
ಹಾಸನ (ಆ.16): ದೇಶದಲ್ಲಿ ಮತಗಳ್ಳತನ ಆಗಿರುವುದು ನಿಜ. ಈ ಸಂಬಂಧ ವಿಧಾನಸಭೆಯಲ್ಲೂ ಚರ್ಚೆ ಆಗಿದೆ. ವ್ಯವಸ್ಥಿತವಾಗಿ ಒಂದು ಸಮುದಾಯದ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಆರೋಪಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ 2021ರ ಚುನಾವಣೆ ವೇಳೆ ಮತಪಟ್ಟಿಯಿಂದ ನನ್ನ ಹೆಸರನ್ನೇ ಕೈಬಿಡಲಾಗಿತ್ತು. ಮುಖ್ಯ ಚುನಾವಣಾಧಿಕಾರಿಯೊಂದಿಗೆ ಮಾತನಾಡಿದ ನಂತರ ನನ್ನ ಹೆಸರನ್ನು ಸೇರಿಸಲಾಯಿತು. ಚುನಾವಣಾ ಆಯೋಗ ಹೀಗೆ ಕೆಲಸ ಮಾಡಿದರೆ ಹೇಗೆ? ಬಿಜೆಪಿ ಏಜೆಂಟಂತೆ ವರ್ತಿಸುತ್ತಿರುವುದು ಸರಿಯಲ್ಲ ಎಂದು ದೂರಿದರು.
ಇದನ್ನೂ ಓದಿ: Krishna Byregowda: ಹಾಡಿ, ಹಟ್ಟಿಯನ್ನೂ ಕಂದಾಯ ಗ್ರಾಮವಾಗಿಸಿ: ಸಚಿವ ಕೃಷ್ಣಬೈರೇಗೌಡ
ಧರ್ಮಸ್ಥಳದ ಉತ್ಖನನ ವಿಚಾರವಾಗಿ ಡಿಸಿಎಂ ಶಿವಕುಮಾರ್ ಅವರು ನೀಡಿರುವ ಹೇಳಿಕೆ ಕುರಿತು ನನಗೆ ಗೊತ್ತಿಲ್ಲ. ಎಸ್‌ಐಟಿಯವರು ಈವರೆಗೂ ಉತ್ತಮವಾಗಿ ಕೆಲಸ ಮಾಡಿದ್ದು, ಯಾರೇ ತಪ್ಪು ಮಾಡಿದ್ದರೂ ಕ್ರಮ ಆಗಲಿದೆ ಎಂದರು. ಇಲ್ಲವಾದರೆ ಪ್ರಕರಣ ಖುಲಾಸೆ ಆಗುತ್ತದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ