೂ ಇಲ್ಲ. ಸರ್ಕಾರ ಇಂತಹ ವಿಚಾರಗಳಲ್ಲಿ ಈ ರೀತಿ ಮೈಮರೆಯಬಾರದು. ಇಂತಹ ವಿಷಯಗಳಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು. ಸಿಎಂ ಬಸವರಾಜ ಬೊಮ್ಮಾಯಿ ಕೇಂದ್ರ ಸರ್ಕಾರದ(Central Government) ರಕ್ಷಣಾ ಇಲಾಖೆಯ ಮೂಲಕ ಮಾತನಾಡಬೇಕು. ಫ್ಲೈಟ್ ಚಾರ್ಜ್ ಕೊಟ್ಟು ತಕ್ಷಣ ರಾಜ್ಯದ ಎಲ್ಲಾ ವಿದ್ಯಾರ್ಥಿಗಳನ್ನು ಕರೆ ತರುವ ವ್ಯವಸ್ಥೆ ಮಾಡಬೇಕು. ಇದು ಭಾರತ ಸರ್ಕಾರ ಹಾಗೂ ರಾಜ್ಯ ಸರ್ಕಾರದ(Government of Karnataka) ಕರ್ತವ್ಯವಾಗಿದೆ ಅಂತ ಹೇಳಿದ್ದರು. 

ಇದು ಅವರ ಜವಾಬ್ದಾರಿ, ಇಲ್ಲಿಯವರೆಗೆ ಅವರು ಮಾಡಿಲ್ಲ. ಈ ಸರ್ಕಾರಕ್ಕೆ ಜವಾಬ್ದಾರಿಯೇ ಇಲ್ಲ. ನಮ್ಮ ಮಕ್ಕಳು ಅಲ್ಲಿದ್ದಾರೆ, ಅವರನ್ನು ವಾಪಸ್ ಕರೆದುಕೊಂಡು ಬರಬೇಕಲ್ಲ. ರಷ್ಯಾ ಅಧ್ಯಕ್ಷ ಪುಟಿನ್(Vladimir Putin) ಅವರು ಉಕ್ರೇನ್ ಮೇಲೆ ಯುದ್ಧ ಮಾಡುತ್ತೇವೆ ಎಂದು ಓಪನ್ ಆಗಿ ಹೇಳಿದ್ದಾರೆ. ಆದ್ದರಿಂದ ಇದು ಸರ್ಕಾರದ ಬೇಜವಾಬ್ದಾರಿಯಾಗಿದೆ ಅಂತ ಕೇಂದ್ರ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ. 
 

click me!